ಕಾರು ಕಳ್ಳತನವಾಗುವುದನ್ನು ತಡೆಯಲು ಕಾರುಗಳ್ಳನೊಡನೆ ಹೋರಾಡಿದ 82ರ ವಯೋವೃದ್ಧ

ಪ್ರಪಂಚದಾದ್ಯಂತ ಕಾರು ಕಳ್ಳತನದ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಕಾರು ಚಾಲನೆ ಮಾಡುವ ವ್ಯಕ್ತಿಯು ವಯಸ್ಸಾದ ಪುರುಷ ಅಥವಾ ಮಹಿಳೆಯಾಗಿದ್ದರೆ ಕಾರು ಕಳ್ಳರಿಗೆ ಕಾರು ಕದಿಯುವುದು ಸುಲಭವಾಗುತ್ತದೆ.

ಕಾರು ಕಳ್ಳತನವಾಗುವುದನ್ನು ತಡೆಯಲು ಕಾರುಗಳ್ಳನೊಡನೆ ಹೋರಾಡಿದ 82ರ ವಯೋವೃದ್ಧ

ಕಾರುಗಳ್ಳರು ಸಹ ವಯೋವೃದ್ದರನ್ನೇ ಗುರಿಯಾಗಿಸಿಕೊಳ್ಳುತ್ತಾರೆ. ವಯಸ್ಸಾದವರಿಗೆ ಕಾರುಗಳ್ಳರೊಡನೆ ಹೋರಾಡುವಷ್ಟು ಶಕ್ತಿ ಇರುವುದಿಲ್ಲವೆಂಬುದು ಇದರ ಹಿಂದಿರುವ ಕಾರಣ. ಕಾರುಗಳ್ಳರು ವಯಸ್ಸಾದವರಿಗೆ ಬೆದರಿಕೆ ಹಾಕಿ ಕಾರಿನೊಂದಿಗೆ ಪರಾರಿಯಾಗುತ್ತಾರೆ. ಕೆಲವು ವಯೋವೃದ್ದರು ಮಾತ್ರ ಕಾರುಗಳ್ಳರೊಂದಿಗೆ ಹೋರಾಡುತ್ತಾರೆ.

ಕಾರು ಕಳ್ಳತನವಾಗುವುದನ್ನು ತಡೆಯಲು ಕಾರುಗಳ್ಳನೊಡನೆ ಹೋರಾಡಿದ 82ರ ವಯೋವೃದ್ಧ

ಇದೇ ರೀತಿಯ ಘಟನೆಗೆ ಸಂಬಂಧಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯಲ್ಲಿ ವಯೋವೃದ್ದರೊಬ್ಬರು ಚಿಕ್ಕ ವಯಸ್ಸಿನ ಕಾರುಗಳ್ಳನ ಜೊತೆಗೆ ಹೋರಾಡಿ ತಮ್ಮ ಕಾರು ಕಳ್ಳತನವಾಗದಂತೆ ರಕ್ಷಿಸಿಕೊಳ್ಳುತ್ತಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕಾರು ಕಳ್ಳತನವಾಗುವುದನ್ನು ತಡೆಯಲು ಕಾರುಗಳ್ಳನೊಡನೆ ಹೋರಾಡಿದ 82ರ ವಯೋವೃದ್ಧ

ಈ ಘಟನೆ ಅಮೆರಿಕಾದಲ್ಲಿರುವ ಜಾರ್ಜಿಯಾದ ಅಟ್ಲಾಂಟಾ ನಗರದಲ್ಲಿ ನಡೆದಿರುವುದಾಗಿ ವರದಿಯಾಗಿದೆ. 82 ವರ್ಷದ ವ್ಯಕ್ತಿಯ ಕಾರನ್ನು ಕದಿಯಲು ಯುವ ಕಳ್ಳನೊಬ್ಬ ಹೊಂಚು ಹಾಕುತ್ತಾ ನಿಂತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಕಾರು ಕಳ್ಳತನವಾಗುವುದನ್ನು ತಡೆಯಲು ಕಾರುಗಳ್ಳನೊಡನೆ ಹೋರಾಡಿದ 82ರ ವಯೋವೃದ್ಧ

ವಯೋವೃದ್ಧರಿಂದ ಆರಾಮವಾಗಿ ಕಾರು ಕದಿಯಬಹುದು ಎಂದು ತಿಳಿದಿದ್ದ ಕಳ್ಳನಿಗೆ ನಿರಾಸೆ ಎದುರಾಗಿದೆ. ವರದಿಗಳ ಪ್ರಕಾರ, ವಯೋವೃದ್ದರು ಅಟ್ಲಾಂಟಾ ನಗರದ ಪೆಟ್ರೋಲ್ ಬಂಕ್'ನಲ್ಲಿ ತಮ್ಮ ಕಾರಿಗೆ ಪೆಟ್ರೋಲ್ ಹಾಕಿಸುತ್ತಿದ್ದರು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕಾರು ಕಳ್ಳತನವಾಗುವುದನ್ನು ತಡೆಯಲು ಕಾರುಗಳ್ಳನೊಡನೆ ಹೋರಾಡಿದ 82ರ ವಯೋವೃದ್ಧ

ಈ ವೇಳೆ ಆ ವಯೋವೃದ್ದರ ಬಳಿ ಬರುವ ಕಳ್ಳ ಅವರಿಗೆ ಗನ್ ತೋರಿಸಿ ಕಾರಿನ ಕೀ ಕೇಳುತ್ತಾನೆ. ಆದರೆ ಆ ವಯೋವೃದ್ದರು ಕೀ ನೀಡಲು ನಿರಾಕರಿಸುತ್ತಾರೆ. ಕಳ್ಳ ಕಾರಿನ ಡೋರ್ ತೆರೆದಾಗ ಅವರು ಆತನನ್ನು ತಳ್ಳುತ್ತಾರೆ.

ಕಾರು ಕಳ್ಳತನವಾಗುವುದನ್ನು ತಡೆಯಲು ಕಾರುಗಳ್ಳನೊಡನೆ ಹೋರಾಡಿದ 82ರ ವಯೋವೃದ್ಧ

ಇದರಿಂದ ಕಳ್ಳ ಮುಂದಕ್ಕೆ ಬೀಳುತ್ತಾನೆ. ಈ ವೇಳೆ ಆ ವಯೋವೃದ್ದರು ಹಳೆ ಕುಸ್ತಿ ಪಟುವಿನಂತೆ ಕಂಡು ಬರುವುದು ಸುಳ್ಳಲ್ಲ. ಕೆಳಕ್ಕೆ ಬಿದ್ದ ಕಳ್ಳ ಮೇಲಕ್ಕೆದ್ದು ಅವರಿಂದ ಕೀ ಕಿತ್ತುಕೊಂಡು ಕಾರಿನತ್ತ ಓಡುತ್ತಾನೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಾರು ಕಳ್ಳತನವಾಗುವುದನ್ನು ತಡೆಯಲು ಕಾರುಗಳ್ಳನೊಡನೆ ಹೋರಾಡಿದ 82ರ ವಯೋವೃದ್ಧ

ಕಳ್ಳ ಕಾರಿನೊಳಗೆ ಕುಳಿತುಕೊಳ್ಳುತ್ತಾನಾದರೂ ಕಾರನ್ನು ಹೇಗೆ ಸ್ಟಾರ್ಟ್ ಮಾಡಬೇಕೆಂದು ತಿಳಿಯುವುದಿಲ್ಲ. ಸಿಕ್ಕಿ ಬೀಳುವುದು ಖಚಿತ ಎಂದು ತಿಳಿದ ಕಳ್ಳ ಕಾರಿನಿಂದ ಇಳಿದು ಓಡಿ ಹೋಗುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಕಾರು ಕಳ್ಳತನವಾಗುವುದನ್ನು ತಡೆಯಲು ಕಾರುಗಳ್ಳನೊಡನೆ ಹೋರಾಡಿದ 82ರ ವಯೋವೃದ್ಧ

ಈ ಘಟನೆಯಲ್ಲಿ ಆ ವಯೋವೃದ್ಧರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲವೆಂದು ವರದಿಯಾಗಿದೆ. ಆದರೆ ಕಳ್ಳನ ಎಡ ಭುಜಕ್ಕೆ ಗಾಯವಾಗಿದೆ ಸ್ಥಳೀಯ ಪೊಲೀಸರಿಗೆವಯೋವೃದ್ಧರು ಮಾಹಿತಿ ನೀಡಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಅಟ್ಲಾಂಟಾ ಪೊಲೀಸರು ಘಟನೆ ನಡೆದ ಒಂದು ತಿಂಗಳ ನಂತರ ಈ ವೀಡಿಯೊವನ್ನು ಬಹಿರಂಗಗೊಳಿಸಿದ್ದಾರೆ. ಈ ಮೂಲಕ ಕಾರು ಕದಿಯಲು ಪ್ರಯತ್ನಿಸಿದ ಗುರುತಿಸಲು ನೆರವಾಗುವಂತೆ ಜನರನ್ನು ಕೋರುತ್ತಿದ್ದಾರೆ.

ಕಾರು ಕಳ್ಳತನವಾಗುವುದನ್ನು ತಡೆಯಲು ಕಾರುಗಳ್ಳನೊಡನೆ ಹೋರಾಡಿದ 82ರ ವಯೋವೃದ್ಧ

ಕಳೆದ ವರ್ಷ ಕಾಲ್ಚೆಸ್ಟರ್ ಅವೆನ್ಯೂದಲ್ಲಿ ಎಟಿಎಂನಿಂದ ಹಣ ಪಡೆಯುತ್ತಿದ್ದ 77 ವರ್ಷದ ವೃದ್ಧನನ್ನು ಕಳ್ಳನೊಬ್ಬ ಸುಲಿಗೆ ಮಾಡಲು ಯತ್ನಿಸಿದ್ದ. ಆದರೆ ಆ ವೃದ್ಧರು ಪ್ರತಿರೋಧ ಒಡ್ಡಿದ ಕಾರಣಕ್ಕೆ ಕಳ್ಳ ತಪ್ಪಿಸಿಕೊಂಡಿದ್ದ.

Most Read Articles

Kannada
English summary
82 years old man fights with car thief to save his car from theft. Read in Kannada.
Story first published: Wednesday, April 7, 2021, 16:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X