1.41 ಕೋಟಿಯ 'ಬಾಹುಬಲಿ' ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ವಿತರಣೆ ಪಡೆದ ನಟ ಅಮಿತಾಬ್: ವಿಶೇಷತೆಗಳೇನು?
ಬಾಲಿವುಡ್ ನಟ ಅಮಿತಾಬ್ ಬಚ್ಚನ್ (Amitabh Bachchan) ತಮ್ಮ ಅದ್ಬುತ ನಟನೆಯ ಮೂಲಕ ದೇಶಾದ್ಯಂತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರಿಗೆ ಕಾರುಗಳೆಂದರೂ ತುಂಬಾ ಅಚ್ಚುಮೆಚ್ಚು. ಅವರ ಬಳಿ, ರೇಂಜ್ ರೋವರ್ ಸೇರಿದಂತೆ ದೊಡ್ಡ ಕಾರುಗಳ ಸಂಗ್ರಹವಿದೆ.
ಇತ್ತೀಚೆಗೆ, ಅಮಿತಾಬ್ ಬಚ್ಚನ್ ಅವರು ಹೊಚ್ಚ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ 130 ಎಚ್‌ಎಸ್‌ಇ (Land Rover Defender 130 HSE) ಎಸ್‌ಯುವಿಯನ್ನು ವಿತರಣೆ ಪಡೆದಿದ್ದಾರೆ ಎಂದು ವರದಿಯಾಗಿದೆ, ಈ ಕಾರು, ಅವರ ಮುಂಬೈನ ನಿವಾಸ ಜಲ್ಸಾದ ಹೊರಗೆ ಫ್ಲಾಟ್‌ಬೆಡ್ ಟ್ರೈಲರ್‌ನಲ್ಲಿ ನಿಂತಿರುವುದು ಕಂಡುಬಂದಿದೆ. ಇದನ್ನು ಮಾರ್ಚ್ 2023ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು.

ಹೊಸ ಲ್ಯಾಂಡ್ ರೋವರ್ ಡಿಫೆಂಡರ್ 130 ಎರಡು ರೂಪಾಂತರದ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. ಅವುಗಳೆಂದರೆ ಎಚ್‌ಎಸ್‌ಇ (HSE) ಹಾಗೂ ಎಕ್ಸ್ (X). ಇವು, ರೂ. 1.30 ಕೋಟಿಯಿಂದ ರೂ.1.41 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ನೊಂದಿಗೆ ಲಭ್ಯವಿವೆ.
6 ಆಸನ ಆಯ್ಕೆ ವ್ಯವಸ್ಥೆಯೊಂದಿರುವ ಪಡೆದಿರುವ ಈ ಕಾರು, ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ, 11.4 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 4 - ಜೋನ್ ಕ್ಲೇಮೇಟ್ ಕಂಟ್ರೋಲ್ ಸಿಸ್ಟಮ್ ಹೊಂದಿದೆ, ಜೊತೆಗೆ ಎಲ್ಲ ಸಾಲಿನಲ್ಲೂ ವೆಂಟಿಲೇಟೆಡ್ ಸೀಟ್ ವ್ಯವಸ್ಥೆಯನ್ನು ಪಡೆದಿದೆ.

ಹೊಸ ಲ್ಯಾಂಡ್ ರೋವರ್ ಡಿಫೆಂಡರ್ 130 ಪಡೆದಿರುವ ಎಂಜಿನ್ ಬಗ್ಗೆ ಮಾತನಾಡುವುದಾದರೆ, ಇದರ 6-ಸಿಲಿಂಡರ್ 3.0-ಲೀಟರ್ ಪೆಟ್ರೋಲ್ ಎಂಜಿನ್, 389 bhp ಗರಿಷ್ಠ ಪವರ್, 550 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸಿಲಿಂಡರ್ 3.0-ಲೀಟರ್ ಡಿಸೇಲ್ ಎಂಜಿನ್, 292 bhp ಪವರ್ ಮತ್ತು 600 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ. ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.
ಇತ್ತೀಚಿಗಷ್ಟೇ 81ನೇ ಹುಟ್ಟುಹಬ್ಬ ಆಚರಿಸಿಕೊಂಡ ಅಮಿತಾಬ್ ಬಚ್ಚನ್ ಅವರು, ಆ ದಿನ ಹೊಸ ರೇಂಜ್ ರೋವರ್ ಕಾರಿನಲ್ಲಿ ಪ್ರಯಾಣಿಸಿದ್ದರು. ಇದು, ಲಾಂಗ್ ವೀಲ್‌ಬೇಸ್ ರೂಪಾಂತರವಾಗಿತ್ತು. ಮುಂಬೈನಲ್ಲಿ 3.5 ಕೋಟಿ ರೂಪಾಯಿಗೆ ಖರೀದಿಗೆ ಸಿಗುತ್ತದೆ. 7 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿರುವ ಈ ಕಾರು, ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಗ್ರಾಹಕರಿಗೆ ಲಭ್ಯವಿದೆ.

ಇದಿಷ್ಟೇ ಅಲ್ಲದೆ, ನಟ ಅಮಿತಾಬ್ ಬಚ್ಚನ್ ಅವರು ಹಲವು ದುಬಾರಿ ಬೆಲೆಯ ಐಷಾರಾಮಿ ಕಾರುಗಳ ದೊಡ್ಡ ಸಂಗ್ರಹವನ್ನೇ ಹೊಂದಿದ್ದಾರೆ. ಅವರ ಬಳಿಯಿರುವ ಮರ್ಸಿಡಿಸ್ ಬೆಂಜ್ ವಿ ಕ್ಲಾಸ್ ಎಂಪಿವಿ, ರೂ.71.05 ಲಕ್ಷ ಆರಂಭಿಕ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. 6 - 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ದೊರೆಯಲಿದ್ದು, 2.1 - ಲೀಟರ್ ಡೀಸೆಲ್ ಎಂಜಿನ್, 7ಜಿ-ಟ್ರಾನಿಕ್ ಆಟೊಮೆಟಿಕ್ ಗೇರ್‌ಬಾಕ್ಸ್ ಪಡೆದಿದೆ.
ಅಮಿತಾಬ್ ಬಚ್ಚನ್ ಅವರು, ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರಿನ ಮಾಲೀಕರೂ ಆಗಿದ್ದರು. ಇದು ರೂ.8.99 ಕೋಟಿ ಬೆಲೆಯನ್ನು ಹೊಂದಿದೆ. ಕೆಲ ವರ್ಷಗಳ ಹಿಂದೆ ಈ ಕಾರನ್ನು ಬೆಂಗಳೂರಿನ ಉದ್ಯಮಿಯೊಬ್ಬರಿಗೆ ಮಾರಾಟ ಮಾಡಲಾಯಿತು. ಜೊತೆಯಲ್ಲಿ ಅವರು, ಟೊಯೊಟಾ ಲ್ಯಾಂಡ್ ಕ್ರೂಸರ್ ಸೇರಿದಂತೆ ಅನೇಕ ಕಾರುಗಳ ಹೊಂದಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications