ಐಷಾರಾಮಿ ಪೋರ್ಷೆ ಎಲೆಕ್ಟ್ರಿಕ್ ಕಾರು ಟೆಸ್ಟ್ ಡ್ರೈವ್ ಮಾಡಿದ ಮೆಗಾಸ್ಟಾರ್ ಮಮ್ಮುಟ್ಟಿ
ಭಾರತೀಯ ಚಿತ್ರರಂಗ ಕಂಡಂತಹ ಅದ್ಭುತ ನಟ, ಸೂಪರ್ ಸ್ಟಾರ್ ಮಮ್ಮುಟ್ಟಿ ಬಣ್ಣದ ಲೋಕಕ್ಕೆ ಕಾಲಿಟ್ಟು 50ಕ್ಕೂ ಹೆಚ್ಚು ವರ್ಷಗಳಾಗಿದೆ. ಮಮ್ಮುಟ್ಟಿ ಅವರು ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ಇತರೆ ಭಾಷೆಗಳಲ್ಲೂ ನಟಿಸಿದ್ದಾರೆ. ತಮ್ಮ ಅಭಿನಯದ ಮೂಲಕವೇ ಈ ನಟ ದೊಡ್ಡ ಅಭಿಮಾನಿ ಬಳಗವನ್ನೇ ಸೃಷ್ಟಿಸಿಕೊಂಡಿದ್ದಾರೆ.

ನಟ ಮಮ್ಮುಟ್ಟಿಗೆ ಕಾರುಗಳ ಬಗ್ಗೆ ಹೆಚ್ಚು ಕ್ರೇಜ್ ಹೊಂದಿದ್ದಾರೆ. ಮಮ್ಮುಟ್ಟಿ ತಮ್ಮ ಕಾರುಗಳಿಗಾಗಿ ಪ್ರತ್ಯೇಕ ಗ್ಯಾರೇಜ್ ನಿರ್ಮಿಸಿದ್ದಾರೆ. ಅಲ್ಲದೇ ಇವರಿಗೆ ಕಾರು ಓಡಿಸುವ ಕ್ರೇಜ್ ಇದೆ. ಈ ನಟನ ಮೊದಲ ಕಾರು ಮಾರುತಿಯದೇ ಆಗಿತ್ತು ಹಾಗೂ ಅವರ ಕಾರುಗಳ ಕಲೆಕ್ಷನ್‌ನಲ್ಲಿ ಮಾರುತಿಯ ಮೂರು ಮಾಡೆಲ್ ಕಾರುಗಳಿವೆ. ಜಾಗ್ವಾರ್ XJL (ಕ್ಯಾವಿಯರ್), ಟೊಯೋಟಾ ಲ್ಯಾಂಡ್ ಕ್ರೂಸರ್ ಎಲ್ಸಿ 200, ಫೆರಾರಿ, ಮರ್ಸಿಡಿಸ್ ಮತ್ತು ಆಡಿ , ಪೋರ್ಷೆ, ಟೊಯೋಟಾ ಫಾರ್ಚೂನರ್, ಮಿನಿ ಕೂಪರ್ ಸೇರಿದಂತೆ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

ನಟ ಮಮ್ಮುಟ್ಟಿ ಅವರು ಇತ್ತೀಚೆಗೆ, ಪೋರ್ಷೆ ಟೇಕಾನ್(Porsche Taycan) ಎಲೆಕ್ಟ್ರಿಕ್ ಕಾರನ್ನು ಟೆಸ್ಟ್ ಡ್ರೈವ್ ಮಾಡುತ್ತಿರುವ ವೀಡಿಯೊ ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದೇ ಕಾರಿನಲ್ಲಿ ನಟ ಮಮ್ಮುಟ್ಟಿ ತಮ್ಮ ಹೊಸ ಚಿತ್ರ 'ಪುಜುವಿನ್' ಪ್ರೆಸ್ ಮೀಟ್‌ಗೆ ಬಂದಿದ್ದರು. ಮುಂದೆ ಅವರು ಈ ಕಾರನ್ನು ಖರೀದಿಸುತ್ತಾರ ಎಂಬುದನ್ನು ಕಾದು ನೋಡಬೇಕು.

ಕೆಂಪು ನಂಬರ್ ಪ್ಲೇಟ್‌ನೊಂದಿಗೆ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಈ ಪೋರ್ಷೆ ಟೇಕಾನ್ ಎಲೆಕ್ಟ್ರಿಕ್ ಕಾರು ಮಾದರಿಯು ಕೊಚ್ಚಿಯ ಪೋರ್ಷೆ ಸೆಂಟರ್‌ನಿಂದ ಬಂದ ಕಾರು. ಇದನ್ನು ಟೆಸ್ಟ್ ಡ್ರೈವ್‌ಗಾಗಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಸ್ಪೋರ್ಟ್ಸ್ ಕಾರ್ ಪೋರ್ಷೆಯ ಮೊದಲ ಎಲೆಕ್ಟ್ರಿಕ್ ಉತ್ಪನ್ನವಾಗಿದೆ. ಜರ್ಮನ್ ತಯಾರಕರು ಈ ಮಾದರಿಯನ್ನು ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಈ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಈಗಾಗಲೇ ಕೆಲವು ಆಯ್ದ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ.

ಈ ಪೋರ್ಷೆ ಟೇಕಾನ್ ಎಲೆಕ್ಟ್ರಿಕ್ ಕಾರು 4ಎಸ್, ಟರ್ಬೂ ಮತ್ತು ಟರ್ಬೂ ಎಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಇದು ಪ್ರಸ್ತುತ ಭಾರತದಲ್ಲಿ ಅತ್ಯಂತ ಪವರ್ ಫುಲ್ ಎಲೆಕ್ಟ್ರಿಕ್ ಕಾರ್ ಆಗಿರುವ ಆಡಿ ಇ-ಟ್ರಾನ್ ಜಿಟಿಯೊಂದಿಗೆ ಅದರ ಹೆಚ್ಚಿನ ಅಂಶಗಳನ್ನು ಹಂಚಿಕೊಳ್ಳುತ್ತದೆ.

ಈ ಐಷಾರಾಮಿ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಸ್ಕಪಲಡಡ್ ಹುಡ್, ಸ್ಲೋಂಪಿಗ್ ರೂಫ್ ಲೈನ್ ಮತ್ತು ಮುಂಭಾಗದ ಬಂಪರ್‌ನಲ್ಲಿ ವಿಶಾಲವಾದ ಬ್ಲ್ಯಾಕ್ ಏರ್ ಡ್ಯಾಮ್ ಅನ್ನು ಹೊಂದಿದೆ. ಅತ್ಯಂತ ಆಕರ್ಷಕ ಮುಖ್ಯಾಂಶಗಳೆಂದರೆ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಎಲ್-ಆಕಾರದ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ.

ಪೋರ್ಷೆ ಟೇಕಾನ್ ಎಲೆಕ್ಟ್ರಿಕ್ ಕಾರು ಸೈಡ್ ಪ್ರೊಫೈಲ್‌ನಲ್ಲಿ, ಇದು ಬ್ಲ್ಯಾಕ್-ಔಟ್ ಬಿ-ಪಿಲ್ಲರ್‌ಗಳು ಮತ್ತು ಬೃಹತ್ ಐದು-ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿವೆ. ಹಿಂಭಾಗದಲ್ಲಿ ಎಲ್ಇಡಿ ಲೈಟ್ ಬಾರ್ ಅನ್ನು ಹೊಂದಿದೆ, ಇದು ಐಕಾನಿಕ್ ಪೋರ್ಷೆ 911 ಮಾದರಿಯನ್ನು ನೆನಪಿಸುತ್ತದೆ.

ಪೋರ್ಷೆ ಎಕ್ಸ್‌ಕ್ಲೂಸಿವ್ ಮ್ಯಾನುಫ್ಯಾಕ್ಟೂರ್ ಕಾರ್ಯಕ್ರಮದ ಮೂಲಕ ಆಯ್ಕೆ ಮಾಡಬಹುದಾದ 65 ಪೇಂಟ್ ಸ್ಕೀಮ್‌ಗಳ ಜೊತೆಗೆ ಟೇಕಾನ್ 17 ಗುಣಮಟ್ಟದ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇನ್ನು 1960ರ ದಶಕದ 911 ಮಾದರಿಯಂತೇ ಅದ್ದೂರಿ ಕ್ಯಾಬಿನ್‌ನಲ್ಲಿ ಮುಂದುವರಿಯುತ್ತದೆ. ಎರಡು-ಟೋನ್ ಡ್ಯಾಶ್‌ಬೋರ್ಡ್ ಸೇಂಟ್ರಲ್ 10.9-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಮತ್ತು ಆಯ್ಕೆಯ ಪ್ರಯಾಣಿಕರಿಗೆ ಮನೋರಂಜನೆಗಾಗಿ ಮಲ್ಟಿ-ಡಿಸ್ ಪ್ಲೇಯನ್ನು ಹೊಂದಿದೆ,

ಇದಲ್ಲದೆ, ಹ್ಯಾಪ್ಟಿಕ್ ಪ್ರತಿಕ್ರಿಯೆಯೊಂದಿಗೆ ದೊಡ್ಡ 8.4-ಇಂಚಿನ ಟಚ್ ಪ್ಯಾನೆಲ್ ಅನ್ನು ಏರ್-ಕಾನ್ ವೆಂಟ್‌ಗಳ ಅಡಿಯಲ್ಲಿ ಸೆಂಟರ್ ಕನ್ಸೋಲ್‌ನಲ್ಲಿ ಇರಿಸಲಾಗಿದೆ. 16.8-ಇಂಚಿನ ಡಿಸ್ ಪ್ಲೇಯೊಂದಿಗೆ ಕನಿಷ್ಠ ಮತ್ತು ಆಧುನಿಕ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಸಹ ಪಡೆಯುತ್ತದೆ. ಈ ಐಷಾರಾಮಿ ಎಲೆಕ್ಟ್ರಿಕ್ ಕಾರಿನ ಡೋರುಗಳು ಮತ್ತು ಮತ್ತು ಸೆಂಟರ್ ಕನ್ಸೋಲ್‌ಗಳನ್ನು ವುಡ್, ಅಲ್ಯೂಮಿನಿಯಂ, ಕಾರ್ಬನ್ ಫೈಬರ್ ಅಥವಾ ಫ್ಯಾಬ್ರಿಕ್ ಟ್ರಿಮ್‌ಗಳ ಸಂಯೋಜನೆಯಿಂದ ಮಾಡಲಾಗಿದೆ.

ಇನ್ನು ಈ ಎಲೆಕ್ಟ್ರಿಕ್ ಕಾರಿನ ಆಫರ್‌ನಲ್ಲಿರುವ ಕೆಲವು ಗಮನಾರ್ಹ ವೈಶಿಷ್ಟ್ಯಗಳು ಮುಂಭಾಗದ ಸೀಟುಗಳಲ್ಲಿ ಮಸಾಜ್ ಸೌಲಭ್ಯ, ಹೀಟೆಡ್ ರೇರ್ ಸೀಟುಗಳು, 4-ಝೋನ್ ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್ ಮತ್ತು ಹೆಚ್ಚಿನದನ್ನು ಒಳಗೊಂಡಿವೆ. ಪೋರ್ಷೆ ಟೇಕಾನ್ ಎಲೆಕ್ಟ್ರಿಕ್ ಕಾರು 76kWh ಮತ್ತು 93.4kWh ಜೊತೆಗೆ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ನೀಡುತ್ತಿದೆ. ಹಿಂದಿನದನ್ನು ಬೇಸ್ 4S ಟ್ರಿಮ್‌ಗಾಗಿ ಕಾಯ್ದಿರಿಸಲಾಗಿದೆ. ಎಲ್ಲಾ ಮೂರು ಟ್ರಿಮ್‌ಗಳನ್ನು ಆಲ್-ವೀಲ್-ಡ್ರೈವ್ ಸೆಟಪ್‌ನಲ್ಲಿ ಪ್ರತಿ ಆಕ್ಸಲ್‌ನಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ನೀಡಲಾಗುತ್ತದೆ.

ಟೇಕಾನ್ 4ಎಸ್ ರೂಪಾಂತರದಲ್ಲಿ ಡ್ಯುಯಲ್-ಮೋಟರ್ ಸೆಟಪ್ 525 ಬಿಹೆಚ್‍ಪಿ ಪವರ್ ಮತ್ತು 640 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಕೇವಲ 4.0 ಸೆಕೆಂಡುಗಳಲ್ಲಿ 0-100 ಕಿ,ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಟರ್ಬೊ ಮತ್ತು ಟರ್ಬೊ ಎಸ್ ರೂಪಾಂತರಗಳು ದೊಡ್ಡ 93.4kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿವೆ. ಮೊದಲನೆಯದು 671 ಬಿಹೆಚ್‌ಪಿ ಪವರ್ ಮತ್ತು 850 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಇನ್ನು ಎರಡನೆಯದು 751 ಬಿಹೆಚ್‍ಪಿ ಪವರ್ ಮತ್ತು 1,050 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಐಷಾರಾಮಿ ಪೋರ್ಷೆ ಟೇಕಾನ್ ಎಲೆಕ್ಟ್ರಿಕ್ ಕಾರು 484 ಕಿ.ಮೀ ರೇಂಜ್ ಅನ್ನು ನೀಡುತ್ತದೆ,


Click it and Unblock the Notifications