ಸಾರ್ವಜನಿಕ ರಸ್ತೆಯಲ್ಲಿ ಏನೀ ಕೆಲಸ: ಕಾರಿಗೆ ಡಿಕ್ಕಿ, ಡ್ಯಾಷ್‌ಕ್ಯಾಮ್‌ನಲ್ಲಿ ವಿಡಿಯೋ ಸೆರೆ
ಈಗಿನ ಕಾಲದ ಯುವಕರು ವಾಹನ ಚಲಾಯಿಸುವಾಗ ರಸ್ತೆಯತ್ತ ನೋಡದೇ ಬೇರೆಡೆ ತಮ್ಮ ಗಮನಹರಿಸಿ ವಿಚಲಿತರಾಗುತ್ತಿದ್ದಾರೆ. ಈ ನಿರ್ಲಕ್ಷ್ಯದ ಪರಿಣಾಮವೇ ಅಪಘಾತಗಳು. ಇತ್ತೀಚೆಗೆ ಅಂತಹ ವಿಚಲಿತ ಸವಾರಿ ಅಪಘಾತದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ದ್ವಿಚಕ್ರ ವಾಹನ ಸವಾರ ಕಾಂಪ್ಯಾಕ್ಟ್ SUV ಗೆ ಡಿಕ್ಕಿ ಹೊಡೆಯುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ಸ್ಕೂಟರ್ ಓಡಿಸುವಾಗ ಹೋಂಡಾ ಆಕ್ಟಿವಾ ಸವಾರ ತನ್ನ ಮೊಬೈಲ್ ಫೋನ್ ನೋಡುತ್ತಾ ಕಾರಿಗೆ ಡಿಕ್ಕಿ ಹೊಡೆದಿದ್ದು, ಸಂಪೂರ್ಣ ದೃಶ್ಯಗಳು ಕಾರಿನ ಡ್ಯಾಷ್ ಕ್ಯಾಮ್‌ನಲ್ಲಿ ಸೆರೆಯಾಗಿದೆ. ಸವಾರ ಒಂದು ಕೈಯಲ್ಲಿ ಹ್ಯಾಂಡಲ್ ಬಾರ್ ಹಿಡಿದು ಮತ್ತೊಂದು ಕೈಯಲ್ಲಿ ಫೋನ್ ನೋಡುತ್ತಾ ತಲೆ ಬಗ್ಗಿಸಿಕೊಂಡು ಮುಂದಿನ ರಸ್ತೆಯನ್ನು ನಿರ್ಲಕ್ಷಿಸಿ ವಾಹನ ಓಡಿಸಿರುವುದೇ ಈ ಅಪಘಾತಕ್ಕೆ ಕಾರಣವಾಗಿದೆ.

ಇನ್ನು ಆಕ್ಟೀವಾ ಚಾಲಕ ಡಿಕ್ಕಿ ಹೊಡೆದಿರುವುದು ಸೆಲ್ಟೋಸ್ ಎಸ್‌ಯುವಿಗೆ, ಸೆಲ್ಟೋಸ್ ಚಾಲಕ ಬಲಕ್ಕೆ ಆಕ್ವೀವಾ ಮುಂದೆ ಎಡಕ್ಕೆ ತಿರುಗಿದ್ದು ಇದನ್ನು ಗಮನಿಸದೆ ಬಂದು ಸ್ಕೂಟರ್ ಚಾಲಕ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅದೃಷ್ಟವಶಾತ್ ಯುವಕ ಹೆಲ್ಮೆಟ್ ಧರಿಸಿದ್ದ ಕಾರಣ ಕೆಳಗೆ ಬಿದ್ದರೂ ತೀವ್ರವಾಗಿ ಗಾಯಗೊಂಡಿಲ್ಲ ಎಂದು ತಿಳಿದುಬಂದಿದೆ.
ಕಾರು ಚಾಲಕನದ್ದೂ ತಪ್ಪಿದೆ!: ಈಗ ವೀಡಿಯೊದಿಂದ ಈ ಅಪಘಾತದ ಸಂಪೂರ್ಣ ತಪ್ಪು ದ್ವಿಚಕ್ರ ವಾಹನದ್ದೆಂದು ತೋರುತ್ತದೆ. ಆದರೆ ನಿಜಕ್ಕೆ ಇಲ್ಲಿ ಸೆಲ್ಟೋಸ್ ಡ್ರೈವರ್ ಕೂಡ ತಪ್ಪು ಮಾಡಿದ್ದಾನೆ. ಸೆಲ್ಟೋಸ್ ಚಾಲಕ ಮೊದಲು ಸ್ಕೂಟರ್ ಸವಾರನನ್ನು ಹಿಂದಿಕ್ಕಿ ನಂತರ ತಿರುವು ತೆಗೆದುಕೊಳ್ಳಲು ಇಂಡಿಕೇಟರ್ ಹಾಕಿರುವುದನ್ನು ನಾವು ವಿಡಿಯೋದಲ್ಲಿ ಗಮನಿಸಬಹುದು.

ಕೆಲವರಿಗೆ ಇದು ಸಾಮಾನ್ಯ ವಿಷಯವೆಂದು ತೋರುತ್ತದೆಯಾದರೂ, ಒಬ್ಬರು ತಿರುವು ತೆಗೆದುಕೊಳ್ಳಬೆಕಾದರೆ ಮೊದಲು ತಮ್ಮ ಮುಂದಿರುವ ವಾಹನವನ್ನು ಆ ತಿರುವನ್ನು ದಾಟಲು ಬಿಡಬೇಕು, ನಂತರವಷ್ಟೇ ನಾವು ತಿರುವು ತೆಗೆದುಕೊಳ್ಳುವುದು ಸರಿಯಾದ ವಿಧಾನ. ಈ ಸಂದರ್ಭದಲ್ಲಿ ಕಿಯಾ ಚಾಲಕ ಆಕ್ಟಿವಾ ಸವಾರನನ್ನು ಮೊದಲು ದಾಟಲು ಬಿಡಬೇಕಿತ್ತು ಎಂಬುದು ನಮ್ಮ ಅಭಿಪ್ರಾಯ.
ಮೊಬೈಲ್ ಬಳಕೆ ಜೀವಕ್ಕೆ ಕುತ್ತು: ಈ ಘಟನೆಯಲ್ಲಿ ಆಕ್ಟೀವಾ ಸವಾರ ಸಂಪೂರ್ಣ ಮೊಬೈಲ್ ಬಳಕೆಯಲ್ಲಿ ಲೀನವಾಗಿದ್ದಾನೆ. ಒಮ್ಮೆ ಯೋಚನೆ ಮಾಡಿ ವೇಗದಲ್ಲಿರುವ ವಾಹನಗಳಿಗೆ ಹೀಗೆ ಅಡ್ಡ ಬಂದಾಗ ಆ ಸವಾರ ಬದುಕುಳಿಯುವ ಸಾಧ್ಯೆಗಳಿವೆಯೇ? ಖಂಡಿತ ಇಲ್ಲ. ಆತ ಹೆಲ್ಮೆಟ್ ಧರಿಸಿದ್ದಾನಾದ್ರೂ ಭೀಕರ ಡಿಕ್ಕಿಯಾದಲ್ಲಿ ಉಳಿಯುವ ಸಾಧ್ಯತೆಗಳು ತೀರಾ ಕಡಿಮೆ.

ಇಂತಹ ಬೇಜವಾಬ್ದಾರಿ ವಾಹನ ಚಾಲನೆಯಿಂದ ಅವರಿಗೆ ಮಾತ್ರವಲ್ಲದೇ ಇತರ ಅಮಾಯಕ ವಾಹನ ಚಾಲಕರಿಗೂ ಅಪಘಾತವಾಗುವಂತೆ ಮಾಡುತ್ತಾರೆ. ಜವಾಬ್ದಾರಿಯುತ ವಾಹನ ಚಾಲಕರು ಯಾರೇ ಆಗಲಿ ಹೀಗೆ ಮೊಬೈಲ್ ಬಳಸುವುದಿಲ್ಲ, ಇದು ತುಂಬಾ ಅಪಾಯಕಾರಿಯಾಗಿರುವುದರಿಂದ ರಸ್ತೆಗಳಲ್ಲಿ ಯಾರಾದರೂ ಹೀಗೆ ಮೊಬೈಲ್ ಬಳಸಿದರೆ ಫೋಟೋ ತೆಗೆದು ಪೊಲೀಸರಿಗೆ ಕಳುಹಿಸಿ.
ಹೀಗೆ ಮಾಡುವುದರಿಂದ ಪೊಲೀಸರು ದಂಡ ಅಥವಾ ಡಿಎಲ್ ರದ್ದುಗೊಳಿಸುವ ಮೂಲಕ ಮತ್ತೊಮ್ಮೆ ಹೀಗೆ ಮಾಡದಂತೆ ಖಡಕ್ ಎಚ್ಚರಿಕೆ ನೀಡುತ್ತಾರೆ. ಹಾಗೆಯೇ ನೀವು ಸಂಭವನೀಯ ರಸ್ತೆ ಅಪಘಾತಗಳನ್ನು ತಡೆದಂತಾಗುತ್ತದೆ. ಈ ಅಪಘಾತದಲ್ಲಿ ನಿಮ್ಮ ಪ್ರಕಾರ ಯಾರದ್ದು ತಪ್ಪು ಹಾಗೂ ಅಪಘಾತ ತಪ್ಪಿಸಬಹುದಿತ್ತೆ ಎಂಬುದನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.


Click it and Unblock the Notifications