Just In
- 55 min ago
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- 1 hr ago
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- 2 hrs ago
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- 3 hrs ago
13 ಉದ್ಯೋಗಿಗಳಿಗೆ ಹೊಸ ಟೊಯೋಟಾ ಗ್ಲಾನ್ಜಾ ಕಾರುಗಳನ್ನು ಉಡುಗೊರೆಯಾಗಿ ನೀಡಿದ ಕಂಪನಿ
Don't Miss!
- News
Namma Metro:ರೈಲ್ವೆ ಹಳಿಗೆ ಅಡ್ಡಲಾಗಿ ವೆಬ್ ಗರ್ಡರ್ ನಿರ್ಮಿಸಿ BMRCL, ಏನಿದು?
- Movies
ಜನ್ನತ್ ಟು ಮನ್ನತ್: ಬಾಲಿವುಡ್ ಬಾದ್ ಶಾ ಶಾರುಖ್ ಬಳಿಯಿರುವ 6 ಐಷಾರಾಮಿ ಮನೆಗಳಿವು!
- Finance
Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬೆಂಗಳೂರಿನ ಕ್ಯಾಬ್ ಚಾಲಕನಿಗೆ ಮನಸೋತ ಹೊರ ರಾಜ್ಯದ ಗ್ರಾಹಕ: ದೇಶಾದ್ಯಂತ ವೈರಲ್ ಆಗ್ತಿದ್ದಾನೆ ಕನ್ನಡಿಗ
ವಿಮಾನ ಪ್ರಯಾಣದ ಬಳಿಕ ಬೆಂಗಳೂರು ಏರ್‌ಪೋರ್ಟ್‌ನಲ್ಲಿನ ಕ್ಯಾಬ್‌ವೊಂದನ್ನು ಹತ್ತಿದ್ದ ವ್ಯಕ್ತಿ, ಊಬರ್ ಚಾಲಕನ ವ್ಯಕ್ತಿತ್ವಕ್ಕೆ ಮನಸೋತಿದ್ದಾನೆ. ದಕ್ಷಿಣ ಭಾರತೀಯರನ್ನು (gems) ರತ್ನಗಳಿಗೆ ಹೋಲಿಸಿದ್ದಾನೆ.
Recommended Video
ಊಬರ್ ಚಾಲಕ ನನ್ನನ್ನು ಮಗನಂತೆ ನೋಡಿಕೊಂಡಿದ್ದಾರೆ, ಇಂತಹ ಕ್ಯಾಬ್ ಡ್ರೈವರ್‌ಗಳನ್ನು ನನ್ನ ಜೀವನದಲ್ಲಿ ಎಂದೂ ನೋಡಿಲ್ಲ. ಊಬರ್ ಸಂಸ್ಥೆಯು ಈ ಸೂಪರ್ ಹೀರೋಗಾಗಿ ಏನಾದರೂ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾನೆ. ಸದ್ಯ ಈ ಪೋಸ್ಟ್ ದೇಶಾದ್ಯಂತ ಸಖತ್ ವೈರಲ್ ಆಗಿದೆ.

ಪ್ರಸ್ತುತದ ದಿನಗಳಲ್ಲಿ ವಿರಾಮವಿಲ್ಲದೇ ಸಾಗುವ ನಿತ್ಯದ ಬದುಕಿನಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವುದೇ ದೊಡ್ಡ ಸವಾಲಾಗಿರುತ್ತದೆ. ಇಂತಹ ಪ್ರಯಾಣದಲ್ಲಿ ಅದೆಷ್ಟೋ ಮಂದಿಯನ್ನು ಭೇಟಿಯಾಗುತ್ತೇವೆ. ಅವರೆಲ್ಲರೂ ಕೇವಲ ಮಾತಿಗಷ್ಟೇ ಸೀಮಿತವಾಗಿರುತ್ತಾರೆ. ನಮ್ಮ ಬಗ್ಗೆ ಅಷ್ಟೋಂದು ಕಾಳಜಿಯಿರುವುದಿಲ್ಲ.

ಆದರೆ ನಮ್ಮ ಬೆಂಗಳೂರಿನ ರವಿ ಎಂಬ ಊಬರ್ ಚಾಲಕನ ಉಪಚಾರವನ್ನು ಎಂದೂ ಮರೆಯೋಲ್ಲ ಎಂದು ಪ್ರಯಾಣಿಕ ಹರ್ಷ್ ಎಂಬುವವರು ಹೇಳಿದ್ದಾರೆ. ತಮಗೆ ಎದುರಾದ ಘಟನೆಯನ್ನು ಹರ್ಷ್ ಸ್ವತಃ ಹಂಚಿಕೊಂಡಿದ್ದು, ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ರವಿ ಎಂಬ ಊಬರ್ ಚಾಲಕನನ್ನು ಹರ್ಷ್ ಹಾಡಿ ಹೊಗಳಿದ್ದಾರೆ.

ನನ್ನ ಸಂಪೂರ್ಣ ಪ್ರಯಾಣದಿಂದಾಗಿ ದಣಿದಿದ್ದೇನೆ ಎಂದು ತಿಳಿದ ನಂತರ, ಊಬರ್ ಚಾಲಕ ತನ್ನ ಕ್ಯಾಬ್‌ನಲ್ಲಿ ಕೊಂಡೊಯ್ಯುತ್ತಾ ರೆಸ್ಟೋರೆಂಟ್‌ನಲ್ಲಿ ನನಗೆ ಆಸನವನ್ನು ಏರ್ಪಡಿಸಿದರು. ನನ್ನನ್ನು ಡ್ರಾಪ್ ಪಾಯಿಂಟ್ ತಲುಪುವವರೆಗೂ ಬಹಳ ಕಾಳಜಿಯಿಂದ ನೋಡಿಕೊಂಡರು. ಇಂತಹ ಕ್ಯಾಬ್ ಡ್ರೈವರ್‌ಗಳನ್ನು ನನ್ನ ಜೀವನದಲ್ಲಿ ಎಂದೂ ನೋಡಿಲ್ಲ ಎಂದು ಹೇಳಿದ್ದಾರೆ.

ಇಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಇಯರ್‌ಫೋನ್‌ನಲ್ಲಿ ಮಾತನಾಡುವುದರಲ್ಲಿ ನಿರತರಾಗುವ ಕ್ಯಾಬ್ ಡ್ರೈವರ್‌ಗಳೇ ಹೆಚ್ಚು. ತಮ್ಮ ಪಿಕಪ್ ಬಳಿಕ ಗ್ರಾಹಕರ ಅವಸರಗಳನ್ನು ಕೇಳಿ ತಿಳಿಯುವ ಡ್ರೈವರ್‌ಗಳನ್ನು ನಾವು ನೋಡಲು ಅಸಾಧ್ಯ. ತಮ್ಮ ಪಿಕಪ್-ಡ್ರಾಪ್ಬಳಿಕ ಅವರ್ಯಾರೋ ನಾವು ಯಾರೋ ಎಂದು ವ್ಯವರಿಸುತ್ತಾರೆ. ಆದರೆ ರವಿ ನನ್ನ ಮನಸ್ಸು ಗೆದ್ದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ದೀರ್ಘ ಹಾರಾಟದ ನಂತರ ಕ್ಯಾಬ್ ಹತ್ತಿದೆ
ವಿಮಾನದಿಂದ ಇಳಿದು ರವಿಯ ಕ್ಯಾಬ್ ಹತ್ತಿದ ಹರ್ಷ್ ಅವರು ತುಂಬಾ ಸುಸ್ತಾಗಿದ್ದರು. ಇದನ್ನು ಗ್ರಹಿಸಿದ ರವಿ ಬೆಳಗಿನ ಉಪಾಹಾರ ಮಾಡುವಂತೆ ಕೇಳಿದ್ದು, ಹರ್ಷ ನಿರಾಕರಿಸಿದ್ದಾರೆ. ಆದರೆ, ರವಿ ಹರ್ಷನಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ವಿನಂತಿಸಿ ದಾರಿಯಲ್ಲಿ ಒಳ್ಳೆಯ ರೆಸ್ಟೋರೆಂಟ್‌ನಲ್ಲಿ ಸಿಕ್ಕರೆ ನಿಲ್ಲಿಸುವುದಾಗಿ ಹೇಳಿದ್ದಾರೆ.

ಒಂದು ಗಂಟೆಯ ನಂತರ ಅವರು ರೆಸ್ಟೋರೆಂಟ್ ತಲುಪಿದಾಗ, ರವಿ ಅವರನ್ನು ಎಬ್ಬಿಸಿ ಅವರಿಗೆ ಟೇಬಲ್ ವ್ಯವಸ್ಥೆ ಮಾಡಿ ದಕ್ಷಿಣ-ಭಾರತದ ಉಪಹಾರವನ್ನು ಆರ್ಡರ್ ಮಾಡಿದ್ದಾರೆ. ಹರ್ಷನಿಗೆ ಕಾಫಿಯನ್ನೂ ತಂದುಕೊಟ್ಟಿದ್ದಾರೆ. ಇದಕ್ಕೆ ಫಿದಾ ಆದ ಹರ್ಷ್ ತಮ್ಮ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಅವರ ಉದಾತ್ತ ವ್ಯಕ್ತಿತ್ವಕ್ಕೆ ಬಹುಮಾನ ನೀಡುವಂತೆ ಊಬರ್ ಇಂಡಿಯಾವನ್ನು ಒತ್ತಾಯಿಸಿದ್ದಾರೆ.

ಹರ್ಷ್ ಅವರು ಹಂಚಿಕೊಂಡಿರುವ ಲಿಂಕ್ಡ್‌ಇನ್ ಪೋಸ್ಟ್ ವೈರಲ್ ಆಗಿದ್ದು, 29,000ಕ್ಕೂ ಹೆಚ್ಚು ಲೈಕ್‌ಗಳು ಮತ್ತು ನೂರಾರು ಕಾಮೆಂಟ್‌ಗಳು ಮತ್ತು ಶೇರ್‌ಗಳನ್ನು ಗಳಿಸಿದೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಬಹುತೇಕ ಎಲ್ಲಾ ನೆಟ್ಟಿಗರು ಕ್ಯಾಬ್ ಡ್ರೈವರ್‌ನ ಉದಾತ್ತ ವ್ಯಕ್ತಿತ್ವವನ್ನು ಶ್ಲಾಘಿಸಿದ್ದಾರೆ. ಇಡೀ ಘಟನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರ್ಷ್ ವಿವರಿಸಿದ ರೀತಿಯನ್ನು ಹಲವರು ಮೆಚ್ಚಿದ್ದಾರೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಹಣ ಮತ್ತು ಅಧಿಕಾರದ ಓಟದಲ್ಲಿ ಜನರು ಇತರರನ್ನು ಮೋಸ ಮಾಡುತ್ತಿರುವ ಇತ್ತೀಚಿನ ದಿನಗಳಲ್ಲಿ ಇಂತಹ ಮಾನವೀಯತೆಯನ್ನು ಮೆರೆಯುವವರು ಕೆಲವರು ಮಾತ್ರ. ಈ ರೀತಿಯ ಘಟನೆಗಳು ಮಾನವೀಯತೆ ಇನ್ನೂ ಅಸ್ತಿತ್ವದಲ್ಲಿದೆ ಎಂಬುದನ್ನು ಸಾಭಿತು ಪಡಿಸುತ್ತದೆ. ಯಾವುದೇ ನಿರೀಕ್ಷೆಗಳಿಲ್ಲದೆ ಹಣವನ್ನೂ ಬಯಸದೆ ಇತರರ ಬಗ್ಗೆ ಕಾಳಜಿ ವ್ಯಕ್ತಪಡಿಸುವವರಿಂದ ಹಲವರು ಪ್ರಭಾವಿತರಾಗಬೇಕಿದೆ.