ಸಿನಿಮಾ ರಂಗದಲ್ಲಿ ಕೋಟಿಗಟ್ಟಲೆ ಗಳಿಸಿದರೂ, ಈ ನಟ ಆಯ್ಕೆ ಮಾಡಿದ್ದು ಮಾತ್ರ ಟೊಯೋಟಾದ 8 ಲಕ್ಷದ ಕಾರು!

ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಟೊಯೊಟಾ ಕಂಪನಿಯು ಭಾರತದಲ್ಲಿ ತನ್ನ ಹೊಸ ಅರ್ಬನ್‌ ಕ್ರೂಸರ್‌ ಟೈಸರ್‌ ಕಾರನ್ನು ಲಾಂಚ್ ಮಾಡಿತ್ತು. ನಿಮಗೆಲ್ಲಾ ತಿಳಿದಿರುವಂತೆ ಇದು ಮಾರುತಿ ಸುಜುಕಿ ಫ್ರಾಂಕ್ಸ್‌ ಕಾರಿನ ರೀ ಬ್ಯಾಡ್ಜಿಂಗ್‌ ಕಾರು ಮಾದರಿಯಾಗಿದ್ದು , ಫ್ರಾಂಕ್ಸ್‌ ರೀತಿಯಲ್ಲಿ ಸಾಕಷ್ಟು ಮಾರಾಟವಾಗುತ್ತಿದೆ. ಭಾರತದಲ್ಲಿ ಉತ್ತಮ ಸೇವೆ ಮತ್ತು ಮಾರುಕಟ್ಟೆ ಹೊಂದಿರುವ ಟೊಯೋಟಾ ಕಂಪನಿಗೆ ಭಾರತದಲ್ಲಿ ಎಷ್ಟರ ಮಟ್ಟಿಗೆ ಅಭಿಮಾಣಿಗಳು ಇದ್ದಾರೆ ಎಂದು ಪ್ರತ್ಯೇಕವಾಗಿ ಒತ್ತಿ ಹೇಳಬೇಕೆಂದಿಲ್ಲ. ಅದೇ ಕಾರಣದಿಂದಾಗಿ ಟೊಯೋಟಾ ಕಾರುಗಳನ್ನು ಬಡವರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರೂ ಇಷ್ಟಪಡುತ್ತಾರೆ.

ಅರ್ಬನ್‌ ಕ್ರೂಸರ್‌ ಟೈಸರ್ ಬಗ್ಗೆ ನೋಡುವುದಾದರೆ, ಈ ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ (Toyota Urban Cruiser Taisor) ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.7.73 ಲಕ್ಷದಿಂದ ಪ್ರಾರಂಭವಾಗುತ್ತದೆ. ಮಾರುತಿ ಫ್ರಾಂಕ್ಸ್‌ ಬೆಲೆಗೆ ಹೋಲಿಕೆ ಮಾಡಿದರೆ ಇದು ಕೊಂಚ ಹೆಚ್ಚೇ ಎನ್ನಬಹುದು.

Shiju Abdul Rasheed Brought Toyota Urban Cruiser Taisor

ಇದೀಗ ಇಲ್ಲೊಂದು ಕಡೆ ಪ್ರಸಿದ್ದ ಸಿನಿಮಾ ನಟನೊಬ್ಬ ಈ ಹೊಸ ಅರ್ಬನ್‌ ಕ್ರೂಸರ್‌ ಟೈಸರ್ (Toyota Urban Cruiser Taisor) ಕಾರನ್ನು ಖರೀದಿ ಮಾಡಿದ್ದು, ಇದಕ್ಕೆ ಸಂಭಂಧಿಸಿದ ಫೊಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ. ಮಾಹಿತಿಗಳ ಪ್ರಕಾರ ಮಲಯಾಳಂ ಸಿನಿಮಾ ಮತ್ತು ಕಿರುತೆರೆ ನಟ ಶಿಜು ಅಬ್ದುಲ್‌ ರಶೀದ್‌ ಹೊಸ ಅರ್ಬನ್‌ ಕ್ರೂಸರ್‌ ಟೈಸರ್‌ ಕಾರನ್ನು ಖರೀದಿ ಮಾಡಿದ್ದಾರೆ.

ಮಾರುತಿ ಸುಜುಕಿ ಫ್ರಾಂಕ್ಸ್‌ನ ಬೆಲೆಯು ರೂ.7.51 ಲಕ್ಷವಾಗಿದೆ. ಹೊಸದಾಗಿ ಬಿಡುಗಡೆಯಾದ ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ಮಾದರಿಯು ಮಾರುತಿ ಸುಜುಕಿ ಫ್ರಾಂಕ್ಸ್ ಆಧಾರಿತ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿಯಾಗಿದೆ. ಎರಡೂ ಮಾದರಿಗಳು ಒಂದೇ ರೀತಿಯಾಗಿದ್ದರೂ, ಟೊಯೊಟಾ ಯುಸಿ ಟೈಸರ್‌ಗೆ ಹೊಸ ಶೈಲಿಯೊಂದಿಗೆ ತನ್ನದೇ ಆದ ಗುರುತನ್ನು ಹೊಂದಿದೆ.

Shiju Abdul Rasheed Brought Toyota Urban Cruiser Taisor

ಹೊಸ ಅರ್ಬನ್ ಕ್ರೂಸರ್ ಟೈಸರ್ ಅನುಪಾತದಲ್ಲಿ ಫ್ರಾಂಕ್ಸ್‌ಗೆ ಹೋಲುತ್ತದೆ ಆದರೆ ವಿಶಿಷ್ಟವಾದ ಹೊಸ ನೋಟದೊಂದಿಗೆ ಹೊಸ ಮುಂಭಾಗವನ್ನು ಪಡೆಯುತ್ತದೆ. ಕೂಪ್-ಶೈಲಿಯ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿ ಹೊಸ ಮತ್ತು ದಪ್ಪವಾದ ಹನಿಕೂಬ್ ಮೆಶ್ ಗ್ರಿಲ್ ಅನ್ನು ಗ್ಲೋಸ್ ಬ್ಲ್ಯಾಕ್‌ನ ಫಿನಿಶಿಂಗ್ ಅನ್ನು ಹೊಂದಿದೆ. ಇದು ಹೊಸ ಟ್ವಿನ್ LED DRL ಗಳನ್ನು ಸೆಂಟ್ರಲ್ ನಲ್ಲಿ ಭವ್ಯವಾದ ಟೊಯೊಟಾ ಲೋಗೋದೊಂದಿಗೆ ಹೊಂದಿದೆ.

ಈ ಹೊಸ ಟೊಯೊಟಾ ಎಸ್‍ಯುವಿಯಲ್ಲಿ ಕ್ಯಾಬಿನ್ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಮಧ್ಯದಲ್ಲಿ MID ಯುನಿಟ್ ಗಳೊಂದಿಗೆ ಟ್ವಿನ್-ಪಾಡ್ ಇನ್‌ಸ್ಟ್ರುಮೆಂಟ್ ಕನ್ಸೋಲ್‌ನೊಂದಿಗೆ ಮಾರುತಿ ಸುಜುಕಿ ಫ್ರಾಂಕ್ಸ್‌ಗೆ ಹೋಲುತ್ತದೆ. ಕ್ಯಾಬಿನ್ ಹೊಸ ಡ್ಯುಯಲ್-ಟೋನ್ ಟ್ರೀಟ್ಮೆಂಟ್ ಅನ್ನು ಪಡೆಯುತ್ತದೆ ಆದರೆ ಎಲ್ಲಾ ಇತರ ವೈಶಿಷ್ಟ್ಯಗಳನ್ನು ನಿರ್ವಹಿಸಲಾಗಿದೆ.

ಹೊಸ ಟೊಯೋಟಾ ಟೈಸರ್ ಎಸ್‍ಯುವಿಯಲ್ಲಿ 1.2-ಲೀಟರ್ ನ್ಯಾಚುರಲ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ. ಈ ಎಸ್‍ಯುವಿಯ 1.2-ಲೀಟರ್ ಪೆಟ್ರೋಲ್ ಎಂಜಿನ್ 89 bhp ಮತ್ತು 113 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 99 bhp ಮತ್ತು 148 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಗಳೊಂದಿಗೆ ಟ್ರಾನ್ಸ್‌ಮಿಷನ್ ಆಯ್ಕೆಗಳು ಎರಡೂ ಪವರ್ ಮಿಲ್‌ಗಳೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಅನ್ನು ಒಳಗೊಂಡಿವೆ. ಆದರೆ ನ್ಯಾಚುರಲ್ ಎಂಜಿನ್ 5-ಸ್ಪೀಡ್ AMT ಅನ್ನು ಹೊಂದಿದೆ. ಇನ್ನು ಟರ್ಬೊ ಪೆಟ್ರೋಲ್ 6-ಸ್ಪೀಡ್ ಟಾರ್ಕ್ ಕರ್ನಟವಾರ್ ಅನ್ನು ಪಡೆಯುತ್ತದೆ. ಸಿಎನ್‌ಜಿ ಪವರ್ ಟ್ರೈನ್ ಕೂಡ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, July 8, 2024, 16:19 [IST]
English summary
Actor shiju abdul rasheed brought brand new toyota urban cruiser taisor
Read more on celebrity car india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+