ಕಾರು ಚಾಲಕನ ಆಕ್ರೋಶದಿಂದ ಸ್ಕೂಟರ್ ಸವಾರ ಪಾರಾಗಿದ್ದು ಹೀಗೆ

ನಿಶಬ್ದವಾಗಿರುವ ರಾಜ್‌ಕೋಟ್ ರಸ್ತೆಯಲ್ಲಿ ಹೋಂಡಾ ಸಿಟಿ ಕಾರು ಚಾಲಕ ಹಾಗೂ ಹೋಂಡಾ ಆಕ್ಟಿವಾ ಸ್ಕೂಟರ್ ಸವಾರನ ನಡುವೆ ಮಾತಿನ ಚಕಮಕಿ ನಡೆಯುವ ದೃಶ್ಯ ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಾರು ಚಾಲಕನ ಆಕ್ರೋಶದಿಂದ ಸ್ಕೂಟರ್ ಸವಾರ ಪಾರಾಗಿದ್ದು ಹೀಗೆ

ಅದಾದ ನಂತರ ನಡೆದ ಹೋಂಡಾ ಸಿಟಿ ಕಾರು ಚಾಲಕ, ಹೋಂಡಾ ಆಕ್ಟಿವಾ ಸ್ಕೂಟರ್ ಚಾಲಕನ ಮೇಲೆ ಕಾರು ಹತ್ತಿಸಲು ಪ್ರಯತ್ನಿಸುವ ಘಟನೆ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯ ನೋಡುಗರಲ್ಲಿ ನಡುಕ ಹುಟ್ಟಿಸುತ್ತದೆ.

ಕಾರು ಚಾಲಕನ ಆಕ್ರೋಶದಿಂದ ಸ್ಕೂಟರ್ ಸವಾರ ಪಾರಾಗಿದ್ದು ಹೀಗೆ

ಅಡ್ಡ ರಸ್ತೆಯೊಂದರಿಂದ ಬರುವ ಸ್ಕೂಟರ್ ಸವಾರನಿಗೆ ಹೋಂಡಾ ಸಿಟಿ ಕಾರು ಎದುರಾಗುತ್ತದೆ. ಸ್ಕೂಟರ್ ಸವಾರ ಹಾಗೂ ಹಿಂಬದಿಯ ಸವಾರ ಸ್ಕೂಟರ್'ನಿಂದ ಇಳಿದು ಕಾರಿನ ವಿಂಡೋ ಮೂಲಕ ಚಾಲಕನನ್ನು ಹೊರಕ್ಕೆ ಎಳೆಯಲು ಪ್ರಯತ್ನಿಸುತ್ತಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕಾರು ಚಾಲಕನ ಆಕ್ರೋಶದಿಂದ ಸ್ಕೂಟರ್ ಸವಾರ ಪಾರಾಗಿದ್ದು ಹೀಗೆ

ಸ್ಕೂಟರ್ ಅನ್ನು ಕಾರು ಮೂಲಕವೇ ಕೆಳಕ್ಕೆ ತಳ್ಳಿ ಕಾರು ಚಾಲಕ ಅವರಿಂದ ತಪ್ಪಿಸಿಕೊಳ್ಳುತ್ತಾನೆ. ಆದರೆ ಮುಂದೆ ಸಾಗುವ ಆತ ರಿವರ್ಸ್ ಗೇರ್'ನಲ್ಲಿ ವೇಗವಾಗಿ ಬಂದು ಕೆಳಕ್ಕೆ ಬಿದ್ದಿದ್ದ ಸ್ಕೂಟರ್ ತೆಗೆಯುತ್ತಿದ್ದ ಸ್ಕೂಟರ್ ಸವಾರನಿಗೆ ಗುದಿಯಲು ಪ್ರಯತ್ನಿಸುತ್ತಾನೆ.

ಕಾರು ಚಾಲಕನ ಆಕ್ರೋಶದಿಂದ ಸ್ಕೂಟರ್ ಸವಾರ ಪಾರಾಗಿದ್ದು ಹೀಗೆ

ಆದರೆ ತಕ್ಷಣವೇ ಜಾಗೃತನಾಗುವ ಸ್ಕೂಟರ್ ಸವಾರ ತಪ್ಪಿಸಿಕೊಳ್ಳುತ್ತಾನೆ. ಆದರೆ ಕಾರು ಚಾಲಕ ಸ್ಕೂಟರಿಗೆ ಡಿಕ್ಕಿ ಹೊಡೆದು ಅಲ್ಲಿ ನಿಂತಿದ್ದ ಕಪ್ಪು ಬಣ್ಣದ ಹ್ಯುಂಡೈ ಐ 20 ಕಾರಿಗೂ ಗುದಿಯುತ್ತಾನೆ. ಕಾರು ಚಾಲಕ ವೇಗವಾಗಿ ಡಿಕ್ಕಿ ಹೊಡೆದಾಗ ಸ್ಕೂಟರ್‌ ಸವಾರನಿಗೆ ಯಾವುದೇ ತೊಂದರೆಯಾಗದಿದ್ದರೂ ಸ್ಕೂಟರ್ ಹಾರಿಹೋಗುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕಾರು ಚಾಲಕನ ಆಕ್ರೋಶದಿಂದ ಸ್ಕೂಟರ್ ಸವಾರ ಪಾರಾಗಿದ್ದು ಹೀಗೆ

ಈ ವೀಡಿಯೊದಲ್ಲಿ ಸ್ಕೂಟರ್ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗುವುದನ್ನು ಕಾಣಬಹುದು. ಸ್ಕೂಟರ್ ತೀವ್ರವಾಗಿ ಹಾನಿಗೊಳಗಾಗಿದೆ. ಜೊತೆಗೆ ರಸ್ತೆಯಲ್ಲಿ ನಿಂತಿದ್ದ ಹ್ಯುಂಡೈ ಐ 20 ಕಾರಿಗೂ ಹಾನಿಯಾಗಿದೆ.

ಕಾರು ಚಾಲಕನ ಆಕ್ರೋಶದಿಂದ ಸ್ಕೂಟರ್ ಸವಾರ ಪಾರಾಗಿದ್ದು ಹೀಗೆ

ಆ ಕಾರಿನ ಹಿಂಭಾಗವು ತೀವ್ರವಾಗಿ ಹಾನಿಯಾಗಿದೆ. ವೇಗವಾಗಿ ರಿವರ್ಸ್ ಗೇರಿನಲ್ಲಿ ಬಂದು ಗುದಿಯುವ ಹೋಂಡಾ ಸಿಟಿ ಕಾರು ಚಾಲಕ ಅಷ್ಟೇ ವೇಗವಾಗಿ ಅಲ್ಲಿಂದ ಪರಾರಿಯಾಗಿದ್ದಾನೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಾರು ಚಾಲಕನ ಆಕ್ರೋಶದಿಂದ ಸ್ಕೂಟರ್ ಸವಾರ ಪಾರಾಗಿದ್ದು ಹೀಗೆ

ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣನಾದ ಹೋಂಡಾ ಸಿಟಿ ಕಾರು ಚಾಲಕನ ಹೆಸರು ಜಯರಾಜ್ ದಾವ್ಡಾ ಎಂದು ತಿಳಿದು ಬಂದಿದೆ. ಈ ಘಟನೆಯನ್ನು ವೀಕ್ಷಿಸಿದರೆ ಇದೊಂದು ಪೂರ್ವ ನಿಯೋಜಿತ ಕೃತ್ಯದಂತೆ ಕಂಡು ಬರುತ್ತದೆ.

ಕಾರು ಚಾಲಕನ ಆಕ್ರೋಶದಿಂದ ಸ್ಕೂಟರ್ ಸವಾರ ಪಾರಾಗಿದ್ದು ಹೀಗೆ

ಹೋಂಡಾ ಸಿಟಿ ಕಾರು ಚಾಲಕ ಕಾರಿನಿಂದ ಹೊರ ಬರದಿರುವುದೇ ಈ ಅನುಮಾನಕ್ಕೆ ಕಾರಣವಾಗಿದೆ. ಕಾರು ಟೀಂಟೆಡ್ ಗ್ಲಾಸ್ ಹೊಂದಿದ್ದ ಕಾರಣಕ್ಕೆ ಆತನ ಮುಖ ಸ್ಪಷ್ಟವಾಗಿ ಕಂಡು ಬಂದಿಲ್ಲ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಾರು ಚಾಲಕನ ಆಕ್ರೋಶದಿಂದ ಸ್ಕೂಟರ್ ಸವಾರ ಪಾರಾಗಿದ್ದು ಹೀಗೆ

ಸ್ಕೂಟರ್‌ನಲ್ಲಿದ್ದವರು ಕಾರು ಚಾಲಕನೊಂದಿಗೆ ಮಾತಿನ ಚಕಮಕಿ ನಡೆಸಿದ ಕಾರಣಕ್ಕೆ ಇಷ್ಟು ದೊಡ್ಡ ಘಟನೆ ಸಂಭವಿಸಿದೆ ಎಂಬುದು ಅನುಮಾನ. ಅಲ್ಲಿದ್ದ ಕಾರಿಗೆ ಹಾನಿಯನ್ನುಂಟು ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿರಬಹುದು.

ಹಾನಿಗೊಳಗಾಗಿರುವ ಹ್ಯುಂಡೈ ಐ 20 ಕಾರು ಮಾಲೀಕರು ಸಹ ಇದೇ ರೀತಿ ಅನುಮಾನ ವ್ಯಕ್ತ ಪಡಿಸಿದ್ದಾರೆ. ಘಟನೆಯ ನಂತರ ಸ್ಕೂಟರ್'ನಲ್ಲಿದ್ದವರು ಹಾಗೂ ಹ್ಯುಂಡೈ ಐ 20 ಕಾರು ಮಾಲೀಕರು ಹೋಂಡಾ ಸಿಟಿ ಕಾರು ಚಾಲಕನನ್ನು ಹಿಂಬಾಲಿಸಿದ್ದರು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಾರು ಚಾಲಕನ ಆಕ್ರೋಶದಿಂದ ಸ್ಕೂಟರ್ ಸವಾರ ಪಾರಾಗಿದ್ದು ಹೀಗೆ

ಆದರೆ ಹೋಂಡಾ ಸಿಟಿ ಕಾರು ಚಾಲಕ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ವೀಡಿಯೊ ನೋಡಿದ ನಂತರ ಬೇರೆಯವರ ಜೊತೆ ಜಗಳವಾಡುವ ಮುನ್ನ ಹಲವು ಬಾರಿ ಯೋಚಿಸುವುದು ಒಳಿತು ಎಂದೆನಿಸಿದರೆ ಸುಳ್ಳಲ್ಲ.

Most Read Articles

Kannada
English summary
Activa scooter rider escapes from Honda City driver anger. Read in Kannada.
Story first published: Thursday, April 15, 2021, 12:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X