Amala paul: ನಿರ್ದೇಶಕನಿಗೆ ವಿಚ್ಛೇದನ... ಸ್ನೇಹಿತನಿಗೆ ಆಹ್ವಾನ! ಕಿಚ್ಚನ ಸುಂದರಿಗೆ ದುಬಾರಿ ಗಿಫ್ಟ್!

ಮಲಯಾಳಂನಿಂದ ಪ್ರಾರಂಭಿಸಿ ಇಡೀ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿ ಮಿಂಚಿದ್ದ 'ಅಮಲಾ ಪೌಲ್' (Amala paul), ಕನ್ನಡದಲ್ಲಿ 'ಕಿಚ್ಚಾ ಸುದೀಪ್‌' (Kichcha sudeep) ಅವರೊಂದಿಗೆ ಹೆಬ್ಬುಲಿ ಸಿನಿಮಾದಲ್ಲಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಸದ್ಯ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ. ಸಿನಿಮಾ ತಾರೆಯರು ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಅಂತೆಯೇ ಅಮಲಾ ಪೌಲ್ ಈಗ ಐಷಾರಾಮಿ ಕಾರನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ.

ನಟಿ ಅಮಲಾ ಪೌಲ್ ಅವರು ತಮಿಳು ನಿರ್ದೇಶಕ ಎ.ಎಲ್.ವಿಜಯ್‌ಗೆ ವಿಚ್ಛೇದನ ನೀಡಿದ ನಂತರ ತಮ್ಮ ಬಹುಕಾಲದ ಗೆಳೆಯ ಜಗತ್ ದೇಸಾಯಿ ಅವರನ್ನು ವಿವಾಹವಾದರು. ಬಳಿಕ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕ್ರಮೇಣ ಕಡಿಮೆಯಾಗಿದೆ. ನಟಿ ಈಗ ವರ್ಷಕ್ಕೆ ಒಂದು ಅಥವಾ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅವರ ಕೊನೆಯ ಚಿತ್ರ 'ಲೆವೆಲ್ ಕ್ರಾಸ್'. ಈ ಚಿತ್ರವು ಮತ್ತೊಮ್ಮೆ ಅವರಿಗೆ ದೊಡ್ಡ ಮಾರುಕಟ್ಟೆಯನ್ನು ತಂದುಕೊಟ್ಟಿತು.

actress-amala-paul-got-bmw-5-series-gift-by-husband

ಅಂದಹಾಗೆ ಅಮಲಾ ಪೌಲ್ ಅವರಿಗೆ ಪತಿ ಜಗತ್ ದೇಸಾಯಿ ಈಗ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಬಿಎಂಡಬ್ಲ್ಯು 5 ಸೀರಿಸ್ (BMW 5-Series) ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಬಿಎಂಡಬ್ಲ್ಯು ಸರಣಿಯ ಅತ್ಯುತ್ತಮ ಕಾರುಗಳಲ್ಲಿ ಒಂದಾಗಿದೆ.

ಬಿಎಂಡಬ್ಲ್ಯು 5 ಸೀರಿಸ್ ವಿಶೇಷತೆಗಳು: ಕಂಪನಿಯು ಈ ಕಾರನ್ನು ಭಾರತದಲ್ಲಿ 530LI ಮತ್ತು 530 LIM ಸ್ಪೋರ್ಟ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ. ಎರಡೂ ಮಾದರಿಗಳ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ. 72.90 ಲಕ್ಷಗಳಾಗಿದೆ. ಈ ಐಷಾರಾಮಿ ಕಾರಿನ ಆನ್‌ರೋಡ್ ಬೆಲೆಯು ಸುಮಾರು 93 ಲಕ್ಷ ರೂ. ಆಗುತ್ತದೆ.

actress-amala-paul-got-bmw-5-series-gift-by-husband

ಈ ಬಿಎಂಡಬ್ಲ್ಯು 5 ಸೀರಿಸ್ ಸೆಡಾನ್ ಕಾರಿನಲ್ಲಿ ಪನೋರಮಿಕ್ ಸನ್ ರೂಫ್, 360 ಡಿಗ್ರಿ ಕ್ಯಾಮೆರಾ ಮತ್ತು ಆಟೋಮ್ಯಾಟಿಕ್ ಪಾರ್ಕಿಂಗ್, ಇಂಟೀರಿಯರ್ ಕ್ಯಾಮೆರಾ, ವೈರ್ ಲೆಸ್ ಚಾರ್ಜರ್ ಮತ್ತು ಫೋನ್ ಮಿರರಿಂಗ್, ಕನೆಕ್ಟೆಡ್ ಕಾರ್ ಟೆಕ್ನಾಲಜಿ ಸೇರಿದಂತೆ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂಗಳನ್ನು ಹೊಂದಿದ್ದು, ತನ್ನ ಪ್ರೀಮಿಯಂ ವಿಭಾಗದಲ್ಲಿ ಬೆಸ್ಟ್ ಕಾರಾಗಿದೆ.

ಇವಿಷ್ಟೇ ಅಲ್ಲದೇ ಡೈಮಂಡ್ ಪ್ಯಾಟರ್ನ್ ಕ್ವಿಲ್ಟಿಂಗ್ನೊಂದಿಗೆ ಲೆದರ್ ಅಪ್ಹೋಲ್ಸ್ಟರಿ, ಮುಂಭಾಗದ ಸೀಟ್ ವೆಂಟಿಲೇಷನ್, ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್ಲ್ಯಾಂಪ್‌ಗಳು, 12.3-ಇಂಚಿನ ಎಲ್ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಚಾಲಕ-ಆಧಾರಿತ 14.9-ಇಂಚಿನ ಸೆಂಟ್ರಲ್ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಫೋರ್ ಝೋನ್ ಕ್ಲೈಮೆಟ್ ಕಂಟ್ರೋಲ್, 18-ಸ್ಪೀಕರ್‌ಗಳನ್ನು ಹೊಂದಿದೆ.

ಬಿಎಂಡಬ್ಲ್ಯು 5 ಸೀರಿಸ್ ಎಲ್‌ಡಬ್ಲ್ಯೂಬಿ ಸೆಡಾನ್ ಕಾರಿನಲ್ಲಿ 2.0-ಲೀಟರ್, 4-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು 48 ವಿ ಮೈಲ್ಡ್-ಹೈಬ್ರಿಡ್ ಅಸಿಸ್ಟ್ ಸಿಸ್ಟಮ್ ನೊಂದಿಗೆ ಅಳವಡಿಸಲಾಗಿದೆ. ಈ ಎಂಜಿನ್ 258 ಬಿಹೆಚ್ ಪವರ್ ಮತ್ತು 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಐಷಾರಾಮಿ ಸೆಡಾನ್ ಒಂದು ಲೀಟರ್‌ಗೆ 15.7 ಕಿ.ಮೀ ಮೈಲೇಜ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, March 17, 2025, 16:35 [IST]
English summary
Actress amala paul got bmw 5 series gift by husband
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+