Just In
- 18 min ago
ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ರಾಯಲ್ ಎನ್ಫೀಲ್ಡ್ ಮೀಟಿಯೋರ್ 650
- 46 min ago
ಬಿಎಂಟಿಸಿ ಸೇರ್ಪಡೆಯಾಗಲಿವೆ 921 ಎಲೆಕ್ಟ್ರಿಕ್ ಬಸ್: ಟಾಟಾ ಮೋಟಾರ್ಸ್ ಪಾಲಾದ ಹೊಸ ಟೆಂಡರ್!
- 51 min ago
2022ರ ಯಮಹಾ ಆರ್7, ಎಂಟಿ-09 ಬೈಕ್ಗಳ ಟೀಸರ್ ಬಿಡುಗಡೆ
- 1 hr ago
ರೆನಾಲ್ಟ್ ಕ್ವಿಡ್ಗೆ ಸೆಡ್ಡು ಹೊಡಿಯಲಿದೆಯೇ ಹೊಸ ಮಾರುತಿ ಆಲ್ಟೊ ಕೆ10: ಎರಡರಲ್ಲಿ ಯಾವುದು ಬೆಸ್ಟ್?
Don't Miss!
- News
Breaking: ಅತ್ಯಾಚಾರ ಮತ್ತು ಕೊಲೆ ಆರೋಪಿಯನ್ನು ಹೊಡೆದು ಕೊಂದ ಜನ
- Sports
ಏಷ್ಯಾ ಕಪ್ 2022: ರೋಹಿತ್ ಶರ್ಮಾ ಕುರಿತು ಶಾಕಿಂಗ್ ಹೇಳಿಕೆ ನೀಡಿದ ಸೌರವ್ ಗಂಗೂಲಿ
- Technology
ಆಂಡ್ರಾಯ್ಡ್ 13 ನಲ್ಲಿ ಈ ಫೀಚರ್ಸ್ಗಳು ನಿಮಗೆ ಲಭ್ಯವಾಗಲಿವೆ!
- Movies
'ಕೆಜಿಎಫ್' ದಾರಿಯಲ್ಲಿ ಪ್ರಭಾಸ್ 'ಪ್ರಾಜೆಕ್ಟ್ ಕೆ'!
- Finance
ಉದ್ಯಮಿ ರಾಕೇಶ್ ಪತ್ನಿ ರೇಖಾ ಬಳಿ ಇರುವ ಷೇರುಗಳ ಮೌಲ್ಯ ಎಷ್ಟು?
- Education
Online Courses After Class 12 : ಆನ್ಲೈನ್ ಸರ್ಟಿಫಿಕೇಟ್, ಡಿಪ್ಲೋಮಾ ಮತ್ತು ಪದವಿ ಕೋರ್ಸ್ ಗಳ ಪಟ್ಟಿ
- Lifestyle
ಕಡಲೆಹಿಟ್ಟು ಅಸಲಿಯೇ ಅಥವಾ ಕಲಬೆರಕೆಯೇ ತಿಳಿಯುವುದು ಹೇಗೆ? ಇಲ್ಲಿದೆ ಟಿಪ್ಸ್?
- Travel
2022ರ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ: ಭಾರತದಲ್ಲಿಯ ಪ್ರಸಿದ್ದ ಕೃಷ್ಣ ದೇವರ ದೇವಾಲಯಗಳಿಗೆ ಭೇಟಿ ಕೊಡಿ
ಛಲ ಅಂದ್ರೆ ಹೀಗಿರಬೇಕು ನೋಡಿ...ಬರೋಬ್ಬರಿ 10 ವರ್ಷ ಹಣ ಕೂಡಿಟ್ಟು ಕನಸಿನ ಕಾರು ಖರೀದಿ!
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಂದೊಂದು ಕನಸಿರುತ್ತದೆ. ಕೆಲವರಿಗೆ ಓದಿ ಉನ್ನತ ಮಟ್ಟಕ್ಕೇರುವ ಆಸೆಯಾದರೆ ಇನ್ನೂ ಕೆಲವರಿಗೆ ಐಷಾರಾಮಿ ಕಾರು, ಬಂಗಲೆ ಖರೀದಿಸುವ ಕನಸಸ್ಸಿರುತ್ತದೆ. ಈ ನಮ್ಮ ಕನಸುಗಳನ್ನು ನನಸು ಮಾಡಿಕೊಂಡಾಗ ಜಗತ್ತನ್ನೇ ಗೆದ್ದಂತಹ ಖುಷಿ ನಮ್ಮಲ್ಲಿರುತ್ತದೆ. ಇಂತಹದೇ ಖುಷಿಯ ಕ್ಷಣಗಳನ್ನು ವ್ಯಕ್ತಿಯೊಬ್ಬರು ಆನಂದ್ ಮಹೀಂದ್ರಾ ಅವರೊಂದಿಗೆ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಮಹೀಂದ್ರಾ ಎಕ್ಸ್‌ಯುವಿ700 ಖರೀದಿಸಿದ ಸಿ.ಅಶೋಕ್ ಕುಮಾರ್ ಎಂಬಾತ ಈ ಕಾರನ್ನು ಖರೀದಿಸಲು ಬರೋಬ್ಬರಿ 10 ವರ್ಷ ತಮ್ಮ ಸಂಪಾದನೆಯ ಹಣವನ್ನು ಕೂಡಿಟ್ಟಿದ್ದಾರೆ. ಅಲ್ಲದೇ ಇಷ್ಟು ಮೊತ್ತವನ್ನು ಉಳಿಸಲು ಅವರು ವರ್ಷಗಳಗಟ್ಟಲೇ ಅಪಾರ ಶ್ರಮಪಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

ಹತ್ತು ವರ್ಷಗಳ ಕಠಿಣ ಪರಿಶ್ರಮದ ನಂತರ ತನ್ನ ಕನಸಿನ ಕಾರನ್ನು ಖರೀದಿಸಲು ದೊಡ್ಡ ಮೊತ್ತವನ್ನು ಉಳಿಸಿದ್ದ ಅಶೋಕ್ ಟ್ವಿಟರ್‌ನಲ್ಲಿ ತಮ್ಮ ಅನುಯಾಯಿಗಳೊಂದಿಗೆ ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಅವರು ಆನಂದ್ ಮಹೀಂದ್ರಾ ಅವರ ಆಶೀರ್ವಾದವನ್ನೂ ಸಹ ಕೋರಿದ್ದಾರೆ.

"10 ವರ್ಷಗಳ ಕಠಿಣ ಪರಿಶ್ರಮದ ನಂತರ ಹೊಸ ಮಹೀಂದ್ರಾ #XUV700 ಖರೀದಿಸಿದ್ದೇನೆ ನಿಮ್ಮ ಆಶೀರ್ವಾದ ಬೇಕು ಸರ್..." ಎಂದು ಸಿ.ಅಶೋಕ್‌ಕುಮಾರ್ ಬರೆದುಕೊಂಡು ತಮ್ಮ ಹೊಚ್ಚಹೊಸ ಬಿಳಿ SUV ಯೊಂದಿಗೆ ಹೂಮಾಲೆಯಿಂದ ಅಲಂಕರಿಸಿದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಆಶೀರ್ವಾದ ಪಡೆಯಲು ವ್ಯಾಪಾರ ಉದ್ಯಮಿ ಆನಂದ್ ಮಹೀಂದ್ರಾ ಅವರನ್ನು ಟ್ಯಾಗ್ ಮಾಡಿದ್ದಾರೆ.

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಎರಡು ದಿನಗಳ ನಂತರ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, ಆನಂದ್ ಮಹೀಂದ್ರಾ ಅವರ ಟ್ವೀಟ್ ಆನ್‌ಲೈನ್‌ನಲ್ಲಿ ಅನೇಕ ಹೃದಯಗಳನ್ನು ಗೆದ್ದಿದೆ. "ಧನ್ಯವಾದಗಳು, ಆದರೆ ನಿಮ್ಮ ಆಯ್ಕೆಯಿಂದ ನಮ್ಮನ್ನು ಆಶೀರ್ವದಿಸಿದವರು ನೀವೇ... ಕಠಿಣ ಪರಿಶ್ರಮದಿಂದ ಬಂದ ನಿಮ್ಮ ಯಶಸ್ಸಿಗೆ ಅಭಿನಂದನೆಗಳು. ಹ್ಯಾಪಿ ಮೋಟಾರಿಂಗ್" ಎಂದು ಸಿ.ಅಶೋಕ್‌ಕುಮಾರ್ ಅವರ ಟ್ವೀಟ್ ಅನ್ನು ಮರುಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಸದ್ಯ 15,800 ಲೈಕ್‌ಗಳನ್ನು ಗಳಿಸಿದೆ, 550 ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಸ್ವೀಕರಿಸಿದೆ. ಹಲವಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಸಿ.ಅಶೋಕ್‌ಕುಮಾರ್ ಅವರ ಇತ್ತೀಚಿನ ಕಾರು ಖರೀದಿಗೆ ಹಲವರು ಅಭಿನಂದಿಸಿದ್ದಾರೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂದು ಅಶೋಕ್ ಕುಮಾರ್ ಅವರಿಗೆ ಶುಭಕೋರಿದ್ದಾರೆ.

ಮಹೀಂದ್ರಾ XUV700 SUV ಬಗ್ಗೆ ಮಾತನಾಡುವುದಾದರೆ, ಇದು ಪ್ರಸ್ತುತ ಭಾರತದಲ್ಲಿ ಹೆಚ್ಚು ಮಾರಾಟವಾಗುವ SUV ಗಳಲ್ಲಿ ಅಗ್ರ ಸ್ಥಾನವನ್ನು ಹೊಂದಿದೆ. ಈ ಮಾದರಿಯ ಕೆಲವು ರೂಪಾಂತರಗಳಿಗಾಗಿ ಸುಮಾರು ಒಂದು ವರ್ಷದ ಕಾಯುವ ಅವಧಿ ಇದೆ. ಈ ಕಾರಿನ ಯಶಸ್ಸಿಗೆ ಹಲವು ಕಾರಣಗಳಿವೆ.

ಇವುಗಳಲ್ಲಿ ಮುಖ್ಯವಾದುದು ಅದರ ಸುರಕ್ಷತೆ. ಕಂಪನಿಯು ಈ ಕಾರನ್ನು ವಿಭಾಗದ ಮೊದಲ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಿದೆ. ಇದಲ್ಲದೆ, ಗ್ಲೋಬಲ್ ಎನ್‌ಕ್ಯಾಪ್ಸ್ ನಡೆಸಿದ ಕ್ರ್ಯಾಶ್ ಟೆಸ್ಟ್‌ನಲ್ಲಿ ಇದು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ.

ಗ್ಲೋಬಲ್ ಎನ್‌ಕ್ಯಾಪ್ಸ್ ಕ್ರ್ಯಾಶ್ ಪರೀಕ್ಷೆಯಲ್ಲಿ ಕಾರು 17 ಕ್ಕೆ 16.03 ರೇಟಿಂಗ್ ಗಳಿಸಿದೆ. ಅಲ್ಲದೆ ಮಕ್ಕಳ ಸುರಕ್ಷತೆಯಲ್ಲಿ ಇದು 49 ಅಂಕಗಳಗೆ 41.66 ಅಂಕಗಳನ್ನು ಗಳಿಸಿದೆ. ಒಟ್ಟಾರೆ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಅಲ್ಲದೆ, ಇದರ ವಿನ್ಯಾಸ ಮತ್ತು ಆಂತರಿಕ ವೈಶಿಷ್ಟ್ಯಗಳು ಸಹ ಉನ್ನತ ದರ್ಜೆಯದ್ದಾಗಿದೆ.

ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾದಿಂದ ಬಂದ ಮೊದಲ ಕಾರು ಇದಾಗಿದೆ. ಮಹೀಂದ್ರಾ XUV700 SUV ಆಟೋ ಬೂಸ್ಟರ್ ಹೆಡ್‌ಲ್ಯಾಂಪ್‌ಗಳು, ಸ್ಮಾರ್ಟ್ ಡೋರ್ ಹ್ಯಾಂಡಲ್‌ಗಳು, ದೊಡ್ಡ ಪನೋರಮಿಕ್ ಸನ್‌ರೂಫ್, ಪರ್ಸನಲ್ ಅಲರ್ಟ್ ಮತ್ತು ಡ್ರೈವರ್ ಅಲರ್ಟ್ ಸಿಸ್ಟಮ್‌ನಂತಹ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಇವುಗಳಲ್ಲದೆ ಇದು ಡ್ಯಾಶ್‌ಬೋರ್ಡ್‌ನಲ್ಲಿ ಡ್ಯುಯಲ್-ಡಿಸ್ಪ್ಲೇ ಸೆಟಪ್ ಅನ್ನು ಪಡೆಯುತ್ತದೆ (ಒಂದು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗೆ ಮತ್ತು ಇನ್ನೊಂದು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗೆ), ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಆಟೋ ಹೋಲ್ಡ್, ಕೀಲೆಸ್ ಎಂಟ್ರಿಯೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಪುಶ್ ಸ್ಟಾರ್ಟ್/ಸ್ಟಾಪ್ ಬಟನ್ ಮತ್ತು ಇನ್ನೂ ಹಲವನ್ನು ಹೊಂದಿದೆ.

ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಮಹೀಂದ್ರಾ XUV700 ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಆಂಟಿ-ಬ್ರೇಕ್ ಅಸಿಸ್ಟ್, ಐಸೊಫಿಕ್ಸ್ ಚೈಲ್ಡ್ ಸೀಟ್ ಆಂಕರ್‌ಗಳು, ಸೈಡ್ ಬಾಡಿ ಏರ್‌ಬ್ಯಾಗ್‌ಗಳು, ಸೈಡ್ ಹೆಡ್ ಕರ್ಟನ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಎಲ್ಲಾ ಆಸನ ಸ್ಥಾನಗಳಲ್ಲಿ ಮೂರು-ಪಾಯಿಂಟ್ ಬೆಲ್ಟ್‌ಗಳೊಂದಿಗೆ ಬರುತ್ತದೆ.

ಕಂಪನಿಯು ಈ SUV ಯ ಉನ್ನತ-ಮಟ್ಟದ ರೂಪಾಂತರಗಳಲ್ಲಿ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಸಹ ನೀಡುತ್ತಿದೆ. ಇದೆಲ್ಲವೂ ಚಾಲಕನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ರಸ್ತೆಯಲ್ಲಿ ಸುರಕ್ಷಿತ ಚಾಲನಾ ಅನುಭವವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಕಾರು ಖರೀದಿಸುವುದು ಮಧ್ಯಮ ವರ್ಗದ ಸಾಮಾನ್ಯ ವ್ಯಕ್ತಿಯ ಜೀವನದಲ್ಲಿ ದೊಡ್ಡ ಕನಸು. ಅಂತಹ ಕನಸು ನನಸಾಗುವಾಗ, ಆ ಸಂತೋಷವನ್ನು ನಾಲ್ಕು ಜನರೊಂದಿಗೆ ಹಂಚಿಕೊಳ್ಳಲು ಬಯಸುತ್ತಾರೆ. ಅಶೋಕ್ ಕುಮಾರ್ ಕೂಡ ತಮ್ಮ ಕಾರು ಕನಸನ್ನು ನನಸು ಮಾಡಿಕೊಂಡು ನೇರವಾಗಿ ಕಾರ್ ಕಂಪನಿಯ ಮಾಲೀಕರೊಂದಿಗೆ ಹಂಚಿಕೊಂಡರು.