ವಯಸ್ಸು 66.. ಚಿರಯುವಕರಂತಿದ್ದಾರೆ ಕನ್ನಡದಲ್ಲೂ ನಟಿಸಿದ್ದ ಅನಿಲ್ ಕಪೂರ್: ದುಬಾರಿ ಮರ್ಸಿಡಿಸ್ ಖರೀದಿ

ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ (Anil Kapoor) ವಯಸ್ಸು 66 ಸಮೀಪಿಸಿದರೂ ಚಿರಯುವಕರಂತಿದ್ದಾರೆ. 90 ದಶಕದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿ, ಈಗಲೂ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅನಿಲ್ ಕಪೂರ್ ಕನ್ನಡಿಗರಿಗೂ ಪರಿಚಿತ ನಟ. ಅವರು ಪಲ್ಲವಿ, ಅನುಪಲ್ಲವಿ ಚಿತ್ರದಲ್ಲಿ ಅಭಿನಯಿಸಿ, ಖ್ಯಾತಿಗಳಿಸಿದ್ದರು.

ದೀಪಾವಳಿ (Diwali) ಹಬ್ಬವನ್ನು ಮನೆಗೆ ಹೊಸ ವಾಹನ ತರಲು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಕಳೆದ ಕೆಲವು ವಾರಗಳಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಾದ ಶ್ರದ್ಧಾ ಕಪೂರ್, ತಾಪ್ಸಿ ಪನ್ನು, ರಾಕುಲ್ ಪ್ರೀತ್ ದುಬಾರಿ ಬೆಲೆಯ ಹೊಸ ಐಷಾರಾಮಿ ಕಾರುಗಳನ್ನು ವಿತರಣೆ ಪಡೆದಿದ್ದಾರೆ. ಈಗ ಹಿರಿಯ ನಟ ಅನಿಲ್ ಕಪೂರ್ ಅವರ ಸರದಿ. ಅವರು, ಹೊಚ್ಚ ಹೊಸ ಮರ್ಸಿಡಿಸ್-ಮೇಬ್ಯಾಕ್ ಎಸ್ 580 (Mercedes-Maybach S 580) ಕಾರನ್ನು ಡೆಲೆವರಿ ತೆಗೆದುಕೊಂಡಿದ್ದಾರೆ.

ವಯಸ್ಸು 66.. ಚಿರಯುವಕರಂತಿದ್ದಾರೆ ಕನ್ನಡದಲ್ಲೂ ನಟಿಸಿದ್ದ ಅನಿಲ್ ಕಪೂರ್: ದುಬಾರಿ ಮರ್ಸಿಡಿಸ್ ಖರೀದಿ

ಎಮರಾಲ್ಡ್ ಗ್ರೀನ್‌ ಬಣ್ಣವನ್ನು ಹೊಂದಿರುವ ಅನಿಲ್ ಕಪೂರ್ ಅವರ ನೂತನ ಮರ್ಸಿಡಿಸ್-ಮೇಬ್ಯಾಕ್ ಕಾರು, ಭಾರತದ ಮಾರುಕಟ್ಟೆಯಲ್ಲಿ ರೂ. 2.69 ಕೋಟಿ ಬೆಲೆಯಲ್ಲಿ ಸಿಗುತ್ತದೆ. ಒಂದೊಮ್ಮೆ ಗ್ರಾಹಕರಿಗೆ ಹೆಚ್ಚುವರಿ ಫೀಚರ್ಸ್ ಬೇಕೆಂದರೆ ಈ ಸೆಡಾನ್ ಬೆಲೆ ರೂ.3 ಕೋಟಿವರೆಗೂ ಹೆಚ್ಚಾಗಬಹುದು. ಅದು ಖರೀದಿದಾರರ ಮೇಲೆ ಅವಲಂಭಿಸಿರುತ್ತದೆ ಎಂದು ಹೇಳಬಹುದು.

ನೂತನ ಮರ್ಸಿಡಿಸ್ - ಮೇಬ್ಯಾಕ್ ಎಸ್ 580 ಸೆಡಾನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 4.0 - ಲೀಟರ್ ಟ್ವಿನ್ - ಟರ್ಬೊ ಮೈಲ್ಡ್ - ಹೈಬ್ರಿಡ್ ವಿ8 ಎಂಜಿನ್ ಹೊಂದಿದ್ದು, 496 hp ಗರಿಷ್ಠ ಪವರ್ 700 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ. 9 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.

ವಯಸ್ಸು 66.. ಚಿರಯುವಕರಂತಿದ್ದಾರೆ ಕನ್ನಡದಲ್ಲೂ ನಟಿಸಿದ್ದ ಅನಿಲ್ ಕಪೂರ್: ದುಬಾರಿ ಮರ್ಸಿಡಿಸ್ ಖರೀದಿ

ಹೊಸ ಮರ್ಸಿಡಿಸ್-ಮೇಬ್ಯಾಕ್ ಎಸ್ 580, ಕೇವಲ 4.7 ಸೆಕೆಂಡುಗಳಲ್ಲಿ 0 ರಿಂದ 100 kmph ವೇಗವನ್ನು ಪಡೆಯಲಿದ್ದು, ನಾಟಿಕ್ ಬ್ಲೂ, ಓನಿಕ್ಸ್ ಬ್ಲಾಕ್, ಗ್ರ್ಯಾಫೈಟ್ ಗ್ರೇ, ಅಬ್ಸಿಡಿಯನ್ ಬ್ಲಾಕ್, ಡಿಸೈನೊ ಡೈಮಂಡ್ ವೈಟ್ ಬ್ರೈಟ್, ಡಿಸೈನೊ ಸೆಲೆನೈಟ್ ಗ್ರೇ ಮ್ಯಾಗ್ನೋ, ಮೊಜಾವೆ ಸಿಲ್ವರ್ ಸೇರಿದಂತೆ ಬರೋಬ್ಬರಿ 21 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ.

ವೈಶಿಷ್ಟ್ಯದ ವಿಚಾರವಾಗಿ ಮಾತನಾಡುವುದಾದರೆ, ಈ ಕಾರು ಮಲ್ಟಿ - ಫಂಕ್ಷನ್ ಸ್ಟೀರಿಂಗ್ ವೀಲ್, ಪವರ್ ಅಡ್ಜಸ್ಟಬಲ್ ಎಕ್ಸ್‌ಟೀರಿಯರ್ ರೇರ್ ವ್ಯೂ ಮಿರರ್, ಟಚ್ ಸ್ಕ್ರೀನ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್, ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್, ಅಲಾಯ್ ವೀಲ್ಸ್, ಫ್ರಂಟ್ ಫಾಗ್ ಲೈಟ್‌, ಪವರ್ ವಿಂಡೋಸ್ ಹಾಗೂ ಏರ್‌ಬ್ಯಾಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಅನಿಲ್ ಕಪೂರ್ ಇತರೆ ಬಾಲಿವುಡ್ ನಟರಂತೆಯೇ ಹಲವು ಐಷಾರಾಮಿ ಕಾರುಗಳ ದೊಡ್ಡ ಸಂಗ್ರಹವನ್ನು ಹೊಂದಿದ್ದಾರೆ. ಪ್ರಮುಖವಾಗಿ ಮರ್ಸಿಡಿಸ್-ಮೇಬ್ಯಾಕ್ ಎಸ್500 (Mercedes-Maybach S500), ಆಡಿ ಎ8 ಎಲ್ (Audi A8 L), ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ (Land Rover Range Rover Sport), ಬಿಎಂಡಬ್ಲ್ಯೂ 7 ಸೀರಿಯಸ್ (BMW 7- Series), ಲಂಬೋರ್ಗಿನಿ ಗಲ್ಲಾರ್ಡೊ ಸ್ಪೈಡರ್ (Lamborghini Gallardo Spyder) ಕಾರುಗಳಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, November 10, 2023, 23:01 [IST]
English summary
Actor anil kapoor buys new mercedes maybach s 580 car big price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+