ಬಾಲಿವುಡ್‌ನ ಜನಪ್ರಿಯ ನಟರ ಗಮನಸೆಳೆದ ಹೊಸ ಹೋಂಡಾ ಸಿಬಿ500ಎಕ್ಸ್ ಬೈಕ್

ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ಕಾರ್ತಿಕ್ ಆರ್ಯನ್ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಕಾರ್ಯಕ್ರಮದಲ್ಲಿ ಹೊಸ ಹೋಂಡಾ ಸಿಬಿ500ಎಕ್ಸ್ ಬೈಕ್ ನೊಂದಿಗೆ ಈ ಬಾಲಿವುಡ್ ಜನಪ್ರಿಯ ನಟರು ಪೋಸ್ ಕೊಟ್ಟರು.

ಬಾಲಿವುಡ್‌ನ ಜನಪ್ರಿಯ ನಟರ ಗಮನಸೆಳೆದ ಹೊಸ ಹೋಂಡಾ ಸಿಬಿ500ಎಕ್ಸ್ ಬೈಕ್

Instagram ನಲ್ಲಿ ಹಂಚಿಕೊಂಡಿರುವ ವೀಡಿಯೊವು ಶಾರುಖ್ ಖಾನ್ ಮತ್ತು ಕಾರ್ತಿಕ್ ಆರ್ಯನ್ ಪರಸ್ಪರ ಮಾತನಾಡುತ್ತಿರುವುದನ್ನು ತೋರಿಸುತ್ತದೆ, ನಂತರ ಅಲ್ಲಿಯೇ ನಿಲ್ಲಿಸಿದ ಹೋಂಡಾ ಸಿಬಿ500ಎಕ್ಸ್ ಬೈಕ್ ಕಡೆ ಶಾರುಖ್ ಖಾನ್ ಗಮನ ಸೆಳೆಯಿತು. ಶಾರುಖ್ ಖಾನ್ ಮತ್ತು ಕಾರ್ತಿಕ್ ಆರ್ಯನ್ ಇಬ್ಬರೂ ಐಷಾರಾಮಿ ಕಾರುಗಳಿಂದ ತುಂಬಿರುವ ವಿಸ್ತಾರವಾದ ಗ್ಯಾರೇಜ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರಲ್ಲಿ ಯಾರೂ ಮೋಟಾರ್‌ಸೈಕಲ್ ಉತ್ಸಾಹಿಗಳಿಗೆ ಹೆಸರುವಾಸಿಯಾಗಿರಲಿಲ್ಲ.

ಬಾಲಿವುಡ್‌ನ ಜನಪ್ರಿಯ ನಟರ ಗಮನಸೆಳೆದ ಹೊಸ ಹೋಂಡಾ ಸಿಬಿ500ಎಕ್ಸ್ ಬೈಕ್

ಕಾರ್ತಿಕ್ ಆರ್ಯನ್ ರಾಯಲ್ ಎನ್‌ಫೀಲ್ಡ್ ಅನ್ನು ಹೊಂದಿದ್ದಾರೆ ಮತ್ತು ರಸ್ತೆಗಳಲ್ಲಿ ಮೋಟಾರ್‌ಸೈಕಲ್ ಸವಾರಿ ಮಾಡುವುದನ್ನು ಕೆಲವು ಬಾರಿ ಗುರುತಿಸಿದ್ದಾರೆ. ಆದರೆ ಶಾರುಖ್ ಖಾನ್ ಅವರಿಗೆ ಹೆಚ್ಚು ಕಾರುಗಳ ಕ್ರೇಜ್ ಅನ್ನು ಹೊಂದಿದ್ದಾರೆ.

ಬಾಲಿವುಡ್‌ನ ಜನಪ್ರಿಯ ನಟರ ಗಮನಸೆಳೆದ ಹೊಸ ಹೋಂಡಾ ಸಿಬಿ500ಎಕ್ಸ್ ಬೈಕ್

ಕಾರುಗಳ ವಿಷಯಕ್ಕೆ ಬಂದರೆ, ಇಬ್ಬರೂ ನಟರು ಕೆಲವು ಐಷಾರಾಮಿ ಮಾದರಿಗಳನ್ನು ಹೊಂದಿದ್ದಾರೆ. ಕಾರ್ತಿಕ್ ಅವರು ಲ್ಯಾಂಬೋರ್ಗಿನಿ ಉರಸ್ ಅನ್ನು ಹೊಂದಿದ್ದಾರೆ ಮತ್ತು ನಿಯಮಿತವಾಗಿ ಬಳಸುತ್ತಾರೆ. ಅವರು ಇತ್ತೀಚೆಗೆ ಚಲನಚಿತ್ರವೊಂದರಲ್ಲಿನ ಅಭಿನಯಕ್ಕಾಗಿ ಚಲನಚಿತ್ರ ನಿರ್ಮಾಪಕ ಭೂಷಣ್ ಕುಮಾರ್ ಅವರಿಂದ ಐಷಾರಾಮಿ ಮೆಕ್ಲಾರೆನ್ ಜಿಟಿಯನ್ನು ಉಡುಗೊರೆಯಾಗಿ ಸ್ವೀಕರಿಸಿದರು.

ಬಾಲಿವುಡ್‌ನ ಜನಪ್ರಿಯ ನಟರ ಗಮನಸೆಳೆದ ಹೊಸ ಹೋಂಡಾ ಸಿಬಿ500ಎಕ್ಸ್ ಬೈಕ್

ಶಾರುಖ್ ಖಾನ್ ಇತ್ತೀಚೆಗೆ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಖರೀದಿಸಿದ್ದಾರೆ. ಶಾರುಖ್ ಅವರು ಬಿಎಂಡಬ್ಲ್ಯು 7-ಸೀರಿಸ್ ಮತ್ತು ಕೆಲವು ಉನ್ನತ-ಮಟ್ಟದ ಐಷಾರಾಮಿ ಕಾರುಗಳು ಮತ್ತು ಎಸ್‍ಯುವಿಗಳನ್ನು ಹೊಂದಿದ್ದಾರೆ.

ಬಾಲಿವುಡ್‌ನ ಜನಪ್ರಿಯ ನಟರ ಗಮನಸೆಳೆದ ಹೊಸ ಹೋಂಡಾ ಸಿಬಿ500ಎಕ್ಸ್ ಬೈಕ್

ಈ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್ ಬಗ್ಗೆ ಹೇಳುವುದಾದರೆ, ಈ ಬೈಕ್ 471ಸಿಸಿ, ಲಿಕ್ವಿಡ್-ಕೂಲ್ಡ್, ಡಿಒಹೆಚ್‌ಸಿ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿದೆ ಈ ಎಂಜಿನ್ 8,500 ಆರ್‌ಪಿಎಂನಲ್ಲಿ 47 ಬಿಹೆಚ್‍ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 43.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಎಂಜಿನ್ ನೊಂದಿಗೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್ ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಈ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕನ್ನು ಸಿಕೆಡಿ (ಕಂಪ್ಲೀಟ್ಲಿ ನಾಕ್ ಡೌನ್) ಮಾರ್ಗದ ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಹೊಸ ಹೋಂಡಾ ಅಡ್ವೆಂಚರ್ ಟೂರರ್ ಅನ್ನು ಬಿಗ್‌ವ್ಹಿಂಗ್ ಡೀಲರ್‌ಶಿಪ್ ನೆಟ್‌ವರ್ಕ್ ಮೂಲಕ ಮಾರಾಟ ಮಾಡಲಾಗುತ್ತದೆ. ಈ ಹೊಸ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್ ಆಗಿರುವುದರಿಂದ ಹೆಚ್ಚು ಅಗ್ರೇಸಿವ್ ಲುಕ್ ಹೊಂದಿದೆ.

ಬಾಲಿವುಡ್‌ನ ಜನಪ್ರಿಯ ನಟರ ಗಮನಸೆಳೆದ ಹೊಸ ಹೋಂಡಾ ಸಿಬಿ500ಎಕ್ಸ್ ಬೈಕ್

ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, 150ಎಂಎಂ ಟ್ರ್ಯಾವೆಲ್ ನೊಂದಿಗೆ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದ ಆಕ್ಸಲ್‌ಗಳಲ್ಲಿ 135 ಎಂಎಂ ಟ್ರಾವೆಲ್ ಯುನಿಟ್ ಮೊನೊಶಾಕ್ ಸೆಟಪ್ ಅನ್ನು ಒಳಗೊಂಡಿದೆ,

ಬಾಲಿವುಡ್‌ನ ಜನಪ್ರಿಯ ನಟರ ಗಮನಸೆಳೆದ ಹೊಸ ಹೋಂಡಾ ಸಿಬಿ500ಎಕ್ಸ್ ಬೈಕ್

ಇನ್ನು ಈ ಹೊಸ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕಿನ ಮುಂಭಾಗದಲ್ಲಿ 19 ಇಂಚಿನ (110/80 ಆಲ್-ಟೆರೈನ್ ಟೈರ್) ಮತ್ತು ಹಿಂಭಾಗದಲ್ಲಿ 17 ಇಂಚಿನ (160/60 ಆಲ್-ಟೆರೈನ್ ಟೈರ್) ಅಲಾಯ್ ವ್ಹೀಲ್ ಅನ್ನು ಕೂಡ ನೀಡಿದೆ.

ಬಾಲಿವುಡ್‌ನ ಜನಪ್ರಿಯ ನಟರ ಗಮನಸೆಳೆದ ಹೊಸ ಹೋಂಡಾ ಸಿಬಿ500ಎಕ್ಸ್ ಬೈಕ್

ಇನ್ನು ಪ್ರಮುಖವಾಗಿ ಈ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ) ಅನ್ನು ಕೂಡ ಹೊಂದಿದೆ. ಈ ಹೊಸ ಹೋಂಡಾ ಸಿಬಿ500ಎಕ್ಸ್ ಬೈಕಿನಲ್ಲಿ ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್, ಸ್ಟೆಪ್ ಅಪ್ ಸೀಟ್ ಮತ್ತು ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಸಿಸ್ಟಂನಂತಹ ಫೀಚರ್ ಗಳೊಂದಿಗೆ ಇದು ಪೂರ್ಣ ಎಲ್ಇಡಿ ಸಿಸ್ಟಂ ಅನ್ನು ಹೊಂದಿದೆ. ಈ ಬೈಕಿನಲ್ಲಿ ಸಂಪೂರ್ಣ ಡಿಜಿಟಲ್ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕೂಡ ಒಳಗೊಂಡಿದೆ.

ಬಾಲಿವುಡ್‌ನ ಜನಪ್ರಿಯ ನಟರ ಗಮನಸೆಳೆದ ಹೊಸ ಹೋಂಡಾ ಸಿಬಿ500ಎಕ್ಸ್ ಬೈಕ್

ಇನ್ನು ಹೋಂಡಾ ಹೊಸ 2022ರ ಸಿಬಿ500ಎಕ್ಸ್ ಅಡ್ವೆಂಚರ್ ಬೈಕನ್ನು ಜಾಗತಿಕವಾಗಿ ಅನಾವರಣಗೊಳಿಸಿತ್ತು. ಈ 2022ರ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್ ಗಮನಾರ್ಹವಾದ ನವೀಕರಣವನ್ನು ಸ್ವೀಕರಿಸಿದೆ. ಈ ಮಾದರಿಯು ಹೊಸ ಪರ್ಲ್ ಆರ್ಗ್ಯಾನಿಕ್ ಗ್ರೀನ್ ಎಂಬ ಬಣ್ಣದ ಪಡೆದುಕೊಂಡಿವೆ. ಈ ಬೈಕ್ ಫ್ಯೂಯಲ್ ಮತ್ತು ಮುಂಭಾಗದ ಫೆಂಡರ್‌ನಲ್ಲಿ ವೈಶಿಷ್ಟ್ಯಗಳನ್ನು ಹೊಂದಿದೆ ಆದರೆ ಹಿಂಭಾಗವನ್ನು ಕಪ್ಪು ಬಣ್ಣದಲ್ಲಿದೆ. ಹೊಸ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್ ಆಗಿರುವುದರಿಂದ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಕೂಡ ಒಳಗೊಂಡಿದೆ.

ಬಾಲಿವುಡ್‌ನ ಜನಪ್ರಿಯ ನಟರ ಗಮನಸೆಳೆದ ಹೊಸ ಹೋಂಡಾ ಸಿಬಿ500ಎಕ್ಸ್ ಬೈಕ್

ಈ ಬೈಕಿನ ದೊಡ್ಡ ನವೀಕರಣವೆಂದರೆ ಹೊಸ ಮುಂಭಾಗದ ಸಸ್ಪೆಂಕ್ಷನ್ ಆಗಿದೆ. ಇದು ಶೋವಾ SF-BPF ಇನ್ವರ್ಟಡ್ ಫೋರ್ಕ್‌ಗಳಿಂದ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಬದಲಾಯಿಸಲಾಗಿದೆ. ಎಸ್ಎಫ್ ಪ್ರತ್ಯೇಕ ಕಾರ್ಯವನ್ನು ಸೂಚಿಸುತ್ತದೆ ಆದರೆ 'BPF' ಬಿಗ್ ಪಿಸ್ಟನ್ ಫೋರ್ಕ್ಸ್ ಆಗಿದೆ. ಸೆಟಪ್ ಪ್ರೀಮಿಯಂ ಮತ್ತು ಹೆಚ್ಚು ದೊಡ್ಡ ಬೈಕ್ ಗಳಲಿ ಕಂಡುಬರುತ್ತದೆ. ಹೊಸ ಸಸ್ಪೆಂಕ್ಷನ್ ಜೊತೆಗೆ, ಹೋಂಡಾ ಸಹ ಮುಂದಕ್ಕೆ ಹೋಗಿದೆ ಮತ್ತು ಮೋಟಾರ್‌ಸೈಕಲ್‌ನ ಬ್ರೇಕ್‌ಗಳನ್ನು ಪರಿಷ್ಕರಿಸಿದೆ. ಸಿಬಿ500ಎಕ್ಸ್ ಹಿಂದಿನ ಆವೃತ್ತಿಯು ಒಂದೇ 310mm ಡಿಸ್ಕ್ ಅನ್ನು ಬಳಸಿದರೆ, 2022 ಮಾದರಿಯು ಎಬಿಎಸ್ ಜೊತೆಗೆ ಮುಂಭಾಗದಲ್ಲಿ ಎರಡು 296ಎಂಎಂ ಡಿಸ್ಕ್ ಗಳನ್ನು ನೀಡುತ್ತದೆ.

ಬಾಲಿವುಡ್‌ನ ಜನಪ್ರಿಯ ನಟರ ಗಮನಸೆಳೆದ ಹೊಸ ಹೋಂಡಾ ಸಿಬಿ500ಎಕ್ಸ್ ಬೈಕ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮುಂದಿನ ದಿನಗಳಲ್ಲಿ ಹೋಂಡಾ ಕಂಪನಿಯು ಭಾರತದಲ್ಲಿ ಹೊಸ ದ್ವಿಚಕ್ರ ವಾಹನಗಳನ್ನು ಪರಿಚಯಿಸಲಿದೆ. ಇನ್ನು ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬೆನೆಲ್ಲಿ ಟಿಆರ್ಕೆ 502, ಸುಜುಕಿ ವಿ-ಸ್ಟ್ರೋಮ್ 650ಎಕ್ಸ್‌ಟಿ ಮತ್ತು ಕವಾಸಕಿ ವರ್ಸಿಸ್ 650 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Article Published On: Tuesday, July 19, 2022, 19:22 [IST]
English summary
Actors shahrukh khan and kartik aryan poses with honda cb500x details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+