ಅಪಘಾತಕ್ಕೀಡಾಯ್ತು ನಟ ಜಗ್ಗೇಶ್ ಪುತ್ರ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು

ಕನ್ನಡ ಚಿತ್ರರಂಗದ ಹಿರಿಯ ನಟ ನವರಸ ನಾಯಕ ಜಗ್ಗೇಶ್ ರವರ ಕಿರಿಯ ಪುತ್ರ ಯತಿರಾಜ್​ ಚಲಿಸುತ್ತಿದ್ದ ಕಾರು ರಸ್ತೆ ಅಪಘಾತಕ್ಕೀಡಾಗಿದೆ. ಯತಿರಾಜ್‌ರವರ ಕಾರು ಬೆಂಗಳೂರು - ಚಿಕ್ಕಬಳ್ಳಾಪುರ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದೆ.

ಅಪಘಾತಕ್ಕೀಡಾಯ್ತು ನಟ ಜಗ್ಗೇಶ್ ಪುತ್ರ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು

ಯತಿರಾಜ್‌ರವರು ಕಾರಿನಲ್ಲಿ ಚಲಿಸುತ್ತಿದ್ದಾಗ ನಾಯಿಯೊಂದು ಅಡ್ಡ ಬಂದಿದೆ. ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತಿರಾಜ್‌ರವರು ಸ್ಟೀಯರಿಂಗ್ ವ್ಹೀಲ್ ತಿರುಗಿಸಿದ ಪರಿಣಾಮ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತಕ್ಕೀಡಾಯ್ತು ನಟ ಜಗ್ಗೇಶ್ ಪುತ್ರ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು

ಕಾರು ಹೆದ್ದಾರಿಯ ಡಿವೈಡರ್​ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗವು ನಜ್ಜು ಗುಜ್ಜಾಗಿದೆ. ಅದೃಷ್ಟವಶಾತ್​ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಲ್ಲಿ ಯತಿರಾಜ್‌ರವರಿಗೆ ಯಾವುದೇ ಗಾಯಗಳಾಗಿಲ್ಲ.

ಅಪಘಾತಕ್ಕೀಡಾಯ್ತು ನಟ ಜಗ್ಗೇಶ್ ಪುತ್ರ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು

ಈ ಘಟನೆ ಬಗ್ಗೆ ಜಗ್ಗೇಶ್'ರವರೇ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಅಪಘಾತಕ್ಕೀಡಾಯ್ತು ನಟ ಜಗ್ಗೇಶ್ ಪುತ್ರ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು

ಕರೋನಾ ಶುರುವಾದಾಗಿನಿಂದ ಮನೆಯಲ್ಲಿಯೇ ಇದ್ದ ಯತಿರಾಜ್, ಹೊರ ಹೋಗಿ ಬರುವೆ ಎಂದು ತಮ್ಮ ತಾಯಿಗೆ ತಿಳಿಸಿ ಹೊರ ಹೋಗಿದ್ದರು. ಅವರ ನೆಚ್ಚಿನ ಬೆಂಗಳೂರು - ಚಿಕ್ಕ ಬಳ್ಳಾಪುರ ರಸ್ತೆಯಲ್ಲಿ ಸಾಗುವಾಗ ಈ ಘಟನೆ ನಡೆದಿದೆ.

ಅಪಘಾತಕ್ಕೀಡಾಯ್ತು ನಟ ಜಗ್ಗೇಶ್ ಪುತ್ರ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು

ಕಾರಿಗೆ ಅಡ್ಡಬಂದ ನಾಯಿಯನ್ನು ತಪ್ಪಿಸಲು ಹೋದಾಗ ಈ ಘಟನೆ ಸಂಭವಿಸಿದೆ. ರಾಯರ ದಯೆ ಹಾಗೂ ಜನರ ಶುಭ ಹಾರೈಕೆಯಿಂದ ಯತಿರಾಜ್‌ರವರಿಗೆ ಸಣ್ಣ ಗಾಯವೂ ಆಗಿಲ್ಲವೆಂದು ಜಗ್ಗೇಶ್'ರವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಅಪಘಾತಕ್ಕೀಡಾಯ್ತು ನಟ ಜಗ್ಗೇಶ್ ಪುತ್ರ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು

ಯತಿರಾಜ್ ತಮ್ಮ ಬಿಳಿ ಬಣ್ಣದ ಬಿಎಂಡಬ್ಲು ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಅಪಘಾತವಾದ ಸಂದರ್ಭದಲ್ಲಿ ಯತಿರಾಜ್ ಒಬ್ಬರೇ ಈ ಕಾರಿನಲ್ಲಿದ್ದರು ಎಂದು ಹೇಳಲಾಗಿದೆ.

ಅಪಘಾತಕ್ಕೀಡಾಯ್ತು ನಟ ಜಗ್ಗೇಶ್ ಪುತ್ರ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು

ನವರಸ ನಾಯಕ ಜಗ್ಗೇಶ್'ರವರು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಹಲವು ಸಂಗತಿಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿ ಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ಅಪಘಾತಕ್ಕೀಡಾಗಿ ಮೃತಪಟ್ಟ ಸಂಚಾರಿ ವಿಜಯ್'ರವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಜಗ್ಗೇಶ್'ರವರು ಅವರನ್ನು ಕಾಣಲು ಆಸ್ಪತ್ರೆಗೆ ಭೇಟಿ ನೀಡಿದ್ದರು.

ಅಪಘಾತಕ್ಕೀಡಾಯ್ತು ನಟ ಜಗ್ಗೇಶ್ ಪುತ್ರ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು

ಜಗ್ಗೇಶ್'ರವರ ಎರಡನೇ ಪುತ್ರ ಯತಿರಾಜ್‌ರವರು ಸಹ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರು ತಮ್ಮ ತಂದೆ ಜಗ್ಗೇಶ್'ರವರೊಂದಿಗೂ ಕೆಲವು ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Actor Jaggesh son Yathiraj met with an accident. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X