ಎಲೆಕ್ಟ್ರಿಕ್ ರಿಕ್ಷಾ ನೀಡುವ ಮೂಲಕ ಮತ್ತೆ ನೊಂದವರ ಕೈ ಹಿಡಿಯಲು ಮುಂದಾದ ನಟ

ಸದ್ಯಕ್ಕೆ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಉತ್ತೇಜನವನ್ನು ನೀಡಲಾಗುತ್ತಿದೆ. ಪೆಟ್ರೋಲ್, ಡೀಸೆಲ್ ವಾಹನಗಳಿಂದ ಹೆಚ್ಚಿನ ಪ್ರಮಾಣದ ವಾಯುಮಾಲಿನ್ಯ ಉಂಟಾಗುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ.

ಎಲೆಕ್ಟ್ರಿಕ್ ರಿಕ್ಷಾ ನೀಡುವ ಮೂಲಕ ಮತ್ತೆ ನೊಂದವರ ಕೈ ಹಿಡಿಯಲು ಮುಂದಾದ ನಟ

ಇದರ ಜೊತೆಗೆ ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡಬೇಕೆನ್ನುವ ಉದ್ದೇಶವೂ ಇದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ಸಬ್ಸಿಡಿ ಸೇರಿದಂತೆ ಹಲವು ರೀತಿಯಲ್ಲಿ ನೆರವು ನೀಡುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಪ್ರೋತ್ಸಾಹದಿಂದಾಗಿ ವಾಹನ ತಯಾರಕ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಹೊಸ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ.

ಎಲೆಕ್ಟ್ರಿಕ್ ರಿಕ್ಷಾ ನೀಡುವ ಮೂಲಕ ಮತ್ತೆ ನೊಂದವರ ಕೈ ಹಿಡಿಯಲು ಮುಂದಾದ ನಟ

ಎಲೆಕ್ಟ್ರಿಕ್ ಕಾರು, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಹಾಗೂ ಎಲೆಕ್ಟ್ರಿಕ್ ರಿಕ್ಷಾಗಳಂತಹ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಯಾಗುತ್ತಿವೆ. ಎಲೆಕ್ಟ್ರಿಕ್ ರಿಕ್ಷಾಗಳು ಕೆಲವು ಜನರ ಜೀವನ ನಿರ್ವಹಣೆಗೆ ದಾರಿಯಾಗಿವೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಎಲೆಕ್ಟ್ರಿಕ್ ರಿಕ್ಷಾ ನೀಡುವ ಮೂಲಕ ಮತ್ತೆ ನೊಂದವರ ಕೈ ಹಿಡಿಯಲು ಮುಂದಾದ ನಟ

ಖ್ಯಾತ ನಟರೊಬ್ಬರು ಕರೋನಾ ವೈರಸ್'ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡವರಿಗೆ ಎಲೆಕ್ಟ್ರಿಕ್ ರಿಕ್ಷಾಗಳನ್ನು ನೀಡಲು ಮುಂದಾಗಿದ್ದಾರೆ. ಸಂಕಷ್ಟದಲ್ಲಿರುವರರಿಗೆ ಎಲೆಕ್ಟ್ರಿಕ್ ರಿಕ್ಷಾಗಳನ್ನು ನೀಡುತ್ತಿರುವವರು ನಟ ಸೋನು ಸೂದ್.

ಎಲೆಕ್ಟ್ರಿಕ್ ರಿಕ್ಷಾ ನೀಡುವ ಮೂಲಕ ಮತ್ತೆ ನೊಂದವರ ಕೈ ಹಿಡಿಯಲು ಮುಂದಾದ ನಟ

ನಟ ಸೋನು ಸೂದ್ ಕರೋನಾ ವೈರಸ್ ಕಾರಣಕ್ಕೆ ಜಾರಿಗೊಳಿಸಲಾದ ಲಾಕ್‌ಡೌನ್ ಅವಧಿಯಲ್ಲಿ ಹಲವಾರು ಜನರಿಗೆ ವಿವಿಧ ರೀತಿಯಲ್ಲಿ ನೆರವಾಗಿದ್ದರು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಎಲೆಕ್ಟ್ರಿಕ್ ರಿಕ್ಷಾ ನೀಡುವ ಮೂಲಕ ಮತ್ತೆ ನೊಂದವರ ಕೈ ಹಿಡಿಯಲು ಮುಂದಾದ ನಟ

ಸೋನು ಸೂದ್, ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡು ಹೊರ ಊರುಗಳಲ್ಲಿ ಸಿಲುಕಿದ್ದ ಕಾರ್ಮಿಕರಿಗೆ ಸುರಕ್ಷಿತವಾಗಿ ತಮ್ಮ ಊರುಗಳನ್ನು ತಲುಪಲು ನೆರವಾಗಿದ್ದರು. ಉದ್ಯೋಗ ಕಳೆದುಕೊಂಡ ಹಲವರಿಗೆ ಉದ್ಯೋಗದ ವ್ಯವಸ್ಥೆ ಮಾಡಿದ್ದರು.

ಎಲೆಕ್ಟ್ರಿಕ್ ರಿಕ್ಷಾ ನೀಡುವ ಮೂಲಕ ಮತ್ತೆ ನೊಂದವರ ಕೈ ಹಿಡಿಯಲು ಮುಂದಾದ ನಟ

ಕರೋನಾ ವೈರಸ್‌ನಿಂದ ಪರಿಸ್ಥಿತಿ ಸುಧಾರಿಸುತ್ತಿದ್ದರೂ ಸೋನು ಸೂದ್ ಸಹಾಯ ಮಾಡುವುದನ್ನು ನಿಲ್ಲಿಸಿಲ್ಲ. ನೆರವಿನ ಅಗತ್ಯವಿರುವವರಿಗಾಗಿ ಸೋನು ಸೂದ್ ಈಗ ಹೊಸ ಯೋಜನೆಯೊಂದನ್ನು ಆರಂಭಿಸಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಎಲೆಕ್ಟ್ರಿಕ್ ರಿಕ್ಷಾ ನೀಡುವ ಮೂಲಕ ಮತ್ತೆ ನೊಂದವರ ಕೈ ಹಿಡಿಯಲು ಮುಂದಾದ ನಟ

ಈ ಯೋಜನೆಯಡಿಯಲ್ಲಿ ಕರೋನಾ ವೈರಸ್ ಕಾರಣಕ್ಕೆ ಜೀವನೋಪಾಯವನ್ನು ಕಳೆದುಕೊಂಡವರಿಗಾಗಿ ಎಲೆಕ್ಟ್ರಿಕ್ ರಿಕ್ಷಾಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ.ಈ ಹೊಸ ಯೋಜನೆಗೆ ಸ್ವಂತ ದುಡಿಮೆ ಮಾಡಿ ನಿಮ್ಮ ಕುಟುಂಬವನ್ನು ನೋಡಿಕೊಳ್ಳಿ (ಖುದ್ ಕಮಾವೊ, ಘರ್ ಚಲಾವೊ) ಎಂದು ಹೆಸರಿಡಲಾಗಿದೆ.

ಎಲೆಕ್ಟ್ರಿಕ್ ರಿಕ್ಷಾ ನೀಡುವ ಮೂಲಕ ಮತ್ತೆ ನೊಂದವರ ಕೈ ಹಿಡಿಯಲು ಮುಂದಾದ ನಟ

ಈ ಬಗ್ಗೆ ಮಾತನಾಡಿರುವ ಸೋನು ಸೂದ್, ಕಳೆದ ಕೆಲವು ತಿಂಗಳುಗಳಿಂದ ಜನರು ನನ್ನನ್ನು ಪ್ರೀತಿಸುತ್ತಿದ್ದಾರೆ. ಅವರಿಗೆ ನೆರವು ನೀಡಲು ಇದು ನನಗೆ ಇನ್ನಷ್ಟು ಸ್ಫೂರ್ತಿ ನೀಡುತ್ತದೆ. ಹಾಗಾಗಿ ನಾನು ಈ ಹೊಸ ಯೋಜನೆಯನ್ನು ಆರಂಭಿಸುತ್ತಿದ್ದೇನೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಎಲೆಕ್ಟ್ರಿಕ್ ರಿಕ್ಷಾ ನೀಡುವ ಮೂಲಕ ಮತ್ತೆ ನೊಂದವರ ಕೈ ಹಿಡಿಯಲು ಮುಂದಾದ ನಟ

ಅಗತ್ಯ ವಸ್ತುಗಳನ್ನು ಒದಗಿಸುವುದಕ್ಕಿಂತ ಉದ್ಯೋಗ ನೀಡುವುದು ಮುಖ್ಯ ಎಂದು ನಾನು ನಂಬುತ್ತೇನೆ. ಇದರಿಂದ ಜನರಿಗೆ ಸ್ವಂತವಾಗಿ ದುಡಿಯಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ. ನಟ ಸೋನು ಸೂದ್ ರವರ ಈ ಕೊಡುಗೆಗಾಗಿ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಎಲೆಕ್ಟ್ರಿಕ್ ರಿಕ್ಷಾ ನೀಡುವ ಮೂಲಕ ಮತ್ತೆ ನೊಂದವರ ಕೈ ಹಿಡಿಯಲು ಮುಂದಾದ ನಟ

ಭಾರತದಲ್ಲಿ ಹೊಸ ಹೊಸ ಎಲೆಕ್ಟ್ರಿಕ್ ರಿಕ್ಷಾಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ. ಇತ್ತೀಚಿಗೆ ಯುಪಿ ಟೆಲಿಲಿಂಕ್ಸ್ ಲಿಮಿಟೆಡ್ ಕಂಪನಿಯು ಹೊಸ ಎಲೆಕ್ಟ್ರಿಕ್ ರಿಕ್ಷಾವನ್ನು ಬಿಡುಗಡೆಗೊಳಿಸಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಎಲೆಕ್ಟ್ರಿಕ್ ರಿಕ್ಷಾ ನೀಡುವ ಮೂಲಕ ಮತ್ತೆ ನೊಂದವರ ಕೈ ಹಿಡಿಯಲು ಮುಂದಾದ ನಟ

ಈ ಹೊಸ ವಾಹನಕ್ಕೆ ಲಯನ್ ಲಿ-ಐಯಾನ್ ಎಂದು ಹೆಸರಿಡಲಾಗಿದೆ. ಈ ಎಲೆಕ್ಟ್ರಿಕ್ ರಿಕ್ಷಾ ಒಂದು ಕಿ.ಮೀ ಸಾಗಲು ಕೇವಲ 30 ಪೈಸೆ ವೆಚ್ಚವಾಗಲಿದೆ ಎಂದು ಹೇಳಲಾಗಿದೆ. ಈ ಎಲೆಕ್ಟ್ರಿಕ್ ರಿಕ್ಷಾದ ಬೆಲೆ ರೂ.1.85 ಲಕ್ಷಗಳಾಗಿದೆ. ಈ ಎಲೆಕ್ಟ್ರಿಕ್ ರಿಕ್ಷಾ ಖರೀದಿಸುವವರಿಗೆ ಕೇಂದ್ರ ಸರ್ಕಾರದ ಫೇಮ್ ಇಂಡಿಯಾ 2 ಯೋಜನೆಯಡಿಯಲ್ಲಿ 37 ಸಾವಿರ ರೂಪಾಯಿಗಳ ಸಬ್ಸಿಡಿ ದೊರೆಯುತ್ತದೆ.

Most Read Articles

Kannada
English summary
Actor Sonu Sood giving electric rickshaws to people affected from corona virus. Read in Kannada.
Story first published: Monday, December 14, 2020, 14:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X