ಸ್ಟಾಲಿನ್ ಪುತ್ರನಿಂದ ದುಬಾರಿ ಕಾರುಗಳ ಸ್ಮಗ್ಲಿಂಗ್?

Written By:

ವಿದೇಶದಿಂದ ಐಷಾರಾಮಿ ಕಾರುಗಳನ್ನು ಆಮದು ಮಾಡಿಕೊಂಡ ವೇಳೆ ಸರಕಾರಕ್ಕೆ ಭಾರಿ ಪ್ರಮಾಣದಲ್ಲಿ ತೆರಿಗೆ ವಂಚಿಸಿರುವುದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರ ಪುತ್ರ ಎಂ. ಕೆ. ಸ್ಟಾಲಿನ್ ಮನೆ ಮೇಲೆ ಸಿಬಿಐ ಗುರುವಾರ ದಾಳಿ ನಡೆಸಿರುವುದು ಭಾರಿ ವಿವಾದಕ್ಕೆಡೆ ಮಾಡಿ ಕೊಟ್ಟಿದೆ.

ಯುಪಿಎ ಮೈತ್ರಿಕೂಟದಿಂದ ಡಿಎಂಕೆ ಹೊರಬಂದ ಬೆನ್ನಲ್ಲೇ ಇಂತಹದೊಂದು ಬೆಳವಣಿಗೆ ಕಂಡುಬಂದಿರುವುದು ಅಚ್ಚರಿಗೆ ಕಾರಣಾಗಿದೆ. ಸ್ಟಾಲಿನ್ ಅವರ ಚೆನ್ನೈ ನಿವಾಸದ ಮೇಲೆ ದಾಳಿ ಸಿಬಿಐ ದಾಳಿ ನಡೆಸಿತ್ತು.

ಸ್ಟಾಲಿನ್ ಮಗ ಹಾಗೂ ಸಿನೆಮಾ ನಿರ್ಮಾಪಕರು ಆಗಿರುವ ಉದಯನಿಧಿ ಸ್ಟಾಲಿನ್ ಅವರಿಗೆ ದುಬಾರಿ ಕಾರುಗಳ ಸ್ಮಗ್ಲಿಂಗ್‌ಗಳಿವೆ ಎಂಬ ಆರೋಪಗಳು ಕೇಳಿಬಂದಿವೆ. ಇವರ ಬಳಿಯಿರುವ ಐಷಾರಾಮಿ ಕಾರುಗಳನ್ನು ಪಟ್ಟಿಯನ್ನು ನೋಡಿದರೆ ಅನುಮಾನ ಮೂಡುವುದಂತೂ ಸಹಜ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಟಾಲಿನ್, ತಮ್ಮ ವಿರುದ್ಧ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದಿದ್ದಾರೆ. ಗುರುವಾರ ಬೆಳಗ್ಗೆ ದಾಳಿ ನಡೆಸಿರುವ ಸಿಬಿಐ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂಬ ಮಾಹಿತಿ ಇದೆ.

ಬಾರಿ ಸಂಖ್ಯೆಯ ದುಬಾರಿ ಕಾರುಗಳನ್ನು ಕಳ್ಳ ಸಾಗಣೆ ಮಾಡಿರುವ ಅಲೆಕ್ಸ್ ಅಲಿಯಾಸ್ ಅಬೇ ಜಾನ್ ಜತೆ ಉದಯನಿಧಿಗೆ ನಂಟು ಇದೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಅಷ್ಟಕ್ಕೂ ಸ್ಟಾಲಿನ್ ಪುತ್ರನ ಬಳಿ ಯಾವೆಲ್ಲ ದುಬಾರಿ ಕಾರುಗಳಿವೆ ಎಂಬುದನ್ನು ಫೋಟೊ ಫೀಚರ್ ಮೂಲಕ ತಿಳಿಯೋಣ...

ಹಮ್ಮರ್

ಹಮ್ಮರ್

ಬಿಎಂಡಬ್ಲ್ಯು

ಬಿಎಂಡಬ್ಲ್ಯು

ಹಮ್ಮರ್

ಹಮ್ಮರ್

ಮಸೆರಾಟಿ

ಮಸೆರಾಟಿ

ಹಮ್ಮರ್

ಹಮ್ಮರ್

ಹಮ್ಮರ್

ಹಮ್ಮರ್

ಬಿಎಂಡಬ್ಲ್ಯು

ಬಿಎಂಡಬ್ಲ್ಯು

ಮಸೆರಾಟಿ

ಮಸೆರಾಟಿ

ಹಮ್ಮರ್

ಹಮ್ಮರ್

ಪೋರ್ಷೆ

ಪೋರ್ಷೆ

ಪೋರ್ಷೆ

ಪೋರ್ಷೆ

ಹಮ್ಮರ್

ಹಮ್ಮರ್

English summary
Producer-turned-actor Udhayanidhi Stalin's lavish cars have reportedly come under CBI scanner. A team of 7 CBI officers conducted a raid at DMK leader Mk.Stalin's house today. It appears the raid is in connection with import of a car. Udayanidhi Stalin allegedly imported Hummer by evading duty Stalin clan have seen to be using Hummer, maserati gto, Porsche cayenne and a bmw x5 cars.
Story first published: Thursday, March 21, 2013, 17:27 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark