ಅಲೆಲೆಲೆ...'ರೆಡ್ ಚಿಲ್ಲೀಸ್' ಲೀನಾ ಬಳಿಯಿತ್ತು 9 ಲಗ್ಷುರಿ ಕಾರುಗಳು!
ಚೆನ್ನೈನ ಕೆನರಾ ಬ್ಯಾಂಕ್‌ನಲ್ಲಿ ಸಾಲ ಮಾಡಿ 19 ಕೋಟಿ ರುಪಾಯಿ ವಂಚಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದಕ್ಷಿಣ ಭಾರತದ ನಟಿ ಲೀನಾ ಮರಿಯಾ ಪಾಲ್ ಬಳಿ 9 ಐಷಾರಾಮಿ ಕಾರುಗಳಿದ್ದವೆಂಬ ಮಾಹಿತಿ ದೊರಕಿದೆ. ಲೀನಾ ಸೇರಿದಂತೆ ಆಕೆಯ ನಾಲ್ಕು ಖಾಸಗಿ ಅಂಗರಕ್ಷಕರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರೂ ಗೆಳೆಯ ಬಾಲಾಜಿ ಅಲಿಯಾಸ್ ಚಂದ್ರಶೇಖರ್ ಪಾರಾರಿಯಾಗಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ನಟ ಮೋಹಾನ್‌ಲಾಲ್ ಜತೆ 'ರೆಡ್ ಚಿಲ್ಲೀಸ್' ಚಿತ್ರದಲ್ಲಿ ನಟಿಸಿರುವ ಕೊಚ್ಚಿ ಮೂಲದ ಈ ಮಾದಕ ತಾರೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಆರೋಪಿಗಳಿಂದ ಒಂಬತ್ತು ಐಷಾರಾಮಿ ಕಾರು ಸೇರಿದಂತೆ 81 ಬೆಳೆಬಾಳುವ ಕೈಗಡಿಯಾರ ಹಾಗೂ ಖಾಸಗಿ ಭದ್ರತಾ ಸಿಬ್ಬಂದಿಯಿಂದ ನಾಲ್ಕು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ತಿಂಗಳಿಗೆ ನಾಲ್ಕು ಲಕ್ಷ ರು. ಬಾಡಿಗೆ ಕಟ್ಟಿ ಲೀನಾ ಐಷಾರಾಮಿ ಜೀವನ ನಡೆಸುತ್ತಿದ್ದಳು ಎಂಬ ಮಾಹಿತಿಯಿದೆ. ಆರೋಪಿ ಲೀನಾ ಬಳಿಯಿದ್ದ ರೋಲ್ಸ್ ರಾಯ್ಸ್, ಲ್ಯಾಂಡ್ ರೋವರ್, ಹಮ್ಮರ್, ಬಿಎಂಡಬ್ಲ್ಯುಗಳಂತಹ ಲಗ್ಷುರಿ ಕಾರುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಹಮ್ಮರ್
ಹಮ್ಮರ್ ಅಂದಾಜು ದರ: 1.5 ಕೋಟಿ ರು.

ಆಸ್ಟನ್ ಮಾರ್ಟಿನ್
ಆಸ್ಟನ್ ಮಾರ್ಟಿನ್ ಅಂದಾಜು ದರ: 1.5 ಕೋಟಿ ರು.

ನಿಸ್ಸಾನ್ ಜಿಟಿಆರ್
ನಿಸ್ಸಾನ್ ಜಿಟಿಆರ್ ಅಂದಾಜು ದರ: 4 ಕೋಟಿ ರು.

ರೋಲ್ಸ್ ರಾಯ್ಸ್
ರೋಲ್ಸ್ ರಾಯ್ಸ್ ಅಂದಾಜು ದರ: 4.5 ಕೋಟಿ

ಟೊಯೊಟಾ ಲ್ಯಾಂಡ್ ಕ್ರೂಸರ್
ಟೊಯೊಟಾ ಲ್ಯಾಂಡ್ ಕ್ರೂಸರ್ ಅಂದಾಜು ದರ: 1 ಕೋಟಿ ರು.

ಲ್ಯಾಂಡ್ ರೋವರ್
ಲ್ಯಾಂಡ್ ರೋವರ್ ಅಂದಾಜು ದರ: 1 ಕೋಟಿ ರು.

ಬಿಎಂಡಬ್ಲ್ಯು
ಬಿಎಂಡಬ್ಲ್ಯು ಅಂದಾಜು ದರ: 55 ಲಕ್ಷ ರು.

ಮಿಟ್ಸುಬಿಸಿ ಇವಲ್ಯೂಷನ್ ಎಕ್ಸ್
ಮಿಟ್ಸುಬಿಸಿ ಇವಲ್ಯೂಷನ್ ಎಕ್ಸ್ ಅಂದಾಜು ದರ: 50 ಲಕ್ಷ ರು.


Click it and Unblock the Notifications








