21 ಪ್ಲೇಟ್ ಚೋಲೆ ಕುಲ್ಚೆ ತಿಂದು ಬುಲೆಟ್ ಬೈಕ್ ಗೆದ್ದ ಯುವಕ: ಆದ್ರೆ ಬಹುಮಾನ ಕೈಬಿಟ್ಟ, ಕಾರಣ ಇಲ್ಲಿದೆ!

ನಿರ್ದಿಷ್ಟ ಸಮಯದೊಳಗೆ ಬೃಹತ್ ಪ್ರಮಾಣದ ಆಹಾರವನ್ನು ಸೇವಿಸಿ ಬಹುಮಾನ ಅಥವಾ ಹಣವನ್ನು ಗೆದ್ದುಕೊಳ್ಳಿ ಎಂಬ ಆಫರ್‌ಗಳನ್ನು ಎಲ್ಲರೂ ಕೇಳಿರುತ್ತೀರ. ಆದರೆ ಇಂತಹ ಚಾಲೆಂಜ್‌ಗಳನ್ನು ದಕ್ಷಿಣಕ್ಕಿಂತ ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣಬಹುದು.

Recommended Video

Royal Enfield Hunter 350 | ಹೊಸ ಬೈಕ್ ಕುರಿತಾದ ಮೊದಲ ಅನಿಸಿಕೆಯ ವಾಕ್‌ರೌಂಡ್ #FirstLook

ಉತ್ತರ ಭಾರತದಲ್ಲಿನ ಹಲವು ಹೋಟೆಲ್‌ಗಳು, ಡಾಬಾಗಳು ಹಾಗೂ ಸ್ವೀಟ್ ಸ್ಟಾಲ್‌ಗಳು ಮೊದಲಿನಿಂದಲೂ ಇಂತಹ ಚಾಲೆಂಜ್‌ಗಳನ್ನು ಸಾರ್ವಜನಕರಿಗೆ ನೀಡುತ್ತಾ ಬಂದಿವೆ. ಇಂತಹ ಚಾಲೆಂಜ್‌ಗಳಲ್ಲಿ ಯಶಸ್ವಿಯಾದರೆ ಅವರು ನೀಡುವ ಬಹುಮಾನವನ್ನು ಗೆದ್ದುಕೊಂಡುಬರಬಹುದು. ಒಂದು ವೇಳೆ ಸೋತರೆ ಅವರು ನಿಗಧಿಪಡಿಸಿದ್ದ ಹಣವನ್ನು ಪಾವತಿಸಬೇಕಾಗುತ್ತದೆ.

21 ಪ್ಲೇಟ್ ಚೋಲೆ ಕುಲ್ಚೆ ತಿಂದು ಬುಲೆಟ್ ಬೈಕ್ ಗೆದ್ದ ಯುವಕ: ಆದ್ರೆ ಬಹುಮಾನ ಕೈಬಿಟ್ಟ, ಕಾರಣ ಇಲ್ಲಿದೆ!

ಇಂತಹ ಆಹಾರ ಸವಾಲುಗಳಿಗೆ ರಾಷ್ಟ್ರ ರಾಜಧಾನಿ ದೆಹಲಿಯು ಜನಪ್ರಿಯವಾಗಿದೆ. ಇಲ್ಲಿನ ಹಲವಾರು ಸ್ಥಳಗಳಲ್ಲಿನ ಫುಡ್‌ ಸ್ಟಾಲ್‌ಗಳು ಸಾರ್ವಜನಿಕರಿಗೆ ಫುಡ್ ಚಾಲೆಂಜ್ ನೀಡಿ ಗೆದ್ದವರಿಗೆ ಬಹುಮಾನಗಳನ್ನು ಸಹ ನೀಡುತ್ತವೆ. ಇತ್ತೀಚೆಗೆ ರಜನೀಶ್ ಜ್ಞಾನಿ ಎಂಬ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿರುವ ವ್ಯಕ್ತಿ ಇಂತಹ ಒಂದು ಚಾಲೆಂಜ್ ಸ್ವೀಕರಿಸಿ ಬುಲೆಟ್ ಬೈಕ್ ಗೆದ್ದಿದ್ದಾನೆ.

21 ಪ್ಲೇಟ್ ಚೋಲೆ ಕುಲ್ಚೆ ತಿಂದು ಬುಲೆಟ್ ಬೈಕ್ ಗೆದ್ದ ಯುವಕ: ಆದ್ರೆ ಬಹುಮಾನ ಕೈಬಿಟ್ಟ, ಕಾರಣ ಇಲ್ಲಿದೆ!

'ಆರ್ ಯು ಹಂಗ್ರಿ' ಎಂಬ ಯೂಟ್ಯೂಬ್ ಚಾನಲ್ ಹೊಂದಿರುವ ಈತ ತನ್ನ ವ್ಲಾಗ್ ಮಾಡಲು ಇಂತಹ ಚಾಲೆಂಜ್‌ಗಳನ್ನು ಸ್ವೀಕರಿಸುತ್ತಿರುತ್ತಾನೆ. ಜೊತೆಗೆ ತನ್ನ ಸುತ್ತಮುತ್ತ ಇರುವ ಇಂತಹ ಚಾಲೆಂಜ್‌ಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಮೂಲಕ ಜನರು ತಿನ್ನಬಹುದು ಮತ್ತು ಹಣವನ್ನು ಗೆಲ್ಲಬಹುದು ಎಂದು ತೋರಿಸುಕೊಡುತ್ತಾನೆ.

21 ಪ್ಲೇಟ್ ಚೋಲೆ ಕುಲ್ಚೆ ತಿಂದು ಬುಲೆಟ್ ಬೈಕ್ ಗೆದ್ದ ಯುವಕ: ಆದ್ರೆ ಬಹುಮಾನ ಕೈಬಿಟ್ಟ, ಕಾರಣ ಇಲ್ಲಿದೆ!

ಈ ವ್ಲಾಗರ್ ದೆಹಲಿಯ ಚೋಲೆ ಕುಲ್ಚಾ ರೆಸ್ಟೋರೆಂಟ್ ಅನ್ನು ಈ ಹಿಂದೆ ಹಲವಾರು ಬಾರಿ ಕವರ್ ಮಾಡಿದ್ದಾನೆ. ಈ ರೆಸ್ಟಾರೆಂಟ್‌ನಲ್ಲಿ ತಮ್ಮ ಜನಪ್ರಿಯ ಆಹಾರ ಸವಾಲನ್ನು ಗೆದ್ದರೆ ಬಹುಮಾನದ ಹಣವನ್ನು ನೀಡುತ್ತಿದ್ದರು. ಇದಕ್ಕಾಗಿ ಒಬ್ಬ ವ್ಯಕ್ತಿ ಅರ್ಧ ಗಂಟೆಯೊಳಗೆ 21 ಪ್ಲೇಟ್ ಮಟರ್ ಕುಲ್ಚೆಯನ್ನು ತಿನ್ನಬೇಕಾಗಿರುತ್ತದೆ.

21 ಪ್ಲೇಟ್ ಚೋಲೆ ಕುಲ್ಚೆ ತಿಂದು ಬುಲೆಟ್ ಬೈಕ್ ಗೆದ್ದ ಯುವಕ: ಆದ್ರೆ ಬಹುಮಾನ ಕೈಬಿಟ್ಟ, ಕಾರಣ ಇಲ್ಲಿದೆ!

ನೀವು ಸವಾಲನ್ನು ಪೂರ್ಣಗೊಳಿಸಿದರೆ ರೆಸ್ಟೋರೆಂಟ್ ನಿಮಗೆ ರೂ. 50,000 ನಗದು ಬಹುಮಾನ ನೀಡುತ್ತದೆ. ಒಂದು ವೇಳೆ ಗೆಲ್ಲಲು ವಿಫಲವಾದರೆ ನೀವು ರೂ. 2,100 ಬಿಲ್ ಪಾವತಿಸಬೇಕಾಗುತ್ತದೆ. ಇದು ಇಲ್ಲಿನ ರೆಸ್ಟಾರೆಂಟ್‌ನ ಹಳೆಯ ಚಾಲೆಂಜ್ ಆಗಿತ್ತು.

21 ಪ್ಲೇಟ್ ಚೋಲೆ ಕುಲ್ಚೆ ತಿಂದು ಬುಲೆಟ್ ಬೈಕ್ ಗೆದ್ದ ಯುವಕ: ಆದ್ರೆ ಬಹುಮಾನ ಕೈಬಿಟ್ಟ, ಕಾರಣ ಇಲ್ಲಿದೆ!

ಈಗ ರೆಸ್ಟಾರೆಂಟ್‌ನವರು ಹೊಸ ಸವಾಲನ್ನು ಮುಂದಿಟ್ಟಿದ್ದು, ನಗದು ಬದಲಿಗೆ ಹೊಚ್ಚ ಹೊಸ ಬುಲೆಟ್ ಬೈಕ್ ಅನ್ನು ಗೆಲ್ಲಬಹುದಾಗಿದೆ. ಇದು ಸುಮಾರು 1.48 ಲಕ್ಷ ರೂ. ಮೌಲ್ಯದ ಬೈಕ್ ಆಗಿದ್ದು, ಈ ಚಾಲೆಂಜ್ ಸ್ವೀಕರಿಸಲು ಫುಡ್ ವ್ಲಾಗರ್ ಎರಡು ದಿನಗಳ ಕಾಲ ಊಟ ಮಾಡದೆ ಬರಿಹೊಟ್ಟೆಯಲ್ಲಿ ದಿನಕಳೆದಿದ್ದಾರೆ.

21 ಪ್ಲೇಟ್ ಚೋಲೆ ಕುಲ್ಚೆ ತಿಂದು ಬುಲೆಟ್ ಬೈಕ್ ಗೆದ್ದ ಯುವಕ: ಆದ್ರೆ ಬಹುಮಾನ ಕೈಬಿಟ್ಟ, ಕಾರಣ ಇಲ್ಲಿದೆ!

ಆತನ ಕ್ಯಾಮರಾದಲ್ಲಿ ಸವಾಲನ್ನು ಸ್ವೀಕರಿಸುವುದನ್ನು ಮತ್ತು ಚೋಲೆ ಕುಲ್ಚಾಗಳನ್ನು ತಿನ್ನುವ ವಿಡಿಯೋವನ್ನು ತನ್ನ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಈ ವಿಡಿಯೋವನ್ನು ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿಯೂ ಶೇರ್ ಮಾಡಿದ್ದು, ವಿಡಿಯೋ ಸಖತ್ ವೈರಲ್ ಆಗಿ 12 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

21 ಪ್ಲೇಟ್ ಚೋಲೆ ಕುಲ್ಚೆ ತಿಂದು ಬುಲೆಟ್ ಬೈಕ್ ಗೆದ್ದ ಯುವಕ: ಆದ್ರೆ ಬಹುಮಾನ ಕೈಬಿಟ್ಟ, ಕಾರಣ ಇಲ್ಲಿದೆ!

ಚಾಲೆಂಜ್ ಸ್ವೀಕರಿಸಿ ಮುಗಿಸಲು ಪರದಾಟ

ಆತನಿಗೆ ನೀಡಿದ್ದ 21 ಪ್ಲೇಟ್ ಮಟರ್ ಕುಲ್ಚೆಯನ್ನು ಮುಗಿಸಲು 6-7 ಗ್ಲಾಸ್ ಲಸ್ಸಿಯನ್ನು ಕುಡಿದಿದ್ದಾನೆ. ವೀಡಿಯೋವನ್ನು ನೋಡುವಾಗ ಆತ ಹಲವು ಬಾರಿ ಸವಾಲನ್ನು ಕೈಬಿಡಲು ನಿರ್ಧರಿಸುವುದನ್ನು ಕಾಣಬಹುದು, ಆದರೆ ಕೊನೆಗೆ ಆತ ಎಲ್ಲಾ 21 ಪ್ಲೇಟ್‌ಗಳನ್ನು ತಿನ್ನುವಲ್ಲಿ ಯಶಸ್ವಿಯಾಗಿದ್ದಾನೆ.

21 ಪ್ಲೇಟ್ ಚೋಲೆ ಕುಲ್ಚೆ ತಿಂದು ಬುಲೆಟ್ ಬೈಕ್ ಗೆದ್ದ ಯುವಕ: ಆದ್ರೆ ಬಹುಮಾನ ಕೈಬಿಟ್ಟ, ಕಾರಣ ಇಲ್ಲಿದೆ!

ಮಟರ್ ಕುಲ್ಚೆಯನ್ನು ತಿನ್ನುತ್ತಾ ಜೀರ್ಣಿಸಿಕೊಳ್ಳಲು ವ್ಯಾಯಾಮ ಮಾಡುವುದನ್ನು ಸಹ ವಿಡಿಯೋದಲ್ಲಿ ನೋಡಬಹುದು. ಸವಾಲನ್ನು ಗೆದ್ದ ನಂತರ, ವ್ಲಾಗರ್ ರೆಸ್ಟಾರೆಂಟ್ ಓನರ್ ಬಳಿ ಮಾತನಾಡಿ, ಚಾಲೆಂಜ್ ಅನ್ನು ಪೂರ್ಣಗೊಳಿಸುವ ಎಲ್ಲರಿಗೂ ಬುಲೆಟ್ ಬೈಕ್ ಸಿಗಬಹುದೇ ಎಂದು ಮಾಲೀಕರನ್ನು ಕೇಳುತ್ತಾನೆ. ಇದಕ್ಕೆ ಉತ್ತರಿಸಿದ ಮಾಲೀಕ ಇಲ್ಲ ಎಂದಿದ್ದಾನೆ.

21 ಪ್ಲೇಟ್ ಚೋಲೆ ಕುಲ್ಚೆ ತಿಂದು ಬುಲೆಟ್ ಬೈಕ್ ಗೆದ್ದ ಯುವಕ: ಆದ್ರೆ ಬಹುಮಾನ ಕೈಬಿಟ್ಟ, ಕಾರಣ ಇಲ್ಲಿದೆ!

ಇದರಿಂದ ತುಸು ಬೇಜಾರಾದ ವ್ಲಾಗರ್, ರೆಸ್ಟೋರೆಂಟ್‌ನಲ್ಲಿ ಭವಿಷ್ಯದ ಸವಾಲುಗಳಲ್ಲಿ ಇತರ ನಗದು ಬಹುಮಾನಗಳು ಎಷ್ಟೋ ಬರುತ್ತವೆ. ಆದರೆ ಬುಲೆಟ್ ಚಾಲೆಂಜ್ ಒಂದೇ ಇರುವ ಕಾರಣ ಇದನ್ನು ಪಡಿಯಲು ನಾನು ನಿರಾಕರಿಸುತ್ತಿದ್ದೇನೆ ಎಂದು ಹೇಳಿ ಬೈಕ್‌ನ ಕೀಗಳನ್ನು ಮಾಲೀಕರಿಗೆ ಹಿಂತಿರುಗಿಸಿದ್ದಾನೆ.

21 ಪ್ಲೇಟ್ ಚೋಲೆ ಕುಲ್ಚೆ ತಿಂದು ಬುಲೆಟ್ ಬೈಕ್ ಗೆದ್ದ ಯುವಕ: ಆದ್ರೆ ಬಹುಮಾನ ಕೈಬಿಟ್ಟ, ಕಾರಣ ಇಲ್ಲಿದೆ!

ತನ್ನ ಸಬ್‌ಸ್ಕ್ರೈಬರ್‌ಗಳಲ್ಲಿ ಯಾರಾದರೂ ಒಬ್ಬರು ಬಂದು ಈ ಸವಾಲನ್ನು ಸ್ವೀಕರಿಸಿ ಬೈಕನ್ನು ಗೆದ್ದುಕೊಳ್ಳಿ ಎಂದು ಹೇಳಿದ್ದಾನೆ. ಇದು ಮಾಲೀಕರಿಗೆ ತುಂಬಾ ಸಂತೋಷವನ್ನುಂಟುಮಾಡಿದ್ದು, ಅವರು ವ್ಲಾಗರ್‌ಗೆ ಧನ್ಯವಾದ ಹೇಳಿ ತಬ್ಬಿಕೊಂಡು ಪ್ರಶಂಸಿದ್ದಾರೆ. ಈ ವ್ಲಾಗರ್ ಇದೊಂದೆ ಅಲ್ಲದೇ ನಿತ್ಯ ಇಂತಹ ಚಾಲೆಂಜ್‌ಗಳನ್ನು ಅನ್ವೇಶಿಸಿ ಸವಾಲುಗಳನ್ನು ಸ್ವೀಕರಿಸಿ ತನ್ನ ಚಾನಲ್‌ಗೆ ಅಪ್‌ಲೋಡ್ ಮಾಡುತ್ತಾನೆ.

21 ಪ್ಲೇಟ್ ಚೋಲೆ ಕುಲ್ಚೆ ತಿಂದು ಬುಲೆಟ್ ಬೈಕ್ ಗೆದ್ದ ಯುವಕ: ಆದ್ರೆ ಬಹುಮಾನ ಕೈಬಿಟ್ಟ, ಕಾರಣ ಇಲ್ಲಿದೆ!

ಈ ಚಾಲೆಂಜ್ ಎಲ್ಲಿ ಸ್ವೀಕರಿಸಬಹುದು?

ವಿಡಿಯೋದಲ್ಲಿ ಕಂಡುಬರುವ ಚೋಲೆ ಕುಲ್ಚಾ ಸ್ಥಳವನ್ನು ಹರಿ ಓಂಕೆ ಎಸ್‌ಪಿಎಲ್ ಚೋಲೆ ಕುಲ್ಚೆ ಎಂದು ಕರೆಯಲಾಗುತ್ತದೆ. ಇದು ದೆಹಲಿಯ ಮಯೂರ್ ವಿಹಾರ್ ಹಂತ-1ರ ಪ್ರದೇಶದಲ್ಲಿದೆ. ನೀವು ಆಚಾರ್ಯ ನಿಕೇತನ ಮಾರುಕಟ್ಟೆಯಲ್ಲಿ ಬನ್ಸಾಲ್ ಸ್ವೀಟ್ಸ್ ಎದುರು ಈ ಅಂಗಡಿಯನ್ನು ಕಾಣಬಹುದು.

21 ಪ್ಲೇಟ್ ಚೋಲೆ ಕುಲ್ಚೆ ತಿಂದು ಬುಲೆಟ್ ಬೈಕ್ ಗೆದ್ದ ಯುವಕ: ಆದ್ರೆ ಬಹುಮಾನ ಕೈಬಿಟ್ಟ, ಕಾರಣ ಇಲ್ಲಿದೆ!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

21 ಪ್ಲೇಟ್ ಮಟರ್ ಕುಲ್ಚೆಯನ್ನು ತಿನ್ನುವುದು ಅಷ್ಟು ಸುಲಭವಲ್ಲ. ಆದರೆ ಮನಸ್ಸು ಮಾಡಿದಿರೆ ಏನನ್ನು ಬೇಕಾದರು ಸಾಧಿಸಿಬಹುದು ಎಂದು "ಆರ್‌ ಯು ಹಂಗ್ರಿ" ಯೂಟ್ಯೂಬ್ ಚಾನಲ್‌ನ ರಜನೀಶ್ ಜ್ಞಾನಿ ತೋರಿಸಿಕೊಟ್ಟಿದ್ದಾನೆ. ಚಾಲೆಂಜ್ ಗೆದ್ದರೂ ತನ್ನ ಸಬ್‌ಸ್ಕ್ರೈಬರ್‌ಗಳಿಗಾಗಿ ಬೈಕ್ ಅನ್ನು ಅಲ್ಲೇ ಉಳಿಸಿಬಂದು ಪ್ರಶಂಸೆಗೆ ಪಾತ್ರವಾಗಿದ್ದಾನೆ. ಸದ್ಯ ಈತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿ ವಿಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

Most Read Articles

Kannada
English summary
A young man who ate 21 plates of chole kulche and won a bullet bike
Story first published: Monday, August 29, 2022, 16:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X