Qualis: ಮೊದಲ ಬಾರಿಗೆ ಸಿನಿಮಾದಲ್ಲಿ ನಟರಿಗಿಂತ ಹೆಚ್ಚು ಜನಪ್ರಿಯತೆ ಪಡೆದ 20 ವರ್ಷದ ಹಳೆಯ ಕ್ವಾಲಿಸ್!

Toyota qualis: ಇತ್ತೀಚಿನ ಮಲಯಾಳಂ ಸಿನಿಮಾಗಳು ದೇಶಾದ್ಯಂತ ಉತ್ತಮ ಪ್ರೇಕ್ಷಕಾದರಣೆಯನ್ನು ಪಡಿಯುತ್ತಿವೆ. ಪ್ರೇಮಲು, ಮಂಜುಮೋಲ್ ಬಾಯ್ಸ್, ಆವೇಶಂನಂತಹ ಸಿನಿಮಾಗಳು ನೂರು ಕೋಟಿ ದಾಟಿ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆಹೊಡಿದಿವೆ. ಇದರಲ್ಲಿ ಮುಖ್ಯವಾಗಿ ಆವೇಶಂ ಸಿನಿಮಾವನ್ನು ಸಂಪೂರ್ಣವಾಗಿ ಬೆಂಗಳೂರಿನಲ್ಲಿ ಚಿತ್ರಿಸಲಾಗಿದೆ. ಈ ಸಿನಿಮಾದಲ್ಲಿನ ನಟರಷ್ಟೇ ಜನಪ್ರಿಯತೆಯನ್ನು ಕಾರೊಂದು ಪಡೆದುಕೊಂಡಿದೆ.

ಹೌದು, ಆವೇಶಂ ಸಿನಿಮಾದಲ್ಲಿ ನಟ ಫಹದ್ ಫಾಸಿಲ್ ಅವರು ಬಳಸುವ ಟೊಯೋಟಾ ಕ್ವಾಲಿಸ್ (toyota qualis) ಅನ್ನು ಅದ್ಬುತವಾಗಿ ತೋರಿಸಲಾಗಿದೆ. ಹಾಗೆಯೇ ಮಂಜುಮೋಲ್ ಬಾಯ್ಸ್ ಸಿನಿಮಾದಲ್ಲೂ ಸ್ನೇಹಿತರೆಲ್ಲ ಟ್ರಿಪ್ ಹೊರಡುವಾಗ ಕ್ವಾಲಿಸ್ ಕಾರನ್ನು ಬಳಸಲಾಗಿದೆ. ಮಲ್ಲು ಸಿನಿಮಾ ರಂಗದ ಅಗ್ರ ನಟರಾದ ಮೋಹನ್ ಲಾಲ್‌, ಮಮ್ಮೂಟಿಯವರು ಕೂಡ ಕ್ವಾಲಿಸ್ ಅನ್ನು ಹಲವು ಸಿನಿಮಾಗಳಲ್ಲಿ ಬಳಸಿದ್ದಾರೆ.

fahad-fazil-aavesham-movie-toyota-qualis-car-details

ಇತ್ತೀಚಿನ ಈ ಎರಡೂ ಸಿನಿಮಾಗಳಲ್ಲಿ ಕಾರನ್ನು ಕೊನೆಯವರೆಗೂ ತೋರಿಸಲಾಗಿದೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಕಾರುಗಳಿಗೆ ಪ್ರತ್ಯೇಕವಾಗಿ ಪ್ರಾಮುಖ್ಯತೆ ಕೊಡುವುದಿಲ್ಲ. ಆದ್ರೆ ಆವೇಶಂ ಸಿನಿಮಾದಲ್ಲಿ ನಟ ಫಹದ್ ಫಾಸಿಲ್ ನನ್ನ ಫೇವರೆಟ್ ಕಾರೆಂದು ಹೇಳುವ ಸನ್ನಿವೇಶ ಹಾಗೂ ಅದನ್ನು ತೋರಿಸಿದ ವಿಧಾನವು ಹಲವರು ಕಾರು ಪ್ರೇಮಿಗಳಿಗೆ ಇಷ್ಟವಾಗಬಹುದು.

ಹಾಗೆಯೇ ಮಂಜುಮೋಲ್ ಬಾಯ್ಸ್ ಸಿನಿಮಾದಲ್ಲೂ ಕ್ವಾಲಿಸ್ ಕಾರನ್ನು ತುಂಬಾ ಹೆಚ್ಚಾಗಿ ತೋರಿಸಲಾಗಿದೆ. ಸ್ನೇಹಿತರ ಗುಂಪು ಬರೋಬ್ಬರಿ ಹತ್ತುಮಂದಿ ಕ್ವಾಲಿಸ್‌ನಲ್ಲಿ ಟ್ರಿಪ್ ಹೋಗುವುದನ್ನು ತೋರಿಸಿಲಾಗಿದೆ. ಅಂದರೆ ಈ ಎಂಪಿವಿನಲ್ಲಿ ಡ್ರೈವರ್ ಸೇರಿದಂತೆ 11 ಮಂದಿ ಕೂರುವ ಸಾಮರ್ಥ್ಯವನ್ನು ತುಂಬಾ ಚೆನ್ನಾಗಿ ತೋರಿಸಲಾಗಿದೆ.

fahad-fazil-aavesham-movie-toyota-qualis-car-details

ಕೇರಳದಲ್ಲಿ ಕ್ವಾಲಿಸ್‌ಗೆ ಕ್ರೇಜ್ ಹೆಚ್ಚು: ಕೇರಳದಲ್ಲಿ ಈ ಕಾರಿಗೆ ಪ್ರತ್ಯೇಕ ಅಭಿಮಾನಿ ಬಳಗವಿರುವ ಕಾರಣ, ಮಲಯಾಳಂ ಸಿನಿಮಾಗಳಲ್ಲಿ toyota qualis ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಕೇವಲ ಕೇರಳ ಮಾತ್ರವಲ್ಲ ನಮ್ಮ ಕರ್ನಾಟಕದ ಹಲವೆಡೆ ಇಂದಿಗೂ ಈ ಕಾರನ್ನು ಉತ್ತಮವಾಗಿ ನಿರ್ವಹಣೆ ಮಾಡಿದವರು ಹಲವರಿದ್ದಾರೆ.

ಭಾರತದಲ್ಲಿ ಟೊಯೋಟಾದ ಮೊದಲ ಕಾರು: ಆವೇಶಂ ಸಿನಿಮಾದಲ್ಲಿ ಸಂಪೂರ್ಣವಾಗಿ ಮಾಡಿಫೈಗೊಳಿಸಿ 24 ವರ್ಷಗಳ ಹಿಂದೆ ಬಿಡುಗಡೆಯಾದಾಗ ಹೇಗಿತ್ತೋ ಹಾಗೆಯೇ ತೋರಿಸಲಾಗಿದೆ. ಈ ಕಾರು ಟೊಯೋಟಾದಿಂದ ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ನೀಡಿದ ಮೊದಲ ಉತ್ಪನ್ನವಾಗಿದೆ. ಇದನ್ನು 2000 ರಲ್ಲಿ ಬಿಡುಗಡೆ ಮಾಡಿ 2004 ರವರೆಗೆ ಮಾರಾಟಕ್ಕೆ ಲಭ್ಯವಿರಿಸಲಾಗಿತ್ತು.

fahad-fazil-aavesham-movie-toyota-qualis-car-details

ಕ್ವಾಲಿಸ್ ಕಡಿಮೆ ಸಮಯದಲ್ಲಿ ಖರೀದಿದಾರರಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಆಗಿನ ಕಾಲಕ್ಕೆ ಟೊಯೊಟಾ ಕ್ವಾಲಿಸ್ ತನ್ನ ವಿಭಾಗದಲ್ಲಿ ಮಹೀಂದ್ರಾ ಬೊಲೆರೊ ಮತ್ತು ಟಾಟಾ ಸುಮೊಗಳೊಂದಿಗೆ ಸ್ಪರ್ಧಿಸುತ್ತಿತ್ತು. ಇಂದಿಗೂ ಇದರ ಕ್ರೇಜ್ ಕಡಿಮೆಯಾಗಿಲ್ಲ, ಪ್ರಸ್ತುತ ಉತ್ತಮವಾಗಿ ನಿರ್ವಹಿಸಲಾದ ಟೊಯೋಟಾ ಕ್ವಾಲಿಸ್‌ಗಳನ್ನು ಅಲ್ಲಲ್ಲಿ ನೋಡಬಹುದು.

ಹೆಚ್ಚಾಗಿ ಟೊಯೋಟಾ ಕ್ವಾಲಿಸ್‌ನಲ್ಲಿನ ವಿಶಾಲವಾದ ಕ್ಯಾಬಿನ್, ಪ್ರೀಮಿಯಂ ನೋಟ ಮತ್ತು ಅತ್ಯಂತ ವಿಶ್ವಾಸಾರ್ಹ ಎಂಜಿನ್‌ನೊಂದಿಗೆ ಈ ಎಂಪಿವಿ ಅಂದಿನ ಕಾಲಕ್ಕೆ ಫ್ಯಾಮಿಲಿ ಕಾರಾಗಿ ಹಲವು ಕುಟುಂಬಗಳ ಫೆವರೆಟ್ ಕಾರಾಗಿ ಜನಪ್ರಿಯತೆ ಪಡೆಯಿತು. 2004ರ ಬಳಿಕ ಪೈಪೋಟಿ ಹೆಚ್ಚಾಗಿ ಟೊಯೊಟಾ ಇನೋವಾವನ್ನು ಕ್ವಾಲಿಸ್ ಬದಲಿಯಾಗಿ ಮಾರುಕಟ್ಟೆಗೆ ಪರಿಚಯಿಸಲಾಯಿತು.

fahad-fazil-aavesham-movie-toyota-qualis-car-details

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, May 22, 2024, 14:36 [IST]
English summary
Fahad fazil aavesham movie toyota qualis car details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+