Bengaluru: ಅಪಘಾತದಲ್ಲಿ ನಂ.1.. ಕುಖ್ಯಾತಿಗೆ ಪಾತ್ರವಾದ ಬೆಂಗಳೂರು ಮಹಾನಗರ!

ಬೆಂಗಳೂರು (Bengaluru) ಮಹಾನಗರದಲ್ಲಿ ಸಂಚಾರ ದಟ್ಟಣೆ ಎಂಬುದು ಬಹುದೊಡ್ಡ ಸಮಸ್ಯೆಯಾಗಿದ್ದು, ಇದು ವಾಹನ ಸವಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸದ್ಯ ನಗರವು ಆಕ್ಸಿಡೆಂಟ್ ಹಾಟ್​ಸ್ಪಾಟ್ ಆಗಿದ್ದು, ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. 'ವಾಹನ ಅಪಘಾತ ಸೂಚ್ಯಂಕ' ವರದಿಯಲ್ಲಿ ದೇಶದ ಇತರೆ ಪ್ರಮುಖ ನಗರಗಳಾದ ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ವಾಣಿಜ್ಯ ನಗರಿ ಮುಂಬೈಗೆ ಹೋಲಿಸಿದರೆ, ಬೆಂಗಳೂರು ಅಗ್ರ ಸ್ಥಾನದಲ್ಲಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಬೆಂಗಳೂರಿನಲ್ಲಿ ಶೇಕಡ 44.8% ಅಪಘಾತಗಳು ದಾಖಲಾಗಿವೆ. ದೆಹಲಿಯಲ್ಲಿ ಶೇಕಡ 13.3% ಮತ್ತು ಮುಂಬೈ ಮಹಾನಗರದಲ್ಲಿ ಶೇಕಡ 12.3% ಅಪಘಾತಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಪರಿಣಾಮ ಬಹುತೇಕ ಅಪಘಾತಗಳು ಸಂಭವಿಸಿವೆ. ಹೆಚ್ಚಿನ ಅಪಘಾತಗಳು ದಾಖಲಾಗುತ್ತಿರುವ ಹಿನ್ನೆಲೆ, ಬೊಮ್ಮನಹಳ್ಳಿಯನ್ನು 'ಹೈ-ರಿಸ್ಕ್ ಝೋನ್' ಎಂದು ಗುರುತಿಸಲಾಗಿದೆ.

Accident Index Bengaluru On Top Overtaking Delhi And Mumbai

ನಗರದಲ್ಲಿ ಕುಡಿದು ವಾಹನಗಳನ್ನು ಚಲಾಯಿಸುವುದು ಹಾಗೂ ಸಂಚಾರಿ ನಿಯಮಗಳ ಉಲ್ಲಂಘನೆಯಿಂದ ಸಾಕಷ್ಟು ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಬೀದಿ ನಾಯಿಗಳು ಹಾಗೂ ದನ - ಕರುಗಳು ಕೂಡ ಅಪಘಾತಕ್ಕೆ ಕಾರಣವಾಗಿವೆ. ಬೀದಿ ನಾಯಿಗಳಿಂದ ಶೇಕಡ 62% ಮತ್ತು ಬಿಡಾಡಿ ದನಗಳಿಂದ ಶೇಕಡ 29% ಅಪಘಾತವಾಗಿವೆ.

ಈ ಹಿಂದೆ, 2003 ರಲ್ಲಿ ಕರ್ನಾಟಕದಲ್ಲಿ ಒಟ್ಟು 43,440 ಅಪಘಾತಗಳು ಸಂಭವಿಸಿದ್ದವು. ಸರಿ ಸುಮಾರು 12,327 ಮಂದಿ ಮೃತಪಟ್ಟಿದ್ದರು. 52,531 ಜನರು ಗಾಯಕೊಂಡಿದ್ದರು. ಬೆಂಗಳೂರಿನಲ್ಲಿ ಗರಿಷ್ಠ ಸಂಖ್ಯೆಯ 4,974 ಅಪಘಾತ ಪ್ರಕರಣಗಳು ದಾಖಲಾಗಿದ್ದವು. 915 ಜನರು ಸಾವನ್ನಪ್ಪಿದ್ದರು. 4,164 ಮಂದಿಗೆ ಗಾಯಗಳಾಗಿದ್ದವು.

ತುಮಕೂರು ಜಿಲ್ಲೆಯಲ್ಲಿ 2,601 ಅಪಘಾತಗಳಾಗಿತ್ತು. 783 ಜನರು ಮೃತಪಟ್ಟಿದ್ದರು. 2895 ಮಂದಿ ಗಾಯಗೊಂಡಿದ್ದರು. ಮಂಡ್ಯ ಜಿಲ್ಲೆಯಲ್ಲಿ 2,160 ಅಪಘಾತಗಳು ವರದಿಯಾಗಿತ್ತು. 515 ಮಂದಿ ಮಂದಿ ಸಾವನ್ನಪ್ಪಿದ್ದರು. 2,620 ಜನರು ಗಾಯಾಳುಗಳಾಗಿದ್ದರು. ಹಾಸನ ಜಿಲ್ಲೆಯಲ್ಲಿ 2,138 ಅಪಘಾತಗಳು ದಾಖಲಾಗಿತ್ತು. ಒಟ್ಟು 502 ಜನರು ಮೃತಪಟ್ಟಿದ್ದರು. 2,272 ಮಂದಿಗೆ ಗಾಯಗಳಾಗಿದ್ದವು.

ಅಪಘಾತ ತಪ್ಪಿಸಲು ನಾವು ಏನು ಮಾಡಬೇಕು: ನಿಮ್ಮ ವಾಹನಗಳನ್ನು ನಿರ್ದಿಷ್ಟ ವೇಗ ಮಿತಿಯಲ್ಲಿ ಚಲಾಯಿಸಿರಿ. ಹೆದ್ದಾರಿಯಲ್ಲಿ ಸರಿಯಾದ ಪಥದಲ್ಲಿ ವಾಹನಗಳನ್ನು ಓಡಿಸಿರಿ. ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡಿ. ದ್ವಿಚಕ್ರ ಹಾಗೂ ಕಾರುಗಳನ್ನು ಚಲಾಯಿಸುವಾಗ ಹೆಲ್ಮೆಟ್, ಸೀಟ್ ಬೆಲ್ಟ್ ಸೇರಿದಂತೆ ಸುರಕ್ಷತಾ ಉಪಕರಣಗಳನ್ನು ತಪ್ಪದೇ ಬಳಕೆ ಮಾಡಿರಿ.

ಮದ್ಯಪಾನ ಮಾಡಿ ಯಾವತ್ತು ವಾಹನಗಳನ್ನು ಚಲಾಯಿಸಬೇಡಿ. ಇದರಿಂದ ನಿಮ್ಮ ಸಂಪೂರ್ಣವಾದ ಗಮನವನ್ನು ರಸ್ತೆ ಮೇಲೆ ಕೇಂದ್ರೀಕರಿಸಲು ಸಾದ್ಯವಾಗುವುಲ್ಲ. ವಾಹನಗಳನ್ನು ಓಡಿಸುವಾಗ ಮೊಬೈಲ್ ಫೋನ್ ಅಥವಾ ಇಯರ್ ಫೋನ್ ಅನ್ನು ಎಂದಿಗೂ ಉಪಯೋಗ ಮಾಡಬೇಡಿ. ಈ ಮೂಲಕ ಸಂಭಾವ್ಯ ಅಪಘಾತವನ್ನು ಸುಲಭವಾಗಿ ತಪ್ಪಿಸಬಹುದು.

ಒಟ್ಟಾರೆ, ಬೆಂಗಳೂರಿನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಉತ್ತಮವಾದ ಬೆಳವಣಿಗೆ ಅಲ್ಲ. ವಾಹನ ಸವಾರರು ಕೂಡ ಎಚ್ಚರಿಕೆಯಿಂದ ಬೈಕ್ ಅಥವಾ ಕಾರುಗಳನ್ನು ಚಲಾಯಿಸಬೇಕು. ಸಂಬಂಧಪಟ್ಟ ಇಲಾಖೆಗಳು ರಸ್ತೆ ಗುಂಡಿ ಮುಚ್ಚುವ ಕೆಲಸವನ್ನು ತ್ವರಿತವಾಗಿ ಮಾಡಬೇಕು. ಜೊತೆಗೆ ಜಾನುವಾರುಗಳು ರಸ್ತೆಗೆ ಬರದಂತೆ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, December 6, 2024, 12:36 [IST]
English summary
Accident index bengaluru on top overtaking delhi and mumbai
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+