ಅಡ್ಡ ಬಂದ ಆಟೋವನ್ನು ಮೇಲಕ್ಕೆತ್ತಿ ನೆಲಕ್ಕೆ ಬಡಿದ ಕಾಡಮ್ಮೆ: ಭಯಾನಕ ವಿಡಿಯೋ ವೈರಲ್
ಕಾಡು ಪ್ರಾಣಿಗಳು ಜನರ ಮೇಲೆ ದಾಳಿ ಮಾಡುತ್ತಿರುವ ವರದಿಗಳು ಇತ್ತೀಚೆಗೆ ಹೆಚ್ಚುತ್ತಿವೆ. ಆನೆ, ಹುಲಿ, ಚಿರತೆ ಮತ್ತು ಹಾವುಗಳು ನಗರ ಪ್ರದೇಶಗಳಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇನ್ನು ಕಾಡಿನಲ್ಲಿ ಹಾದು ಹೋಗುವ ರಸ್ತೆಗಳಲ್ಲಿನ ಪರಿಸ್ಥಿತಿ ಹೇಳಬೇಕಿಲ್ಲ.

ಜೀವವನ್ನು ಅಂಗೈನಲ್ಲಿಟ್ಟುಕೊಂಡು ಸಂಚರಿಸಬೇಕಾಗುತ್ತದೆ. ಮುಖ್ಯವಾಗಿ ರಾತ್ರಿವೇಳೆ ಇಂತಹ ರಸ್ತೆಗಳಲ್ಲಿ ಪ್ರಯಾಣಿಸುವುದು ಅಪಾಯಕಾರಿಯೆಂದೇ ಹೇಳಬಹುದು. ಸಾಕಷ್ಟು ಪ್ರಾಣಿಗಳು ರಾತ್ರಿಯಲ್ಲಿ ರಸ್ತೆಗಳನ್ನು ದಾಟುತ್ತವೆ, ವಾಹನಗಳು ಸಮೀಪಿಸುತ್ತಿರುವುದನ್ನು ಕಂಡಾಗ ಅವು ಆಗಾಗ್ಗೆ ಭಯಭೀತಗೊಂಡು ದಾಳಿ ಮಾಡುತ್ತವೆ.

ಇಲ್ಲಿ ನಾವು ಅಂತಹ ಒಂದು ವೀಡಿಯೊವನ್ನು ನೀಡಿದ್ದೇವೆ, ಕಾಡೆಮ್ಮೆಯೊಂದು ಆಟೋರಿಕ್ಷಾದ ಮೇಲೆ ದಾಳಿ ಮಾಡುವ ವಿಡಿಯೋ ಎಂಥವರನ್ನು ಒಂದು ಕ್ಷಣ ದಂಗಾಗಿಸುತ್ತದೆ. ಈ ವಿಡಿಯೋವನ್ನು ನ್ಯೂಸ್ 18 ತಮಿಳುನಾಡು ಹಂಚಿಕೊಂಡಿದ್ದು, ಕೇರಳದಲ್ಲಿ ಈ ಘಟನೆ ನಡೆದಿದೆ.
ಇದು ಕಾಡಿನ ಮೂಲಕ ಸಾಗುವ ರಸ್ತೆಯಂತೆ ಕಾಣುತ್ತಿದ್ದು, ವೀಡಿಯೊ ರೆಕಾರ್ಡ್ ಮಾಡುವ ವ್ಯಕ್ತಿ ಕಾಡೆಮ್ಮೆ ರಸ್ತೆಯಲ್ಲಿ ನಿಂತಿರುವುದನ್ನು ಗುರುತಿಸಿ ವಾಹನವನ್ನು ನಿಲ್ಲಿಸಿದ್ದಾರೆ. ಅದು ರಸ್ತೆಯನ್ನು ಬಿಟ್ಟು ಕಾಡಿನೊಳಗೆ ತೆರಳುವುದಕ್ಕಾಗಿ ಕಾಯುತ್ತಿರುವಾಗ, ಆಟೋರಿಕ್ಷಾ ಚಾಲಕನು ಸ್ಥಳಕ್ಕೆ ಬಂದಿದ್ದಾನೆ. ಅವನು ಕೂಡ ಕಾಡೆಮ್ಮೆಯನ್ನು ಕಂಡು ಆಟೋವನ್ನು ತುಸು ದೂರದಲ್ಲಿಯೇ ನಿಲ್ಲಿಸಿದ್ದಾನೆ.

ವಿಡಿಯೋದಲ್ಲಿ ಕಂಡುಬರುವ ಆಟೋ-ರಿಕ್ಷಾವು ಅದರ ಮುಂದೆ ಹಲವಾರು ಎಲ್ಇಡಿ ಲೈಟ್‌ಗಳನ್ನು ಹೊಂದಿತ್ತು. ಹೆಡ್‌ಲೈಟ್‌ಗಳ ಜೊತೆಗೆ ಆಟೋದಲ್ಲಿ ಮಿನುಗುವ ಲೈಟ್‌ಗಳು ಪ್ರಾಣಿಗಳನ್ನು ಹೆದರಿಸುತ್ತವೆ. ಹಾಗಾಗಿಯೇ ಕಾಡೆಮ್ಮೆಗೆ ಸ್ವಲ್ಪ ಭಯವಾಗಿದ್ದು, ನಿಧಾನವಾಗಿ ಆಟೋರಿಕ್ಷಾದ ಕಡೆಗೆ ಬರುತ್ತದೆ.

ಕಾಡೆಮ್ಮೆಯನ್ನು ಗುರುತಿಸಿದ ನಂತರ ಕಾರು ಮತ್ತು ಆಟೋ ಎರಡೂ ಹಿಂದೆ ಸರಿದವು. ಆಟೊರಿಕ್ಷಾದ ಲೈಟ್‌ಗಳು ಮತ್ತು ಶಬ್ದವು ಕಾಡೆಮ್ಮೆಯನ್ನು ಕೆರಳಿಸಿದ್ದು, ಆಟೋರಿಕ್ಷಾದ ಕಡೆಗೆ ಆಕ್ರಮಣಕಾರಿಯಾಗಿ ಓಡಿಬಂದಿದೆ. ಅದರ ಕೊಂಬುಗಳೊಂದಿಗೆ ಆಟೋದ ಮುಂಭಾಗವನ್ನು ಎತ್ತಿ ನೆಲಕ್ಕೆ ಬಡಿದಿದೆ.

ಈ ವೇಳೆ ಚಾಲಕ ಆಟೋರಿಕ್ಷಾದಲ್ಲೇ ಕುಳಿತು ಹ್ಯಾಂಡಲ್ ಬಾರ್ ಅನ್ನು ಬಿಗಿಯಾಗಿ ಹಿಡಿದಿದ್ದ. ಆಟೋವನ್ನು ಎತ್ತಿ ನೆಲಕ್ಕೆ ಬಡಿದ ನಂತರ ಕಾಡೆಮ್ಮೆ ಡಾಂಬರ್ ರಸ್ತೆಯಿಂದ ದೂರ ಹೋಗುತ್ತದೆ. ಈ ವೇಳೆ ಆಟೋರಿಕ್ಷಾದ ಮುಂಭಾಗದ ಚಕ್ರವು ನೆಲಕ್ಕೆ ಕುಸಿದಾಗ ಆಟೋನ ಕೆಲ ಬಿಡಿ ಭಾಗಗಳು ಕಳಚಿಕೊಂಡಿವೆ. ಬಳಿಕ ಮತ್ತೊಮ್ಮೆ ಆಟೋ ಮೇಲೆ ದಾಳಿ ಮಾಡಲು ಮುಂದಾಗಿದೆ.

ಈ ವೇಳೆ ಚಾಲಕ ಇದ್ದಕ್ಕಿದ್ದಂತೆ ಆಟೋವನ್ನು ಹಿಮ್ಮುಖವಾಗಿ ಓಡಿಸಿದ್ದಾನೆ. ಅಷ್ಟರಲ್ಲಾಗಲೇ ಕಾಡೆಮ್ಮೆ ಸಮತೋಲನ ಕಂಡು ಬರುವಷ್ಟರಲ್ಲಿ ಆಟೋರಿಕ್ಷಾ ದೂರ ಸರಿದಿತ್ತು. ಕಾಡೆಮ್ಮೆ ಗಮನಕ್ಕೆ ಬಾರದಂತೆ ಕಾರನ್ನು ನಿಧಾನವಾಗಿ ಹಿಮ್ಮುಖವಾಗಿ ಚಲಿಸುವಂತೆ ವಿಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ಚಾಲಕನಿಗೆ ಹೇಳುವುದನ್ನು ಕೇಳಬಹುದು.

ಕಾಡೆಮ್ಮೆಗಳು ಕಾಡಿನಲ್ಲಿ ಅತಿದೊಡ್ಡ ಜಾನುವಾರುಗಳಲ್ಲಿ ಒಂದಾಗಿದೆ. ಅವುಗಳ ದೊಡ್ಡ ಗಾತ್ರದ ಹೊರತಾಗಿಯೂ, ಅವು ಸಾಮಾನ್ಯವಾಗಿ ಹೆಚ್ಚು ಆಕ್ರಮಣಕಾರಿಯಾಗಿರುವುದಿಲ್ಲ. ಈ ಪ್ರಾಣಿಗಳು ಸಾಮಾನ್ಯವಾಗಿ ಮಾನವನಿಂದ ದೂರವಿರಲು ಪ್ರಯತ್ನಿಸುತ್ತವೆ. ಆದರೆ, ಇವುಗಳಿಗೆ ಬೆದರಿಕೆಯೆನಿಸಿದಾಗ ಇತರ ಯಾವುದೇ ಕಾಡು ಪ್ರಾಣಿಗಳಂತಲೂ ಭಯಾನಕವಾಗಿ ದಾಳಿ ಮಾಡುತ್ತವೆ.

ಸಾಮಾನ್ಯವಾಗಿ ಕಾಡೆಮ್ಮೆಗಳನ್ನು ದೊಡ್ಡ ಗುಂಪುಗಳಲ್ಲಿ ಗುರುತಿಸಲಾಗುತ್ತದೆ, ಆದರೆ ಈ ವೀಡಿಯೊದಲ್ಲಿ ಒಂದು ಕಾಡೆಮ್ಮೆ ಮಾತ್ರ ಕಂಡುಬರುತ್ತದೆ. ಅದು ತನ್ನ ಗುಂಪಿನಿಂದ ದಾರಿ ತಪ್ಪಿರಬಹುದು. ಹಾಗಾಗಿಯೇ ಅದು ಭಯಭೀತಗೊಂಡು ದಾಳಿ ಮಾಡಿದೆ. ಆಟೋ ಚಾಲಕನಿಗೆ ಯಾವುದೇ ಗಾಯವಾಗಿಲ್ಲ ಎಂದು ಹೇಳಾಗಿದೆ. ಆಟೋರಿಕ್ಷಾದ ಮುಂಭಾಗದ ಮಡ್‌ಗಾರ್ಡ್ ಸಂಪೂರ್ಣ ಧ್ವಂಸಗೊಂಡಿದ್ದು, ಅದರ ಭಾಗಗಳು ರಸ್ತೆಯಲ್ಲಿ ಬಿದ್ದಿರುವುದು ಕಂಡುಬಂದಿದೆ.

ಬೊಲೆರೊವನ್ನು ಬೆನ್ನಟ್ಟಿದ ಆನೆ
ಆನೆಗಳು ಜನರ ಮೇಲೆ ದಾಳಿ ಮಾಡುವುದು ಅತಿ ಕಡಿಮೆ ಆದರೆ ಅವಕ್ಕೆ ಮದವೇರಿದರೆ ತನ್ನ ದಾರಿಯಲ್ಲಿ ಅಡ್ಡ ಬಂದ ವಸ್ತುಗಳನ್ನು ನುಜ್ಜುಗುಜ್ಜು ಮಾಡುತ್ತವೆ. ಅದೇ ರೀತಿ ಕಾಡಾನೆಯೊಂದು ಮಹೀಂದ್ರಾ ಬೊಲೆರೊವನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
I am told this is in Kabini ! Hats off to the driver 🫡 deft handling of the situation with a cool mind is commendable. Source- shared by a friend pic.twitter.com/rfCQbIjK1T
— Supriya Sahu IAS (supriyasahuias) September 8, 2022
ವೀಡಿಯೊದಲ್ಲಿ ಕಂಡುಬರುವ ಸಫಾರಿ ಜೀಪ್ ಮಹೀಂದ್ರಾ ಬೊಲೆರೊದಂತೆ ಕಾಣುತ್ತದೆ. ಟೂರಿಸ್ಟ್‌ಗಳಿಗಾಗಿ ರಾಷ್ಟ್ರೀಯ ಉದ್ಯಾನವನದೊಳಗೆ ಒಂದು ಮಾರ್ಗವನ್ನು ನಿರ್ಮಿಸಲಾಗಿದೆ. ಬೊಲೆರೊ ಘಟನಾ ಸ್ಥಳಕ್ಕೆ ತಲುಪಿದಾಗ ಆನೆ ರಸ್ತೆ ಮಧ್ಯೆ ನಿಂತಿತ್ತು. ಈ ವೇಳೆ ಆನೆ ಕಡಗೆ ನಿಧಾನವಾಗಿ ಜೀಪ್ ಮುಂದೆ ಸಾಗುವಾಗ ಆನೆಯು ವಾಹನದ ಶಬ್ದವನ್ನು ಕೇಳಿದೆ.

ಆನೆ ಜೀಪನ್ನು ನೋಡಿದ ಕೂಡಲೇ ಜೀಪಿನತ್ತ ಓಡಿಬರುತ್ತಿದ್ದ ಆನೆಯನ್ನು ಕಂಡ ಚಾಲಕ ಕೂಡಲೇ ರಿವರ್ಸ್ ಗೇರ್ ಹಾಕಿ ರಿವರ್ಸ್ ಓಡಿಸಲು ಆರಂಭಿಸಿದ. ಆನೆಯು ಅಪಾಯಕಾರಿಯಾಗಿ ವಾಹನದ ಸಮೀಪಕ್ಕೆ ತಲುಪಲು ಅತಿ ಹೆಚ್ಚು ವೇಗದಲ್ಲಿ ಓಡುತ್ತಿತ್ತು. ಆದರೆ, ಚಾಲಕ ತನ್ನ ಶಾಂತತೆಯನ್ನು ಕಳೆದುಕೊಳ್ಳದೇ ಬೊಲೆರೊವನ್ನು ಹಿಮ್ಮುಖವಾಗಿ ಬಹು ದೂರ ಓಡಿಸಿದ್ದಾನೆ.

ಈ ವೀಡಿಯೋದಲ್ಲಿ ಆನೆಯು ಸಫಾರಿ ವಾಹನವನ್ನು ಅಟ್ಟಿಸಿಕೊಂಡು ಹೋಗುತ್ತಿದ್ದಾಗ ಆನೆಯ ಸೊಂಡಿಲು ಮತ್ತು ದಂತವು ವಾಹನದ ಬಾನೆಟ್‌ಗೆ ತಾಗುವುದನ್ನು ಗಮನಿಸಬಹುದು. ಸ್ವಲ್ಪ ದೂರದವರೆಗೆ ಬೊಲೆರೊವನ್ನು ಬೆನ್ನಟ್ಟಿದ ನಂತರ, ಕಾರನ್ನು ಹಿಡಿಯಲು ವಿಫಲವಾದಾಗ ಆನೆಯು ವಾಹನವನ್ನು ಬೆನ್ನಟ್ಟುವುದನ್ನು ನಿಲ್ಲಿಸಲು ನಿರ್ಧರಿಸುತ್ತದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ನೀವು ರಾತ್ರಿಯಲ್ಲಿ ಕಾಡಿನ ಮೂಲಕ ಪ್ರಯಾಣಿಸಿದರೆ ಯಾವಾಗಲೂ ಎಚ್ಚರಿಕೆಯಿಂದ ಚಾಲನೆ ಮಾಡಬೇಕು. ಏಕೆಂದರೆ ರಾತ್ರಿಯಲ್ಲಿ ಅನೇಕ ಕಾಡು ಪ್ರಾಣಿಗಳು ಹೆಚ್ಚು ಸಕ್ರಿಯವಾಗಿರುತ್ತವೆ. ಆದಷ್ಟು ರಾತ್ರಿ ಪ್ರಯಾಣವನ್ನು ಕೈಬಿಡುವುದು ಅಥವಾ ಬೇರೊಂದು ಮಾರ್ಗವನ್ನು ನೊಡಿಕೊಳ್ಳುವುದು ಉತ್ತಮ. ಜೀವಕ್ಕಿಂತ ಪ್ರಯಾಣವೇನು ಮುಖ್ಯವಲ್ಲ, ಹಾಗಾಗಿ ತೀರಾ ಅನಿವಾರ್ಯ ಎನಿಸಿದಲ್ಲಿ ಮುನ್ನೆಚರಿಕೆಗಳನ್ನು ವಹಿಸಿ ಪ್ರಯಾಣಿಸಿ.


Click it and Unblock the Notifications