ಮಳೆ ಆರ್ಭಟಕ್ಕೆ ನಟ ಜಗ್ಗೇಶ್ ಐಷಾರಾಮಿ ಬಿಎಂಡಬ್ಲ್ಯು ಕಾರು ಮುಳುಗಡೆ
ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ (ನಿನ್ನೆ) ಬೆಳಿಗ್ಗೆಯಿಂದ ಸಾಮಾನ್ಯ ಬಿಸಿಲಿನಿಂದ ಕೂಡಿತ್ತು. ಆದರೆ ಮಧ್ಯಾಹ್ನ ನಂತರ ಮಳೆಯಾಗಿದ್ದು, ಹಲವೆಡೆ ಆಲಿಕಲ್ಲು ಮಳೆಯಾಗಿದೆ. ಈ ಏಕಾಏಕಿ ಸುರಿದ ಮಳೆಯಿಂದ ಜನರು ಕಂಗೆಟ್ಟಿದ್ದಾರೆ. ಮನೆಯೊಳಗೆ ಏಕಾಏಕಿ ನೀರು ನುಗ್ಗಿದ್ದು, ಹಲವರಿಗೆ ಸಮಸ್ಯೆಯುಂಟು ಮಾಡಿದ್ದು, ನಿನ್ನೆಯ ಮಳೆಗೆ ಸಾಕಷ್ಟು ಹಾನಿ ಉಂಟಾಗಿದೆ.
ಬೆಂಗಳೂರಿನಲ್ಲಿ ಅಕಾಲಿಕ ಮಳೆಯಿಂದ ಓರ್ವ ಯುವತಿಯೂ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಹಲವು ರಸ್ತೆಗಳಲ್ಲಿ ಮಳೆಯಿಂದಾಗಿ ಮರಗಳು ಬಿದ್ದಿವೆ. ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿತ್ತು. ಈ ನಡುವೆ, ನಟ, ರಾಜಕಾರಣಿ ಜಗ್ಗೇಶ್ ಅವರಿಗೂ ನಿನ್ನೆಯ ಮಳೆ ಎಫೆಕ್ಟ್ ಆಗಿದೆ. ಜಗ್ಗೇಶ್ ಅವರ ಐಷಾರಾಮಿ ಬಿಎಂಡಬ್ಲ್ಯು ಕಾರ್ ಕೂಡ ನೀಡ ನೀರಿನಲ್ಲಿ ಮುಳುಗಿ ಹೋಗಿದೆ. ಇದರ ಬಗ್ಗೆ ಅವರು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಟ್ವಿಟರ್ ನಲ್ಲಿ, ನನ್ನ ಮನೆಯ ರಿಪೇರಿ ಕಾರ್ಯದ ಪ್ರಯುಕ್ತ ಸ್ನೇಹಿತ ಮುರಳಿ ಮನೆಯ ಸೆಲ್ಲಾರ್ನಲ್ಲಿ ನನ್ನ bmw5 ಕಾರು ನಿಲ್ಲಿಸಿದ್ದೆ. ಅಕಾಲಿಕ ಮಳೆಯಿಂದ ನೀರಿನಲ್ಲಿ ಮುಳುಗಡೆ ಆಯಿತು. 5hp ಮೋಟರ್ ಬಳಸಿ ನೀರು ಹೊರಹಾಕಿಸಲಾಯಿತು. ಇಂಥ ಆಲಿಕಲ್ಲಿನ ಮಳೆ ಈ ತಿಂಗಳಲ್ಲಿ ಬಂದದ್ದು ಆಶ್ಚರ್ಯ' ಎಂದು ಅವರು ಬರೆದುಕೊಂಡಿದ್ದಾರೆ. ಈ ಐಷಾರಾಮಿ ಬಿಎಂಡಬ್ಲ್ಯು ಕಾರು ಮುಳುಗಿರುವ ಚಿತ್ರವನ್ನು ಕೂಡ ಶೇರ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಕಳೆದ ಕೆಲವು ವಾರಗಳಿಂದ ಮಳೆಯಾಗುತ್ತಿದೆ, ಆದರೆ, ನಿನ್ನೆ ಸುರಿದ ಆಲಿಕಲ್ಲು ಮಳೆ ಸಾಕಷ್ಟು ಹಾನಿ ಮಾಡಿದೆ, ಇನ್ನು ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಕಂಡು ಜನರು ಸಂತಸಪಟ್ಟರೆ ಹೊರಭಾಗದಲ್ಲಿದ್ದವರು, ಟ್ರಾಫಿಕನಲ್ಲಿ ವಾಹನಗಳು ಕೆಲ ಕಾಲ ಸಿಲುಕಿಕೊಂಡು ಆತಂಕಕ್ಕೊಳಗಾಗಿದ್ದರು. ನಿನ್ನೆ ಸುರಿದ ಅಕಾಲಿಕ ಮಳೆಗೆ ಸಾಕಷ್ಟು ಹಾನಿ ಉಂಟಾಗಿದೆ. ನಟ ಜಗ್ಗೇಶ್ ಅವರ ಕಾರು ಮಾತ್ರವಲ್ಲದೇ ಹಲವು ಸಾಮಾನ್ಯ ಜನರು ಕಾರು ಕೂಡ ಮುಳುಗಿ ಹೋಗಿದೆ.
ಬೆಂಗಳೂರಿನ ಕೆ.ಆರ್. ಸರ್ಕಲ್ ಬಳಿಯ ಅಂಡರ್‌ಪಾಸ್‌ನಲ್ಲಿ ನಿಂತ ನೀರಿನಲ್ಲಿ ಮುಳುಗಿದ ಕಾರನಲ್ಲಿ ಸಿಲುಕಿದ್ದ ಯುವತಿ ಸಾವನ್ನಪ್ಪಿದೆ. ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ವಾಹನಗಳು ಮುಳುಗುವ ಪರಿಸ್ಥಿತಿ ನಿರ್ಮಾಣವಾದರೆ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಪಾಲಿಸುವುದು ತುಂಬಾ ಮುಖ್ಯವಾಗಿರುತ್ತದೆಮಳೆಯ ಸಂದರ್ಭದಲ್ಲಿ ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ನಿಂತ ಸಂದರ್ಭದಲ್ಲಿ ನೀರಿನ ಆಳವನ್ನು ತಿಳಿಯಲು ಸಾಧ್ಯವಾಗುವುದಿಲ್ಲ.
ಇದರಿಂದಾಗಿ ನಾವು ನೀಡುವ ಮೊದಲನೇ ಸಲಹೆಯೆಂದರೆ ಹೆಚ್ಚಿನ ಮಳೆಯಿಂದಾಗಿ ಉಂಟಾಗುವ ಪ್ರವಾಹದ ಸಂದರ್ಭದಲ್ಲಿ ಅಂತಹ ರಸ್ತೆಗಳಲ್ಲಿ ಸಾಧ್ಯವಾದಷ್ಟು ವಾಹನ ಸಂಚಾರವನ್ನು ತಪ್ಪಿಸಿರಿ. ಇನ್ನು ಪ್ರವಾಹದ ಸಂದರ್ಭದಲ್ಲಿ ಭಯ, ಆತಂಕಕ್ಕಿಂತಲೂ ಹೆಚ್ಚು ಬುದ್ಧಿವಂತಿಕೆಯಿಂದ ಪ್ರಯಾಣಿಸಬೇಕು. ಪ್ರವಾಹ ಪೀಡಿತ ರಸ್ತೆಗಳಲ್ಲಿ ಸಾಗಲೇಬೇಕಾದ ಅನಿವಾರ್ಯತೆಯ ಸಂದರ್ಭದಲ್ಲಿ ಆಳವನ್ನು ಅರಿಯಲು ನಿಮ್ಮ ಮುಂದೆ ಸಂಚರಿಸುವ ವಾಹನಗಳನ್ನು ಅಥವಾ ಪಾದಚಾರಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಮುಂದೆ ಹೋಗಿ.
ಇದರಿಂದ ರಸ್ತೆಯಲ್ಲಿರುವ ಸಣ್ಣ, ಪುಟ್ಟ ಗುಂಡಿಗಳಲ್ಲಿ ವಾಹನಗಳು ಸಿಲುಕುವುದನ್ನು ತಪ್ಪಿಸಬಹುದಾಗಿದೆ. ಹಾಗೊಂದು ವೇಳೆ ನೀರಿನ ಪ್ರಮಾಣವು ಚಕ್ರದ ಮಟ್ಟಕ್ಕಿಂತಲೂ ಹೆಚ್ಚಾಗಿದ್ದಲ್ಲಿ ಅಂತಹ ರಸ್ತೆಗಳಲ್ಲಿ ಮುಂದಕ್ಕೆ ಚಲಿಸುವ ಪ್ರಯತ್ನಕ್ಕೆ ಹೋಗದಿರಿ. ಇನ್ನು ಪ್ರವಾಹದ ನೀರಿನಲ್ಲಿ ವಾಹನ ಸಿಲುಕಿಕೊಂಡಾಗ ಪರಿಸ್ಥಿತಿ ಕೈ ಮೀರುವುದಕ್ಕಿಂತಲೂ ಮುನ್ನ ಕಾರನ್ನು ರಿವರ್ಸ್ ತೆಗೆದು ಪರ್ಯಾಯ ಮಾರ್ಗ ಹಿಡಿಯಲು ಪ್ರಯತ್ನಿಸಿ. ಇಲ್ಲವಾದರೆ ನಿಮ್ಮ ವಾಹನವನ್ನು ಅಲ್ಲಿಯೇ ಕೈಬಿಟ್ಟು ನೀವು ಮೊದಲು ಸುರಕ್ಷಿತ ಪ್ರದೇಶದತ್ತ ತೆರಳಿ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಚಲಿಸುವಾಗ ಯಾವಾಗಲೂ ಮೊದಲ ಗೇರ್ ನಲ್ಲೇ ಪ್ರಯಾಣಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. ಇದು ನೀರಿನಲ್ಲಿ ವಾಹನದ ಸ್ಥಿರತೆ ಕಾಪಾಡುವುದರೊಂದಿಗೆ ನಿಧಾನವಾಗಿ ಮುಂದಕ್ಕೆ ಚಲಿಸಲು ನೆರವಾಗುತ್ತದೆ. ಇನ್ನು ನೀರಿನ ಮಟ್ಟ ಜಾಸ್ತಿಯಿದ್ದ ಸಂದರ್ಭದಲ್ಲಿ ಕಾರು ಚಾಲನೆ ಮುಂದಾದಾಗ ಸಡನ್ ಆಗಿ ನೀರಲ್ಲಿ ಆಫ್ ಆದ್ದಲ್ಲಿ ಆಗ ಕಾರನ್ನು ಮತ್ತೆ ಸ್ಟ್ಯಾರ್ಟ್ ಮಾಡುವ ಪ್ರಯತ್ನಕ್ಕೆ ಹೋಗಲೇಬಾರದು. ಇದರಿಂದ ಹೈಡ್ರೋಸ್ಟಾಟಿಕ್ ಲಾಕ್ ತೊಂದರೆ ಎದುರಾಗುವ ಭೀತಿಯಿರುತ್ತದೆ.


Click it and Unblock the Notifications