ದೇಶದ ಟಾಪ್ ನಟರಷ್ಟೇ ದುಬಾರಿ ಕಾರುಗಳನ್ನು ಹೊಂದಿದ್ದಾರೆ ನಟ ವಿಜಯ್ ದೇವರಕೊಂಡ

ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತಿ ಕಡಿಮೆ ಸಮಯದಲ್ಲೇ ಭಾರೀ ಹೆಸರು ಮಾಡಿರುವ ತೆಲುಗು ನಟ ವಿಜಯ್‌ ದೇವರಕೊಂಡ ತಮ್ಮ ವಿಭಿನ್ನ ನಟನೆಯಿಂದಲೇ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಕೆಲವೇ ಸಿನಿಮಾಗಳು ಮಾಡಿದ್ದರೂ ದೇಶಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾರೆ.

Recommended Video

Mahindra Scorpio Classic Launched | Price At Rs 11.99 Lakh | Scorpio Classic Vs Scorpio N In Kannada

ಅವರು ಇತ್ತೀಚೆಗೆ ನಟಿಸಿ ಬಿಡುಗಡೆಗೆ ಸಜ್ಜಾಗಿರುವ ಬಹುನಿರೀಕ್ಷಿತ ಲೈಗರ್ ಸಿನಿಮಾ ನಾಳೆ ವಿಶ್ವಾದ್ಯಂತ ತೆರೆಗೆ ಅಪ್ಪಳಿಸಲಿದೆ. ವಿಜಯ್ ದೇವರಕೊಂಡ ಅವರ ಮೊದಲ ಬಹು-ಭಾಷಾ ಸಿನಿಮಾ ಕೂಡ ಇದಾಗಿದೆ. ಈ ಹೊಸ ಸಿನಿಮಾದೊಂದಿಗೆ, ವಿಜಯ್ ಅವರ ಸ್ಟಾರ್‌ಡಮ್ ಮತ್ತಷ್ಟು ಎತ್ತರವನ್ನು ತಲುಪುವ ನಿರೀಕ್ಷೆಯಿದೆ.

ದೇಶದ ಟಾಪ್ ನಟರಷ್ಟೇ ದುಬಾರಿ ಕಾರುಗಳನ್ನು ಹೊಂದಿದ್ದಾರೆ ನಟ ವಿಜಯ್ ದೇವರಕೊಂಡ

ಆರಂಭಿಕ ದಿನಗಳಲ್ಲಿ ಬಹಳ ಶ್ರಮಪಟ್ಟು ಸಿನಿಮಾ ಇಂಡಸ್ಟ್ರಿಗೆ ಬಂದ ವಿಜಯ್ ದೇವರಕೊಂಡ ಆರಂಭಿಕ ದಿನಗಳಲ್ಲಿ ಆಟೋದಲ್ಲಿ ಓಡಾಡುತ್ತಿದ್ದೆ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ. ತಮ್ಮ ಛಲದಿಂದಲೇ ಇಂದು ದೇಶಾದ್ಯಂತ ಗುರ್ತಿಸಿಕೊಂಡಿರುವ ಅವರು ತಮ್ಮ ಸ್ಟಾರ್ ಇಮೇಜ್‌ಗೆ ತಕ್ಕಂತೆ ಹಲವು ದುಬಾರಿ ಕಾರುಗಳನ್ನು ಸಹ ಹೊಂದಿದ್ದಾರೆ. ಅವರ ಬಹುಕೋಟಿ ಬೆಲೆಯ ಕಾರುಗಳನ್ನು ಇಲ್ಲಿ ನೋಡೋಣ..

ದೇಶದ ಟಾಪ್ ನಟರಷ್ಟೇ ದುಬಾರಿ ಕಾರುಗಳನ್ನು ಹೊಂದಿದ್ದಾರೆ ನಟ ವಿಜಯ್ ದೇವರಕೊಂಡ

BMW 5-ಸಿರೀಸ್

ಸಿನಿಮಾ ನಟರು ಸಾಮಾನ್ಯವಾಗಿ ಐಷಾರಾಮಿ ಕಾರುಗಳನ್ನು ಹೊಂದಲು ಬಯಸುತ್ತಾರೆ, ಜೊತೆಗೆ ಇಂತಹ ಕಾರುಗಳನ್ನು ಸ್ವತಃ ಅವರೇ ಓಡಿಸುವ ಬಯಕೆಯಿರುತ್ತದೆ. ಅಂತಯೇ ನಟ ವಿಜಯ್‌ ದೇವರಕೊಂಡ ಅವರು ಕೂಡ ಬಿಳಿ-ಬಣ್ಣದ BMW 5-ಸಿರೀಸ್ ಐಷಾರಾಮಿ ಕಾರನ್ನು ಹೊಂದಿದ್ದಾರೆ. ಈ ಕಾರನ್ನು ಆಗಾಗ ಅವರೇ ಓಡಿಸುತ್ತಾ ಕಾಣಿಸಿಕೊಂಡಿದ್ದಾರೆ.

ದೇಶದ ಟಾಪ್ ನಟರಷ್ಟೇ ದುಬಾರಿ ಕಾರುಗಳನ್ನು ಹೊಂದಿದ್ದಾರೆ ನಟ ವಿಜಯ್ ದೇವರಕೊಂಡ

ಉಳಿದಂತೆ ವಿಶೇಷ ಸಮಾರಂಭಗಳಿಗೆ ಈ ಕಾರಿನ್ನು ಹೆಚ್ಚಾಗಿ ಬಳಸುತ್ತಾರೆ. BMW 5-ಸರಣಿಯು ಭಾರತದಲ್ಲಿ 2.0-ಲೀಟರ್ 250 PS ಪೆಟ್ರೋಲ್, 2.0-ಲೀಟರ್ 190 PS ಡೀಸೆಲ್ ಮತ್ತು 3.0-ಲೀಟರ್ 265 PS ಡೀಸೆಲ್ ಎಂಬ ಮೂರು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ.

ದೇಶದ ಟಾಪ್ ನಟರಷ್ಟೇ ದುಬಾರಿ ಕಾರುಗಳನ್ನು ಹೊಂದಿದ್ದಾರೆ ನಟ ವಿಜಯ್ ದೇವರಕೊಂಡ

ಲ್ಯಾಂಡ್ ರೋವರ್ ರೇಂಜ್ ರೋವರ್

ಸಿನಿಮಾ ನಟರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಎಸ್‌ಯುವಿಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇದರಲ್ಲಿ ಹಲವು ನಟರಿಗೆ ರೇಂಜ್ ರೋವರ್ ಉತ್ತಮ ಆಯ್ಕೆಯಾಗಿದೆ. ಅಂತೆಯೇ ದೇವರಕೊಂಡ ಅವರಿಗೂ ರೇಂಜ್ ರೋವರ್ ಸಖತ್ ಇಷ್ಟ, ಹಾಗಾಗಿಯೇ ಇವರು ಕೂಡ ಬಿಳಿ-ಬಣ್ಣದ ಫೇಸ್‌ಲಿಫ್ಟೆಡ್ ನಾಲ್ಕನೇ-ಜನ್ ರೇಂಜ್ ರೋವರ್ ಹೊಂದಿದ್ದಾರೆ.

ದೇಶದ ಟಾಪ್ ನಟರಷ್ಟೇ ದುಬಾರಿ ಕಾರುಗಳನ್ನು ಹೊಂದಿದ್ದಾರೆ ನಟ ವಿಜಯ್ ದೇವರಕೊಂಡ

ಇದು ಬ್ಲಾಕ್ ರೂಫ್ ಹೊಂದಿದ್ದು ರಸ್ತೆಯಲ್ಲಿ ಇತರ ಕಾರುಗಳಂತಲ್ಲದೇ ಎದ್ದುಕಾಣುತ್ತದೆ. ನಾಲ್ಕನೇ ತಲೆಮಾರಿನ ರೇಂಜ್ ರೋವರ್ ಭಾರತದಲ್ಲಿ 2.0-ಲೀಟರ್ ಪೆಟ್ರೋಲ್, 3.0-ಲೀಟರ್ ಪೆಟ್ರೋಲ್, 5.0-ಲೀಟರ್ ಪೆಟ್ರೋಲ್, 3.0-ಲೀಟರ್ ಡೀಸೆಲ್ ಮತ್ತು 4.4-ಲೀಟರ್ ಡೀಸೆಲ್‌ಗಳಂತಹ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟದಲ್ಲಿದೆ. ಇನ್ನು ದೇವರಕೊಂಡ ಬಳಸುವ ಮಾದರಿಯು 3.0-ಲೀಟರ್ ಡೀಸೆಲ್ ಆಗಿದ್ದು, ಇದು ಭಾರತೀಯ ಕಾರು ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಪವರ್‌ಟ್ರೇನ್ ಆಯ್ಕೆಯಾಗಿದೆ.

ದೇಶದ ಟಾಪ್ ನಟರಷ್ಟೇ ದುಬಾರಿ ಕಾರುಗಳನ್ನು ಹೊಂದಿದ್ದಾರೆ ನಟ ವಿಜಯ್ ದೇವರಕೊಂಡ

ಮರ್ಸಿಡಿಸ್ ಬೆಂಝ್ GLC

ನಟ ವಿಜಯ್ ದೇವರಕೊಂಡ ಅವರ ಕಾರು ಸಂಗ್ರಹಕ್ಕೆ ಪ್ರತಿಷ್ಠಿತ ಸೇರ್ಪಡೆಯಾಗಿರುವ ಮತ್ತೊಂದು SUV ಎಂದರೆ ಬಿಳಿ ಬಣ್ಣದ Mercedes-Benz GLC ಆಗಿದೆ. ವಿಜಯ್ ಅವರಿಗೆ ಬಿಳಿ ಬಣ್ಣವೆಂದರೆ ಸಖತ್ ಇಷ್ಟ ಇದೇ ಕಾರಣಕ್ಕೆ ಅವರ ಬಳಿಯಿರುವ ಕಾರುಗಳಲ್ಲೆವೂ ಬಿಳಿ ಬಣ್ಣದ್ದಾಗಿವೆ. Mercedes-Benz GLCಯು ಜರ್ಮನ್ ಕಾರ್ ಬ್ರಾಂಡ್‌ನ ಅತ್ಯಂತ ಜನಪ್ರಿಯ SUVಗಳಲ್ಲಿ ಒಂದಾಗಿದೆ.

ದೇಶದ ಟಾಪ್ ನಟರಷ್ಟೇ ದುಬಾರಿ ಕಾರುಗಳನ್ನು ಹೊಂದಿದ್ದಾರೆ ನಟ ವಿಜಯ್ ದೇವರಕೊಂಡ

ಇದು Mercedes Benz ನ ಶ್ರೇಣಿಯಲ್ಲಿ GLA ಮತ್ತು GLE SUVಗಳ ನಡುವೆ ಸ್ಥಾನ ಪಡೆದಿದೆ. ಈ ಮಧ್ಯಮ ಗಾತ್ರದ SUV ಭಾರತದಲ್ಲಿ 2.0-ಲೀಟರ್ ಪೆಟ್ರೋಲ್ ಮತ್ತು 2.0-ಲೀಟರ್ ಡೀಸೆಲ್ ಎಂಬ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಯಾವ ಆವೃತ್ತಿಯ ಎಸ್‌ಯುವಿ ವಿಜಯ್ ಅವರ ಒಡೆತನದಲ್ಲಿದೆ ಎಂಬುದರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ದೇಶದ ಟಾಪ್ ನಟರಷ್ಟೇ ದುಬಾರಿ ಕಾರುಗಳನ್ನು ಹೊಂದಿದ್ದಾರೆ ನಟ ವಿಜಯ್ ದೇವರಕೊಂಡ

ಫೋರ್ಡ್ ಮುಸ್ತಾಂಗ್

ಅನೇಕ ಕಾರು ಪ್ರೇಮಿಗಳ ನೆಚ್ಚಿನ ಮಾದರಿ ಫೋರ್ಡ್ ಮಸ್ಟಾಂಗ್. ಇದು ಹೆವಿ ಪರ್ಫಾಮೆನ್ಸ್ ಹೊಂದಿರುವ ಸೂಪರ್ ಕಾರಾಗಿದ್ದು, ಇದಕ್ಕೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಅದರಲ್ಲಿ ವಿಜಯ್ ದೇವರಕೊಂಡ ಕೂಡ ಒಬ್ಬರಾಗಿದ್ದು ಸದ್ಯ ಈ ಕಾರನ್ನು ಬಳಸುತ್ತಿದ್ದಾರೆ. ಈ ಹಿಂದೆ ವಿಜಯ್ ಅವರು ಸಂದರ್ಶನವೊಂದರಲ್ಲಿ ತಮ್ಮ ನೆಚ್ಚಿನ ಕಾರ್‌ ಮಸ್ಟಾಂಗ್ ಎಂದು ಹೇಳಿಕೊಂಡಿದ್ದರು.

ದೇಶದ ಟಾಪ್ ನಟರಷ್ಟೇ ದುಬಾರಿ ಕಾರುಗಳನ್ನು ಹೊಂದಿದ್ದಾರೆ ನಟ ವಿಜಯ್ ದೇವರಕೊಂಡ

ವರದಿಗಳ ಪ್ರಕಾರ, ಅವರು ಹೊಂದಿರುವ ಮಸ್ಟಾಂಗ್ ಸುಮಾರು 75 ಲಕ್ಷ ರೂ. ಇದ್ದು, ಈ ಕಾರು 5.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಗರಿಷ್ಠ 363 bhp ಮತ್ತು 515 Nm ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದ್ದು, ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಕಾರಿಗೆ ಜೋಡಿಸಲಾಗಿದೆ.

ದೇಶದ ಟಾಪ್ ನಟರಷ್ಟೇ ದುಬಾರಿ ಕಾರುಗಳನ್ನು ಹೊಂದಿದ್ದಾರೆ ನಟ ವಿಜಯ್ ದೇವರಕೊಂಡ

ಇವೆರಡೂ ಸೇರಿ ಮಸ್ಟಾಂಗ್ ಕಾರನ್ನು ಹೆಚ್ಚಿನ ಸಾಮರ್ಥ್ಯದ ಎಕ್ಸಾಸ್ಟ್ ವಾಹನವನ್ನಾಗಿ ಪರಿವರ್ತಿಸಿವೆ. ಈ ಸಾಮರ್ಥ್ಯದಿಂದಾಗಿಯೇ ಹಲವರು ಈ ಕಾರನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅಲ್ಲದೇ ಅಡ್ವೆಂಚರ್ ರೈಡ್‌ಗಳಿಗಾಗಿ ಹೆಚ್ಚಾಗಿ ಬಳಸುತ್ತಾರೆ.

ದೇಶದ ಟಾಪ್ ನಟರಷ್ಟೇ ದುಬಾರಿ ಕಾರುಗಳನ್ನು ಹೊಂದಿದ್ದಾರೆ ನಟ ವಿಜಯ್ ದೇವರಕೊಂಡ

ವೋಲ್ವೋ XC 90

ವೋಲ್ವೋ XC90 ತನ್ನನ್ನು ತಾನು ಭವ್ಯವಾಗಿ ಕಾಣುವ SUV ಕಾರು ಮಾದರಿಯಾಗಿ ಪ್ರಸ್ತುತಪಡಿಸುತ್ತದೆ. ಈ ಮಾದರಿಯನ್ನು ಬಳಸುವ ಸ್ಟಾರ್‌ ನಟರ ಸಾಲಿನಲ್ಲಿ ದೇವರಕೊಂಡ ಕೂಡ ಇದ್ದಾರೆ. ಈ ಕಾರ್ ಹೆಚ್ಚು ವಿಶಾಲವಾದದ್ದು ಮಾತ್ರವಲ್ಲದೆ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ಇಷ್ಟೇ ಅಲ್ಲ, ಭದ್ರತಾ ವೈಶಿಷ್ಟ್ಯಗಳನ್ನು ಸಹ ಬಹಳ ಉದಾರವಾಗಿ ಒದಗಿಸಲಾಗಿದೆ. ಹಾಗಾಗಿ ಬೆಲೆ ಸ್ವಲ್ಪ ಜಾಸ್ತಿ. ವೋಲ್ವೋ XC90 ಬೆಲೆ 85 ಲಕ್ಷ ರೂ. ಇದೆ.

ದೇಶದ ಟಾಪ್ ನಟರಷ್ಟೇ ದುಬಾರಿ ಕಾರುಗಳನ್ನು ಹೊಂದಿದ್ದಾರೆ ನಟ ವಿಜಯ್ ದೇವರಕೊಂಡ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಶೂಟಿಂಗ್‌ಗೆ ತೆರಳಲು ಆಟೋ ಬಳಸಿ ತನ್ನ ಸಿನಿಮಾ ಜೀವನವನ್ನು ಆರಂಭಿಸಿದ್ದ ನಟ ವಿಜಯ್ ದೇವರಕೊಂಡ ಇಂದು ಅತಿದೊಡ್ಡ ಸ್ಟಾರ್ ಆಗಿ ಬೆಳೆದಿದ್ದಾರೆ. ನಾಳೆ ವಿಶ್ವದಾದ್ಯಂತ ತೆರೆಕಾಣಲಿರುವ ಲೈಗರ್ ಸಿನಿಮಾ ಯಶಸ್ಸು ಕಾಣಲಿ ಎಂಬುದು ಡ್ರೈವ್‌ಸ್ಪಾರ್ಕ್ ಆಶಯ.

Most Read Articles

Kannada
English summary
Actor Vijay Devarakonda owns as many expensive cars as top actors in the country
Story first published: Wednesday, August 24, 2022, 11:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X