ಸ್ಕ್ರಾಪ್ ಮೆಟಿರಿಯಲ್‌ಗಳಿಂದ ಬೈಕ್ ತಯಾರಿಸಿದ 9ರ ಪೋರ

ಕೇರಳದ 9 ವರ್ಷದ ಬಾಲಕ ಅರ್ಷದ್ ಟಿ.ಎಚ್ ತನ್ನ ತಂದೆಯ ಆಟೋಮೊಬೈಲ್ ವರ್ಕ್‌ಶಾಪ್‌ನಲ್ಲಿದ್ದ ಸ್ಕ್ರಾಪ್ ಮೆಟಿರಿಯಲ್‌ಗಳಿಂದ ಲಘು ತೂಕದ ಬೈಕ್ ತಯಾರಿಸಿದ್ದಾನೆ. ಈ ಬೈಕ್ ಅನ್ನು ಅರ್ಷದ್ ಒಂದೂವರೆ ತಿಂಗಳಲ್ಲಿ ತಯಾರಿಸಿದ್ದಾನೆ.

ಸ್ಕ್ರಾಪ್ ಮೆಟಿರಿಯಲ್‌ಗಳಿಂದ ಬೈಕ್ ತಯಾರಿಸಿದ 9ರ ಪೋರ

ಅರ್ಷದ್ ಕೇರಳದ ಕೊಚ್ಚಿ ನಗರದವನಾಗಿದ್ದು, ಆತನ ತಂದೆ ಪಿಟಾ ಟಿಜೆ ಹಾಶಿಮ್ ಆಟೋಮೊಬೈಲ್ ವರ್ಕ್‌ಶಾಪ್ ನಡೆಸುತ್ತಿದ್ದಾರೆ. ಆತ ಆಗಾಗ ತನ್ನ ತಂದೆಯ ವರ್ಕ್‌ಶಾಪ್‌ಗೆ ಭೇಟಿ ನೀಡುತ್ತಾನೆ. ಲಾಕ್‌ಡೌನ್ ಅವಧಿಯಲ್ಲಿ ಕಬ್ಬಿಣದ ಪೈಪ್ ಹಾಗೂ ಬೈಕ್ ಎಂಜಿನ್‌ಗಳನ್ನು ಕಂಡ ಆತ ಹೊಸ ಬೈಕ್ ನಿರ್ಮಿಸಲು ನಿರ್ಧರಿಸಿದ್ದಾನೆ.

ಸ್ಕ್ರಾಪ್ ಮೆಟಿರಿಯಲ್‌ಗಳಿಂದ ಬೈಕ್ ತಯಾರಿಸಿದ 9ರ ಪೋರ

ಆರಂಭದಲ್ಲಿ ಆತನ ತಂದೆ ಬೈಕ್ ನಿರ್ಮಿಸಲು ಹಿಂಜರಿದರೂ ಸಹ ಅರ್ಧ ಬೈಕ್ ನಿರ್ಮಿಸಿದ ನಂತರ ಮಗನ ಬೆಂಬಲಕ್ಕೆ ನಿಂತರು. ನಂತರ ಒಂದೂವರೆ ತಿಂಗಳಲ್ಲಿ ಹೊಸ ಬೈಕ್ ನಿರ್ಮಾಣವಾಯಿತು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸ್ಕ್ರಾಪ್ ಮೆಟಿರಿಯಲ್‌ಗಳಿಂದ ಬೈಕ್ ತಯಾರಿಸಿದ 9ರ ಪೋರ

ಈ ಬೈಕ್ ಬಗ್ಗೆ ಹೇಳುವುದಾದರೆ, ಈ ಬೈಕ್ ಚಿಕ್ಕದಾಗಿದ್ದು, ಲಘು ತೂಕವನ್ನು ಹೊಂದಿದೆ. ಇದರಲ್ಲಿರುವ ಪೆಟ್ರೋಲ್ ಟ್ಯಾಂಕ್ ಅನ್ನು ಸೀಟ್ ಹಾಗೂ ಹ್ಯಾಂಡಲ್‌ಗೆ ಜೋಡಿಸಲಾಗಿದೆ. ಈ ಟ್ಯಾಂಕ್ ಸಾಮರ್ಥ್ಯವು ಒಂದು ಲೀಟರ್ ಆಗಿದೆ. ಈ ಟ್ಯಾಂಕಿನಲ್ಲಿ ಪೂರ್ತಿಯಾಗಿ ಪೆಟ್ರೋಲ್ ತುಂಬಿಸಿದರೆ 50 ಕಿ.ಮೀ ಚಲಿಸಬಹುದೆಂದು ಅರ್ಷದ್ ಹೇಳಿದ್ದಾನೆ.

ಸ್ಕ್ರಾಪ್ ಮೆಟಿರಿಯಲ್‌ಗಳಿಂದ ಬೈಕ್ ತಯಾರಿಸಿದ 9ರ ಪೋರ

ಹಲವು ಬೈಕುಗಳ ಸ್ಕ್ರಾಪ್ ಮೆಟಿರಿಯಲ್‌ಗಳನ್ನು ಬಳಸಿ ಈ ಬೈಕ್ ತಯಾರಿಸಲಾಗಿದೆ, ಡಿಸ್ಕ್ ಬ್ರೇಕ್, ಎಲ್ಇಡಿ ಲೈಟ್, ಟಯರ್, ಹ್ಯಾಂಡಲ್, ಕ್ಯಾರಿಯರ್ ಹಾಗೂ ಸೀಟ್ ಇತ್ಯಾದಿಗಳನ್ನು ಇತರ ವಾಹನಗಳಲ್ಲಿದ್ದ ಭಾಗಗಳಿಂದ ತೆಗೆದುಕೊಳ್ಳಲಾಗಿದೆ. ಈ ಬೈಕ್ ತಯಾರಿಸಲು ರೂ.10,000 ವೆಚ್ಚವಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಸ್ಕ್ರಾಪ್ ಮೆಟಿರಿಯಲ್‌ಗಳಿಂದ ಬೈಕ್ ತಯಾರಿಸಿದ 9ರ ಪೋರ

ಈ ಲೈಟ್ ಬೈಕ್ ತಯಾರಿಕೆಯ ನಂತರ ಟ್ರಾಲಿ ನಿರ್ಮಿಸಲು ಬಯಸಿರುವುದಾಗಿ ಅರ್ಷದ್ ಹೇಳಿದ್ದಾನೆ. ಭವಿಷ್ಯದಲ್ಲಿ ಆತನ ಎಲ್ಲಾ ಕಾರ್ಯಗಳಿಗೆ ಬೆಂಬಲ ನೀಡುವುದಾಗಿ ಆತನ ತಂದೆ ಹೇಳಿದ್ದಾರೆ. ತಮ್ಮ ಮಗನ ಬಗ್ಗೆ ಹೆಮ್ಮೆ ಪಡುವುದಾಗಿ ಅವರು ಹೇಳುತ್ತಾರೆ.

ಸ್ಕ್ರಾಪ್ ಮೆಟಿರಿಯಲ್‌ಗಳಿಂದ ಬೈಕ್ ತಯಾರಿಸಿದ 9ರ ಪೋರ

ಈ ಲಘು ಬೈಕ್ ಉತ್ಪಾದನೆಯ ಬಗ್ಗೆ ಮಾತನಾಡಿರುವ ಅರ್ಷದ್‌ನ ತಂದೆ, ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲಿದ್ದಾಗ ಆರ್ಷದ್ ತನ್ನ ಸೈಕಲ್‌ನಂತೆ ಕಾಣುವ ಬೈಕ್ ನಿರ್ಮಿಸಬಹುದೇ ಎಂದು ನನ್ನನ್ನು ಕೇಳಿದ. ನನ್ನ ಸ್ನೇಹಿತ ಅವನಿಗೆ ವೆಲ್ಡಿಂಗ್ ಯಂತ್ರವನ್ನು ನೀಡಿದ್ದ ಎಂದು ಹೇಳಿದರು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಸ್ಕ್ರಾಪ್ ಮೆಟಿರಿಯಲ್‌ಗಳಿಂದ ಬೈಕ್ ತಯಾರಿಸಿದ 9ರ ಪೋರ

ಈ ಬೈಕ್ ಇಷ್ಟು ಚೆನ್ನಾಗಿ ಕಾಣುತ್ತದೆ ಎಂದು ನಾನು ಭಾವಿಸಿರಲಿಲ್ಲ. ಆರ್ಷದ್ ಈ ಬೈಕ್ ಅನ್ನು ರಿಜಿಸ್ಟರ್ ಮಾಡಲು ಪ್ರಯತ್ನಿಸುತ್ತಿದ್ದಾನೆ. ಮುಂದೆ ಟ್ರಾಲಿ ನಿರ್ಮಿಸುವುದಾಗಿ ಹೇಳಿದ್ದಾನೆ. ಆತನಿಗೆ ಎಲ್ಲಾ ರೀತಿಯ ಬೆಂಬಲ ನಿಡುವುದಾಗಿ ಹೇಳಿದರು.

Most Read Articles

Kannada
English summary
9 year Kerala boy builds light motorcycle from scrap materials. Read in Kannada.
Story first published: Tuesday, June 16, 2020, 9:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X