ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಟ ವಿಜಯ್‌ಗೆ ದಂಡ

ತಮಿಳಿನ ಖ್ಯಾತ ನಟ ಥಲಪತಿ ವಿಜಯ್ ಸಾಲು-ಸಾಲು ಹಿಟ್ ಚಿತ್ರಗಳನ್ನು ನೀಡುವ ಮೂಲಕ ಸಖತ್ ಫೇಮಸ್ ಆಗಿದ್ದಾರೆ. ಸದಾ ಒಂದಿಲ್ಲೊಂದು ಸಿನಿಮಾದ ವಿಚಾರಗಳ ಮೂಲಕ ಚರ್ಚೆಯಲ್ಲಿರುತ್ತಾರೆ. ಆದರೆ, ಅವರು ಸದ್ಯ ಚೆನ್ನೈ ಪೊಲೀಸರಿಗೆ ದಂಡವನ್ನು ಕಟ್ಟಿದ್ದಾರೆ. ಹಾಗದರೇ ವಿಜಯ್ ಮಾಡಿದ ತಪ್ಪೇನು? ಎಂಬುದನ್ನು ತಿಳಿಯಲು ಈ ಸುದ್ದಿ ಓದಿರಿ.

ಚೆನ್ನೈ ನಗರದಲ್ಲಿ ಟಿಂಟೆಡ್ ಗ್ಲಾಸ್‌ನೊಂದಿಗೆ ತಮ್ಮ ಟೊಯೊಟಾ ಇನ್ನೋವಾದಲ್ಲಿ ಪ್ರಯಾಣಿಸುತ್ತಿದ್ದಾಗ ಪೊಲೀಸರು ನಟ ವಿಜಯ್ ಅವರನ್ನು ತಡೆದಿದ್ದು, ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ 500 ರೂ. ದಂಡ ವಿಧಿಸಿದ್ದಾರೆ. ಹಲವಾರು ಬಾರಿ ನಟ ವಿಜಯ್ ಟಿಂಟೆಡ್ ಗ್ಲಾಸ್‌ ಇರುವ ಇದೇ ಇನ್ನೋವಾ ಕಾರಿನಲ್ಲಿ ಪ್ರಯಾಣಿಸುರುವುದನ್ನು ಪೊಲೀಸರು ಗುರುತಿಸಿದ್ದಾರೆ. ಗ್ಲಾಸ್‌ ಮೇಲೆಂದ ಟಿಂಟ್‌ಗಳನ್ನು ತೆಗೆದಿದ್ದಾರೆಯೇ ಅಥವಾ ಅದನ್ನು ವಿಜಯ್ ಅವರಿಗೆ ತೆಗೆಯಲು ಹೇಳಿದ್ದಾರೆಯೇ ಎಂಬುದರ ಬಗ್ಗೆ ಖಚಿತ ಮಾಹಿತಿಯಿಲ್ಲ.

ಕೆಲವು ಸಂದರ್ಭಗಳಲ್ಲಿ ಸಿನಿಮಾ ನಟ, ನಟಿಯರು ಅಥವಾ ವಿಶೇಷವಾಗಿ ಅಗತ್ಯವುಳ್ಳ ರಾಜಕಾರಣಿಗಳು, ಉದ್ಯಮಿಗಳು ಮತ್ತು ಕ್ರಿಕೆಟಿಗರು ಗೌಪ್ಯತೆ ಹಾಗೂ ಸುರಕ್ಷತೆಯ ಆಧಾರದ ಮೇಲೆ ತಮ್ಮ ವಾಹನಗಳ ಗ್ಲಾಸ್‌ ಮೇಲೆ ಟಿಂಟೆಡ್ ಬಳಸಲು ನ್ಯಾಯಾಲಯದಿಂದ ಅನುಮತಿಯನ್ನು ತೆಗೆದುಕೊಳ್ಳಬಹುದು. ಆದರೆ, ಬಹುತೇಕ ಸೆಲೆಬ್ರಿಟಿ ಕಾರು ಮಾಲೀಕರು ಯಾವುದೇ ರೀತಿಯ ಅಧಿಕೃತ ಒಪ್ಪಿಗೆಯನ್ನು ಪಡೆಯುವುದೇ ಇಲ್ಲ. ಬದಲಾಗಿ, ತಾವಾಗಿಯೇ ತಮ್ಮ ವಾಹನಗಳಲ್ಲಿ ಟಿಂಟೆಡ್ ಆಗಿರುವ ಗ್ಲಾಸ್‌ ಅನ್ನು ಬಳಸುತ್ತಾರೆ.

'ಟಿಂಟೆಡ್ ವಿಂಡೋ ನಿಯಮ' ಭಾರತದಲ್ಲಿ ಹೆಚ್ಚು ಉಲ್ಲಂಘನೆಯಾಗುವ ಸಂಚಾರಿ ನಿಯಮಗಳಲ್ಲಿ ಒಂದಾಗಿದೆ. ದೆಹಲಿ, ಬೆಂಗಳೂರು ಮತ್ತು ಮುಂಬೈನಂತಹ ದೊಡ್ಡ ಮೆಟ್ರೋಪಾಲಿಟನ್ ನಗರಗಳಲ್ಲಿ ಈ ನಿಯಮ ಜಾರಿಗೊಳಿಸುವಿಕೆಯು ಕಟ್ಟುನಿಟ್ಟಾಗಿದೆ. ಆದರೆ, ಇತರೆ ಅನೇಕ ನಗರಗಳಲ್ಲಿ ವಾಹನ ಚಾಲಕರು ಬಿಸಿಲಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಟಿಂಟೆಡ್ ಗ್ಲಾಸ್‌ ಬಳಸುವುದನ್ನು ಮುಂದುವರೆಸಿದ್ದಾರೆ. ದೇಶದ ಯಾವುದೇ ಕಾರುಗಳಲ್ಲಿ ಆಫ್ಟರ್ ಮಾರ್ಕೆಟ್ ಟಿಂಟೆಡ್ ವಿಂಡೋ ಬಳಕೆಗೆ ಅನುಮತಿಯಿಲ್ಲ ಎಂಬುದು ಗಮನಿಸಬೇಕಾದ ಪ್ರಮುಖ ಅಂಶವಾಗಿದೆ.

ವಾಹನದೊಳಗೆ ನಡೆಯುವ ಅಪರಾಧ ಕೃತ್ಯಗಳನ್ನು ಸುಲಭವಾಗಿ ಗುರುತಿಸಲು ಟಿಂಟೆಡ್ ಗ್ಲಾಸ್‌ ತೆಗೆಯುವಂತೆ ವಾಹನ ಮಾಲೀಕರಿಗೆ ತಿಳಿಸಲಾಗುತ್ತದೆ. ಅಲ್ಲದೆ, ದೇಶದ ಪ್ರಧಾನಮಂತ್ರಿ ಸೇರಿದಂತೆ ಕೇಂದ್ರ ಗೃಹ ಸಚಿವ, ರಕ್ಷಣಾ ಸಚಿವ ಹಾಗೂ ರಾಜ್ಯದ ಮುಖ್ಯಮಂತ್ರಿ ಸೇರಿ ಯಾವುದೇ ರಾಜಕಾರಣಿಗಳು ತಮ್ಮ ವಾಹನದಲ್ಲಿ ಸೈರನ್ ಮತ್ತು ಫ್ಲಾಷರ್ ಬಳಸುವಂತಿಲ್ಲ. ಈ ಹಿಂದೆಯೂ ಇದಕ್ಕಾಗಿ ರಾಜಕಾರಣಿಗಳಿಗೆ ದಂಡ ವಿಧಿಸಲಾಗಿದೆ. ಆದರೂ ಪಾಟ್ನಾದ ಪೊಲೀಸರು ವಾಹನದ ಮೇಲ್ಬಾಗ ಅಕ್ರಮವಾಗಿ ಹಾಕಿದ್ದ ಸೈರನ್ ಮತ್ತು ಫ್ಲಾಷರ್‌ಗೆ ಯಾವುದೇ ದಂಡ ಹಾಕಿರಲಿಲ್ಲ.

ಭಾರತದಲ್ಲಿ, ಆಂಬ್ಯುಲೆನ್ಸ್‌ಗಳು, ಅಧಿಕೃತ ಪೊಲೀಸ್ ವಾಹನ ಹಾಗೂ ತುರ್ತು ವಾಹನಗಳು ಮಾತ್ರ ಸೈರನ್ ಮತ್ತು ಸ್ಟ್ರೋಬ್‌ಗಳನ್ನು ಬಳಸಲು ಅನುಮತಿಯನ್ನು ಹೊಂದಿವೆ. ಅಲ್ಲದೆ, ಹೊಸ ಎಂವಿ (ಮೋಟಾರು ವಾಹನ) ಕಾಯಿದೆಯಡಿ ಸಾರ್ವಜನಿಕರಿಗೆ ನಿಗದಿಪಡಿಸಿದ ಅಧಿಕೃತ ಮೊತ್ತಕ್ಕಿಂತ ಎರಡು ಪಟ್ಟು ಸರ್ಕಾರಿ ಅಧಿಕಾರಿಗಳಿಗೆ ಪೊಲೀಸರು ದಂಡ ವಿಧಿಸುವ ಅಧಿಕಾರ ಹೊಂದಿದ್ದಾರೆ ಎಂಬುದನ್ನು ಗಮನಿಸಬೇಕು. ಏಕೆಂದರೆ, ಉನ್ನತ ಹುದ್ದೆಯಲ್ಲಿರುವವರೂ ಯಾವುದೇ ನಿಯಮ ಉಲ್ಲಂಘಿಸುವುದಿಲ್ಲ. ಜೊತೆಗೆ ಸಾಮಾನ್ಯ ನಾಗರಿಕರಿಗೆ ಮಾದರಿಯಾಗಿರುತ್ತಾರೆ.

ಈ ವರ್ಷದ ಆರಂಭದಲ್ಲಿ ತೆಲುಗು ನಟ ಅಲ್ಲು ಅರ್ಜುನ್ ತಮ್ಮ ರೇಂಜ್ ರೋವರ್‌ ಕಾರಿನಲ್ಲಿ ಟಿಂಟೆಡ್ ಗ್ಲಾಸ್‌ಗಳನ್ನು ಬಳಸಿದ್ದಕ್ಕಾಗಿ ದಂಡ ಪಾವತಿಸಿದ್ದರು. ವಿಶೇಷ ಕಾರ್ಯಾಚರಣೆ ವೇಳೆ ಹೈದರಾಬಾದ್ ಪೊಲೀಸರು, ಅಲ್ಲು ಅರ್ಜುನ್ ಅವರನ್ನು ತಡೆದು 700 ರೂ. ದಂಡ ಕಟ್ಟಿಸಿಕೊಂಡು ಸ್ಥಳದಲ್ಲೇ ಕಾರಿನ ಟಿಂಟ್‌ಗಳನ್ನು ತೆಗೆದಿದ್ದಾರೆ. ಇಷ್ಟೆಅಲ್ಲದೆ, ಎಂಎಲ್‌ಎ, ವಿವಿಧ ಸಂಘಟನೆಗಳಿಗೆ ಸೇರಿದವರು ಎಂದು ಹೇಳಿಕೊಳ್ಳಲು ವಾಹನದ ಮೇಲೆ ಹಾಕಿರುವ ಸ್ಟಿಕ್ಕರ್‌ಗಳಿಗೂ ಪೊಲೀಸರು ದಂಡ ವಿಧಿಸಿದ್ದಾರೆ. ಜೊತೆಗೆ ಅವುಗಳನ್ನು ತೆಗೆದಿದ್ದಾರೆ.

ಅಂದಹಾಗೆ, ಟೊಯೊಟಾ ಇನ್ನೋವಾ ಕ್ರಿಸ್ಟಾ ತುಂಬಾ ಸಿಂಪಲ್ ಆಗಿರುವ ಲುಕ್ ಹೊಂದಿದ್ದು, ಎಲ್ಇಡಿ DRLs ಜೊತೆಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಪ್‌ಗಳು, ORVM-ಮೌಂಟೆಡ್ ಟರ್ನ್ ಇಂಡಿಕೇಟರ್ ಮತ್ತು ಕೆಲವು ಕ್ರೋಮ್ ಅಂಶಗಳಂತಹ ಡಿಸೈನ್‌ನೊಂದಿಗೆ ಸ್ವಲ್ಪ ಪ್ರೀಮಿಯಂ ಪೀಪಲ್ ಮೂವರ್ ರೀತಿ ಕಾಣಿಸುತ್ತದೆ. ಅಲ್ಲದೆ, ಈ ಇನ್ನೋವಾ ಕ್ರಿಸ್ಟಾ 4,735 ಮಿ.ಮೀ ಉದ್ದ, 1,850 ಎಂಎಂ ಅಗಲ, 1,795 ಎಂಎಂ ಎತ್ತರ ಇರುವ ಮೂಲಕ ದೊಡ್ಡ MUV ಆಗಿದೆ.

Most Read Articles

Kannada
English summary
Actor vijay fined for traveling in toyota innova crysta car
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X