10 ಕೋಟಿ ಮೌಲ್ಯದ ವೈಭವೋಪೇತ ಫೆರಾರಿ ಕಾರನ್ನು ಖರೀದಿಸಿದ ಪುಷ್ಪ ಸಿನಿಮಾದ ಭನ್ವರ್ ಸಿಂಗ್ ಶೇಖಾವತ್!
ಫಹಾದ್ ಫಾಜಿಲ್ (Fahadh Faasil) ಜನಪ್ರಿಯ ಮಲಯಾಳಂ ನಟರಾಗಿದ್ದು, ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲೂ ಫುಲ್ ಆಕ್ಟಿವ್ ಆಗಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದ ಪೊಲೀಸ್ ಅಧಿಕಾರಿ 'ಭನ್ವರ್ ಸಿಂಗ್ ಶೇಖಾವತ್' ಪಾತ್ರ ಫಹಾದ್ ಫಾಜಿಲ್ ಅವರಿಗೆ ದೊಡ್ಡ ಮಟ್ಟದ ಖ್ಯಾತಿಯನ್ನು ತಂದುಕೊಟ್ಟಿತ್ತು. ಸದ್ಯ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.
ಈಚೆಗೆ ನಟ ಫಹಾದ್ ಫಾಜಿಲ್ ಅವರು ದುಬಾರಿ ಬೆಲೆಯ ಫೆರಾರಿ ಪುರೋಸಾಂಗ್ಯು (Ferrari Purosangue) ಎಸ್‌ಯುವಿಯನ್ನು ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ. ವಿಶೇಷವಾಗಿ ಕೇರಳ ರಾಜ್ಯದಲ್ಲಿ ಈ ಫೆರಾರಿ ಕಾರನ್ನು ತೆಗೆದುಕೊಂಡು ಮೊದಲ ವ್ಯಕ್ತಿ ಎಂಬ ಹಿರಿಮೆಗೂ ಫಹಾದ್ ಫಾಜಿಲ್ ಪಾತ್ರರಾಗಿದ್ದಾರೆ.

ಫೆರಾರಿ ಪುರೋಸಾಂಗ್ಯು ವಿಶೇಷತೆಗಳೇನು:
ಇದೊಂದು ಎಸ್‌ಯುವಿಯಾಗಿದೆ. ದೇಶೀಯವಾಗಿ ರೂ.10.5 ಕೋಟಿ ಎಕ್ಸ್-ಶೋರೂಂ ಬೆಲೆಯನ್ನು ಹೊಂದಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಪಡೆದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಸ್ಲಿಮ್ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಕಾರ್ಬನ್ ಫೈಬರ್ ಅಸೆಂಟ್‌ಗಳು, ಕ್ವಾಡ್ ಎಕ್ಸಾಸ್ಟ್‌ಗಳು ಹಾಗೂ 22 ಹಾಗೂ 23 ಇಂಚಿನ ವೀಲ್‌ಗಳನ್ನು ಒಳಗೊಂಡಿದೆ.
ನೂತನ ಫೆರಾರಿ ಪುರೋಸಾಂಗ್ಯು ಕಾರು ರೊಸ್ಸೊ ಕೊರ್ಸಾ, ರೊಸ್ಸೊ ಮುಗೆಲ್ಲೊ ರೊಸ್ಸೊ ಸ್ಕುಡೆರಿಯಾ, ಗಿಯಾಲೊ ಮೊಡೆನಾ, ಬ್ಲೂ ಪೊಜ್ಜಿ, ನೀರೋ, ಬಿಯಾಂಕೊ ಅವಸ್ ಹಾಗೂ ಗ್ರಿಜಿಯೊ ಸ್ಕುರೊ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 4,973 ಎಂಎಂ ಉದ್ದ, 2,028 ಎಂಎಂ ಅಗಲ ಹಾಗೂ 1,589 ಎಂಎಂ ಎತ್ತರವು ಇದೆ. 185 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 3,018 ವೀಲ್‌ಬೇಸ್‌ನ್ನು ಪಡೆದಿದೆ.

ಈ ಎಸ್‌ಯುವಿ 4 ಆಸನಗಳನ್ನು ಒಳಗೊಂಡಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಪ್ರಯಾಣ ಮಾಡಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರಯಾಣಿಸುವಾಗ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 473 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಹೊಂದಿದೆ.
ಇದು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 6.5-ಲೀಟರ್ ವಿ12 ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 715 ಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 716 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 8-ಸ್ಪೀಡ್ ಡುಯಲ್ ಕ್ಲಚ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. ಎಡಬ್ಲ್ಯೂಡಿ (ಆಲ್ ವೀಲ್ ಡ್ರೈವ್) ಟೆಕ್ನಾಲಜಿಯನ್ನು ಹೊಂದಿದೆ.
ಹೊಸ ಫೆರಾರಿ ಪುರೋಸಾಂಗ್ಯು ಕಾರು 100 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ಪಡೆದಿದೆ. 10 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 310 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಕೇವಲ 3.3 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.
ಈ ಎಸ್‌ಯುವಿಯು ಹತ್ತಾರು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ದೊಡ್ಡ ಗಾತ್ರದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಕಾರ್ಬನ್ ಫೈಬರ್ ರೂಫ್, ಮಸಾಜ್ ಫಂಕ್ಷನ್ ಹೊಂದುರುವ ಫ್ರಂಟ್ ಸೀಟ್‌ಗಳನ್ನು ಹೊಂದಿದೆ. ಸುರಕ್ಷತೆಗಾಗಿ 4-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
ಇನ್ನು, ನಟ ಫಹಾದ್ ಫಾಜಿಲ್ ಹಲವು ಐಷಾರಾಮಿ ಕಾರುಗಳ ಮಾಲೀಕರು ಆಗಿದ್ದಾರೆ. ಅವರ ಗ್ಯಾರೇಜ್‌ನಲ್ಲಿ ಲಂಬೋರ್ಘಿನಿ ಉರುಸ್, ಪೋರ್ಷೆ 911 ಕ್ಯಾರೆರಾ ಎಸ್, ಮಿನಿ ಕಂಟ್ರಿಮ್ಯಾನ್, ಮರ್ಸಿಡಿಸ್ ಬೆಂಜ್ ಇ63 ಎಎಂಜಿ ಹಾಗೂ ಲ್ಯಾಂಡ್ ರೋವರ್ ಡಿಫೆಂಡರ್ 90ನಂತಹ ದೊಡ್ಡ ಕಾರುಗಳ ಸಂಗ್ರಹವೇ ಇದೆ.


Click it and Unblock the Notifications








