ಇಂಧನ ಖರ್ಚಿಲ್ಲದ ಸೋಲಾರ್ ಕಾರ್ ಅಭಿವೃದ್ಧಿಪಡಿಸಿದ ಶಿಕ್ಷಕ: ಶ್ಲಾಘಿಸಿದ ಆನಂದ್ ಮಹೀಂದ್ರಾ

ಕಾಶ್ಮೀರದ ಗಣಿತಶಾಸ್ತ್ರ ಶಿಕ್ಷಕರಾದ ಬಿಲಾಲ್ ಅಹ್ಮದ್ ಎಂಬುವರು ಇತ್ತೀಚೆಗೆ ಮಾರುತಿ 800 ಕಾರನ್ನು ಸೌರಶಕ್ತಿ ಚಾಲಿತ ಎಲೆಕ್ಟ್ರಿಕ್ ಕಾರ್ ಆಗಿ ಪರಿವರ್ತಿಸಿ ಜನಪ್ರಿಯವಾಗಿದ್ದರು. ಹೆಚ್ಚುತ್ತಿರುವ ಇಂಧನ ಬೆಲೆಗಳು ಮತ್ತು ಪರಿಸರ ಕಾಳಜಿಯೊಂದಿಗೆ ನಿರ್ಮಿಸಿರುವ ಈ ಕಾರು ಹಲವರ ಗಮನ ಸೆಳೆದಿದ್ದು, ಇದೀಗ ಆಟೋ ಉದ್ಯಮದ ದಿಗ್ಗಜ ಆನಂದ್ ಮಹೀಂದ್ರಾ ಶಿಕ್ಷಕನ ಆವಿಷ್ಕಾರವನ್ನು ಶ್ಲಾಘಿಸಿದ್ದಾರೆ.

ಇಂಧನ ಖರ್ಚಿಲ್ಲದ ಸೋಲಾರ್ ಕಾರ್ ಅಭಿವೃದ್ಧಿಪಡಿಸಿದ ಶಿಕ್ಷಕ: ಶ್ಲಾಘಿಸಿದ ಆನಂದ್ ಮಹೀಂದ್ರಾ

ಅಹ್ಮದ್ ಬಿಲಾಲ್ ಅವರ ಹೊಸ ಆವಿಷ್ಕಾರದ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗಿವೆ. ಜನರು ಅವರ ಸೌರ ಚಾಲಿತ ಎಲೆಕ್ಟ್ರಿಕ್ ಕಾರನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕೂಡ ಅಹ್ಮದ್ ಬಿಲಾಲ್ ಅವರ ಈ ಸಾಧನೆಯ ಬಗ್ಗೆ ಶ್ಲಾಘಿಸಿದ್ದರು.

ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಮುಕ್ತ ಅಭಿವ್ಯಕ್ತಿಗೆ ಹೆಸರುವಾಸಿಯಾದ ಮಹೀಂದ್ರಾದ ಸಿಇಒ ಆನಂದ್ ಮಹೀಂದ್ರಾ, ಬಿಲಾಲ್ ಅಹ್ಮದ್ ಅವರ ಆವಿಷ್ಕಾರವನ್ನು ಪ್ರಶಂಸಿದ್ದಾರೆ. ಶಿಕ್ಷಕ ಬಿಲಾಲ್ ಅಹ್ಮದ್ ಅವರ ಉತ್ಸಾಹವು ಶ್ಲಾಘನೀಯವಾಗಿದೆ, ಏಕಾಂಗಿಯಾಗಿ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂಧನ ಖರ್ಚಿಲ್ಲದ ಸೋಲಾರ್ ಕಾರ್ ಅಭಿವೃದ್ಧಿಪಡಿಸಿದ ಶಿಕ್ಷಕ: ಶ್ಲಾಘಿಸಿದ ಆನಂದ್ ಮಹೀಂದ್ರಾ

ಇದಲ್ಲದೆ, ಅವರು ತಮ್ಮ ಮಹೀಂದ್ರಾ ರಿಸರ್ಚ್ ವ್ಯಾಲಿ ಸಹಾಯದಿಂದ ತಮ್ಮ ಯೋಜನೆಯನ್ನು ಅಭಿವೃದ್ಧಿಪಡಿಸಲು ಆ ವ್ಯಕ್ತಿಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. ವಿನ್ಯಾಸವು ಉತ್ಪಾದನಾ ಸ್ನೇಹಿ ಆವೃತ್ತಿಯಾಗಿ ವಿಕಸನಗೊಳ್ಳುವ ಅಗತ್ಯವಿದೆ. ಬಹುಶಃ ಮಹೀಂದ್ರಾ ರಿಸರ್ಚ್ ವ್ಯಾಲಿಯಲ್ಲಿರುವ ನಮ್ಮ ತಂಡವು ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಅವರೊಂದಿಗೆ ಕೆಲಸ ಮಾಡಬಹುದು ಎಂದು ಹೇಳಿದ್ದಾರೆ.

ಇಂಧನ ಖರ್ಚಿಲ್ಲದ ಸೋಲಾರ್ ಕಾರ್ ಅಭಿವೃದ್ಧಿಪಡಿಸಿದ ಶಿಕ್ಷಕ: ಶ್ಲಾಘಿಸಿದ ಆನಂದ್ ಮಹೀಂದ್ರಾ

ಬಿಲಾಲ್ ಅಹ್ಮದ್ ಅವರು 13 ವರ್ಷಗಳಿಗೂ ಹೆಚ್ಚು ಕಾಲದಿಂದ ಈ ಕಾರಿಗಾಗಿ ಶ್ರಮಿಸಿದ್ದು, ಇದೀಗ ಮಹತ್ವದ ಮೈಲಿಗಲ್ಲು ಮುಟ್ಟಿದೆ. ಅವರು ತಮ್ಮ ಸೌರಶಕ್ತಿ ಚಾಲಿತ ಎಲೆಕ್ಟ್ರಿಕ್ ವಾಹನವನ್ನು ಮಾರುತಿ ಸುಜುಕಿ 800 ನಿಂದ ನಿರ್ಮಿಸಿದ್ದಾರೆ. ಈ ಕಾರಿಗೆ ಸೌರ ಶಕ್ತಿಯನ್ನು ಸ್ಟೋರ್‌ ಮಾಡಿಕೊಳ್ಳಲು ಸಂಪೂರ್ಣವಾಗಿ ಸೌರ ಫಲಕಗಳನ್ನು ಅಳವಡಿಸಲಾಗಿದೆ.

ಇಂಧನ ಖರ್ಚಿಲ್ಲದ ಸೋಲಾರ್ ಕಾರ್ ಅಭಿವೃದ್ಧಿಪಡಿಸಿದ ಶಿಕ್ಷಕ: ಶ್ಲಾಘಿಸಿದ ಆನಂದ್ ಮಹೀಂದ್ರಾ

ಇನ್ನು ಈ ಸೋಲಾರ್ ಕಾರಿನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಕಾರು ಫೆರಾರಿಯಂತೆ ಗುಲ್ವಿಂಗ್ ಬಾಗಿಲುಗಳನ್ನು ಹೊಂದಿದೆ. ಈ ಗುಲ್ವಿಂಗ್ ಬಾಗಿಲುಗಳನ್ನು ತಯಾರಿಸುವುದು ಅವರಿಗೆ ಸವಾಲಾಗಿತ್ತು, ಆದರೂ ಪಟ್ಟುಬಿಡದೇ ತಮ್ಮ ಕನಸಿನ ಕಾರನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಎಲ್ಲೆಡೆ ಈ ಕಾರಿಗೆ ಪ್ರಶಂಸೆಗಳು ವ್ಯಕ್ತವಾಗುತ್ತಿವೆ ಎಂದು ಶಿಕ್ಷಕ ಬಿಲಾಲ್ ಅಹ್ಮದ್ ಹೇಳಿದ್ದಾರೆ.

ಇಂಧನ ಖರ್ಚಿಲ್ಲದ ಸೋಲಾರ್ ಕಾರ್ ಅಭಿವೃದ್ಧಿಪಡಿಸಿದ ಶಿಕ್ಷಕ: ಶ್ಲಾಘಿಸಿದ ಆನಂದ್ ಮಹೀಂದ್ರಾ

ಶಿಕ್ಷಕರಾದ ಬಿಲಾಲ್ ಅಹ್ಮದ್ ಅವರ ಬಗ್ಗೆ ಹೇಳುವುದಾದರೆ, ಇವರಿಗೆ ಐಷಾರಾಮಿ ಕಾರು ತಯಾರಿಸುವ ಆಸೆ. ಅದೇ ಸಮಯದಲ್ಲಿ ಅದು ಸಾಮಾನ್ಯ ಜನರ ಕೈಗೆಟುಕುವಂತಿರಬೇಕು ಎಂಬುದು ಸಹ ಮುಖ್ಯ ಧ್ಯೇಯವಾಗಿತ್ತು. ಇದಕ್ಕಾಗಿ 50ರ ದಶಕದಿಂದ ತಯಾರಿಸಿದ ಕಾರುಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರು, ಬಳಿಕ ಇದೇ ಅಧ್ಯಯನವು ಸೋಲಾರ್ ಕಾರನ್ನು ತಯಾರಿಸಲು ಪ್ರೇರೇಪಿಸಿತು.

ಇಂಧನ ಖರ್ಚಿಲ್ಲದ ಸೋಲಾರ್ ಕಾರ್ ಅಭಿವೃದ್ಧಿಪಡಿಸಿದ ಶಿಕ್ಷಕ: ಶ್ಲಾಘಿಸಿದ ಆನಂದ್ ಮಹೀಂದ್ರಾ

ಇದೇ ವೇಳೆ ಆಟೋಮೊಬೈಲ್ ಕಂಪನಿ DMC ಮಾಲೀಕತ್ವದ ಯುಎಸ್‌ನ ಡೆಟ್ರಾಯಿಟ್‌ನ ಎಂಜಿನಿಯರ್ ಮತ್ತು ನವೋದ್ಯಮಿಗಳ ಕೆಲಸದಿಂದ ಅವರು ಸ್ಫೂರ್ತಿ ಪಡೆದರು. ಮರ್ಸಿಡಿಸ್, ಫೆರಾರಿ ಮತ್ತು ಬಿಎಂಡಬ್ಲ್ಯು ಕಾರುಗಳು ಸಾಮಾನ್ಯ ಜನರ ಕನಸು, ಶ್ರೀಮಂತರು ಮಾತ್ರ ಅಂತಹ ಕಾರುಗಳನ್ನು ಖರೀದಿಸಬಹುದಾಗಿದೆ. ಇದೇ ಐಷಾರಾಮಿಯನ್ನು ಕಡಿಮೆ ಬೆಲೆಗೆ ನೀಡುವ ಮೂಲಕ ಜನರಿಗೆ ದುಬಾರಿ ಕಾರುಗಳ ಭಾವನೆಯನ್ನು ನೀಡುವುದು ಉತ್ತಮ ಎಂದು ಅವರು ನಿರ್ಣಯಿಸಿದರು.

ಇಂಧನ ಖರ್ಚಿಲ್ಲದ ಸೋಲಾರ್ ಕಾರ್ ಅಭಿವೃದ್ಧಿಪಡಿಸಿದ ಶಿಕ್ಷಕ: ಶ್ಲಾಘಿಸಿದ ಆನಂದ್ ಮಹೀಂದ್ರಾ

2009 ರಲ್ಲಿ ಅವರು ಸೋಲಾರ್-ರನ್ ಐಷಾರಾಮಿ ಕಾರನ್ನು ತಯಾರಿಸುವ ಆಲೋಚನೆಯನ್ನು ಮಾಡಿದರು, ನಂತರ ಅವರು ಈ ಯೋಜನೆಯಲ್ಲಿ ತೊಡಗಿಸಿಕೊಂಡು ಯೋಜನೆಯನ್ನು ಈ ವರ್ಷ ಪೂರ್ಣಗೊಳಿಸಿದರು. ಈ ಸೌರಶಕ್ತಿ ಚಾಲಿತ ಕಾರಿಗೆ ಇತರ ಐಷಾರಾಮಿ ಕಾರುಗಳಂತೆಯೇ ವೈಶಿಷ್ಟ್ಯತೆಗಳನ್ನು ನೀಡಲಾಗಿದೆ.

ಇಂಧನ ಖರ್ಚಿಲ್ಲದ ಸೋಲಾರ್ ಕಾರ್ ಅಭಿವೃದ್ಧಿಪಡಿಸಿದ ಶಿಕ್ಷಕ: ಶ್ಲಾಘಿಸಿದ ಆನಂದ್ ಮಹೀಂದ್ರಾ

ಬಿಲಾಲ್ ಅವರು ಮೊದಲಿಗೆ ಅಂಗವಿಕಲರಿಗಾಗಿ ಕಾರನ್ನು ನಿರ್ಮಿಸಲು ಬಯಸಿದ್ದರು. ಆದರೆ ಆರ್ಥಿಕ ಸಮಸ್ಯೆಗಳಿಂದಾಗಿ ಅದನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದು ಈ ಹಿಂದೆ ANI ಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಇಂಧನ ಖರ್ಚಿಲ್ಲದ ಸೋಲಾರ್ ಕಾರ್ ಅಭಿವೃದ್ಧಿಪಡಿಸಿದ ಶಿಕ್ಷಕ: ಶ್ಲಾಘಿಸಿದ ಆನಂದ್ ಮಹೀಂದ್ರಾ

ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಗೆ ಶ್ರಮಿಸುತ್ತಿರುವ ಸರ್ಕಾರ

ದೇಶದೆಲ್ಲಡೆ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲು ಆಯಾ ರಾಜ್ಯ ಸರ್ಕಾರಗಳು ಸಾಕಷ್ಟು ಶ್ರಮಿಸುತ್ತಿವೆ. ಮುಂದಿನ ದಿನಗಳಲ್ಲಿ ಕಾರ್ಬನ್ ಮುಕ್ತ ದೇಶವನ್ನಾಗಿಸಲು ಕೇಂದ್ರ ಸರ್ಕಾರ ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಸಬ್ಸಿಡಿ ನೀಡಿ ಪ್ರೋತ್ಸಾಹಿಸುತ್ತಿದೆ. ಆದರೂ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯ ವೇಗವು ನಿಧಾನವಾಗುತ್ತಿದೆ.

ಇಂಧನ ಖರ್ಚಿಲ್ಲದ ಸೋಲಾರ್ ಕಾರ್ ಅಭಿವೃದ್ಧಿಪಡಿಸಿದ ಶಿಕ್ಷಕ: ಶ್ಲಾಘಿಸಿದ ಆನಂದ್ ಮಹೀಂದ್ರಾ

ಇದಕ್ಕೆ ಹಲವು ಕಾರಣಗಳಿವೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಮೂಲಸೌಕರ್ಯವು ಇನ್ನೂ ಅಭಿವೃದ್ಧಿಯ ಹಂತದಲ್ಲಿವೆ. ಅಲ್ಲದೇ ಇವಿ ವಾಹನಗಳು ಸೀಮಿತ ವ್ಯಾಪ್ತಿಯನ್ನು ಹೊಂದಿರುವುದರ ಜೊತೆಗೆ ಅವು ಚಾರ್ಜ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಇವೆಲ್ಲದರ ಜೊತೆಗೆ ಆಗಾಗ್ಗೆ ವರದಿಯಾಗುತ್ತಿರುವ ಇವಿ ವಾಹನಗಳ ಬೆಂಕಿ ಅವಘಗಳು ಸಹ ಪ್ರಮುಖ ಕಾರಣವಾಗಿವೆ.

ಇಂಧನ ಖರ್ಚಿಲ್ಲದ ಸೋಲಾರ್ ಕಾರ್ ಅಭಿವೃದ್ಧಿಪಡಿಸಿದ ಶಿಕ್ಷಕ: ಶ್ಲಾಘಿಸಿದ ಆನಂದ್ ಮಹೀಂದ್ರಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಎಲೆಕ್ಟ್ರಿಕ್ ವಾಹನಗಳು ಮಾತ್ರವಲ್ಲದೇ ಜನರಿಗೆ ಕಡಿಮೆ ವೆಚ್ಚ, ಹೆಚ್ಚು ಪ್ರಮಾಣಿತ ಹಾಗೂ ಇಂಧನವಿಲ್ಲದೇ ಪ್ರಯಾಣಿಸುವ ವಾಹನಗಳನ್ನು ಕೊಡುಗೆಯಾಗಿ ನೀಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಹೊರಹೊಮ್ಮಿರುವ ಶಿಕ್ಷಕ ಬಿಲಾಲ್ ಅಹ್ಮದ್ ಅವರ ಸೌರ ಶಕ್ತಿ ಚಾಲಿತ ಕಾರು ದೇಶದ ಹೆಮ್ಮೆಯಾಗಿದೆ. ಮುಂದಿನ ದಿನಗಳಲ್ಲಿ ಇವರ ಆವಿಷ್ಕಾರ ವಿಶ್ವ ದೇಶಗಳಿಗೆ ಮಾದರಿಯಾಗಬೇಕು ಎಂಬುದು ನಮ್ಮ ಆಶಯ.

Article Published On: Monday, July 25, 2022, 13:28 [IST]
English summary
A teacher who developed a solar car with no fuel consumption Anand Mahindra hailed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+