Maruti Suzuki Ciaz ಕಾರು ಚಾಲನೆ ಮಾಡಿ ಟ್ರೋಲ್ ಆದ ಕಿರು ತೆರೆ ನಟ

ಖ್ಯಾತ ಕಿರು ತೆರೆ ನಟ ಹಾಗೂ ಬಿಗ್ ಬಾಸ್ ವಿಜೇತರಾದ ಸಿದ್ಧಾರ್ಥ್ ಶುಕ್ಲಾರವರು ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ ಕೇವಲ 40 ವರ್ಷ ವಯಸ್ಸಾಗಿತ್ತು. ಅವರಿಗೆ ಹಲವು ಗಣ್ಯ ವ್ಯಕ್ತಿಗಳು ಶ್ರದ್ದಾಂಜಲಿ ಸಲ್ಲಿಸಿದರು. ಕೆಲವರು ಅವರ ಮನೆಗೆ ತೆರಳಿ ಅವರ ತಾಯಿಗೆ ಸಾಂತ್ವನ ಹೇಳಿದರು. ಹೀಗೆ ಸಾಂತ್ವನ ಹೇಳಿದವರಲ್ಲಿ ನಟ ಕರನ್ವೀರ್ ಬೋಹ್ರಾ ಸಹ ಒಬ್ಬರು.

Maruti Suzuki Ciaz ಕಾರು ಚಾಲನೆ ಮಾಡಿ ಟ್ರೋಲ್ ಆದ ಕಿರು ತೆರೆ ನಟ

ಕರನ್ವೀರ್ ಬೋಹ್ರಾ ಕಿರು ತೆರೆ ಲೋಕದಲ್ಲಿ ಜನಪ್ರಿಯರಾಗಿದ್ದಾರೆ. ಅವರು ನೆಗೆಟಿವ್ ಪಾತ್ರಗಳಿಂದಲೇ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ Maruti Suzuki Ciaz ಕಾರಿನಲ್ಲಿ ಸಿದ್ದಾರ್ಥ್ ಶುಕ್ಲಾರವರ ಮನೆಗೆ ತೆರಳಿದ್ದರು. ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೊವನ್ನು ನೋಡಿದವರು ಕರನ್ವೀರ್ ಬೋಹ್ರಾರವರನ್ನು ಬಡವ ಎಂದು ಕರೆಯುತ್ತಿದ್ದಾರೆ.

Maruti Suzuki Ciaz ಕಾರು ಚಾಲನೆ ಮಾಡಿ ಟ್ರೋಲ್ ಆದ ಕಿರು ತೆರೆ ನಟ

ಈ ವೀಡಿಯೊವನ್ನು ಮಾಧ್ಯಮ ಸಂಸ್ಥೆಗೆ ಸೇರಿದವರು ಪೋಸ್ಟ್ ಮಾಡಿರುವ ಸಾಧ್ಯತೆಗಳಿವೆ. ಈ ವೀಡಿಯೊದಲ್ಲಿ, ಸಿಯಾಜ್ ಮೇ ಆಯೇ ಹೈ, ಗರೀಬ್ ಗರೀಬ್ ದಿಖ್ ರಹಾ ಹೈ ಹೇ ತೋ (ಅವನು ಸಿಯಾಜ್‌ನಲ್ಲಿ ಬಂದಿದ್ದಾನೆ. ಅವನು ಬಡವನಂತೆ ಕಾಣುತ್ತಾನೆ) ಎಂದು ಹೇಳುವುದನ್ನು ಕೇಳಬಹುದು. ಈ ಘಟನೆ ನಡೆಯುವಾಗ ಕರನ್ವೀರ್ ಬೋಹ್ರಾ ಸಿದ್ಧಾರ್ಥ್ ಶುಕ್ಲಾರವರ ಮನೆಯ ಮುಂದೆ ಇದ್ದ ಇಬ್ಬರು ಪೊಲೀಸರೊಂದಿಗೆ ಮಾತನಾಡುತ್ತಿದ್ದರು.

Maruti Suzuki Ciaz ಕಾರು ಚಾಲನೆ ಮಾಡಿ ಟ್ರೋಲ್ ಆದ ಕಿರು ತೆರೆ ನಟ

ತಮ್ಮನ್ನು ಟ್ರೋಲ್ ಮಾಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರನ್ವೀರ್ ಬೋಹ್ರಾ, ಸಿಯಾಜ್ ಕಾರಿನಲ್ಲಿ ಓಡಾಡುವವರು ಬಡವರಾಗುತ್ತಾರೆಯೇ. ಈ ರೀತಿಯ ಹೇಳಿಕೆಗಳು ನಿಜಕ್ಕೂ ದುಃಖಕರವಾಗಿವೆ. ನಾವು 5 ಸ್ಟಾರ್ ಪ್ರದರ್ಶನಗಳನ್ನು ನೀಡಲು ಇಲ್ಲಿಗೆ ಬಂದಿದ್ದೇವೆಯೇ? ಮಗನನ್ನು ಕಳೆದುಕೊಂಡ ತಾಯಿಗೆ ಸಾಂತ್ವನ ನೀಡಲು ಇಲ್ಲಿಗೆ ಬಂದಿದ್ದೇನೆ. ಇಂತಹ ದುಃಖದ ಸಮಯದಲ್ಲೂ ಮಾಧ್ಯಮದವರು ಈ ರೀತಿ ಮಾಡುತ್ತಿರುವುದು ಬೇಸರ ತರಿಸಿದೆ ಎಂದು ಹೇಳಿದ್ದಾರೆ.

Maruti Suzuki Ciaz ಕಾರು ಚಾಲನೆ ಮಾಡಿ ಟ್ರೋಲ್ ಆದ ಕಿರು ತೆರೆ ನಟ

ನಟ ಸಿದ್ಧಾರ್ಥ್ ಶುಕ್ಲಾ ಕಳೆದ ಗುರುವಾರ ಮುಂಬೈನಲ್ಲಿ ನಿಧನರಾದರು. ಅವರಿಗೆ ಕೇವಲ 40 ವರ್ಷ ವಯಸ್ಸಾಗಿತ್ತು. ಅವರು ಕೂಪರ್ ಆಸ್ಪತ್ರೆಯಲ್ಲಿ ಮೃತ ಪಟ್ಟರು. ಅವರು ಹೃದಯ ಸ್ತಂಭನದಿಂದ ಮೃತ ಪಟ್ಟರು. ಹೃದಯ ಸ್ತಂಭನದ ಹಿಂದಿನ ನಿಖರವಾದ ಕಾರಣವನ್ನು ತಿಳಿಯಲು ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

Maruti Suzuki Ciaz ಕಾರು ಚಾಲನೆ ಮಾಡಿ ಟ್ರೋಲ್ ಆದ ಕಿರು ತೆರೆ ನಟ

ಮರಣೋತ್ತರ ಪರೀಕ್ಷೆಯ ವರದಿಗಳ ಬಗ್ಗೆ ವೈದ್ಯರು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಅಂದ ಹಾಗೆ ಕರನ್ವೀರ್ ಬೋಹ್ರಾರವರು ಪ್ರಯಾಣಿಸಿದ ಸಿಯಾಜ್ ಕಾರ್ ಅನ್ನು ಉತ್ತಮ ಕಾರ್ ಚಾಲಕ ಕಾರು ಎಂದು ಪರಿಗಣಿಸಲಾಗುತ್ತದೆ. ಈ ಕಾರು ಹಿಂಬದಿಯ ಪ್ರಯಾಣಿಕರಿಗೆ ಸಾಕಷ್ಟು ಲೆಗ್ ಸ್ಪೇಸ್ ನೀಡುತ್ತದೆ.

Maruti Suzuki Ciaz ಕಾರು ಚಾಲನೆ ಮಾಡಿ ಟ್ರೋಲ್ ಆದ ಕಿರು ತೆರೆ ನಟ

ಈ ಕಾರಿನ ಆರಂಭಿಕ ಬೆಲೆ ಎಕ್ಸ್ ರೂಂ ದರದಂತೆ ರೂ. 8.52 ಲಕ್ಷಗಳಿಂದ ಆರಂಭವಾಗಿ ರೂ. 11.50 ಲಕ್ಷಗಳವರೆಗೆ ಇದೆ. ಅವರು ಹಾರ್ಲೆ ಡೇವಿಡ್ಸನ್ ನೈಟ್ ರಾಡ್ ಬೈಕ್ ಅನ್ನು ಸಹ ಹೊಂದಿದ್ದಾರೆ. ಈ ಬೈಕಿಗೆ ಫ್ಯಾನ್ಸಿ ನಂಬರ್ ಅನ್ನು ಸಹ ಪಡೆದಿದ್ದಾರೆ. ಅವರು 7 ವರ್ಷಗಳಿಂದ ಈ ಬೈಕ್ ಅನ್ನು ಹೊಂದಿದ್ದಾರೆ.

Maruti Suzuki Ciaz ಕಾರು ಚಾಲನೆ ಮಾಡಿ ಟ್ರೋಲ್ ಆದ ಕಿರು ತೆರೆ ನಟ

ಕರನ್ವೀರ್ ಬೋಹ್ರಾರವರು ಮಾತ್ರವಲ್ಲದೇ ಹಲವು ಸೆಲೆಬ್ರಿಟಿಗಳು ಸಾಧಾರಣ ಕಾರುಗಳನ್ನು ಹೊಂದಿದ್ದಾರೆ. ಬಾಲಿವುಡ್ ನಟ ಜಾನ್ ಅಬ್ರಹಾಂ ವಾಹನಗಳ ಬಗ್ಗೆ ಕ್ರೇಜ್ ಹೊಂದಿದ್ದಾರೆ. ಅವರು Nissan GTR, Lamborghini Gallardo, Suzuki Hayabusa ಸೇರಿದಂತೆ ಹಲವು ವಾಹನಗಳನ್ನು ಹೊಂದಿದ್ದಾರೆ. ಜಾನ್ ಅಬ್ರಹಾಂರವರು Maruti Gypsy ಕಾರ್ ಅನ್ನು ಸಹ ಹೊಂದಿದ್ದು, ಆ ಕಾರಿನಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ.

Maruti Suzuki Ciaz ಕಾರು ಚಾಲನೆ ಮಾಡಿ ಟ್ರೋಲ್ ಆದ ಕಿರು ತೆರೆ ನಟ

ಇನ್ನು ಬಾಲಿವುಡ್‌ನ ಮಿಸ್ಟರ್ ಪಫೆಕ್ಷನಿಸ್ಟ್ ಎಂದೇ ಖ್ಯಾತರಾದ ಅಮೀರ್ ಖಾನ್ Mercedes Benz S Guard, BMW 6 Series, Rolls Royce Ghost,Bentley Continental Flying Spur, Land Rover Range Rover Vogue ಸೇರಿದಂತೆ ಹಲವು ಕಾರುಗಳನ್ನು ಹೊಂದಿದ್ದಾರೆ.

Maruti Suzuki Ciaz ಕಾರು ಚಾಲನೆ ಮಾಡಿ ಟ್ರೋಲ್ ಆದ ಕಿರು ತೆರೆ ನಟ

ಅಮೀರ್ ಖಾನ್ ರವರು Mahindra XUV 500 ಹಾಗೂ Toyota Fortuner ಕಾರುಗಳನ್ನು ಸಹ ಹೊಂದಿದ್ದಾರೆ. ಅವರು ಹಲವು ಬಾರಿ XUV 500 ಕಾರ್ ಅನ್ನು ಚಾಲನೆ ಮಾಡುವಾಗ ಕಾಣಿಸಿಕೊಂಡಿದ್ದಾರೆ. ಇನ್ನು ನಟಿ ಬಿಪಾಶಾ ಬಸು ಸಹ Toyota Fortuner ಕಾರ್ ಅನ್ನು ಹೊಂದಿದ್ದಾರೆ.

Toyota Innova ಬಾಲಿವುಡ್ ನಟರು ಹೆಚ್ಚು ಬಳಸುವ ವಾಹನವಾಗಿದೆ. ಮಲೈಕಾ ಅರೋರಾ, ಅಮೀರ್ ಖಾನ್, ರಜನಿಕಾಂತ್, ಗುಲ್ಶನ್ ಗ್ರೋವರ್, ಜಾಕಿ ಶ್ರಾಫ್ ಸೇರಿದಂತೆ ಹಲವು ನಟ ನಟಿಯರು Toyota Innova ಕಾರ್ ಅನ್ನು ಹೊಂದಿದ್ದಾರೆ. ಬಿಗ್ ಬಿ ಖ್ಯಾತಿಯ ಮೇರು ನಟ ಅಮಿತಾಬ್ ಬಚ್ಚನ್ ರವರು ದುಬಾರಿ ಬೆಲೆಯ ಸಾಕಷ್ಟು ಕಾರುಗಳನ್ನು ಹೊಂದಿದ್ದಾರೆ.

Maruti Suzuki Ciaz ಕಾರು ಚಾಲನೆ ಮಾಡಿ ಟ್ರೋಲ್ ಆದ ಕಿರು ತೆರೆ ನಟ

ಬಾಲಿವುಡ್ ನಟ ನಟಿಯರು ಮಾತ್ರವಲ್ಲದೇ ಸ್ಯಾಂಡಲ್ ವುಡ್ ಸೇರಿದಂತೆ ದಕ್ಷಿಣ ಭಾರತದ ಹಲವು ತಾರೆಯರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಇತ್ತೀಚಿಗಷ್ಟೇ ನಟ ರಕ್ಷಿತ್ ಶೆಟ್ಟಿರವರು ಐಷಾರಾಮಿ ಕಾರ್ ಅನ್ನು ಖರೀದಿಸಿದ್ದರು.

Most Read Articles

Kannada
English summary
Actor karanvir bohra trolled for driving maruti ciaz car details
Story first published: Tuesday, September 7, 2021, 13:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X