ಸೆ. 24 ರಂದು 9 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಲೋಕಾರ್ಪಣೆ: ಕರ್ನಾಟಕದ ಈ ಭಾಗಕ್ಕೆ ರೈಲು ಖಚಿತ!

ಸೆಪ್ಟೆಂಬರ್ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಒಂಬತ್ತು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಒಡಿಶಾ, ಕೇರಳದಂತಹ ರಾಜ್ಯಗಳು ಸೇರಿದಂತೆ ಚುನಾವಣೆಗೆ ಒಳಪಡುವ ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಿಗೂ ರೈಗಳನ್ನು ನೀಡಲಾಗುವುದು ಎಂದು ವರದಿಯಾಗಿದೆ.

ಒಟ್ಟು ಒಂಬತ್ತು ರೈಲುಗಳಲ್ಲಿ, ಎಂಟು ವಂದೇ ಭಾರತ್ ರೈಲುಗಳು ನೀಲಿ-ಬಿಳಿ ಬಣ್ಣದ ಸಂಯೋಜನೆಯಲ್ಲಿವೆ. ಒಂದು ಮಾತ್ರ ಹೊಸ ಕಿತ್ತಳೆ ಬಣ್ಣದೊಂದಿಗೆ ಬರಲಿದೆ. ಶೀಘ್ರದಲ್ಲೇ ಇನ್ನೂ 10 ಕಿತ್ತಳೆ-ಬಿಳಿ ಬಣ್ಣದ ವಂದೇ ಭಾರತ್ ರೈಲುಗಳನ್ನು ತರುವ ಯೋಜನೆಯಿದೆ. ರೈಲುಗಳು ಈಗಾಗಲೇ ದಕ್ಷಿಣದಲ್ಲೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು, ಒಂಬತ್ತು ರೈಲುಗಳಲ್ಲಿ ಕರ್ನಾಟಕಕ್ಕೂ ಒಂದು ಸಿಗಲಿದೆ ಎಂದು ಹೇಳಲಾಗಿದೆ.

9-vande-bharat-express-trains-launch-sep-24th

ಕಳೆದ ಜುಲೈ 7 ರಂದು ಗೋರಖ್‌ಪುರ-ಲಕ್ನೋ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಜೋಧ್‌ಪುರ-ಸಾಬರಮತಿ ವಂದೇ ಭಾರತ್ ಎಕ್ಸ್‌ಪ್ರೆಸ್ ಲೋಕಾರ್ಪಣೆ ಬಳಿಕ ಸುಮಾರು ಎರಡು ತಿಂಗಳ ನಂತರ ಹೊಸ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಲಾಗುತ್ತಿದೆ. 9 ಮಾರ್ಗಗಳಲ್ಲಿ ಸಂಚರಿಸಲಿರುವ ಪ್ರತಿ ವಂದೇ ಭಾರತ್ ರೈಲು ಕೂಡ 8-ಕೋಚ್‌ಗಳನ್ನು ಹೊಂದಿರಲಿವೆ.

ಬಿಹಾರ, ಕೇರಳ ಮತ್ತು ಒಡಿಶಾ ತಮ್ಮ ಎರಡನೇ ವಂದೇ ಭಾರತ್ ರೈಲುಗಳನ್ನು ಪಡೆಯಲಿವೆ, ಬಿಹಾರದ ಮೊದಲ ಎಕ್ಸ್‌ಪ್ರೆಸ್ ಪಾಟ್ನಾ-ರಾಂಚಿ ರೈಲು ಈ ವರ್ಷ ಜೂನ್ 27 ರಂದು ಪ್ರಾರಂಭವಾಯಿತು. ರಾಜಸ್ಥಾನವು ಈಗಾಗಲೇ ಜೈಪುರಕ್ಕೆ ಒಂದು ವಂದೇ ಭಾರತವನ್ನು ಹೊಂದಿದೆ, ಈ ತಿಂಗಳು ರಾಜ್ಯವು ಎರಡು ವಂದೇ ಭಾರತ್ ರೈಲುಗಳನ್ನು ಪಡೆಯುತ್ತಿದೆ.

9-vande-bharat-express-trains-launch-sep-24th

ಮಧ್ಯಪ್ರದೇಶವು ಭೋಪಾಲ್, ಜಬಲ್ಪುರ್, ಉಜ್ಜಯಿನಿಗೆ ವಂದೇ ಭಾರತ್ ಸೇವೆಯನ್ನು ಹೊಂದಿದೆ. ಈಗ ಇಂದೋರ್‌ಗೆ ಹೊಸದನ್ನು ಸೇರಿಸಲಾಗುತ್ತದೆ. ಇಂದೋರ್-ಜೈಪುರ, ಜೈಪುರ-ಉದಯಪುರ, ಪುರಿ-ರೂರ್ಕೆಲಾ, ಪಾಟ್ನಾ-ಹೌರಾ, ಜೈಪುರ-ಚಂಡೀಗಢ, ಚೆನ್ನೈ-ತಿರುನೆಲ್ವೇಲಿ, ರಾಂಚಿ-ಹೌರಾ, ಜಾಮ್‌ಗರ-ಅಹಮದಾಬಾದ್, ಚೆನ್ನೈ-ಹೈದರಾಬಾದ್ ಸೇರಿದಂತೆ ದೇಶದಲ್ಲಿ ಒಟ್ಟು 25 ರೈಲುಗಳು ಕಾರ್ಯಾಚರಣೆಯಲ್ಲಿವೆ. ಈಗ, ಈ 9 ಹೊಸ ಮಾರ್ಗಗಳ ಸೇರ್ಪಡೆಯೊಂದಿಗೆ 34 ಮಾರ್ಗಗಳಿಗೆ ಹೆಚ್ಚಾಗುತ್ತದೆ.

ಬೆಂಗಳೂರು - ಹೈದರಾಬಾದ್‌ ವಂದೇ ಭಾರತ್: ಬೆಂಗಳೂರು ಮತ್ತು ಹೈದರಾಬಾದ್‌ಗಳನ್ನು ಸಂಪರ್ಕಿಸುವ ಯಶವಂತಪುರ - ಕಾಚೀಗೂಡ ಮಾರ್ಗಕ್ಕೂ ಹೊಸ ವಂದೇ ಭಾರತ್ ರೈಲನ್ನು ನೀಡುವುದು ಬಹುತೇಕ ಖಚಿತವಾಗಿದೆ. ಆದರೆ ಈ ಬಗ್ಗೆ ಅಧಿಕೃತಗೊಳಿಸುವ ಮೊದಲು ರೈಲ್ವೆ ಅಧಿಕಾರಿಗಳು PMO ನಿಂದ ದೃಢೀಕರಣಕ್ಕಾಗಿ ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.

9-vande-bharat-express-trains-launch-sep-24th

ಯಶವಂತಪುರ - ಕಾಚೇಗೌಡ ವಂದೇ ಭಾರತ್ ಎಕ್ಸ್‌ಪ್ರೆಸ್ ಎರಡು ನಗರಗಳ ನಡುವೆ 609.8 ಕಿಮೀ ದೂರವನ್ನು ಸರಿಸುಮಾರು ಎಂಟು ಗಂಟೆ 30 ನಿಮಿಷಗಳಲ್ಲಿ ಕ್ರಮಿಸುತ್ತದೆ ಎಂದು ರೈಲ್ವೆ ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಈ ಹೊಸ ಯಶವಂತಪುರ - ಕಾಚೀಗೂಡ ವಂದೇ ಭಾರತ್ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 25 ರಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಯಶವಂತಪುರದಿಂದ ಮಧ್ಯಾಹ್ನ 2:45ಕ್ಕೆ ಹೊರಡುವ ರೈಲು ರಾತ್ರಿ 11:15ಕ್ಕೆ ಕಾಚೀಗೂಡ ತಲುಪಲಿದೆ.

ಮಹೆಬೂಬ್ ನಗರ, ಕರ್ನೂಲ್, ಅನಂತಪುರ ಮತ್ತು ಧರ್ಮಾವರಂನಲ್ಲಿ ವಂದೇ ಭಾರತ್ ನಿಲುಗಡೆ ಹೊಂದಬಹುದು ಎಂದು ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಕಾಚೀಗೂಡ- ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಾಯೋಗಿಕ ಓಡಾಟವನ್ನು ಸೆಪ್ಟೆಂಬರ್ 21 ರಂದು ನಿಗದಿಪಡಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

9-vande-bharat-express-trains-launch-sep-24th

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, September 21, 2023, 12:05 [IST]
English summary
9 vande bharat express trains launch sep 24th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+