ಟೋಲ್ ಪ್ಲಾಜಾ ಸಿಬ್ಬಂದಿಗೆ ಹೊಡೆದ ಆರೋಪ: ಗ್ರೇಟ್ ಖಲಿಯ ಜಗಳದ ವಿಡಿಯೋ ವೈರಲ್

ಪಂಜಾಬ್‌ನ ಲುಧಿಯಾನದ ಟೋಲ್ ಪ್ಲಾಜಾದ ಸಿಬ್ಬಂದಿ ಮತ್ತು 'ದಿ ಗ್ರೇಟ್ ಖಲಿ' ಎಂದು ಜನಪ್ರಿಯವಾಗಿರುವ ಮಾಜಿ WWE ಕುಸ್ತಿಪಟು ದಲೀಪ್ ಸಿಂಗ್ ರಾಣಾ ನಡುವಿನ ಜಗಳದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟೋಲ್ ಪ್ಲಾಜಾ ಸಿಬ್ಬಂದಿಗೆ ಹೊಡೆದ ಆರೋಪ: ಗ್ರೇಟ್ ಖಲಿಯ ಜಗಳದ ವಿಡಿಯೋ ವೈರಲ್

ತಮ್ಮೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ನಿರಾಕರಿಸಿದ್ದಕ್ಕೆ ಟೋಲ್ ಪ್ಲಾಜಾ ಸಿಬ್ಬಂದಿ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೇ ನನ್ನೊಂದಿಗೆ ಜಗಳಕ್ಕಿಳಿದು ಅದನ್ನು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ ಎಂದು ಲುಧಿಯಾನ ಪೊಲೀಸ್ ಆಯುಕ್ತರಿಗೆ WWE ಮಾಜಿ ಕುಸ್ತಿಪಟು ಗ್ರೇಟ್ ಖಲಿ ದೂರು ನೀಡಿದ್ದಾರೆ.

ಖಲಿ ಅವರು ಕಳೆದ ಸೋಮವಾರ ತನ್ನ ಕಾರಿನಲ್ಲಿ ಲುಧಿಯಾನ ಮೂಲಕ ಕರ್ನಾಲ್‌ಗೆ ಪ್ರಯಾಣಿಸುತ್ತಿದ್ದಾಗ ಪಾಣಿಪತ್-ಜಲಂಧರ್ ರಾಷ್ಟ್ರೀಯ ಹೆದ್ದಾರಿಯ ಲಾಧೋವಲ್‌ನಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ಸೆರೆಯಾದ ದೃಷ್ಯಾವಳಿಗಳ ಪ್ರಕಾರ, ಖಲಿ ಅವರ ಐಡಿ ಕಾರ್ಡ್ ಕೇಳಿದಾಗ ತಮ್ಮ ಸಹೋದ್ಯೋಗಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಟೋಲ್ ಪ್ಲಾಜಾ ಸಿಬ್ಬಂದಿ ಆರೋಪಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಟೋಲ್ ಪ್ಲಾಜಾ ಸಿಬ್ಬಂದಿಗೆ ಹೊಡೆದ ಆರೋಪ: ಗ್ರೇಟ್ ಖಲಿಯ ಜಗಳದ ವಿಡಿಯೋ ವೈರಲ್

ಇದೇ ವೇಳೆ ಖಲಿ ಅವರು ಕೂಡ ಐಡಿ ಕಾರ್ಡ್ ಹೊಂದಿಲ್ಲವೆಂದು ಆರೋಪಿಸಿ ತನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಸಿಬ್ಬಂದಿಗೆ ಹೇಳುವುದನ್ನು ಕಾಣಬಹುದು. ವಾಹನದೊಳಗಿದ್ದ ಖಲಿ, ಟೋಲ್ ಬ್ಯಾರಿಯರ್ ಅನ್ನು ತೆರೆಯುವಂತೆ ಸಿಬ್ಬಂದಿಗೆ ಹೇಳಿದರೂ ಅವರು ನಿರಾಕರಿಸುತ್ತಿದ್ದು, ಖಲಿ ಒತ್ತಾಯಿಸುತ್ತಲೇ ಇರುವ ವೇಳೆ ಜಗಳ ದೊಡ್ಡದಾಗಿದೆ.

ಟೋಲ್ ಪ್ಲಾಜಾ ಸಿಬ್ಬಂದಿಗೆ ಹೊಡೆದ ಆರೋಪ: ಗ್ರೇಟ್ ಖಲಿಯ ಜಗಳದ ವಿಡಿಯೋ ವೈರಲ್

ಇದೇ ವೇಳೆ ಸಿಬ್ಬಂದಿಯಲ್ಲಿ ಒಬ್ಬರು, ನಾವು ನಿಮ್ಮನ್ನು ಶೂಗಳಿಂದ ಥಳಿಸುತ್ತೇವೆ ಎಂದು ಹೇಳಿದಾಗ ಖಲಿಯವರು ಕೆರಳಿ ಕಾರಿನಿಂದ ಕೆಳಗಿಳಿಯುತ್ತಾರೆ. ಐಡಿ ಕಾರ್ಡ್ ಕೇಳಿದ್ದಕ್ಕೆ ನೌಕರನಿಗೆ ಕಪಾಳಮೋಕ್ಷ ಮಾಡ್ತೀಯ ಎಂದು ಸಿಬ್ಬಂದಿ ಪ್ರಶ್ನಿಸುತ್ತಾರೆ. ಆದರೆ ಸಿಬ್ಬಂದಿ ತನ್ನನ್ನು 'ಬ್ಲಾಕ್‌ಮೇಲ್' ಮಾಡುತ್ತಿದ್ದಾರೆ ಎಂದು ಖಲಿ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು.

ಟೋಲ್ ಪ್ಲಾಜಾ ಸಿಬ್ಬಂದಿಗೆ ಹೊಡೆದ ಆರೋಪ: ಗ್ರೇಟ್ ಖಲಿಯ ಜಗಳದ ವಿಡಿಯೋ ವೈರಲ್

ಘಟನೆ ಬಳಿಕ ದಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಖಲಿ, ಟೋಲ್ ಪ್ಲಾಜಾ ಸಿಬ್ಬಂದಿ ತಮ್ಮೊಂದಿಗೆ ಫೋಟೋಗಳಿಗಾಗಿ ಬಲವಂತ ಮಾಡಿದಾಗ ಜಗಳ ಪ್ರಾರಂಭವಾಯಿತು. ಅವರು ನಯವಾಗಿ ವಿನಂತಿಸಿದ್ದರೆ ನಾನು ನಿರಾಕರಿಸುತ್ತಿರಲಿಲ್ಲ. ಆದರೆ ಅವರು ಅಸಭ್ಯವಾಗಿ ವರ್ತಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಹಾಗಾಗಿಯೇ ಅವರೆಲ್ಲರೊಂದಿಗೆ ಫೋಟೋ ಕ್ಲಿಕ್ಕಿಸಲು ಒಪ್ಪಲಿಲ್ಲ.

ಟೋಲ್ ಪ್ಲಾಜಾ ಸಿಬ್ಬಂದಿಗೆ ಹೊಡೆದ ಆರೋಪ: ಗ್ರೇಟ್ ಖಲಿಯ ಜಗಳದ ವಿಡಿಯೋ ವೈರಲ್

ಫೋಟೋ ತೆಗೆಸಿಕೊಳ್ಳದಿದ್ದರೇ ಟೋಲ್ ದಾಟಲು ಬಿಡುವುದಿಲ್ಲ ಎಂದಾಗ ಅವರಿಗೆ ಫೋಟೋ ನೀಡಲು ನಿರಾಕರಿಸಿದೆ, ಈ ವೇಳೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು ಎಂದು ಖಲಿ ತಿಳಿಸಿದರು.

ಟೋಲ್ ಪ್ಲಾಜಾ ಸಿಬ್ಬಂದಿಗೆ ಹೊಡೆದ ಆರೋಪ: ಗ್ರೇಟ್ ಖಲಿಯ ಜಗಳದ ವಿಡಿಯೋ ವೈರಲ್

ಸೆಲೆಬ್ರಿಟಿಯಾದ ಮಾತ್ರಕ್ಕೆ ಕಪಾಳಮೋಕ್ಷ ಮಾಡಬಹುದೇ?

ಖಲಿ ತಮ್ಮ ಉದ್ಯೋಗಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಸಿಬ್ಬಂದಿಯಿಂದ ವೀಡಿಯೊದಲ್ಲಿ ದಾಖಲಾದ ಆರೋಪಗಳನ್ನು ನಿರಾಕರಿಸಿದ ಅವರು, ನಾನೊಬ್ಬ ಸೆಲೆಬ್ರಿಟಿಯಾದ ಮಾತ್ರಕ್ಕೆ ಕಪಾಳಮೋಕ್ಷ ಮಾಡಬಹುದೇ? ಅವರು ನನ್ನೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ ನಂತರವೇ ನಾನು ಕಾರಿನಿಂದ ಇಳಿದು ಟೋಲ್ ಬ್ಯಾರಿಯರ್ ತೆಗೆಯುವಂತೆ ಕೇಳಿದೆ ಅಷ್ಟೇ ಎಂದರು.

ಟೋಲ್ ಪ್ಲಾಜಾ ಸಿಬ್ಬಂದಿಗೆ ಹೊಡೆದ ಆರೋಪ: ಗ್ರೇಟ್ ಖಲಿಯ ಜಗಳದ ವಿಡಿಯೋ ವೈರಲ್

ಟೋಲ್ ಪ್ಲಾಜಾ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಯೋಜಿಸುತ್ತಿದ್ದೇನೆ ಎಂದ ಅವರು, ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ ಕಾರಣ ಟೋಲ್ ಮೊತ್ತವನ್ನು ಪಾವತಿಸದೆ ಪ್ಲಾಜಾವನ್ನು ದಾಟಿರುವುದಾಗಿ ಖಲಿ ಹೇಳಿದರು. ಸಿಬ್ಬಂದಿ ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಳ್ಳದೇ ಇದ್ದಿದ್ದರೇ ಟೋಲ್ ಪಾವತಿಸಬಹುದಾಗಿತ್ತು. ಆದರೆ ಅವರು ನಡೆದುಕೊಂಡ ರೀತಿಗೆ ಬೇಸರವಾಗಿ ಟೋಲ್ ಪಾವತಿಸಲಿಲ್ಲ ಎಂದಿದ್ದಾರೆ.

ಟೋಲ್ ಪ್ಲಾಜಾ ಸಿಬ್ಬಂದಿಗೆ ಹೊಡೆದ ಆರೋಪ: ಗ್ರೇಟ್ ಖಲಿಯ ಜಗಳದ ವಿಡಿಯೋ ವೈರಲ್

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಯೋಜನಾ ನಿರ್ದೇಶಕ ವೀರೇಂದ್ರ ಸಿಂಗ್ ಮಾತನಾಡಿ, ಘಟನೆಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಟೋಲ್ ಸಂಗ್ರಹ ಪ್ರಕ್ರಿಯೆಯಲ್ಲಿ ಇಂತಹ ಸಣ್ಣಪುಟ್ಟ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ಅವರು ಹೇಳಿದರು.

ಟೋಲ್ ಪ್ಲಾಜಾ ಸಿಬ್ಬಂದಿಗೆ ಹೊಡೆದ ಆರೋಪ: ಗ್ರೇಟ್ ಖಲಿಯ ಜಗಳದ ವಿಡಿಯೋ ವೈರಲ್

ನಂತರ ಖಲಿ ಲುಧಿಯಾನ ಪೊಲೀಸ್ ಆಯುಕ್ತರಿಗೆ ಟೋಲ್ ಪ್ಲಾಜಾ ಸಿಬ್ಬಂದಿ ವಿರುದ್ಧ ಲಿಖಿತ ದೂರನ್ನು ಸಲ್ಲಿಸಿದರು. ತಮ್ಮೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ನಿರಾಕರಿಸಿದಕ್ಕೆ ಸಿಬ್ಬಂದಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದರು. ಅಲ್ಲದೇ ನಿಂದಿಸಿ ಜಗಳಕ್ಕಿಳಿದು ಅದನ್ನು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ ಎಂದು ಖಲಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಟೋಲ್ ಪ್ಲಾಜಾ ಸಿಬ್ಬಂದಿಗೆ ಹೊಡೆದ ಆರೋಪ: ಗ್ರೇಟ್ ಖಲಿಯ ಜಗಳದ ವಿಡಿಯೋ ವೈರಲ್

ಬಿಜೆಪಿ ಸೇರ್ಪಡೆ

ನವದೆಹಲಿಯಲ್ಲಿರುವ ಭಾರತೀಯ ಜನತಾ ಪಕ್ಷದ ಪ್ರಧಾನ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಜಿತೇಂದ್ರ ಸಿಂಗ್ ಹಾಗೂ ಬಿಜೆಪಿ ರಾಷ್ಟ್ರೀಯ ಮುಖಂಡರ ಸಮ್ಮುಖದಲ್ಲಿ ದಲೀಪ್ ಸಿಂಗ್ ರಾಣಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ಟೋಲ್ ಪ್ಲಾಜಾ ಸಿಬ್ಬಂದಿಗೆ ಹೊಡೆದ ಆರೋಪ: ಗ್ರೇಟ್ ಖಲಿಯ ಜಗಳದ ವಿಡಿಯೋ ವೈರಲ್

ಗ್ರೇಟ್ ಖಲಿ ವೃತ್ತಿಪರ ಕುಸ್ತಿಪಟು, ಕುಸ್ತಿ ಪ್ರಚಾರಕ ಮತ್ತು ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಖಲಿ ಪಂಜಾಬಿ ಹಿಂದೂ ರಜಪೂತ ಮತ್ತು ಹಿಮಾಚಲ ಪ್ರದೇಶದ ಸಿರ್ಮೌರ್‌ನ ಧಿರೈನಾವರು. ಅವರು ಶಿಮ್ಲಾದಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದಾಗ ಪೊಲೀಸ್ ಅಧಿಕಾರಿಯ ಗಮನಕ್ಕೆ ಬಂದಾಗ ಅವರನ್ನು ಪಂಜಾಬ್ ಪೋಲಿಸ್‌ಗೆ ಸೇರಿಸಲಾಯಿತು.

ಟೋಲ್ ಪ್ಲಾಜಾ ಸಿಬ್ಬಂದಿಗೆ ಹೊಡೆದ ಆರೋಪ: ಗ್ರೇಟ್ ಖಲಿಯ ಜಗಳದ ವಿಡಿಯೋ ವೈರಲ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

2006 ರಲ್ಲಿ ದಿ ಗ್ರೇಟ್ ಖಲಿ ಎಂಬ ಹೆಸರಿನಲ್ಲಿ ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್‌ಗೆ ಸೇರಿದ್ದ ಮೊದಲ ಭಾರತೀಯ ಕುಸ್ತಿಪಟು ಎಂಬ ಹೆಸರು ಗಳಿಸಿರುವ ದಲೀಪ್ ಸಿಂಗ್ ರಾಣಾ, ಇದೀಗ ಸಿಲುಕಿಕೊಂಡಿರುವ ವಿವಾದಕ್ಕೆ ಪೊಲೀಸರು ತೆರೆ ಎಳೆಯಲಿದ್ದಾರೆಯೇ ಕಾದುನೋಡಬೇಕಿದೆ.

Most Read Articles

Kannada
English summary
Accused of beating toll plaza staff Great Khali fight video goes viral
Story first published: Monday, July 18, 2022, 15:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X