ಡಾಕ್ಟ್ರು ಜೊತೆ ಆಕ್ಟ್ರು ಮದುವೆ ಫಿಕ್ಸ್: ಡಾಲಿ ಬಳಿಯಿದೆ ದುಬಾರಿ ಟೊಯೊಟಾ ಕಾರು.. 50 ಸಾವಿರದ ಎಕ್ಸ್ಎಲ್!

ಕನ್ನಡದ ಪ್ರತಿಭಾವಂತ ನಟ ಡಾಲಿ ಧನಂಜಯ್ (Daali Dhananjay), ತಮ್ಮ ಅದ್ಭುತವಾದ ನಟನೆ ಮೂಲಕ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದೀಪಾವಳಿಗೆ ಸಿಹಿಸುದ್ದಿ ನೀಡಿರುವ ಡಾಲಿ, ಚಿತ್ರದುರ್ಗ ಮೂಲದ ವೈದ್ಯೆ ಧನ್ಯತಾ (Dhanyata) ಅವರನ್ನು ಕೈಹಿಡಿಯುವುಯಾಗಿ ಘೋಷಣೆ ಮಾಡಿದ್ದಾರೆ. ಫೆಬ್ರವರಿಯಲ್ಲಿ ಈ ಜೋಡಿ ಹಸೆಮಣೆ ಏರಲಿದೆ. ಸದ್ಯ, ಡಾಲಿ ಧನಂಜಯ್ ಹಾಗೂ ಧನ್ಯತಾರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಹಲ್‌ಚಲ್‌ ಸೃಷ್ಟಿಸುತ್ತಿವೆ.

ಈ ಬಗ್ಗೆ ಸ್ವತಃ ಡಾಲಿ ಧನಂಜಯ್ ಅವರೇ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಧನ್ಯತಾ ಅವರೊಂದಿಗಿನ ವಿಶೇಷ ಫೋಟೋಶೂಟ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನೊಂದಿಗೆ 'ನನ್ನಿಚ್ಛೆಯಂತೆ, ಕುಟುಂಬದ ಇಚ್ಛೆಯಂತೆ, ನಿಮ್ಮೆಲ್ಲರ ಇಚ್ಛೆಯಂತೆ, ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದ್ದೀರಿ, ಮನದಾಳದಿಂದ ಹರಸಿದ್ದೀರಿ. ಬದುಕಿನ ಮಹತ್ವವಾದ ಘಟ್ಟಕ್ಕೆ ಗೆಳತಿ ಧನ್ಯತಾಳೊಂದಿಗೆ ಹೆಜ್ಜೆಯಿಡುತ್ತಿದ್ದೇನೆ. ಪ್ರೀತಿ, ಆಶೀರ್ವಾದವಿರಲಿ. ಮದುವೆಗೆ ಕರಿತೀನಿ, ಎಲ್ಲ ಬಂದು ಊಟ ಮಾಡಿಕೊಂಡು ಹೋಗಬೇಕು' ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

Actor Daali Dhananjay Marriage Fix Proud Owner Of Toyota Vellfire Range Rover And Tvs Xl Super

'ನಟ ರಾಕ್ಷಸ' ಡಾಲಿ ಧನಂಜಯ್ ಹಲವು ಐಷಾರಾಮಿ ಕಾರುಗಳ ಮಾಲೀಕರೂ ಆಗಿದ್ದಾರೆ. ಅವರು, ಟೊಯೊಟಾ ವೆಲ್‌ಫೇರ್ ಹಾಗೂ ರೇಂಜ್‌ ರೋವರ್‌ ಕಾರುಗಳನ್ನು ಹೊಂದಿದ್ದಾರೆ. ಇವು ಮಾತ್ರವಲ್ಲದೆ, ತಮ್ಮ ತಂದೆ ಕೊಡಿಸಿದ 'ಟಿವಿಎಸ್‌ ಎಕ್ಸ್‌ಎಲ್‌ ಸೂಪರ್'ನ್ನು ಇಟ್ಟುಕೊಂಡಿದ್ದಾರೆ. ಈ ಮೊಪೆಡ್‌ನ್ನು ಧನಂಜಯ್ ಅವರು ಐಷಾರಾಮಿ ರೇಂಜ್‌ ರೋವರ್‌ ಕಾರಿನ ಪಕ್ಕದಲ್ಲಿ ನಿಲ್ಲಿಸಿ, ಪೂಜೆ ಸಲ್ಲಿದ ಫೋಟೋಗಳು ಕೂಡ ಭಾರಿ ವೈರಲ್ ಆಗಿದ್ದವು.

ಕಳೆದ ವರ್ಷ ಡಾಲಿ ಧನಂಜಯ್ ಅಭಿನಯದ 'ಹೊಯ್ಸಳ' ಸಿನಿಮಾ ಭರ್ಜರಿ ಹಿಟ್ ಆಗಿತ್ತು. ಆ ಚಿತ್ರದ ನಿರ್ಮಾಪಕರಾದ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಅವರು, ಡಾಲಿಗೆ ಹೊಚ್ಚ ಹೊಸ ಟೊಯೊಟಾ ವೆಲ್‌ಫೇರ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಇದರೊಂದಿಗೆ ಈ ಐಷಾರಾಮಿ ಎಂಪಿವಿ ಹೊಂದಿರುವ ಕೆಲವೇ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ಪಟ್ಟಿಗೆ ಡಾಲಿ ಕೂಡ ಸೇರ್ಪಡೆಯಾಗಿದ್ದರು.

Actor Daali Dhananjay Marriage Fix Proud Owner Of Toyota Vellfire Range Rover And Tvs Xl Super

ಟೊಯೊಟಾ ವೆಲ್‌ಫೇರ್ (Toyota Vellfire) ಎಂಪಿವಿ ವಿಶೇಷತೆ ಬಗ್ಗೆ ಹೇಳುವುದಾದರೆ, ಇದು ರೂ.1.22 ರಿಂದ ರೂ.1.32 ಕೋಟಿ (ಎಕ್ಸ್ ಶೋರೂಂ) ಬೆಲೆಯನ್ನು ಒಳಗೊಂಡಿದೆ. 2.5-ಲೀಟರ್ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಎಂಜಿನ್‌ನ್ನು ಹೊಂದಿದೆ. 193 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 240 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇ-ಸಿವಿಟಿ ಗೇರ್‌ಬಾಕ್ಸ್‌ನ್ನು ಪಡೆದಿದೆ.

ನೂತನ ಟೊಯೊಟಾ ವೆಲ್‌ಫೇರ್ ಎಂಪಿವಿಯಲ್ಲಿ 7 ಜನರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಪ್ರಯಾಣಿಸಬಹುದು. ಬ್ಲ್ಯಾಕ್ ಮತ್ತು ಪ್ಲಾಟಿನಂ ವೈಟ್ ಪರ್ಲ್ ಸೇರಿದಂತೆ 3 ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ. ವಾರಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು 148 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

Actor Daali Dhananjay Marriage Fix Proud Owner Of Toyota Vellfire Range Rover And Tvs Xl Super

ಈ ಟೊಯೊಟಾ ವೆಲ್‌ಫೇರ್ 14-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈಮೆಂಟ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್, ಫುಲ್-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 15-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಹೆಡ್ಸ್-ಅಪ್ ಡಿಸ್ಪ್ಲೇ, ಡುಯಲ್-ಪ್ಯಾನಲ್ ಸನ್‌ರೂಫ್ ಹಾಗೂ ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ವಿಎಸ್‌ಸಿ (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

ಡಾಲಿ ಧನಂಜಯ್ ಅವರ ಪ್ರೀತಿಯ 'ಟಿವಿಎಸ್‌ ಎಕ್ಸ್‌ಎಲ್‌ ಸೂಪರ್' ಮೊಪೆಡ್ ಬಗ್ಗೆ ಹೇಳುವುದಾದರೆ, ಇದರ ಮಾರಾಟವನ್ನು 2009ರಲ್ಲಿಯೇ ಸ್ಥಗಿತಗೊಳಿಸಲಾಗಿದೆ. ಆಗ ರೂ.27,418 ಎಕ್ಸ್ ಶೋರೂಂ ದರವನ್ನು ಪಡೆದಿತ್ತು. 69.9 ಸಿಸಿ ಪೆಟ್ರೋಲ್ ಎಂಜಿನ್ ಒಳಗೊಂಡಿತ್ತು. 3.5 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತಿತ್ತು. 67 ಕೆಎಂಪಿಎಲ್‌ವರೆಗೆ ಮೈಲೇಜ್ ಸಹ ನೀಡುತ್ತಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, November 2, 2024, 11:00 [IST]
English summary
Actor daali dhananjay marriage fix proud owner of toyota vellfire range rover and tvs xl super
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+