ಜೆಟ್ ಸೂಟ್ ಧರಿಸಿ ಗಾಳಿಯಲ್ಲಿ ಹಾರಾಡಿದ ಬಾಲಿವುಡ್ ಕಿಲಾಡಿ..!

ತೆರೆ ಮೇಲೆ ಹೀರೋಗಳಾಗಿ ಆರ್ಭಟಿಸುವ ಸಾಕಷ್ಟು ನಟರು ಸ್ವತಃ ತಾವೇ ಸಾಹಸ ದೃಶ್ಯಗಳಲ್ಲಿ ನಟಿಸಲು ಹಿಂದೇಟು ಹಾಕುತ್ತಾರೆ. ಸಾಹಸ ದೃಶ್ಯಗಳು ಕೆಲವೊಮ್ಮೆ ತೀರಾ ಅಪಾಯಕಾರಿಯಾಗಿರುತ್ತವೆ. ತಮ್ಮ ಬದಲಿಗೆ ಡ್ಯೂಪ್ ಆಗಿ ಬೇರೊಬ್ಬರಿಂದ ಈ ದೃಶ್ಯಗಳನ್ನು ಮಾಡಿಸಲಾಗುತ್ತದೆ.

ಜೆಟ್ ಸೂಟ್ ಧರಿಸಿ ಗಾಳಿಯಲ್ಲಿ ಹಾರಾಡಿದ ಬಾಲಿವುಡ್ ಕಿಲಾಡಿ..!

ಬೆರಳೆಣಿಕೆಯಷ್ಟು ನಟರು ಮಾತ್ರ ತಾವೇ ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ಅಂತಹ ನಟರಲ್ಲಿ ಜನಪ್ರಿಯ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ ಸಹ ಒಬ್ಬರು. ಅಕ್ಷಯ್ ಕುಮಾರ್ ಸಾಹಸ ದೃಶ್ಯಗಳಲ್ಲಿ ಸ್ವತಃ ತಾವೇ ಭಾಗವಹಿಸುತ್ತಾರೆ. ಇದನ್ನು ಅಕ್ಷಯ್ ಕುಮಾರ್‌ರವರ ಚಿತ್ರಗಳಲ್ಲಿ ಕಾಣಬಹುದು.

ಜೆಟ್ ಸೂಟ್ ಧರಿಸಿ ಗಾಳಿಯಲ್ಲಿ ಹಾರಾಡಿದ ಬಾಲಿವುಡ್ ಕಿಲಾಡಿ..!

ಅಕ್ಷಯ್ ಕುಮಾರ್‌ರವರು ಈಗ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಜೆಟ್ ಸೂಟ್‌ನೊಂದಿಗೆ ಗಾಳಿಯಲ್ಲಿ ಹಾರಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ತರಬೇತಿ ಪಡೆಯುತ್ತಿರುವ ವೀಡಿಯೊ ಬಿಡುಗಡೆಯಾಗಿದ್ದು, ವೈರಲ್ ಆಗಿದೆ. ಗ್ರಾವಿಟಿ ಕಂಪನಿಯು ಅಭಿವೃದ್ಧಿಪಡಿಸಿರುವ 1,050 ಬಿಹೆಚ್‌ಪಿ ಜೆಟ್ ಸೂಟ್‌ನಲ್ಲಿ ಅಕ್ಷಯ್ ಕುಮಾರ್‌ರವರು ತರಬೇತಿ ಪಡೆಯುತ್ತಿರುವುದನ್ನು

ಈ ವೀಡಿಯೊದಲ್ಲಿ ಕಾಣಬಹುದು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಜೆಟ್ ಸೂಟ್ ಧರಿಸಿ ಗಾಳಿಯಲ್ಲಿ ಹಾರಾಡಿದ ಬಾಲಿವುಡ್ ಕಿಲಾಡಿ..!

ಗ್ರಾವಿಟಿ ಜೆಟ್ ಸೂಟ್ ಅನ್ನು ಸದ್ಯಕ್ಕೆ ಜನಸಾಮಾನ್ಯರಿಗೆ ಮಾರಾಟ ಮಾಡುತ್ತಿಲ್ಲ. ಜೆಟ್ ಸೂಟ್‌ನ ಶಕ್ತಿಯನ್ನು ಪ್ರದರ್ಶಿಸಲು ಗ್ರಾವಿಟ್‌ ಕಂಪನಿಯ ತರಬೇತಿ ಪಡೆದ ತಜ್ಞರ ತಂಡವು ಅದನ್ನು ಸುರಕ್ಷಿತ ಸ್ಥಳಗಳಲ್ಲಿ ಮಾತ್ರ ಬಳಸುತ್ತಿದೆ. ಈ ಜೆಟ್ ಸೂಟ್ ಅನ್ನು ಸಮುದ್ರ ಹಾಗೂ ನೀರಿನ ಮೂಲಗಳ ಮೇಲೆ ಹಾರಲು ಸಹ ಬಳಸಲಾಗುತ್ತದೆ.

ಜೆಟ್ ಸೂಟ್ ಧರಿಸಿ ಗಾಳಿಯಲ್ಲಿ ಹಾರಾಡಿದ ಬಾಲಿವುಡ್ ಕಿಲಾಡಿ..!

ಈ ಜೆಟ್ ಸೂಟ್ ಧರಿಸಿದ ನಂತರ ನಿಮಗೆ ನಿಜ ಜೀವನದ ಐರನ್ ಮ್ಯಾನ್‌ನಂತೆ ಭಾಸವಾಗುತ್ತದೆ. ಆದರೆ ಇದನ್ನು ಧರಿಸಿದ ನಂತರ ಜಾಗರೂಕರಾಗಿರಬೇಕು. ಈ ಜೆಟ್ ಸೂಟ್ ಅನ್ನು ಗ್ರಾವಿಟಿ ಎಂಬ ಕಂಪನಿಯು ಅಭಿವೃದ್ಧಿಪಡಿಸಿದೆ. ರಿಚರ್ಡ್ ಬ್ರೌನಿಂಗ್ ಎಂಬುವವರು 2017ರಲ್ಲಿ ಗ್ರಾವಿಟಿ ಕಂಪನಿಯನ್ನು ಆರಂಭಿಸಿದರು.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಜೆಟ್ ಸೂಟ್ ಧರಿಸಿ ಗಾಳಿಯಲ್ಲಿ ಹಾರಾಡಿದ ಬಾಲಿವುಡ್ ಕಿಲಾಡಿ..!

ಜೆಟ್ ಸೂಟ್ ಪ್ರಪಂಚದಾದ್ಯಂತ ಜನರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಈ ಸೂಟ್‌ನಲ್ಲಿ ಸೀಮೆಎಣ್ಣೆಯಿಂದ ಚಲಾಯಿಸಲಾಗುವ ಜೆಟ್ ಎಂಜಿನ್ ಗಳನ್ನು ಅಳವಡಿಸಲಾಗಿದೆ. ಇದನ್ನು ಧರಿಸಿ ಗಾಳಿಯಲ್ಲಿ ಹಾರಬಹುದು. ಈ ಎಂಜಿನ್ 22 ಕೆಜಿಯಷ್ಟು ಒತ್ತಡವನ್ನು ನೀಡುತ್ತದೆ. ಇದನ್ನು ಚಾಲನೆ ಮಾಡುವ ಪೈಲಟ್ ಇದರ ದಿಕ್ಕು ಹಾಗೂ ವೇಗವನ್ನು ಬದಲಿಸಿ ಐರನ್ ಮ್ಯಾನ್‌ನಂತೆ ಹಾರಬಲ್ಲರು.

ಜೆಟ್ ಸೂಟ್ ಧರಿಸಿ ಗಾಳಿಯಲ್ಲಿ ಹಾರಾಡಿದ ಬಾಲಿವುಡ್ ಕಿಲಾಡಿ..!

ಈ ಜೆಟ್ ಸೂಟ್ ಅನ್ನು ಯಾವುದೇ ತೊಂದರೆ ಇಲ್ಲದೇ ಧರಿಸಬಹುದು. ಈ ಜೆಟ್ ಸೂಟ್ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಇದರಲ್ಲಿ ಪೈಲಟ್‌ನ ಹೆಲ್ಮೆಟ್‌ನಲ್ಲಿರುವ ಹೆಡ್-ಅಪ್ ಡಿಸ್‌ಪ್ಲೇ ಸಹ ಸೇರಿದೆ. ಈ ಡಿಸ್‌ಪ್ಲೇ ಇಂಧನದ ಗಾತ್ರ, ಎತ್ತರ, ಎಂಜಿನ್ ಟೆಂಪರೇಚರ್, ಎಷ್ಟು ದೂರ ಹಾರಬಲ್ಲದು ಎಂಬ ಮಾಹಿತಿಗಳನ್ನು ನೀಡುತ್ತದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಜೆಟ್ ಸೂಟ್ ಧರಿಸಿ ಗಾಳಿಯಲ್ಲಿ ಹಾರಾಡಿದ ಬಾಲಿವುಡ್ ಕಿಲಾಡಿ..!

ಈ ಜೆಟ್ ಸೂಟ್ ಸದ್ಯಕ್ಕೆ ಗಂಟೆಗೆ 51.53 ಕಿ.ಮೀ ವೇಗದಲ್ಲಿ ಹಾರುತ್ತದೆ. ಈ ಜೆಟ್ ಸೂಟ್‌ನಲ್ಲಿರುವ ಎಲ್ಲಾ ಎಂಜಿನ್‌ಗಳನ್ನು ಇಂಟಿಗ್ರೆಟ್ ಮಾಡಲಾಗಿದ್ದು, 1,050 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತವೆ. ಈ ಪವರ್ ಉತ್ಪಾದನೆ ಬುಗಾಟ್ಟಿ ವೇರಾನ್‌ನಷ್ಟಿದೆ. ಗ್ರಾವಿಟಿ ಕಂಪನಿಯು ಅಕ್ಷಯ್ ಕುಮಾರ್‌ರವರು ತರಬೇತಿ ಪಡೆಯುತ್ತಿರುವ ಅಧಿಕೃತ ವೀಡಿಯೊವನ್ನು ಬಿಡುಗಡೆಗೊಳಿಸಿದೆ.

ಜೆಟ್ ಸೂಟ್ ಧರಿಸಿ ಗಾಳಿಯಲ್ಲಿ ಹಾರಾಡಿದ ಬಾಲಿವುಡ್ ಕಿಲಾಡಿ..!

ಈ ವೀಡಿಯೊದಲ್ಲಿ ಅಕ್ಷಯ್ ಕುಮಾರ್‌ರವರು ಗ್ರಾವಿಟಿ ಕಂಪನಿಯ ಪರೀಕ್ಷಾ ಸ್ಥಳಕ್ಕೆ ಬರುತ್ತಿರುವುದನ್ನು ಕಾಣಬಹುದು. ಗ್ರಾವಿಟಿಯ ಸಂಸ್ಥಾಪಕ ರಿಚರ್ಡ್ ಬ್ರೌನಿಂಗ್ ಜೆಟ್ ಸೂಟ್ ಧರಿಸಿ ಹಾರಾಡುವ ಮೂಲಕ ಅಕ್ಷಯ್ ಕುಮಾರ್‌ರವರನ್ನು ಸ್ವಾಗತಿಸಿದರು. ಇಂಗ್ಲೆಂಡ್‌ನಲ್ಲಿರುವ ಗ್ರಾವಿಟಿ ತರಬೇತಿ ಸ್ಥಳದಲ್ಲಿ ಅಕ್ಷಯ್ ಕುಮಾರ್‌ರವರಿಗೆ ತರಬೇತಿ ನೀಡಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮೊದಲು ಅಕ್ಷಯ್ ಕುಮಾರ್‌ರವರಿಗೆ ಕೋಚ್ ಕೆಲವು ಸೂಚನೆಗಳನ್ನು ನೀಡಿದ್ದಾರೆ. ನಂತರ ಅಕ್ಷಯ್ ಕುಮಾರ್‌ರವರಿಗೆ ಜೆಟ್ ಸೂಟ್ ಧರಿಸಲು ಅವಕಾಶ ನೀಡಲಾಗಿದೆ. ಅಕ್ಷಯ್ ಕುಮಾರ್‌ರವರು ಜೆಟ್ ಸೂಟ್‌ನಲ್ಲಿ ಇದೇ ಮೊದಲ ಬಾರಿಗೆ ತರಬೇತಿ ಪಡೆದಿದ್ದಾರೆ. ಆದರೂ ಸಹ ಅಕ್ಷಯ್ ಕುಮಾರ್‌ರವರು ಯಾವುದೇ ರೀತಿಯ ಟೆಂಷನ್ ಇಲ್ಲದೇ ಹಾರಾಟ ನಡೆಸಿದ್ದಾರೆ.

ಜೆಟ್ ಸೂಟ್ ಧರಿಸಿ ಗಾಳಿಯಲ್ಲಿ ಹಾರಾಡಿದ ಬಾಲಿವುಡ್ ಕಿಲಾಡಿ..!

ಅಕ್ಷಯ್ ಕುಮಾರ್‌ರವರು ಮುಂದಿನ ದಿನಗಳಲ್ಲಿ ಈ ಜೆಟ್ ಸೂಟ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಧರಿಸುವ ನಿರೀಕ್ಷೆಗಳಿವೆ. ಮುಂಬರುವ ದಿನಗಳಲ್ಲಿ ಈ ಜೆಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ನಿರೀಕ್ಷೆಗಳಿವೆ. ಆದರೆ ಅವುಗಳ ಬೆಲೆ ಸೂಪರ್ ಕಾರುಗಳಿಗಿಂತ ಹೆಚ್ಚಾಗಿರಲಿದೆ.

Most Read Articles

Kannada
English summary
Actor Akshay Kumar learns to fly a jet suit by gravity industries. Read in Kannada.
Story first published: Wednesday, May 6, 2020, 11:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more