ವಿಮಾನದಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಬಂದದ್ದು ಇವರಾ? ಯಾರೆಂದು ತಿಳಿದು ಸ್ಟನ್ ಆದ ಪ್ರಯಾಣಿಕರು
ವಿಮಾನ ಪ್ರಯಾಣದಲ್ಲಿ ನಾವು ಕೂರುವ ಸೀಟುಗಳು ನಮ್ಮ ಪ್ರಯಾಣ ದರವನ್ನು ಆಧರಿಸಿರುತ್ತವೆ. ಸಾಮಾನ್ಯರು ಹಣ ಉಳಿಸುವ ಸಲುವಾಗಿ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿದರೆ ಸೆಲೆಬ್ರಿಟಿಗಳು, ಉದ್ಯಮಿಗಳು ದುಬಾರಿ ಬೆಲೆಯ ಬ್ಯುಸಿನೆಸ್ ಕ್ಲಾಸ್ ಸೀಟುಗಳಲ್ಲಿ ಪ್ರಯಾಣಿಸುತ್ತಾರೆ. ಆದ್ರೆ ಒಬ್ಬ ಜನಪ್ರಿಯ ವ್ಯಕ್ತಿ ಧಡೀರ್ ಆಗಿ ಸಾಮಾನ್ಯ ಪ್ರಯಾಣಿಕರಂತೆ ನಮ್ಮೊಂದಿಗೆ ಪ್ರಯಾಣಿಸಿದರೆ ಹೇಗಿರುತ್ತೆ?
ಹೌದು ಬಾಲಿವುಡ್ ಜನಪ್ರಿಯ ನಟರೊಬ್ಬರು ಸಾಮಾನ್ಯ ಪ್ರಯಾಣಿಕರಂತೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಸಾಮಾನ್ಯವಾಗಿ ಕೋಚ್ ಕ್ಲಾಸ್ ಎಂದು ಕರೆಯಲ್ಪಡುವ ಎಕಾನಮಿ ಸೀಟುಗಳು, ನೀವು ವಿಮಾನದಲ್ಲಿ ಪ್ರಯಾಣಿಸುವಾಗ ಕೇವಲ ಮೂಲಭೂತ ಸೌಕರ್ಯಗಳನ್ನು ನೀಡುತ್ತವೆ. ಪ್ರೀಮಿಯಂ ಎಕಾನಮಿ, ಬ್ಯುಸಿನೆಸ್ ಕ್ಲಾಸ್‌ಗೆ ಹೊಲಿಸಿದರೆ ಬೆಲೆ ತುಂಬಾ ಕಡಿಮೆಯಿರುವುದರಿಂದ ಸಾಮಾನ್ಯ ಜನರು ಮಾತ್ರ ಇದರಲ್ಲಿ ಪ್ರಯಾಣಿಸುತ್ತಾರೆ.

ಹಾಗೆಯೇ ಪ್ರೀಮಿಯಂ ಎಕಾನಮಿ ಸೀಟ್‌ಗಳು, ಮೇಲೆ ತಿಳಿಸಲಾದ ಪ್ರಮಾಣಿತ ಎಕಾನಮಿ ಸೀಟುಗಳಿಗಿಂತ ಸ್ವಲ್ಪ ಹೆಚ್ಚು ಸುಧಾರಣೆಯಾಗಿರುತ್ತವೆ. ಉದಾಹರಣೆಗೆ ಸೀಟ್‌ಗಳ ಸಾಲುಗಳ ನಡುವೆ ಹೆಚ್ಚಿನ ಅಂತರ ಒದಗಿಸುವುದು, ಸಾಂದರ್ಭಿಕವಾಗಿ ಸ್ವಲ್ಪ ಅಗಲವಾದ ಮತ್ತು ಹೆಚ್ಚು ಆರಾಮದಾಯಕ ಸಿಟ್‌ಗಳನ್ನು ಒಳಗೊಂಡಿರುವುದರ ಜೊತೆಗೆ ಮೂಲಭೂತ ಸೌಕರ್ಯಗಳನ್ನು ನೀಡುತ್ತವೆ.
ಕೊನೆಯದಾಗಿ ಬ್ಯುಸಿನೆಸ್ ಕ್ಲಾಸ್, ಇದನ್ನು ಎಕ್ಸಿಕ್ಯೂಟಿವ್ ಕ್ಲಾಸ್ ಸೀಟ್ ಎಂದು ಕೂಡ ಕರೆಯುತ್ತಾರೆ. ಇದರಲ್ಲಿ ಸಾಮಾನ್ಯವಾಗಿ ಉದ್ಯಮಿಗಳು, ಸೆಲೆಬ್ರಿಟಿಗಳು, ಶ್ರೀಮಂತರು ಮಾತ್ರ ಪ್ರಯಾಣಿಸುತ್ತಾರೆ. ಇದರಲ್ಲಿ ಉತ್ತಮ ಗುಣಮಟ್ಟದ ಪ್ರಥಮ ದರ್ಜೆಯ ಆಸನಗಳು, ಅತ್ಯಂತ ಆರಾಮದಾಯಕವಾದ ವಸತಿ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ರೀತಿಯ ಆಸನಗಳಿಗಿಂತ ಹೆಚ್ಚು ದುಬಾರಿಯಾಗಿರುತ್ತವೆ.

ಇಂತಹ ದುಬಾರಿ ಸಿಟುಗಳಲ್ಲಿ ಪ್ರಯಾಣಿಸುವ ಸೆಲೆಬ್ರಿಟಿ ಸಾಮಾನ್ಯ ಎಕಾನಮಿ ಕ್ಲಾಸ್ ಸೀಟ್‌ಗಳಲ್ಲಿ ಪ್ರಯಾಣಿಸುವಾಗ ಇದ್ದಕ್ಕಿದ್ದಂತೆ ಬಂದರೆ ಹೇಗಿರುತ್ತದೆ? ಇಂಥಹದೊಂದು ಅನುಭವವನ್ನು ಇತ್ತೀಚೆಗೆ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಹಂಚಿಕೊಂಡಿದ್ದಾರೆ. ದೇಶೀಯ ವಿಮಾನದಲ್ಲಿ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಸಾಮಾನ್ಯ ಎಕಾನಮಿ ಕ್ಲಾಸ್ ಸೀಟುಗಳಲ್ಲಿ ಪ್ರಯಾಣಿಸಿದ ವಿಡಿಯೋ ವೈರಲ್ ಆಗಿದೆ.
ಇದರಲ್ಲಿ ನಟ ಕಾರ್ತಿಕ್ ಆರ್ಯನ್ (kartik aryan) ವಿಮಾನದೊಳಗೆ ಸೀಟ್ ಹುಡುಕುತ್ತಿರುವುದನ್ನು ನೋಡಬಹುದು. ಥಟ್ಟನೆ ಕಾರ್ತಿಕ್ ಆರ್ಯನ್ ಅವರನ್ನು ನೋಡಿದ ಪ್ರಯಾಣಿಕರೆಲ್ಲ ದಿಗ್ಬ್ರಮೆಗೊಂಡಿದ್ದಾರೆ. ಇದನ್ನು ಅಲ್ಲೇ ಇದ್ದ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದು ಈಗ ವೈರಲ್ ಆಗಿದೆ. ಆದರೆ ನಟ ಕಾರ್ತಿಕ್ ಆರ್ಯನ್ ವಿಮಾನದಲ್ಲಿ ಎಕಾನಮಿ ಕ್ಲಾಸ್ ಸೀಟುಗಳಲ್ಲಿ ಪ್ರಯಾಣಿಸುತ್ತಿರುವುದು ಇದೇ ಮೊದಲಲ್ಲ.
ಕಾರ್ತಿಕ್ ಆರ್ಯನ್ 2022 ರಲ್ಲಿ ಜೋಧ್‌ಪುರದಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸಿದ್ದಾಗ ಕೂಡ ಎಕಾನಮಿ ಕ್ಲಾಸ್ ಸೀಟುಗಳಲ್ಲಿ ಕಾಣಿಸಿಕೊಂಡಿದ್ದರು. ಕಾರ್ತಿಕ್ ಆರ್ಯನ್ ಅವರಂತೆ, ನಟಿ ಕೃತಿ ಸನನ್ ಕೂಡ ಕೆಲವು ತಿಂಗಳ ಹಿಂದೆ ವಿಮಾನದ ಎಕಾನಮಿ ಕ್ಲಾಸ್ ಸೀಟಿನಲ್ಲಿ ಪ್ರಯಾಣಿಸಿದ್ದರು. ಆಗ ಅವರು ಮಗುವಿನೊಂದಿಗೆ ಆಟವಾಡುತ್ತಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ನಟ ಕಾರ್ತಿಕ್ ಆರ್ಯನ್ ನಮ್ಮೆಲ್ಲರಂತೆ ಸಾಮಾನ್ಯ ಜೀವನ ಕಳೆದವರು, ಸಿನಿಮಾ ಚಾನ್ಸ್‌ಗಳಿಗಾಗಿ ಅಲೆದಾಡಿದ್ದರು. ಆರಂಭದಲ್ಲಿ ಓಡಾಡಲು ಹಣವಿಲ್ಲದೇ ಮುಂಬೈ ಲೋಕಲ್ ಆಟೋ, ಬಸ್‌ಗಳಲ್ಲಿ ಪ್ರಯಾಣಿಸಿರುವುದಾಗಿ ಹಲವು ಬಾರಿ ಹೇಳಿಕೊಂಡಿದ್ದರು. ಜೀವನದಲ್ಲಿ ಕಷ್ಟ ತಿಳಿದವರು ಎಷ್ಟೇ ಕೋಟಿ ದುಡಿದರೂ ಸಾಮಾನ್ಯರಂತೆಯೇ ವರ್ತಿಸುತ್ತಾರೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications