ಸರ್ವಿಸ್‌ ಸೆಂಟರ್‌ನಲ್ಲಿ ಅಪಘಾತ: ಹಠ ಬಿಡದೇ ಹೊಸ 'ಕಿಯಾ ಸೊನೆಟ್' ಧಕ್ಕಿಸಿಕೊಂಡ ಮಾಲೀಕ

ಸರ್ವಿಸ್‌ ಸೆಂಟರ್‌ನ ಸಿಬ್ಬಂದಿ ಮಾಡಿದ್ದ ಅಪಘಾತದಿಂದ ಸಂಕಷ್ಟಕ್ಕೆ ಸಿಲುಕಿದ್ದ 'ಕಿಯಾ ಸೊನೆಟ್' ಕಾರು ಮಾಲೀಕ ಕೊನೆಗೂ ಖುಷಿಯಾಗಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ 'ರಾಜೇಶ್ ಕಿಯಾ ಮೋಟಾರ್ಸ್' ಅಧಿಕೃತ ಕಾರ್ ಡೀಲರ್‌ಶಿಪ್‌ನಲ್ಲಿ ಸರ್ವಿಸ್ ಮಾಡಲು ಕಾರನ್ನು ಬಿಟ್ಟುಹೋಗಿದ್ದರು. ಕಾರು ಅಪಘಾತವಾಗಿ ಅಲ್ಲಿನ ಸಿಬ್ಬಂದಿ ಹಾಗೂ ಕಾರಿನ ಮಾಲೀಕರ ಜೊತೆ ಜಗಳ ನಡೆದಿತ್ತು.

ಜಲಜ್ ಅಗರ್ವಾಲ್ ಎಂಬಾತ ತಮ್ಮ ಒಂದು ವರ್ಷಕ್ಕಿಂತ ಹಳೆಯ 'ಕಿಯಾ ಸೊನೆಟ್' SUVಯನ್ನು ಸಮೀಪದ ಅಧಿಕೃತ ಡೀಲರ್‌ಶಿಪ್‌ನಲ್ಲಿ ಸರ್ವಿಸ್‌ ಮಾಡಲು ಬಿಟ್ಟಿದ್ದರು. 6 ದಿನಗಳ ನಂತರ ಅಲ್ಲಿನ ಸಿಬ್ಬಂದಿ ಹಸುವಿಗೆ ಡಿಕ್ಕಿ ಹೊಡೆದಿದ್ದರಿಂದ ಕಾರಿನ ಹಾನಿಯಾಗದೆ ಎಂದು ಹೇಳಿದ್ದರು. ಆ ಬಳಿಕ ವರಸೆ ಬದಲಾಯಿಸಿದ್ದು, ಕಾರ್ ಕ್ಲೀನರ್ ವಾಹನ ಚಲಾಯಿಸಿಕೊಂಡು ಹೋಗಿ, ಸರ್ವೀಸ್ ಸೆಂಟರ್ ಗೋಡೆಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದರು. ನಡೆದ ಘಟನೆಯನ್ನು ಕಾರಿನ ಮಾಲೀಕ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.

ಸರ್ವಿಸ್‌ ಸೆಂಟರ್‌ನಲ್ಲಿ ಅಪಘಾತ: ಹಠ ಬಿಡದೇ ಹೊಸ ಕಿಯಾ ಸೊನೆಟ್ ಧಕ್ಕಿಸಿಕೊಂಡ ಮಾಲೀಕ

ಕಾರಿನ ಮಾಲೀಕ ಅಗರ್ವಾಲ್ ಮತ್ತು'ರಾಜೇಶ್ ಕಿಯಾ ಮೋಟಾರ್ಸ್' ನಡುವೆ ನಡೆದ ವಾದ-ವಿವಾದದ ಬಳಿಕ ಡೀಲರ್‌ಶಿಪ್, ಅಂತಿಮವಾಗಿ ಹೊಚ್ಚ ಹೊಸ 'ಕಿಯಾ ಸೋನೆಟ್' ಕಾರನ್ನು ಮಾಲೀಕನಿಗೆ ನೀಡಲು ಒಪ್ಪಿಕೊಂಡಿದೆ. ಇದರಿಂದ ಮಾಲೀಕರಿಗೆ ಖುಷಿಯಾಗಿದೆ. ಡೀಲರ್‌ಶಿಪ್‌ಗಳು ಸಾಮಾನ್ಯವಾಗಿ ಕಾರನ್ನು ಸರಿಪಡಿಸುತ್ತೇವೆ ಎಂದು ಮಾತ್ರ ಹೇಳುತ್ತಾರೆ. ಆದರೆ, ಎಂದಿಗೂ ಬದಲಾಯಿಸುವುದಿಲ್ಲ. ಸದ್ಯ ಹೊಸ ಕಿಯಾ ಕಾರನ್ನು ಗ್ರಾಹಕರಿಗೆ ನೀಡುತ್ತಿರುವುದರಿಂದ ವಿವಾದ ಇತ್ಯರ್ಥವಾಗಿದೆ.

ಈ ಘಟನೆಯಲ್ಲಿ ಹಸುವಿಗೆ ಡಿಕ್ಕಿ ಹೊಡೆದು ಅಪಘಾತವಾಗಿದೆ ಎಂದು ಸರ್ವಿಸ್‌ ಸೆಂಟರ್‌ ಸಿಬ್ಬಂದಿ ಹೇಳಿದ್ದರು. ಆದರೆ, ಬಂಪರ್, ಹೆಡ್‌ಲೈಟ್‌ಗಳು, ರೇಡಿಯೇಟರ್, ಬಾನೆಟ್, ಫ್ರಂಟ್ ಕ್ರ್ಯಾಶ್ ಬೀಮ್ ಮತ್ತು ಇತರೆ ಘಟಕಗಳಿಗೆ ಸೇರಿ ಕಾರಿನ ಮುಂಭಾಗಕ್ಕೆ ಸಾಕಷ್ಟು ಹಾನಿಯಾಗಿದೆ. ಇದರಿಂದ ಅನುಮಾನಗೊಂಡ ಕಾರಿನ ಮಾಲೀಕ ವಿಚಾರಿಸಿದಾಗ ಸಿಬ್ಬಂದಿಯ ಅಜಾಗರೂಕತೆಯಿಂದ ಗೋಡೆಗೆ ಡಿಕ್ಕಿಯಾಗಿರುವುದು ಗೊತ್ತಾಗಿದೆ. ಅದರಲ್ಲೂ ಅವರದ್ದೇ ತಪ್ಪಿದ್ದರು ಕಾರನ್ನು ರಿಪೇರಿ ಮಾಡಲು ವಿಮೆಯನ್ನು ಕ್ಲೈಮ್ ಮಾಡುವಂತೆ ಅಗರ್ವಾಲ್ ಅವರಿಗೆ ಅಲ್ಲಿನ ಸಿಬ್ಬಂದಿ ಕೇಳಿದ್ದರು.

ಇದರಿಂದ ಕೋಪಗೊಂಡಿದ್ದ ಕಾರಿನ ಮಾಲೀಕರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಭರಿತರಾಗಿ ಪೋಸ್ಟ್ ಮಾಡಿದ್ದರು. ಈ ನಡುವೆ ಕಾರನ್ನು ವಾಪಸ್ ನೀಡುತ್ತೇವೆ ಎಂದು ಹೇಳಿದ್ದ ಸಿಬ್ಬಂದಿ ಕೊನೆಗೂ ಮಾತನ್ನು ಉಳಿಸಿಕೊಂಡಿದ್ದಾರೆ. ಇಂತಹ ಘಟನೆಗಳನ್ನು ಸುಲಭವಾಗಿ ಎಂದುರಿಸಬಹುದು ಎಂಬುದು ಮುಖ್ಯವಾಗುವುದಿಲ್ಲ. ಈ ಘಟನೆ ಸರ್ವಿಸ್‌ ಸೆಂಟರ್‌ ಸಿಬ್ಬಂದಿಯಿಂದ ನಡೆದಿದ್ದು, ಹಸುವನ್ನು ಮಧ್ಯೆ ತಂದು ಘಟನೆಯನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ, ತಮ್ಮ ತಪ್ಪಿಗೆ ಗ್ರಾಹಕನಿಗೆ ವಿಮಾ ಹಣ ಕ್ಲೈಮ್ ಮಾಡಲು ಕೇಳಿದ್ದಾರೆ.

ಸರ್ವಿಸ್‌ ಸೆಂಟರ್‌ ಸಿಬ್ಬಂದಿ ಗ್ರಾಹಕರ ವಾಹನಗಳಲ್ಲಿ ಜಾಯ್‌ರೈಡ್‌ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. 'ಒಮ್ಮೆ ನನ್ನ ಕಾರನ್ನು ನಾನು ಬಿಟ್ಟಿದ್ದ ಸರ್ವೀಸ್ ಸೆಂಟರ್‌ನಿಂದ 10 ಕಿ.ಮೀ ದೂರದಲ್ಲಿ ನೋಡಿದೆ. ಅಲ್ಲಿನ ಸಿಬ್ಬಂದಿ ಊಟ ಮಾಡಿ ಬರಲು ಮನೆಗೆ ತೆಗೆದುಕೊಂಡು ಹೋಗಿದ್ದರು. ಜೊತೆಗೆ ಅವರ ಸಂಬಂಧಿಕರೊಬ್ಬರನ್ನು ಬಸ್ ನಿಲ್ದಾಣಕ್ಕೆ ಬಿಟ್ಟುಬರಲು ಬಳಸಿದ್ದರು ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಅಂತಹ ಸಂಧರ್ಭದಲ್ಲಿ ವಾಹನಗಳಿಗೆ ಹಾನಿಯಾದರೆ ಯಾರು ಹೊಣೆ ಎಂಬುದು ಪ್ರಶ್ನೆಯಾಗಿದೆ.

ಭಾರತದಲ್ಲಿ ಕೆಟ್ಟ ಉತ್ಪನ್ನ ಹಾಗೂ ಅವುಗಳಿಂದ ಆಗುವ ಸಮಸ್ಯೆಗಳಿಂದ ಗ್ರಾಹಕರನ್ನು ರಕ್ಷಿಸಲು ಯಾವುದೇ ಕಾನೂನುಗಳಿಲ್ಲ. ಗ್ರಾಹಕರು ದೂರು ಸಲ್ಲಿಸಬಹುದಾದ ಗ್ರಾಹಕ ನ್ಯಾಯಾಲಯಗಳಿದ್ದರೂ, ವಾಹನವನ್ನು ಹೊಸದರೊಂದಿಗೆ ಬದಲಾಯಿಸಿ ಕೊಡಲು ತಯಾರಕರಿಗೆ ನಿರ್ದೇಶಿಸುವ ಕಾನೂನು ಇಲ್ಲ. ಆದರೆ, ಈ ಘಟನೆಯಲ್ಲಿ ಮಾತ್ರ ಕಾರು ಮಾಲೀಕರು ಯಶಸ್ವಿಯಾಗಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇಂತಹ ಕಾನೂನುಗಳಿದ್ದು, ಯಾವುದೇ ಕಾರು ಹಾಗೂ ಬೈಕ್ ದೋಷಯುಕ್ತವೆಂದು ಕಂಡುಬಂದರೆ ತಕ್ಷಣ ಬದಲಾಯಿಸಬೇಕು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Accident at the service center the owner of the new kia sonet crashed without giving up
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X