kia: ಕಿಯಾ ಕಂಪನಿಗೆ ಸರಿಯಾದ ಹೊಡೆತ: ಉತ್ಪಾದನಾ ಘಟಕದಲ್ಲಿ 900 ಕಾರು ಎಂಜಿನ್‌ಗಳು ಕಳವು!
ಆಂಧ್ರಪ್ರದೇಶದಲ್ಲಿ 5 ವರ್ಷಗಳಲ್ಲಿ 900 ಕಿಯಾ ಕಾರುಗಳ ಎಂಜಿನ್‌ಗಳನ್ನು ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ದಕ್ಷಿಣ ಕೊರಿಯಾದ ಕಂಪನಿಯಾದ 'ಕಿಯಾ' ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಪೆನುಕೊಂಡದಲ್ಲಿ ಕಾರು ಉತ್ಪಾದನಾ ಘಟಕವನ್ನು ಹೊಂದಿದ್ದು, ಇಲ್ಲಿ ಕಾರಿನ ಸಂಪೂರ್ಣ ನಿರ್ಮಾಣ ಪ್ರಕ್ರಿಯೆ ನಡೆಯುತ್ತದೆ. ಉತ್ಪಾದನಾ ಘಟಕಕ್ಕೆ ಹೋಗುವ ದಾರಿಯಲ್ಲಿ ಮತ್ತು ಒಳಗಿನಿಂದ ಎಂಜಿನ್‌ಗಳನ್ನು ಕಳವು ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಕಳ್ಳತನದ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಪೊಲೀಸರು ತಂಡಗಳನ್ನು ರಚಿಸಿದ್ದು, ಹಲವಾರು ದಾಖಲೆಗಳನ್ನು ಸಂಗ್ರಹಿಸಿದ್ದಾರೆ.
ಸುಮಾರು 900 ಕಿಯಾ ಕಾರು ಎಂಜಿನ್‌ಗಳನ್ನು ಕಳವು ಮಾಡಲಾಗಿದೆ ಎಂದು ಕಿಯಾ ಕಂಪನಿ ಪೊಲೀಸರಿಗೆ ದೂರು ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಂಜಿನ್ ಕಳ್ಳತನವು ಸುಮಾರು ಐದು ವರ್ಷಗಳ (2020) ಹಿಂದಿನಿಂದ ನಡೆಯುತ್ತಿದೆ ಎಂದು ಪೊಲೀಸರು ನಂಬಿದ್ದಾರೆ. ಆದರೆ ಕಂಪನಿಯು ಮಾರ್ಚ್ 19 ರಂದು ಠಾಣೆಯಲ್ಲಿ ದೂರು ದಾಖಲಿಸಿದೆ.

ಇದು ಸುಮಾರು ಐದು ವರ್ಷಗಳಿಂದ ನಿರಂತರ ಪ್ರಕ್ರಿಯೆಯಾಗಿದ್ದು, ನಾವು ತನಿಖೆಯ ಚುರುಕುಗೊಳಿಸಿದ್ದೇವೆ. ಪ್ರಾಥಮಿಕ ತನಿಖೆಯಲ್ಲಿ 900 ಎಂಜಿನ್‌ಗಳು ಕಳ್ಳತನವಾಗಿರುವುದು ದೃಢಪಟ್ಟಿದೆ. ಉತ್ಪಾದನಾ ಘಟಕಕ್ಕೆ ಹೋಗುವ ದಾರಿಯಲ್ಲಿ ಮತ್ತು ಒಳಗಿನಿಂದ ಎಂಜಿನ್ ಗಳನ್ನು ಕಳವು ಮಾಡಲಾಗಿದೆ. ಹೊರಗಿನವರಲ್ಲ, ಅದು ಒಳಗಿನಿಂದಲೇ ಆಗಿದೆ. ಅವರ (ಕಿಯಾ ಮ್ಯಾನೇಜ್ಮೆಂಟ್) ಅನುಮತಿಯಿಲ್ಲದೆ ಒಂದು ಸಣ್ಣ ತುಂಡು ಸಹ ಹೊರಬರುವುದಿಲ್ಲ.
ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ. ನಾವು ಪ್ರಾಥಮಿಕ ವಿಚಾರಣೆ ನಡೆಸಿದ್ದೇವೆ, ಕೆಲವು ಲೋಪದೋಷಗಳನ್ನು ದೃಢಪಡಿಸಿದ್ದೇವೆ. ನಮ್ಮ ಮುಖ್ಯ ಗುರಿ ಹಳೆಯ ಉದ್ಯೋಗಿಗಳನ್ನು ತನಿಖೆ ಮಾಡುವುದು ಮತ್ತು ಕೆಲವರು ಪ್ರಸ್ತುತ ಉದ್ಯೋಗಿಗಳ ಪಾಲ್ಗೊಳ್ಳುವಿಕೆಯೂ ಇದೆ ಎಂದು ಎಂದು ಪೆನುಕೊಂಡ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ವೈ ವೆಂಕಟೇಶ್ವರಲು ಪಿಟಿಐಗೆ ತಿಳಿಸಿದ್ದಾರೆ.
ಕಿಯಾ ಆರಂಭ: ಏಪ್ರಿಲ್ 2017 ರಲ್ಲಿ, ಕಿಯಾ ಭಾರತದ ಆಂಧ್ರಪ್ರದೇಶ ರಾಜ್ಯ ಸರ್ಕಾರದೊಂದಿಗೆ ಅನಂತಪುರ ಜಿಲ್ಲೆಯಲ್ಲಿ ಹೊಸ ಉತ್ಪಾದನಾ ಸೌಲಭ್ಯವನ್ನು ನಿರ್ಮಿಸಲು ತಿಳುವಳಿಕೆ ಪತ್ರ (MOU)ಕ್ಕೆ ಸಹಿ ಹಾಕಿತು. ಕಿಯಾ ಆಗಸ್ಟ್ 2019 ರಲ್ಲಿ ಬೃಹತ್ ಉತ್ಪಾದನೆಯನ್ನು ಪ್ರಾರಂಭಿಸಿ, 3,00,000 ಯೂನಿಟ್ ವಾಹನಗಳ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.
ಇಲ್ಲಿಯವರೆಗೆ ಕಿಯಾ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಸೆಲ್ಟೋಸ್, ಸೈರೋಸ್, ಸೋನೆಟ್, ಕ್ಯಾರೆನ್ಸ್, ಕಾರ್ನಿವಲ್, EV6 ಮತ್ತು EV9 ಎಂಬ ಏಳು ವಾಹನಗಳನ್ನು ಬಿಡುಗಡೆ ಮಾಡಿದೆ. ಕಿಯಾ ಇಂಡಿಯಾ ತನ್ನ ಅನಂತಪುರ ಸ್ಥಾವರದಿಂದ ಸುಮಾರು 1.6 ಮಿಲಿಯನ್ ವಾಹನ ರವಾನೆಗಳನ್ನು ಪೂರ್ಣಗೊಳಿಸಿದೆ, ಇದರಲ್ಲಿ 1.2 ಮಿಲಿಯನ್ ದೇಶೀಯ ಮಾರಾಟ ಮತ್ತು 3.67 ಲಕ್ಷಕ್ಕೂ ಹೆಚ್ಚು ರಫ್ತುಗಳು ಸೇರಿವೆ.
ಭಾರತದಲ್ಲಿ ಈ ಬ್ರ್ಯಾಂಡ್ 315 ನಗರಗಳಲ್ಲಿ 725 ಟಚ್‌ಪಾಯಿಂಟ್‌ಗಳ ವ್ಯಾಪಕ ಜಾಲವನ್ನು ಹೊಂದಿದೆ. ಭಾರತೀಯ ರಸ್ತೆಗಳಲ್ಲಿ 4.5 ಲಕ್ಷಕ್ಕೂ ಹೆಚ್ಚು ಸಂಪರ್ಕಿತ ಕಾರುಗಳೊಂದಿಗೆ, ದೇಶದ ಸಂಪರ್ಕಿತ ಕಾರು ವಿಭಾಗದಲ್ಲಿ ತನ್ನನ್ನು ಗುರ್ತಿಸಿಕೊಂಡಿದೆ. ದೇಶಾದ್ಯಂತ ತನ್ನ ಹೆಜ್ಜೆಗುರುತುಗಳನ್ನು ಬಲಪಡಿಸುವತ್ತ ಗಮನಹರಿಸಿರುವುದಾಗಿ ಕಿಯಾ ಕಂಪನಿ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








