ಕೆಲಸದ ಒತ್ತಡ: ಸ್ಕೂಟರ್ ಚಾಲನೆ ವೇಳೆಯೂ ಲ್ಯಾಪ್‌ಟಾಪ್‌ ಬಳಸಿ ವೈರಲ್ ಆದ ವ್ಯಕ್ತಿ

ಹೆಚ್ಚಿನ ಜನರು ಇನ್ನೂ ಮನೆಯಿಂದಲೇ ಕೆಲಸ ಮಾಡಬೇಕೋ ಅಥವಾ ಕಚೇರಿಗೆ ತೆರಳಿ ಕೆಲಸ ಮಾಡಬೇಕೋ ಎಂದು ಯೋಚಿಸುತ್ತಿದ್ದರೇ, ವ್ಯಕ್ತಿಯೊಬ್ಬ ಈ ಎರಡಕ್ಕೂ ಭಿನ್ನವಾಗಿ ಕೆಲಸ ಮಾಡಿ ಎಲ್ಲರ ಗಮನವನ್ನು ತನ್ನೆಡೆ ಸೆಳೆದಿದ್ದಾನೆ. ಫ್ಲೈಓವರ್ ಮೇಲೆ ಸ್ಕೂಟರ್‌ನಲ್ಲಿ ಹಿಂಬದಿ ಕುಳಿತು ಲ್ಯಾಪ್‌ಟಾಪ್ ನಲ್ಲಿ ಕೆಲಸ ಮಾಡುತ್ತಿರುವ ಫೋಟೋವೊಂದು ವೈರಲ್ ಆಗಿದೆ.

ಕೆಲಸದ ಒತ್ತಡ: ಬೈಕ್ ಚಾಲನೆ ವೇಳೆಯೂ ಲ್ಯಾಪ್‌ಟಾಪ್‌ ಬಳಸಿ ವೈರಲ್ ಆದ ವ್ಯಕ್ತಿ

ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಸ್ಕೂಟರ್‌ನ ಹಿಂಬದಿ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವ ಫೋಟೋ ವೈರಲ್ ಆಗುತ್ತಿದೆ. ಈ ಫೋಟೋವನ್ನು ಲಿಂಕ್ಡ್‌ಇನ್ ಬಳಕೆದಾರ ಹರ್ಷಮೀತ್ ಸಿಂಗ್ ಎಂಬಾತ ಪೋಸ್ಟ್ ಮಾಡಿದ್ದು, ನೆಟ್ಟಿಗರಿಂದ ಭಾರೀ ಸಂಖ್ಯೆಯಲ್ಲಿ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಕೆಲಸದ ಒತ್ತಡ: ಬೈಕ್ ಚಾಲನೆ ವೇಳೆಯೂ ಲ್ಯಾಪ್‌ಟಾಪ್‌ ಬಳಸಿ ವೈರಲ್ ಆದ ವ್ಯಕ್ತಿ

ಇಂದಿನ ಬ್ಯುಸಿ ಬದುಕಿನಲ್ಲಿ ಕೆಲಸದ ಒತ್ತಡ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎನ್ನುವುದನ್ನು ರಸ್ತೆಯಲ್ಲಿ ವಾಹನ ಚಲಾಯಿಸುವಾಗಲೂ ಕಚೇರಿ ಕೆಲಸಗಳನ್ನು ಮಾಡುತ್ತಿರುವ ಈ ವ್ಯಕ್ತಿಯನ್ನು ನೋಡಿದರೆ ತಿಳಿಯುತ್ತದೆ. ಈ ಚಿತ್ರವು ಬೆಂಗಳೂರಿನದ್ದಾಗಿದ್ದು, ಯಾವ ಫ್ಲೈ ಓವರ್‌ ಎಂಬುದು ತಿಳಿದುಬಂದಿಲ್ಲ.

ಕೆಲಸದ ಒತ್ತಡ: ಬೈಕ್ ಚಾಲನೆ ವೇಳೆಯೂ ಲ್ಯಾಪ್‌ಟಾಪ್‌ ಬಳಸಿ ವೈರಲ್ ಆದ ವ್ಯಕ್ತಿ

ಇದನ್ನು ಹರ್ಷಮೀತ್ ಸಿಂಗ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಹಂಚಿಕೊಂಡಿರುವ ಹರ್ಷದೀಪ್ ಕೂಡ ಒಂದು ಪೋಸ್ಟ್ ಅನ್ನು ಬರೆದಿದ್ದು, ಈ ದೃಷ್ಯವು ಬೆಂಗಳೂರಿನ ಬ್ಯುಸಿ ಫ್ಲೈಓವರ್‌ನಲ್ಲಿ ಕಂಡುಬಂದಿದೆ, ಸ್ಕೂಟರ್‌ ಹಿಂದೆ ಕುಳಿತ ವ್ಯಕ್ತಿಯೊಬ್ಬರು ತಮ್ಮ ಕಚೇರಿ ಕೆಲಸವನ್ನು ಚಾಲನೆ ವೇಳೆಯು ಬಿಡುವಿಲ್ಲದೇ ಮಾಡುತ್ತಿದ್ದಾರೆ.

ಕೆಲಸದ ಒತ್ತಡ: ಬೈಕ್ ಚಾಲನೆ ವೇಳೆಯೂ ಲ್ಯಾಪ್‌ಟಾಪ್‌ ಬಳಸಿ ವೈರಲ್ ಆದ ವ್ಯಕ್ತಿ

"ನೀವು ಒಂದು ಸಂಸ್ಥೆಯ ಮುಖ್ಯಸ್ಥರಾಗಿದ್ದರೆ ಮತ್ತು ಗಡುವಿನೊಳಗೆ ಕೆಲಸ ಮಾಡಲು ನಿಮ್ಮ ಸಹೋದ್ಯೋಗಿಗಳ ಮೇಲೆ ಹೆಚ್ಚು ಒತ್ತಡ ಹೇರಿದರೆ, ಅದು ಅವರ ಜೀವಕ್ಕೂ ಅಪಾಯವನ್ನುಂಟುಮಾಡುತ್ತದೆ. ನಾವು ಇದನ್ನು ಗಂಭಿರವಾಗಿ ಪರಿಗಣಿಸಬೇಕು" ಎಂದು ಅವರು ಬರೆದಿದ್ದಾರೆ.

ಕೆಲಸದ ಒತ್ತಡ: ಬೈಕ್ ಚಾಲನೆ ವೇಳೆಯೂ ಲ್ಯಾಪ್‌ಟಾಪ್‌ ಬಳಸಿ ವೈರಲ್ ಆದ ವ್ಯಕ್ತಿ

Let's use the phrase 'IT'S URGENT' ಎಂಬಂತಹ ಪದಗಳನ್ನು ನಾವು ವಿವೇಚನೆಯಿಂದ ಬಳಸಬೇಕು, ವಿಶೇಷವಾಗಿ ನೀವು ಉನ್ನತ ಹುದ್ದೆಯಲ್ಲಿರುವಾಗ ಈ ಪದಗಳನ್ನು ನಿಮ್ಮ ಉದ್ಯೋಗಿಗಳು ಹೇಗೆ ಬಳಸುತ್ತಾರೆ ಎಂಬುದು ನಿಮಗೆ ತಿಳಿದಿಲ್ಲ, "ಎಂದು ಅವರು ಉನ್ನತ ಪದಾಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಕೆಲಸದ ಒತ್ತಡ: ಬೈಕ್ ಚಾಲನೆ ವೇಳೆಯೂ ಲ್ಯಾಪ್‌ಟಾಪ್‌ ಬಳಸಿ ವೈರಲ್ ಆದ ವ್ಯಕ್ತಿ

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಫೋಟೋ 40,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಜೊತೆಗೆ 1,000 ಕ್ಕೂ ಹೆಚ್ಚು ಬಾರಿ ಷೇರ್ ಮಾಡಲಾಗಿದೆ. ಆದರೆ, ಸಾಮಾಜಿಕ ಜಾಲತಾಣ ಬಳಕೆದಾರರು ಈ ಚಿತ್ರದ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಕೆಲಸದ ಒತ್ತಡ: ಬೈಕ್ ಚಾಲನೆ ವೇಳೆಯೂ ಲ್ಯಾಪ್‌ಟಾಪ್‌ ಬಳಸಿ ವೈರಲ್ ಆದ ವ್ಯಕ್ತಿ

ಚಿತ್ರದ ಕುರಿತು ಪ್ರತಿಕ್ರಿಯಿಸಿರುವ ಬಳಕೆದಾರರು, "ಸಾಮಾನ್ಯ ವ್ಯಕ್ತಿ ಚಲಿಸುವ ಸ್ಕೂಟರ್‌ನಲ್ಲಿ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವುದು ಅಸಾಧ್ಯ, ಅವನು ಬೇರೆ ಗ್ರಹದಿಂದ ಬಂದಿರಬಹುದು. ಅವನು ಲ್ಯಾಪ್‌ಟಾಪ್‌ನಲ್ಲಿ RRR ಅನ್ನು ನೋಡುತ್ತಿರಬಹುದು ಎಂದು ಕಮೆಂಟ್ ಮಾಡಿದ್ದಾನೆ.

ಕೆಲಸದ ಒತ್ತಡ: ಬೈಕ್ ಚಾಲನೆ ವೇಳೆಯೂ ಲ್ಯಾಪ್‌ಟಾಪ್‌ ಬಳಸಿ ವೈರಲ್ ಆದ ವ್ಯಕ್ತಿ

ಮತ್ತೊಬ್ಬ, ಅಂತಹ ಕೆಲಸಕ್ಕೆ ವ್ಯಕ್ತಿಯೇ ಜವಾಬ್ದಾರನಾಗಿರುತ್ತಾನೆ, ನಾಯಕತ್ವವನ್ನು ದೂಷಿಸುವ ಬದಲು, ನೀವು ಆ ವ್ಯಕ್ತಿಯನ್ನು ನಿಲ್ಲಿಸಿ ಚಾಲನೆ ವೇಳೆ ಇಂತಹ ಕೆಲಸಗಳನ್ನು ಮಾಡಬೇಡ ಎಂದು ಕೇಳುವುದು ಉತ್ತಮ. ನಾವು ಜವಾಬ್ದಾರಿಯುತ ನಾಗರಿಕರಾಗಬೇಕು ಎಂದು ಕಮೆಂಟ್‌ನಲ್ಲಿ ಸಲಹೆ ನೀಡಿದ್ದಾನೆ.

ಕೆಲಸದ ಒತ್ತಡ: ಬೈಕ್ ಚಾಲನೆ ವೇಳೆಯೂ ಲ್ಯಾಪ್‌ಟಾಪ್‌ ಬಳಸಿ ವೈರಲ್ ಆದ ವ್ಯಕ್ತಿ

ಅಪಾಯ ಕಟ್ಟಿಟ್ಟಬುತ್ತಿ

ಚಾಲನೆ ವೇಳೆ ಹಿಂದೆ ಕುಳಿತವರು ಲ್ಯಾಪ್‌ಟಾಪ್‌ಗಳನ್ನು ಬಳಸುವುದು ಅಪಾಯಕಾರಿ. ಏಕೆಂದರೆ ಚಾಲೆನೆ ವೇಳೆ ರಸ್ತೆಯಲ್ಲಿನ ಅಂಕುಡೊಂಕುಗಳು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡಲು ಅನುವುಮಾಡಿಕೊಡುವುದಿಲ್ಲ. ಒಮ್ಮೆ ಲ್ಯಾಪ್‌ಟಾಪ್ ಕೈಜಾರಿದರೆ ಹಿಂಬದಿ ಕುಳಿತವನು ಗಾಬರಿಗೊಂಡು ಚಾಲಕನಿಗೂ ಗಾಬರಿಗೊಳಿಸುತ್ತಾನೆ ಇದರಿಂದ ಅಪಘಾತಗಳು ಸಂಭವಿಸಬಹುದು.

ಕೆಲಸದ ಒತ್ತಡ: ಬೈಕ್ ಚಾಲನೆ ವೇಳೆಯೂ ಲ್ಯಾಪ್‌ಟಾಪ್‌ ಬಳಸಿ ವೈರಲ್ ಆದ ವ್ಯಕ್ತಿ

ಕಚೇರಿ ಕೆಲಸಗಳು ಎಷ್ಟೇ ಇರಲಿ ಅದು ಆಫಿಸ್‌ಗೆ ಮಾತ್ರ ಸೀಮಿತವಾಗಿರಬೇಕು. ಒಮ್ಮೆ ನಾವು ಹೊರಗೆ ಬಂದ ಮೇಲೆ ರಸ್ತೆಗಳಲ್ಲಿ ಅದರಲ್ಲೂ ಚಾಲನೆ ವೇಳೆ ಇಂತಹ ಕೆಲಸಗಳನ್ನು ಮಾಡಬಾರದು. ಇವು ನಮ್ಮ ಪಕ್ಕದಲ್ಲಿ ಸಂಚರಿಸುವವರಿಗೂ ತೊಂದರೆಯಾಗಬಹುದು. ಏಕೆಂದರೆ ರಸ್ತೆಯಲ್ಲೂ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಅಕ್ಕಪಕ್ಕದ ಸವಾರರು ನಮ್ಮನ್ನೇ ನೋಡುತ್ತಾರೆ.

ಕೆಲಸದ ಒತ್ತಡ: ಬೈಕ್ ಚಾಲನೆ ವೇಳೆಯೂ ಲ್ಯಾಪ್‌ಟಾಪ್‌ ಬಳಸಿ ವೈರಲ್ ಆದ ವ್ಯಕ್ತಿ

ಈ ವೇಳೆ ಮುಂದೆ ಯಾವುದಾದರೂ ವಾಹನ ದಿಢೀರನೆ ಬ್ರೇಕ್ ಹಾಕಿದರೆ ಡಿಕ್ಕಿಯಾಗುವ ಸಾಧ್ಯತೆಗಳು ಇವೆ. ಹಾಗಾಗಿ ವಾಹನ ಚಾಲನೆ ಮಾಡುವವರಾಗಲಿ, ಹಿಂಬದಿ ಕುಳಿತವರಾಗಲಿ ಇಂತಹ ಕೆಲಸಗಳಿಂದ ದೂರವಿರಬೇಕು. ಒಂದು ವೇಳೆ ಆಫೀಸ್‌ನಲ್ಲಿ ಒತ್ತಡ ಹೆಚ್ಚಾದರೂ ಸಮಯ ಕೇಳಿ ಕೆಲಸ ಮಾಡಿ ಮುಗಿಸುವುದು ಒಳ್ಳೆಯದು.

ಕೆಲಸದ ಒತ್ತಡ: ಬೈಕ್ ಚಾಲನೆ ವೇಳೆಯೂ ಲ್ಯಾಪ್‌ಟಾಪ್‌ ಬಳಸಿ ವೈರಲ್ ಆದ ವ್ಯಕ್ತಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ವಲಯದಲ್ಲಿ ಒತ್ತಡದ ಕೆಲಸಗಳು ಸಾಮಾನ್ಯವಾಗಿಬಿಟ್ಟಿವೆ. ಉದ್ಯೋಗಿಗಳು ಈ ಒತ್ತಡದ ಕೆಲಸ ಮಾಡಲಾಗದೇ ಉದ್ಯೋಗ ತೊರೆದ ಹಲವು ಉದಾಹರಣೆಗಳೂ ಇವೆ. ಐಟಿ ಕಂಪನಿಗಳು ಕೂಡ ವ್ಯಕ್ತಿಯ ಸಾಮರ್ಥ್ಯಕ್ಕೆ ಮೀರಿ ಕೆಲಸವನ್ನು ನೀಡುವುದರಿಂದ ಉದ್ಯೋಗಿ ದೈಹಿಕ ಹಾಗೂ ಮಾನಸಿಕವಾಗಿ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿವೆ.

Most Read Articles

Kannada
English summary
A photo of a man who working on a laptop while riding a bike went viral
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X