10 ರೂ. ನಾಣ್ಯಗಳಿಂದ 6 ಲಕ್ಷ ರೂ. ಮೌಲ್ಯದ ಕಾರು ಖರೀದಿಸಿದ ಯುವಕ: ಈತ ನೀಡಿದ ಕಾರಣ ಪ್ರಶಂಸನೀಯ!

ಇತ್ತೀಚಿನ ವರ್ಷಗಳಲ್ಲಿ 10 ರೂ. ನಾಣ್ಯಗಳು ಚಲಾವಣೆಯಾಗದೇ ಜನರು ಈ ನಾಣ್ಯಗಳನ್ನು ಬಳಸುವುದನ್ನೇ ಬಿಟ್ಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿನ ಧರ್ಮಪುರಿಯ ಯುವಕನೊಬ್ಬ 10 ರೂ. ನಾಣ್ಯಗಳಿಂದ 6 ಲಕ್ಷ ರೂ. ಮೌಲ್ಯದ ಮಾರುತಿ ಸುಜುಕಿ ಕಾರನ್ನು ಖರೀದಿಸಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾನೆ.

10 ರೂ. ನಾಣ್ಯಗಳಿಂದ 6 ಲಕ್ಷ ರೂ. ಮೌಲ್ಯದ ಕಾರು ಖರೀದಿಸಿದ ಯುವಕ: ಈತ ನೀಡಿದ ಕಾರಣ ಪ್ರಶಂಸನೀಯ!

ತಮಿಳುನಾಡಿನ ಧರ್ಮಪುರಿಯ ವೆಟ್ರಿವೇಲ್ ಎಂಬಾತ ಈ ಸಾಹಸ ಮಾಡಿದ್ದಾನೆ. ಆರು ಲಕ್ಷ ರೂ. ನಷ್ಟು 10 ರೂ. ನಾಣ್ಯಗಳನ್ನು ಕಲೆಹಾಕಿ, ಈ ನಾಣ್ಯಗಳನ್ನು ಪಡೆಯಲು ಹಿಂದೇಟು ಹಾಕುವ ವಾತಾವರಣದಲ್ಲಿ ಸುಮಾರು ಒಂದು ತಿಂಗಳು ಕಳೆದಿದ್ದಾರೆ. ಈ ಕಾರನ್ನು ಕೊಳ್ಳಲು ಸಹ ಹಲವು ಸಮಸ್ಯೆಗಳನ್ನು ಎದುರಿಸಿದ್ದು, ಇಷ್ಟು ಅಡೆತಡೆಗಳ ನಡುವೆಯು ಈ ರೀತಿಯ ಸಾಹಸ ಮಾಡಲು ಬಲವಾದ ಕಾರಣವನ್ನು ಅವರು ತಿಳಿಸಿದ್ದಾರೆ. ಈ ಬಗೆಗಿನ ಸಂಕ್ಷಿಪ್ತ ವರದಿಯನ್ನು ಇಲ್ಲಿ ನೋಡೋಣ...

10 ರೂ. ನಾಣ್ಯಗಳಿಂದ 6 ಲಕ್ಷ ರೂ. ಮೌಲ್ಯದ ಕಾರು ಖರೀದಿಸಿದ ಯುವಕ: ಈತ ನೀಡಿದ ಕಾರಣ ಪ್ರಶಂಸನೀಯ!

ವೆಟ್ರಿವೇಲ್ ಅವರು ಇಂತಹ ಕಾರ್ಯಗಳನ್ನು ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಫೇಮಸ್ ಆಗಲು ಹೊರಟಿಲ್ಲ. ಬದಲಾಗಿ ಅವರು ಜನರಲ್ಲಿ ಜಾಗೃತಿ ಮೂಡಿಸಲು 10 ರೂ. ನಾಣ್ಯಗಳನ್ನು ಕಲೆಹಾಕಿದ್ದಾರೆ. ಅಷ್ಟಕ್ಕು ಅವರು ಖರೀದಿಸಿದ ಕಾರು ಯಾವುದು ಗೊತ್ತಾ.. ಮಾರುತಿ ಸುಜುಕಿ ಇಕೋ.

10 ರೂ. ನಾಣ್ಯಗಳಿಂದ 6 ಲಕ್ಷ ರೂ. ಮೌಲ್ಯದ ಕಾರು ಖರೀದಿಸಿದ ಯುವಕ: ಈತ ನೀಡಿದ ಕಾರಣ ಪ್ರಶಂಸನೀಯ!

ಅಂದಹಾಗೆ ಧರ್ಮಪುರಿಯ ಯುವಕನೊಬ್ಬ ಈ ರೀತಿ ನಾಣ್ಯಗಳನ್ನು ನೀಡಿ ಕಾರು ಖರೀದಿಸಿದ್ದಾನೆ ಎಂಬ ಸುದ್ದಿ ಹಬ್ಬುತ್ತಿಂದತೆ, ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಲು ಹೊರಟಿದ್ದಾನೆ ಎಂದು ಊಹಿಸಲಾಗಿತ್ತು. ಆದರೆ ಯುವಕ ಸಂಪೂರ್ಣವಾಗಿ ವಿಭಿನ್ನವಾದ ಕಥೆಯನ್ನೇ ಹೇಳಿದ್ದಾನೆ.

10 ರೂ. ನಾಣ್ಯಗಳಿಂದ 6 ಲಕ್ಷ ರೂ. ಮೌಲ್ಯದ ಕಾರು ಖರೀದಿಸಿದ ಯುವಕ: ಈತ ನೀಡಿದ ಕಾರಣ ಪ್ರಶಂಸನೀಯ!

ವೆಟ್ರಿವೇಲ್ ಅವರ ತಾಯಿ ಅರೂರಿನಲ್ಲಿ ಚಿಲ್ಲರೆ ಅಂಗಡಿ ನಡೆಸುತ್ತಿದ್ದಾರೆ. ಅವರ ಬಳಿಯಿದ್ದ ಹತ್ತು ರೂಪಾಯಿ ನಾಣ್ಯಗಳು ಚಲಾವಣೆ ಆಗುತ್ತಿರಲಿಲ್ಲ. ಗ್ರಾಹಕರು ಆತನಿಂದ ಹತ್ತು ರೂಪಾಯಿ ನಾಣ್ಯಗಳನ್ನು ಪಡೆಯಲು ನಿರಾಕರಿಸುತ್ತಿದ್ದರು. ಆದರೆ ವೆಟ್ರಿವೇಲ್ ಅವರು ಮಾತ್ರ 10 ರೂ. ನಾಣ್ಯಗಳನ್ನು ಯಾರೇ ಕೊಟ್ಟರು ಪಡೆಯುತ್ತದ್ದರು. ಹೀಗೆ ತಮ್ಮ ಬಳಿಯಿದ್ದ ನಾಣ್ಯಗಳು ಹಾಗೆಯೇ ಉಳಿಯುತ್ತಿದ್ದವು.

10 ರೂ. ನಾಣ್ಯಗಳಿಂದ 6 ಲಕ್ಷ ರೂ. ಮೌಲ್ಯದ ಕಾರು ಖರೀದಿಸಿದ ಯುವಕ: ಈತ ನೀಡಿದ ಕಾರಣ ಪ್ರಶಂಸನೀಯ!

ಒಂದು ಹಂತದಲ್ಲಿ ಹತ್ತು ರೂಪಾಯಿ ನಾಣ್ಯಗಳ ಸಂಖ್ಯೆ ಅನಿರೀಕ್ಷಿತವಾಗಿ ಹೆಚ್ಚಾಯಿತು. ಅಲ್ಲದೇ ಅಕ್ಕಪಕ್ಕದ ಹುಡುಗರೂ ಹತ್ತು ರೂಪಾಯಿಯ ನಾಣ್ಯಗಳನ್ನು ಹಿಡಿದು ಆಡುವುದನ್ನು ಸಹ ನೋಡಿದ್ದರು. ಈ ಸಂದರ್ಭದಲ್ಲಿ ಹತ್ತು ರೂಪಾಯಿ ನಾಣ್ಯದ ಬಗ್ಗೆ ಜಾಗೃತಿ ಮೂಡಿಸಲು ವೆಟ್ರಿವೇಲ್ ನಿರ್ಣಯಿಸಿದರು. ಆ ನಾಣ್ಯಗಳಿಂದಲೇ ಕಾರು ಖರೀದಿಸಲು ಮುಂದಾದರು.

10 ರೂ. ನಾಣ್ಯಗಳಿಂದ 6 ಲಕ್ಷ ರೂ. ಮೌಲ್ಯದ ಕಾರು ಖರೀದಿಸಿದ ಯುವಕ: ಈತ ನೀಡಿದ ಕಾರಣ ಪ್ರಶಂಸನೀಯ!

ಆರಂಭದಲ್ಲಿ ಹತ್ತು ರೂಪಾಯಿ ನಾಣ್ಯಗಳನ್ನು ಪಡೆದ ನಂತರ ಶೋರೂಂ ಆಡಳಿತವು ಕಾರು ಮಾರಾಟ ಮಾಡಲು ನಿರಾಕರಿಸಿತ್ತು. ಆದರೆ, ಯುವಕನ ಸರಣಿ ಪ್ರಯತ್ನಗಳ ನಂತರ, ಕಾರ್ ಡೀಲರ್ ಅನ್ನು ಒಪ್ಪಿಸಿದ್ದಾರೆ. ಇದರ ಬೆನ್ನಲ್ಲೇ ವೆಟ್ರಿವೇಲ್ 6 ಲಕ್ಷ ಮೌಲ್ಯದ ಮಾರುತಿ ಸುಜುಕಿ ಇಗೋ ಕಾರನ್ನು ಖರೀದಿಸಿದ್ದಾರೆ.

10 ರೂ. ನಾಣ್ಯಗಳಿಂದ 6 ಲಕ್ಷ ರೂ. ಮೌಲ್ಯದ ಕಾರು ಖರೀದಿಸಿದ ಯುವಕ: ಈತ ನೀಡಿದ ಕಾರಣ ಪ್ರಶಂಸನೀಯ!

10 ರೂಪಾಯಿ ನಾಣ್ಯದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವೇನು?

20 ಮತ್ತು 50, 100 ರೂಪಾಯಿ ನೋಟುಗಳು ಹೆಚ್ಚು ಚಲಾವಣೆಗೆಯಾಗುತ್ತವೆ. ಇದರಿಂದ ಈ ನೋಟುಗಳು ಬೇಗನೇ ಹಾಳಾಗುತ್ತವೆ. ಅದರಲ್ಲೂ ಹತ್ತು ರೂಪಾಯಿ ನೋಟುಗಳು ಬಹುಬೇಗ ತಮ್ಮ ಜೀವಿತಾವಧಿಯನ್ನು ಕಳೆದುಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ 2005ರಲ್ಲಿ ಆರ್‌ಬಿಐ ಮೊದಲ ಬಾರಿಗೆ ಹತ್ತು ರೂಪಾಯಿ ನಾಣ್ಯವನ್ನು ಪರಿಚಯಿಸಿತ್ತು.

10 ರೂ. ನಾಣ್ಯಗಳಿಂದ 6 ಲಕ್ಷ ರೂ. ಮೌಲ್ಯದ ಕಾರು ಖರೀದಿಸಿದ ಯುವಕ: ಈತ ನೀಡಿದ ಕಾರಣ ಪ್ರಶಂಸನೀಯ!

ಈ ನಾಣ್ಯವನ್ನು ರಚಿಸುವುದು ಹತ್ತು ರೂಪಾಯಿ ನೋಟು ತಯಾರಿಸುವುದಕ್ಕಿಂತ ಹೆಚ್ಚು ಶ್ರಮದಾಯಕ ಮತ್ತು ದುಬಾರಿಯಾಗಿದೆ. ಆದರೂ, ಅವುಗಳನ್ನು ರಿಸರ್ವ್ ಬ್ಯಾಂಕ್ ಪರಿಚಯಿಸಿತು. ಇದಕ್ಕೆ ಮುಖ್ಯ ಕಾರಣ ನಾಣ್ಯಗಳ ಜೀವಿತಾವಧಿ ನೋಟುಗಳಿಗಿಂತ ಹೆಚ್ಚಾಗಿರುವುದು. ಆದರೆ, ಇವುಗಳನ್ನು ದೊಡ್ಡ ಪ್ರಮಾಣದಲ್ಲಿ ಪಡೆದಾಗ ಅವುಗಳನ್ನು ಎಣಿಸುವುದು ತುಂಬಾ ಕಷ್ಟ.

10 ರೂ. ನಾಣ್ಯಗಳಿಂದ 6 ಲಕ್ಷ ರೂ. ಮೌಲ್ಯದ ಕಾರು ಖರೀದಿಸಿದ ಯುವಕ: ಈತ ನೀಡಿದ ಕಾರಣ ಪ್ರಶಂಸನೀಯ!

ಇದರಿಂದಾಗಿ ಹತ್ತು ರೂಪಾಯಿ ನಾಣ್ಯಗಳನ್ನು ಖರೀದಿಸಲು ಹಲವರು ನಿರಾಕರಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅನೇಕ ಜನರು ಆ ಕರೆನ್ಸಿಯನ್ನು ಅಮಾನ್ಯ ಕರೆನ್ಸಿ ಎಂದು ನೋಡಲು ಪ್ರಾರಂಭಿಸಿದ್ದಾರೆ. ಇದನ್ನು ಪ್ರಮುಖ ಕಾರಣ ಸ್ಥಳೀಯ ಬ್ಯಾಂಕ್‌ಗಳು ಮತ್ತು ಸಾರಿಗೆ ವಲಯ ಎಂದೇ ಹೇಳಬಹುದು. ಬ್ಯಾಂಕ್ ನೌಕರರು ತಮಗೆ ಬಂದ ಹತ್ತು ರೂಪಾಯಿ ನಾಣ್ಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಲು ನಿರಾಕರಿಸುತ್ತಿದ್ದಾರೆ ಎಂದು ಸಾರಿಗೆ ಇಲಾಖೆ ಬ್ಯಾಂಕ್‌ಗಳಿಗೆ ದೂರು ನೀಡಿತ್ತು.

10 ರೂ. ನಾಣ್ಯಗಳಿಂದ 6 ಲಕ್ಷ ರೂ. ಮೌಲ್ಯದ ಕಾರು ಖರೀದಿಸಿದ ಯುವಕ: ಈತ ನೀಡಿದ ಕಾರಣ ಪ್ರಶಂಸನೀಯ!

ಹತ್ತು ರೂಪಾಯಿಯ ನಾಣ್ಯಗಳು ಲಕ್ಷ ರೂಪಾಯಿಗಳಲ್ಲಿ ಬಂದರೆ ಅವುಗಳನ್ನು ಎಣಿಸಲು ಕಷ್ಟವಾಗುತ್ತದೆ. ಜತೆಗೆ ಕೆಲಸದ ಹೊರೆ ಹೆಚ್ಚಿರುವುದು ಇದಕ್ಕೆ ಕಾರಣ ಎನ್ನುತ್ತಾರೆ ಬ್ಯಾಂಕ್ ನೌಕರರು. ಅಲ್ಲದೆ, ಅವುಗಳನ್ನು ರಕ್ಷಿಸಲು ತುಂಬಾ ತೊಂದರೆಯಾಗಿದೆ ಎಂದು ಹೇಳುತ್ತಿದ್ದಾರೆ. ಈ ಪರಿಸ್ಥಿತಿ ಈಗ ಹತ್ತು ರೂಪಾಯಿ ನಾಣ್ಯವನ್ನು ಅಮಾನ್ಯವಾಗಿಸಿದೆ.

10 ರೂ. ನಾಣ್ಯಗಳಿಂದ 6 ಲಕ್ಷ ರೂ. ಮೌಲ್ಯದ ಕಾರು ಖರೀದಿಸಿದ ಯುವಕ: ಈತ ನೀಡಿದ ಕಾರಣ ಪ್ರಶಂಸನೀಯ!

ಆದರೆ, ರಿಸರ್ವ್ ಬ್ಯಾಂಕ್ ಈ ಹತ್ತು ರೂಪಾಯಿ ನಾಣ್ಯದ ಮೌಲ್ಯವನ್ನು ಕಡೆಗಣಿಸಿಲ್ಲ. ಅವುಗಳನ್ನು ಸ್ವೀಕರಿಸಲು ಹೇಳಿ, ಸುಳ್ಳು ವದಂತಿಗಳನ್ನು ಹಬ್ಬಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಆದರೂ, ಅನೇಕ ರೈಲು ನಿಲ್ದಾಣಗಳು, ಬಸ್ ನಿರ್ವಾಹಕರು ಮತ್ತು ಅಂಗಡಿಕಾರರು ಈಗ ನಾಣ್ಯಗಳನ್ನು ಖರೀದಿಸಲು ನಿರಾಕರಿಸುತ್ತಿದ್ದಾರೆ.

10 ರೂ. ನಾಣ್ಯಗಳಿಂದ 6 ಲಕ್ಷ ರೂ. ಮೌಲ್ಯದ ಕಾರು ಖರೀದಿಸಿದ ಯುವಕ: ಈತ ನೀಡಿದ ಕಾರಣ ಪ್ರಶಂಸನೀಯ!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

10 ರೂಪಾಯಿ ನಾಣ್ಯದ ಬಗ್ಗೆ ಜಾಗೃತಿ ಮೂಡಿಸಲು ವೆಟ್ರಿವೇಲ್ ಅವರು ತೆಗೆದಕೊಂಡ ನಿರ್ಣಯದಿಂದ ಅವರ ಸುತ್ತಮುತ್ತಲಿನ ಹಲವರಲ್ಲಿ 10 ರೂ. ನಾಣ್ಯದ ಕುರಿತು ತಿಳಿವಳಿಕೆ ಬಂದಿರುತ್ತದೆ. ಹಾಗೆಯೇ ದೇಶದ ಹಲವೆಡೆ ಈ ನಾಣ್ಯದ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕಿದೆ. ಈ ಲೇಖನ ಓದುತ್ತಿರುವವರು ಕೂಡ ನಾಣ್ಯದ ಮೌಲ್ಯವನ್ನು ಅರಿತುಕೊಳ್ಳಬೇಕಿದೆ. ಇನ್ನು ಮಾರುತಿ ಸುಜುಕಿ ಇಕೋ ಕಾರನ್ನು ಮಾರುಕಟ್ಟೆಯಲ್ಲಿ ಕೈಗೆಟುವಂತಾಗಿಸಲು ಕಂಪನಿಯು ಹೊಸ ಕ್ರಮಗಳನ್ನು ತೆಗೆದುಕೊಂಡಿದೆ. ಪ್ರಸ್ತುತ ಈ ವಾಹನವು ಭಾರತೀಯ ಬಜೆಟ್ ವಾಹನ ಪ್ರೇಮಿಗಳಲ್ಲಿ ಉತ್ತಮ ಸ್ವಾಗತವನ್ನು ಪಡೆಯುತ್ತಿದೆ. ಮಕ್ಕಳನ್ನು ಸಾಗಿಸಲು ಮತ್ತು ಸರಕುಗಳನ್ನು ನಿರ್ವಹಿಸುವಂತಹ ಕೆಲಸಗಳಿಗೆ ಸೂಕ್ತವಾದ ವಾಹನವಾಗಿದೆ.

Most Read Articles

Kannada
English summary
A man who from dharmapuri spents 10 rs coins for buy a car worth rs 6 lakh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X