Darshan: ದುಬಾರಿ ಕಾರುಗಳ ಒಡೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ : ಪ್ರತಿ ಕಾರು ಕೋಟಿ ಬೆಲೆ ದಾಟುತ್ತೆ!
ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ನಟ ದರ್ಶನ್ (Darshan) ಅರೆಸ್ಟ್ ಆಗಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾ ಸ್ವಾಮಿ ಎಂಬುವವರು ಕೊಲೆ ಆಗಿದ್ದರು. ನಟ ದರ್ಶನ್ ಅವರ ಸೂಚನೆ ಮೇರೆಗೆ ಕೊಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಪ್ರಕರಣ ಸದ್ಯ ಸೆನ್ಸೇಷನ್ ಸೃಷ್ಟಿ ಮಾಡಿದೆ. ಮೈಸೂರಿನ ಹೋಟೆಲ್ನಲ್ಲಿ ನಟ ದರ್ಶನ್ ಬಂಧನಕ್ಕೊಳಗಾಗಿದ್ದು ಪ್ರಕರಣ ಇಡೀ ಸ್ಯಾಂಡಲ್‌ವುಡ್ ಬೆಚ್ಚಿ ಬೀಳುವಂತೆ ಮಾಡಿದೆ. ಈ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಹೇಳಿಕೆ ಆಧರಿಸಿ ನಟ ದರ್ಶನ್‌ರನ್ನು ಪೊಲೀಸರು ಬಂಧಿಸಿದ್ದಾರೆ.
ನಟ ದರ್ಶನ್ ಒಂದಲ್ಲ ಒಂದು ರೀತಿ ಸುದ್ದಿಯಾಗುತ್ತಲೇ ಇರುತ್ತಾರೆ. ಸ್ಯಾಂಡಲ್‌ವುಡ್ ನಲ್ಲಿ ಕೊನೆ ಸೂಪರ್ ಹಿಟ್ ಚಿತ್ರ ಕಾಟೇರ ಅವರದ್ದೇ, ಆದರೆ ಇದೀಗ ಕೊಲೆ ಆರೋಪದ ಮೇರೆಗೆ ಸುದ್ದಿಯಾಗಿದ್ದಾರೆ. ಇಷ್ಟೇ ಅಲ್ಲ ನಟನಿಗೆ ಸಿಕ್ಕಾಪಟ್ಟೆ ಕಾರುಗಳ ಬಗ್ಗೆ ಕ್ರೇಜ್ ಇದೆ. ಅವರ ಬಳಿ ಇರುವ ದುಬಾರಿ ಕಾರುಗಳ ಬಗ್ಗೆಯು ಆಗ್ಗಾಗ ಸುದ್ದಿಯಾಗುತ್ತಾರೆ. ನಟ ದರ್ಶನ್ ಕಾರ್ ಕಲೆಕ್ಷನ್ ಬಗ್ಗೆ ಮಾಹಿತಿ ಇಲ್ಲಿದೆ.

ಜಾಗ್ವಾರ್ ಎಕ್ಸ್‌ಕೆಆರ್-ಎಸ್: ನಟ ದರ್ಶನ್ ದುಬಾರಿ ಜಾಗ್ವಾರ್ ಸ್ಪೋರ್ಟ್ಸ್ ಕೂಪ್ ಕಾರನ್ನು ಹೊಂದಿದ್ಡಾರೆ. ಈ XKR-S 2-ಬಾಗಿಲು, 4-ಡೋರುಗಳ ಕೂಪ್ ವಿನ್ಯಾಸವನ್ನು ಹೊಂದಿದ್ದು, ಇದು ಹೆಚ್ಚು ಸ್ಪೋರ್ಟಿ ವೈಬ್ ಅನ್ನು ಹೊಂದಿದೆ. 2011 ರಲ್ಲಿ ಪರಿಚಯಿಸಲಾದ XKR-S 5.0-ಲೀಟರ್ ಸೂಪರ್ಚಾರ್ಜ್ಡ್ V8 ಎಂಜಿನ್ ಅನ್ನು ಹೊಂದಿದೆ. ಜಾಗ್ವಾರ್ ಆರಂಭದಲ್ಲಿ XKR ಕೂಪೆಯನ್ನು ಭಾರತೀಯ ಕಾರು ಮಾರುಕಟ್ಟೆಯಲ್ಲಿ ಮಾರಾಟ ಮಾಡಿತು.
ಈ ಎಂಜಿನ್‌ನೊಂದಿಗೆ 510 PS ಗರಿಷ್ಠ ಪವರ್ ಮತ್ತು 625 Nm ಟಾರ್ಕ್ ಅನ್ನು ಇದು ಉತ್ಪಾದಿಸುತ್ತದೆ, ಜೊತೆಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. XKR-S, ಮತ್ತೊಂದೆಡೆ, 542 Bhp ಉತ್ಪಾದಿಸುವ ಟ್ಯೂನ್ಡ್ 5.0-ಲೀಟರ್ ಸೂಪರ್ಚಾರ್ಜ್ಡ್ V8 ಎಂಜಿನ್ ಅನ್ನು ಸಹ ಹೊಮಿಂದೆ. ಈ ಪರ್ಫಾಮೆನ್ಸ್ ರೂಪಾಂತರದ ಎಂಜಿನ್ ಅನ್ನು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮೂಲಕ ಹಿಂದಿನ ವ್ಹೀಲ್ ಗಳಿಗೆ ಪ್ರತ್ಯೇಕವಾಗಿ ವಿತರಿಸಲಾಗುತ್ತದೆ.

ಲ್ಯಾಂಬೋರ್ಗಿನಿ ಅವೆಂಟಡಾರ್ ಸ್ಪೈಡರ್‌ಗೆ: 2022 ರಲ್ಲಿ ದರ್ಶನ್ ತಮ್ಮ ಲ್ಯಾಂಬೋರ್ಗಿನಿ ಅವೆಂಟಡಾರ್ ಸ್ಪೈಡರ್‌ಗೆ ಹೆಜ್ಜೆ ಇಡುತ್ತಿರುವ ವಿಡಿಯೋ ಕೂಡ ಆ ಕಾಲದಲ್ಲಿ ಸಖತ್ ಸದ್ದು ಮಾಡಿತ್ತು. ಅವೆಂಟಡಾರ್ ಸ್ಪೈಡರ್ ಕಾರಿನಲ್ಲಿ ಕಾಣಿಸಿಕೊಂಡಿರುವ ಬೂದು ಬಣ್ಣವು ಅದರ ಮೂಲ ಬಣ್ಣದ್ದಾಗಿತ್ತು. ಇದು ಆರಂಭದಲ್ಲಿ ಬಿಳಿದಲ್ಲಿತ್ತು. ನಂತರ ದರ್ಶನ್ ಅವರು ಕಾರನ್ನು ಈಗಿರುವ ಬಣ್ಣಕ್ಕೆ ಮಾಡಿಫೈಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಲ್ಯಾಂಬೋರ್ಗಿನಿ ಉರುಸ್ :ಆಕರ್ಷಕ ಬೆಲೆಯೊಂದಿಗೆ ಅತ್ಯುತ್ತಮ ಎಂಜಿನ್ ಆಯ್ಕೆಯನ್ನು ಹೊಂದಿರುವ ಉರುಸ್ ಐಷಾರಾಮಿ ಎಸ್‌ಯುವಿ ಕಾರು ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದು, ಲ್ಯಾಂಬೋರ್ಗಿನಿ ನಿರ್ಮಾಣದ ಮೊದಲ ಎಸ್‌ಯುವಿ ಕಾರು ಮಾದರಿ ಇದಾಗಿದೆ. ಉರುಸ್ ಐಷಾರಾಮಿ ಎಸ್‌ಯುವಿಯು ಪ್ರಮುಖ ಎರಡು ವೆರಿಯೆಂಟ್‌ಗಳನ್ನು ಹೊಂದಿದ್ದು, ಸ್ಟ್ಯಾಂಡರ್ಡ್ ಮತ್ತು ಪರ್ಲ್ ಕ್ಯಾಪ್ಸಲ್ ಎನ್ನುವ ಎರಡು ವೆರಿಯೆಂಟ್‌ಗಳೊಂದಿಗೆ ಐಷಾರಾಮಿ ಎಸ್‌ಯುವಿ ಕಾರು ಖರೀದಿದಾರರಲ್ಲಿ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಉರುಸ್ ಎಸ್‌ಯುವಿ ಮಾದರಿಯು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ 4.0-ಲೀಟರ್ ಟ್ವಿನ್ ಟರ್ಬೊ ವಿ8 ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ. ಪ್ರತಿ ಗಂಟೆಗೆ 305 ಕಿ.ಮಿ ಟಾಪ್ ಸ್ಪೀಡ್‌ನಲ್ಲಿ ಕ್ರಮಿಸಬಲ್ಲ ಶಕ್ತಿ ಹೊಂದಿರುವ ಉರುಸ್ ಎಸ್‌ಯುವಿಯು ಕೇವಲ 3.6 ಸೇಕೆಂಡ್‌ಗಳಲ್ಲಿ 100 ಕಿಮಿ ವೇಗ ಪಡೆಯಬಲ್ಲದು. ಜೊತಗೆ ವಿವಿಧ ಡ್ರೈವಿಂಗ್ ಮೂಡ್‌ಗಳನ್ನು ಹೊಂದಿರುವ ಹೊಸ ಕಾರು ಲೈಫ್‌ಸ್ಟೈಲ್ ಜೊತೆಗೆ ಅಡ್ವೆಂಚರ್ ಡ್ರೈವ್‌ನಲ್ಲೂ ಮುಂಚೂಣಿ ಹೊಂದಿದೆ.
ಆಡಿ ಕ್ಯೂ7: ಈ ಆಡಿ ಕ್ಯೂ7 ನಲ್ಲಿ, ಕಂಪನಿಯು 2,995 ಸಿಸಿ ವಿ6 ಟ್ವಿನ್-ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಬಳಸಿದೆ. ಈ ಎಂಜಿನ್ 335 ಬಿಹೆಚ್‌ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 48-ವೋಲ್ಟ್ ಮೈಲ್ಡ್ ಹೈಬ್ರಿಡ್ ವ್ಯವಸ್ಥೆಯನ್ನು ಸಹ ಹೊಂದಿದೆ. ಈ ಕಾರು ಗಂಟೆಗೆ 250 ಕಿ.ಮೀ ಗರಿಷ್ಠ ವೇಗವನ್ನು ತಲುಪಬಲ್ಲದು ಮತ್ತು ಕೇವಲ 5.9 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ತಲುಪಬಲ್ಲದು.
ಅಷ್ಟೇ ಅಲ್ಲದೇ ನಟ ದರ್ಶನ್ ಅವರ ಬಳಿ ಲ್ಯಾಂಡ್ ರೋವರ್ ಡಿಫೆಂಡರ್, ಫೋರ್ಡ್ ಮಸ್ಟಾಂಗ್, ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ, ಪೋರ್ಷೆ ಕಯೆನ್ನೆ, ಟೊಯೊಟಾ ವೆಲ್‌ಫೈರ್, ಮಿನಿ ಕೂಪರ್ ಕಂಟ್ರಿಮ್ಯಾನ್, ಟೊಯೊಟಾ ಫಾರ್ಚೂನರ್, ಜೀಪ್ ರಾಂಗ್ಲರ್, ಬಿಎಂ ಡಬ್ಲ್ಯೂ 5, ಲ್ಯಾಂಡ್ ರೋವರ್ ಡಿಫೆಂಡರ್, ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ ಮುಂತಾದ ವಾಹನಗಳನ್ನು ಹೊಂದಿದ್ದಾರೆ.


Click it and Unblock the Notifications








