ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳಿಗೆ ಇದೊಂದು ಗುಣಪಾಠ... ಕಲಿಯದಿದ್ದರೇ ನಿಮಗೂ ಇದೇ ಪರಿಸ್ಥಿತಿ!

ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುವ ಬರದಲ್ಲಿ ಕಾನೂನನ್ನು ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ, ಮಧ್ಯಪ್ರದೇಶದ ಇಂದೋರ್‌ನ ಸಾರ್ವಜನಿಕ ರಸ್ತೆಯಲ್ಲಿ Mercedes Benz E400 Cabriolet ಕಾರಿನಲ್ಲಿ ಯುವಕನೊಬ್ಬ ಸಾಹಸಗಳನ್ನು ಪ್ರದರ್ಶಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಆತನ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಕಾರು ಇಂದೋರ್‌ನ 23 ವರ್ಷದ ಯುವಕನಿಗೆ ಸೇರಿದ್ದು, ಸೋಷಿಯಲ್ ಮೀಡಿಯಾಗಾಗಿ ಇಂತಹ ವಿಡಿಯೋಗಳನ್ನು ಮಾಡಿರುವುದಾಗಿ ತಿಳಿದುಬಂದಿದೆ. ಘಟನೆ ಬಗ್ಗೆ ಹೇಳುವುದಾದರೆ ಈತ ಇಂದೋರ್ ಜಂಕ್ಷನ್‌ನಲ್ಲಿ ಕಾರನ್ನು ಡ್ರಿಫ್ಟ್ ಮಾಡಲು ಪ್ರಯತ್ನಿಸಿದ್ದಾನೆ. ಈ ಯುವಕನ ವಿಡಿಯೋವನ್ನು ರೆಕಾರ್ಡ್ ಮಾಡಲು ರಸ್ತೆ ಬದಿಯಲ್ಲಿ ಸ್ನೇಹಿತರು ಕಾಯುತ್ತಿರುವುದನ್ನು, ಮತ್ತೋರ್ವ ರೇಕಾರ್ಡ್ ಮಾಡಿದ ವೀಡಿಯೋದಲ್ಲಿ ನೋಡಬಹುದು. ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿ ಕಾರಿನ ಮಾಲೀಕ ಮತ್ತು ಚಾಲಕನಿಗೆ ಈಗ ಸಮಸ್ಯೆಯನ್ನು ತಂದೊಡ್ಡಿದೆ.

ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳಿಗೆ ಇದೊಂದು ಗುಣಪಾಠ... ಕಲಿಯದಿದ್ದರೇ ನಿಮಗೂ ಇದೇ ಪರಿಸ್ಥಿತಿ!

ಇಂದೋರ್ ಟ್ರಾಫಿಕ್ DCP ತಮ್ಮ ಅಧಿಕೃತ ಟ್ವಿಟರ್ ಪುಟದಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಕಾರನ್ನು ಅಜಾಗರೂಕತೆಯಿಂದ ಮತ್ತು ಅಪಾಯಕಾರಿಯಾಗಿ ಓಡಿಸುವ ಮೂಲಕ ಸಾಮಾನ್ಯ ಜನರ ಜೀವಕ್ಕೆ ಅಪಾಯವನ್ನು ಉಂಟುಮಾಡುವ ವೀಡಿಯೊವನ್ನು ಜವಾಬ್ದಾರಿಯುತ ನಾಗರಿಕರೊಬ್ಬರು ಟ್ರಾಫಿಕ್ ಮ್ಯಾನೇಜ್‌ಮೆಂಟ್‌ಗೆ ಕಳುಹಿಸಿದ್ದಾರೆ. ಬಳಿಕ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಇದೇ ಕಾರಣಕ್ಕೆ ಯುವಕ ಸಿಕ್ಕಿಬಿದ್ದ
ನಗರದ ಜಂಕ್ಷನ್‌ನಲ್ಲಿ ಕಾರಿನಲ್ಲಿ ಡ್ರಿಫ್ಟ್ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ರಾತ್ರಿ ಜಂಕ್ಷನ್‌ಗೆ ಕಾರು ಬರುತ್ತಿರುವುದನ್ನು ನಾವು ನೋಡಬಹುದು. ರಸ್ತೆ ಖಾಲಿಯಾಗಿದ್ದರೂ, ಒಂದಷ್ಟು ವಾಹನಗಳು ಇನ್ನೂ ಇದ್ದವು. ಈ ಸ್ಟಂಟ್ ಆಕಸ್ಮಿಕವಲ್ಲ, ಉದ್ದೇಶಪೂರ್ವಕವಾಗಿದೆ ಎಂಬುದು ವಿಡಿಯೋದಿಂದ ಸ್ಪಷ್ಟವಾಗಿದೆ. ಟ್ವೀಟ್‌ನ ಪ್ರಕಾರ, ವ್ಯಕ್ತಿ ಒಬ್ಬರು ವೈರಲ್ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಇದು ಅಪರಾಧಿಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾರಣವಾಯಿತು.

ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳಿಗೆ ಇದೊಂದು ಗುಣಪಾಠ... ಕಲಿಯದಿದ್ದರೇ ನಿಮಗೂ ಇದೇ ಪರಿಸ್ಥಿತಿ!

ಪೊಲೀಸರು ಕಾರು ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 279 (ಸಾರ್ವಜನಿಕ ರಸ್ತೆಯಲ್ಲಿ ದುಡುಕಿನ ಚಾಲನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಬಳಸಲಾಗಿದ್ದ Mercedes-Benz E400 Cabriolet ಅನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಸ್ತೆಯಲ್ಲಿ ಡ್ರಿಫ್ಟ್ ಮಾಡುವ ವೇಳೆ ಇತರ ಕಾರುಗಳು ಮತ್ತು ಬೈಕುಗಳು ಸಹ ಸ್ಪಷ್ಟವಾಗಿ ಗೋಚರಿಸುತ್ತವೆ. ರಸ್ತೆಯ ಇನ್ನೊಂದು ಬದಿಗೆ ಹೋಗುತ್ತಿದ್ದ ಟಾಟಾ ನೆಕ್ಸಾನ್ ಕಾರು ಡ್ರಿಫ್ಟ್ ಮಾಡುವುದನ್ನು ಕಂಡು ನಿಲ್ಲಿಸುವುದನ್ನು ವಿಡಿಯೋದಲ್ಲಿ ನೋಡಬಹುದು.

ವೀಡಿಯೊದಲ್ಲಿ ಕಂಡುಬರುವ Mercedes-Benz E400 Cabriolet ರಸ್ತೆಗಳಲ್ಲಿ ಅಪರೂಪವಾಗಿ ಕಂಡುಬರುವ ಕಾರು. ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಮಾನ್ಯ ಇ-ಕ್ಲಾಸ್ ಸೆಡಾನ್‌ನ ಕನ್ವರ್ಟಿಬಲ್ ಆವೃತ್ತಿಯಾಗಿದೆ. ಇದು ಹಿಂದಿನ ತಲೆಮಾರಿನ ಮಾದರಿಯಾಗಿದ್ದು, 3.0-ಲೀಟರ್ V6 ಪೆಟ್ರೋಲ್ ಎಂಜಿನ್‌ನಿಂದ 329 Bhp ಮತ್ತು 480 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಪವರ್ ಔಟ್‌ಪುಟ್ ಹಿಂದಿನ ಚಕ್ರಗಳಿಗೆ ಶಕ್ತಿಯನ್ನು ರವಾನಿಸುತ್ತದೆ. ಹಾಗಾಗಿಯೇ ಯುವಕ ಕಾರನ್ನು ಅಚ್ಚುಕಟ್ಟಾಗಿ ಡ್ರಿಫ್ಟ್ ಮಾಡುತ್ತಿದ್ದ.

ವಿಡಿಯೋದಲ್ಲಿ ಕಾಣುವ ಕಾರು ಅತ್ಯಂತ ಶಕ್ತಿಶಾಲಿಯಾಗಿದ್ದು, ಸಣ್ಣ ತಪ್ಪಾದರೂ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಅಥವಾ ಇನ್ನಾವುದೇ ವಾಹನಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಹೆಚ್ಚಿತ್ತು. ಸಾರ್ವಜನಿಕ ರಸ್ತೆಗಳಲ್ಲಿ ಇಂತಹ ಸಾಹಸಗಳನ್ನು ಮಾಡುವ ಮೂಲಕ ಚಾಲಕ ತನ್ನ ಜೀವಕ್ಕೆ ಮತ್ತು ಇತರ ಸವಾವರರ ಜೀವಕ್ಕೂ ಅಪಾಯವನ್ನುಂಟುಮಾಡುತ್ತಿದ್ದ. ಇಂತಹ ಸಾಹಸಗಳನ್ನು ಮಾಡಲು ಬಯಸಿದರೆ, ಖಾಸಗಿ ಆಸ್ತಿಗಳು, ಮುಚ್ಚಿದ ರಸ್ತೆಗಳು ಅಥವಾ ರೇಸ್ ಟ್ರ್ಯಾಕ್‌ಗಳಲ್ಲಿ ಮಾಡುವುದು ಉತ್ತಮ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Thursday, March 23, 2023, 12:52 [IST]
English summary
A young man arrested for drifting a car on a public road
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+