7 ಅಪ್ರಾಪ್ತ ಮಕ್ಕಳು ಒಂದು ಆಕ್ಟಿವಾ ಸ್ಕೂಟರ್‌ನಲ್ಲಿ ಜಾಲಿ ರೈಡ್: ಪೋಷಕರ ಮೇಲೆ ಬಿತ್ತು ಕೇಸ್

ಅಪ್ರಾಪ್ತರು ವಾಹನ ಚಲಾಯಿಸುವುದು ದೊಡ್ಡ ಅಪರಾಧ, ಅಪ್ರಾಪ್ತರ ವಾಹನ ಚಾಲನೆಗೆ ಪೋಷಕರು ಕೂಡ ಕಾರಣ. ಪೋಷಕರೇ ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಡ್ರೈವಿಂಗ್ ಕಲಿಸುತ್ತಾರೆ. ಪ್ರೌಢಶಾಲೆ ಮತ್ತು ಪಿಯುಸಿಯಲ್ಲಿ ವ್ಯಾಸಂಗ ಮಾಡುವ ತಮ್ಮ ಮಕ್ಕಳಿಗೆ ತೆರಳಲು ಅನುಕೂಲವಾಗಲು ಬೈಕ್‌ ಮತ್ತು ಸ್ಕೂಟರ್‌ಗಳನ್ನು ತೆಗೆದುಕೊಡುತ್ತಾರೆ.

7 ಅಪ್ರಾಪ್ತ ಮಕ್ಕಳು ಒಂದು ಆಕ್ಟಿವಾ ಸ್ಕೂಟರ್‌ನಲ್ಲಿ ಜಾಲಿ ರೈಡ್: ಪೋಷಕರ ಮೇಲೆ ಬಿತ್ತು ಕೇಸ್

ಹೆಚ್ಚಿನ ಮಕ್ಕಳು ವಾಹನವನ್ನು ಅತಿಯಾದ ವೇಗ ಮತ್ತು ನಿರ್ಲಕ್ಷದಿಂದ ಚಾಲನೆ ಮಾಡುತ್ತಾರೆ. ಇವತ್ತು ಸಾಮಾಜಿಕ ಜಾಲತಾಣಗಳಲ್ಲಿ ತಾವು ಮಿಂಚಬೇಕೆಂದು ಅತಿಯಾಗಿ ವೇಗವಾಗಿ ಅಥವಾ ಸ್ಟಂಟ್ ಮಾಡಿ ರೀಲ್ಸ್ ವಿಡಿಯೋ ಮಾಡುವುದು ಒಂದು ಟ್ರೆಂಡ್ ಆಗಿದೆ. ಇದರಿಂದ ಅಪಾಯಕಾರಿಯಾಗಿ ವಾಹನ ಚಲಾಯಿಸುವುದರಿಂದ ಅನಾಹುತಗಳು ಸಂಭವಿಸಬಹುದು. ಇದರಿಂದ ಪೋಷಕರು ಮಕ್ಕಳಿಗೆ ವಾಹನ ನೀಡುವ ಮುನ್ನ ಎಚ್ಚರಿಕೆ ವಹಿಸಬೇಕು. ಅಪ್ರಾಪ್ತರು ವಾಹನ ಚಲಾಯಿಸಿ ನಿಯಮ ಉಲ್ಲಂಘಿಸಿದರೆ ಪೋಷಕರು ದುಬಾರಿ ದಂಡ ಕಟ್ಟಬೇಕು. ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ.

7 ಅಪ್ರಾಪ್ತ ಮಕ್ಕಳು ಒಂದು ಆಕ್ಟಿವಾ ಸ್ಕೂಟರ್‌ನಲ್ಲಿ ಜಾಲಿ ರೈಡ್: ಪೋಷಕರ ಮೇಲೆ ಬಿತ್ತು ಕೇಸ್

ಸೋಷಿಯಲ್ ಮೀಡಿಯಾದಲ್ಲಿ ಅಪ್ರಾಪ್ತರು ವಾಹನ ಚಲಾಯಿಸುವ ವಿಡಿಯೋಗಳು ಸಾಕಷ್ಟು ಇವೆ. ಅದರೆ ಇತ್ತೀಚೆಗೆ ಸ್ಕೂಟರ್‌ನಲ್ಲಿ ಏಳು ರೊಬ್ಬರಿ 7 ಅಪ್ರಾಪ್ತ ವಯಸ್ಸಿನ ಮಕ್ಕಳು ಸವಾರಿ ಮಾಡುತ್ತಿರುವುದು ಬಸವಾರಿ ಮಾಡುವ ವಿಡಿಯೋ ಬಾರಿ ವೈರಲ್ ಆಗಿದೆ. ಈ ಘಟನೆ ಛತ್ತೀಸ್‌ಗಡದ ರಾಯ್‌ಪುರ ನಡೆದಿದೆ.

7 ಅಪ್ರಾಪ್ತ ಮಕ್ಕಳು ಒಂದು ಆಕ್ಟಿವಾ ಸ್ಕೂಟರ್‌ನಲ್ಲಿ ಜಾಲಿ ರೈಡ್: ಪೋಷಕರ ಮೇಲೆ ಬಿತ್ತು ಕೇಸ್

ಪೊಲೀಸರು ಈಗ ಪೋಷಕರ ಮೇಲೆ ಕೇಸ್ ದಾಖಲಿಸಿದೆ ಮತ್ತು ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ. ಅಪ್ರಾಪ್ತ ವಯಸ್ಸಿನ ಮಕ್ಕಳು ಸಾಹಸ ಮಾಡಬೇಕೆಂದು ಅವರಲ್ಲಿ ಒಬ್ಬ ತಮ್ಮ ತಂದೆಯ ಹೋಂಡಾ ಆಕ್ಟಿವಾ ಸ್ಕೂಟರ್ ತೆಗೆದುಕೊಂಡು ಬರುತ್ತಾರೆ. ಬಳಿಕ ಏಳು ಮಕ್ಕಳು ಕೂಡ ಸಾರ್ವಜನಿಕ ರಸ್ತೆಗಳಲ್ಲಿ ಸವಾರಿ ಮಾಡಿದರು.

7 ಅಪ್ರಾಪ್ತ ಮಕ್ಕಳು ಒಂದು ಆಕ್ಟಿವಾ ಸ್ಕೂಟರ್‌ನಲ್ಲಿ ಜಾಲಿ ರೈಡ್: ಪೋಷಕರ ಮೇಲೆ ಬಿತ್ತು ಕೇಸ್

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅವರು ಹೆದ್ದಾರಿಯಲ್ಲಿ ಈ ಸಾಹಸವನ್ನು ಮಾಡಿದ್ದಾರೆ. ಇದರಲ್ಲಿ ಯಾವ ಮಕ್ಕಳು ಕೂಡ ಹೆಲ್ಮೆಟ್ ಧರಿಸಿರಲಿಲ್ಲ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಚಲಿಸುತ್ತಿರುವ ಇತರ ವಾಹನ ಸಾವರರು ವಿಡಿಯೋವನ್ನು ಮಾಡಿದ್ದಾರೆ. ವಿಡಿಯೋ ಮಾಡಿತ್ತಿರುವಾಗ ಅದನ್ನು ನೋಡಿದ ಮಕ್ಕಳು ಇನ್ನಷ್ಟು ಜೋಷ್ ನಿಂದ ಕ್ಯಾಮೆರಾ ಕಡೆಗೆ ಕೈ ಬೀಸುತ್ತಿದ್ದಾರೆ. ಅವರ ಮನಸ್ಸಿನಲ್ಲಿ ತಾವು ಏನು ಸಾಧನೆ ಮಾಡುತ್ತಿರುವಂತೆ ಕ್ಯಾಮೆರಾಗೆ ಪೋಸ್ ನೀಡುತ್ತಿದ್ದಾರೆ.

7 ಅಪ್ರಾಪ್ತ ಮಕ್ಕಳು ಒಂದು ಆಕ್ಟಿವಾ ಸ್ಕೂಟರ್‌ನಲ್ಲಿ ಜಾಲಿ ರೈಡ್: ಪೋಷಕರ ಮೇಲೆ ಬಿತ್ತು ಕೇಸ್

ನಂತರ ವಿಡಿಯೋ ಮಾಡಿದವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಸ್ವಲ್ಲ ಹೊತ್ತಿನಲ್ಲೇ ಈ ವಿಡಿಯೋ ಬಾರಿ ವೈರಲ್ ಆಗಿದೆ. ವಿಡಿಯೋ ನೋಡಿದರೆ ತಿಳಿಯುತ್ತದೆ, ಎಷ್ಟು ಅಪಾಯಕಾರಿಯಾಗಿ ಮಕ್ಕಳು ಸವಾರಿ ಮಾಡುತ್ತಿದ್ದಾರೆ ಎಂದು. ಸ್ಕೂಟರ್‌ನಲ್ಲಿ ಚಲಿಸುತ್ತಿರುವವರ ಒಬ್ಬರ ಬ್ಯಾಲೆನ್ಸ್ ತಪ್ಪಿದರೂ ಸ್ಕೂಟರ್ ಕಳೆಗೆ ಬೀಳುವ ಸಾಧ್ಯತೆ ಇದೆ.

7 ಅಪ್ರಾಪ್ತ ಮಕ್ಕಳು ಒಂದು ಆಕ್ಟಿವಾ ಸ್ಕೂಟರ್‌ನಲ್ಲಿ ಜಾಲಿ ರೈಡ್: ಪೋಷಕರ ಮೇಲೆ ಬಿತ್ತು ಕೇಸ್

ವೈರಲ್ ಆಗಿರುವ ಈ ವಿಡಿಯೋವನ್ನು ಪೊಲೀಸರು ಗಮನಕ್ಕೆ ಬರುತ್ತದೆ. ನಂತರ ಪೊಲೀಸರ್ ಸ್ಕೂಟರ್ ಅನ್ನು ಪತ್ತೆಹಚ್ಚಲು ತಂಡವನ್ನು ಸಿದ್ಧಪಡಿಸಿದರು. ಸಿಸಿಟಿವಿ ಮತ್ತು ವಿಡಿಯೋ ತುಣುಕಿನ ಸಹಾಯದಿಂದ ಪೊಲೀಸರು ಸ್ಕೂಟರ್ ಮಾಲೀಕರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಗುತ್ತಾರೆ.

7 ಅಪ್ರಾಪ್ತ ಮಕ್ಕಳು ಒಂದು ಆಕ್ಟಿವಾ ಸ್ಕೂಟರ್‌ನಲ್ಲಿ ಜಾಲಿ ರೈಡ್: ಪೋಷಕರ ಮೇಲೆ ಬಿತ್ತು ಕೇಸ್

ವಿಡಿಯೋ ಸಾಕ್ಷ್ಯವನ್ನು ಆಧರಿಸಿ, ಆಕ್ಟಿವಾ ಸ್ಕೂಟರ್ ಮಾಲೀಕರಿಗೆ ಪೊಲೀಸರು ರೂ.40,000 ದಂಡವನ್ನು ವಿಧಿಸಿದ್ದಾರೆ ಮತ್ತು ನಿಯಮಗಳನ್ನು ಉಲ್ಲಂಘಿಸಿದ ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿಯಾಗಿ ಚಾಲನೆ ಮಾಡಿದ್ದಕ್ಕಾಗಿ ಅವರನ್ನು ನಾಲ್ಕು ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

7 ಅಪ್ರಾಪ್ತ ಮಕ್ಕಳು ಒಂದು ಆಕ್ಟಿವಾ ಸ್ಕೂಟರ್‌ನಲ್ಲಿ ಜಾಲಿ ರೈಡ್: ಪೋಷಕರ ಮೇಲೆ ಬಿತ್ತು ಕೇಸ್

ನಂತರ ಪೊಲೀಸರು ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ ಮತ್ತು ನ್ಯಾಯಾಲಯದ ವಿಚಾರಣೆಗೆ ಹಾಜರಾಗುವಂತೆ ಸ್ಕೂಟರ್ ಮಾಲೀಕರಿಗೆ ತಿಳಿಸಿದ್ದಾರೆ. ಪ್ಪಿತಸ್ಥರೆಂದು ಕಂಡುಬಂದಲ್ಲಿ ನ್ಯಾಯಾಲಯವು ಆ ವ್ಯಕ್ತಿಯನ್ನು ಮೂರು ವರ್ಷಗಳವರೆಗೆ ಜೈಲಿಗೆ ಕಳುಹಿಸಬಹುದು ಎಂದು ಹೇಳಲಾಗುತ್ತಿದೆ,

ಪರವಾನಗಿಯಿಲ್ಲದೆ ಕಾನೂನುಬಾಹಿರವಾಗಿ ಸವಾರಿ ಮಾಡುವ ಅಥವಾ ವಾಹನಗಳನ್ನು ಓಡಿಸುವ ಅಪ್ರಾಪ್ತ ವಯಸ್ಕರ ಪೋಷಕರಿಗೆ ಚಲನ್ ಮತ್ತು ದಂಡ ವಿಧಿಸಲು ನಿಯಮಗಳಿದೆ. ಹಿಂದೆ, ಪೊಲೀಸರು ತಮ್ಮ ಮಕ್ಕಳಿಗೆ ಮೋಟಾರು ವಾಹನಗಳನ್ನು ಚಲಾಯಿಸಲು ನೀಡಿದ ಪೋಷಕರಿಗೆ ಭಾರೀ ಮೊತ್ತದ ದಂಡವನ್ನು ವಿಧಿಸಿದ ಘಟನೆಗಳು ಕೂಡ ನಡೆಸಿದೆ,

7 ಅಪ್ರಾಪ್ತ ಮಕ್ಕಳು ಒಂದು ಆಕ್ಟಿವಾ ಸ್ಕೂಟರ್‌ನಲ್ಲಿ ಜಾಲಿ ರೈಡ್: ಪೋಷಕರ ಮೇಲೆ ಬಿತ್ತು ಕೇಸ್

ಅಲ್ಲದೇ ಪೋಷಕರಿಗೆ ಜೈಲು ಶಿಕ್ಷೆ ಕೂಡ ಆಗುತ್ತದೆ. ಆದರೆ ಇಂತಹ ಪ್ರಕರಣಗಳಲ್ಲಿ ಜೈಲು ಶಿಕ್ಷೆಯಾಗುವುದು ಕಡಿಮೆ, ಹೆಚ್ಚು ದಂಡವನ್ನು ವಿಧಿಸುತ್ತಾರೆ. ಇನ್ನು ಅಪ್ರಾಪ್ತ ವಯಸ್ಕರು ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ದೊಡ್ಡ ಅಪರಾಧವಾಗಿದೆ. ಪೊಲೀಸರು ಇದರ ವಿರುದ್ದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಹುದು. ಅಪ್ರಾಪ್ತರು ವಾಹನ ಚಲಾಯಿಸುವುದು ಕಾನೂನುಬಾಹಿರ ಮತ್ತು ಆದ್ದರಿಂದ ಯಾವುದೇ ವಿಮಾ ಪಾಲಿಸಿಯ ವ್ಯಾಪ್ತಿಗೆ ಬರುವುದಿಲ್ಲ.

7 ಅಪ್ರಾಪ್ತ ಮಕ್ಕಳು ಒಂದು ಆಕ್ಟಿವಾ ಸ್ಕೂಟರ್‌ನಲ್ಲಿ ಜಾಲಿ ರೈಡ್: ಪೋಷಕರ ಮೇಲೆ ಬಿತ್ತು ಕೇಸ್

ಒಂದು ವೇಳೆ ಅಪ್ರಾಪ್ತರು ವಾಹನ ಚಲಾಯಿಸುವಾಗ ಅಪಘಾತಗಳು ಸಂಭವಿಸಿದರೆ ಗಂಭೀರವಾದ ಪ್ರಕರಣವಾಗುತ್ತದೆ. ಇದರಿಂದ ಪೋಷಕರು ಮಕ್ಕಳಿಗೆ ವಾಹನ ನೀಡುವ ಮುನ್ನ ಇದರ ಬಗ್ಗೆ ಚಿಂತಿಸಿ. ಮಕ್ಕಳಿಗೆ ಸುರಕ್ಷತೆ ಹಾಗೂ ಸಂಚಾರಿ ನಿಯಮಗಳ ಅರಿವು ಮೂಡಿಸಿ. ಇಲ್ಲದಿದ್ದರೆ ಪೋಷಕರು ದುಬಾರಿ ದಂಡ ಕಟ್ಟಬೇಕಾಗುತ್ತದೆ.

Most Read Articles

Kannada
English summary
7 underage riders caught riding one activa scooter in public roads details
Story first published: Wednesday, August 11, 2021, 19:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X