ಚೆಲುವಿನ ಚಿತ್ತಾರ ಜೋಡಿ: ಮಾದೇಶ ಆಯ್ತು.. ಗಂಡನೊಂದಿಗೆ ದುಬಾರಿ ಬೆಲೆಯ ಕಾರು ಖರೀದಿಸಿದ ಐಶು!
ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೀಶ್ ಆವರು ದುಬಾರಿ ಕಾರು ಖರೀದಿಸಿದ ಸುದ್ದಿಯಾಗಿದ್ದರು. ಇದೀಗ ಗೋಲ್ಡನ್ ಕ್ವೀನ್ ಎಂದು ಖ್ಯಾತಿ ಗಳಿಸಿರುವ ನಟಿ ಅಮೂಲ್ಯ (Amulya) ಕೂಡ ಹೊಸ ಕಾರು ಖರೀದಿಸಿದ್ದಾರೆ. ಚೆಲುವಿನ ಚಿತ್ತಾರ ಬೆಡಗಿ ಅಮೂಲ್ಯ ಮದುವೆ ಬಳಿಕ ಬಣ್ಣದ ಲೋಕದಿಂದ ಕೆಲ ವರ್ಷಗಳಿಂದ ದೂರ ಸರಿದು ನಟಿ ಮಕ್ಕಳ ಲಾಲನೆ - ಪಾಲನೆಯಲ್ಲಿ ತೊಡಗಿದ್ದಾರೆ. 7 ವರ್ಷಗಳ ಹಿಂದೆ ಮುಗುಳು ನಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆದರೆ ನಟಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಸ್ಟೈಲಿಶ್ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುಯತ್ತಾ ಇರುತ್ತಾರೆ.
ಸ್ಯಾಂಡಲ್ವುಡ್ ನಟಿ ಅಮೂಲ್ಯ ಮತ್ತು ಜಗದೀಶ್ ಚಂದ್ರ ದಂಪತಿ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಅವಳಿ ಮಕ್ಕಳ 2ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದರು. ಮಕ್ಕಳ ಬರ್ತ್ ಡೇ ಸೆಲೆಬ್ರೇಶನ್ ಫೋಟೋವನ್ನು ಸಹ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ತಮ್ಮ ಹೊಸ ದುಬಾರಿ ಕಾರನ್ನು ಶೋರೂಂನಲ್ಲಿ ವಿತರಣೆ ಪಡೆದುಕೊಳ್ಳುವ ವೀಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗಿದೆ.

ನಟಿ ಅಮೂಲ್ಯ ಮತ್ತು ಜಗದೀಶ್ ಚಂದ್ರ ದಂಪತಿಗಳು ಕುಟುಂಬ ಸಮೇತರಾಗಿ ತೆರಳಿ ತಮ್ಮ ಹೊಸ ಕಾರಿನ ವಿತರಣೆ ಪಡೆದುಕೊಂಡಿದ್ಡಾರೆ. ಇನ್ನು ನಟಿ ಖರೀದಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಮತ್ತು ಈ ಕಾರಿನ ವಿಶೇಷತೆಗಳ ಬಗ್ಗೆ ಕೆಲವರು ಇಂಟರ್‌ನೆಟ್‌ನಲ್ಲಿ ಹುಡುಕಾಡುತ್ತಿದ್ದಾರೆ. ನಟಿ ಖರೀದಿಸಿದ ಕಾರು ಮರ್ಸಿಡಿಸ್ ಬೆಂಝ್ ಜಿಎಲ್‍ಎಸ್ (Mercedes-Benz GLS) ಆಗಿದೆ.
ಈ ಮರ್ಸಿಡಿಸ್ ಬೆಂಝ್ ಜಿಎಲ್‍ಎಸ್ ಕಾರಿಗೆ ಬೆಂಗಳೂರಿನಲ್ಲಿ ಆನ್ ರೋಡ್ ಬೆಲೆಯು ರೂ.1.63 - 1.69 ಕೋಟಿಯಾಗಿದೆ. ಈ ಲಕ್ಷುರಿ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಮುಂಭಾಗ ಗ್ರೀಲ್ ಅತ್ಯಾಧುನಿಕವಾಗಿದ್ದು, ಹಾರಿಜಾಂಟಲ್ ಕ್ರೋಮ್ ಸ್ಟ್ರಿಪ್, ನವೀನವಾದ ಡೇಟೈಮ್ ರನ್ನಿಂಗ್ ಲ್ಯಾಂಪ್ (DRL) ಹೊಂದಿದೆ. ಹಿಂಭಾಗದ ವಿನ್ಯಾಸ ಕೂಡ ಹೆಚ್ಚು ಆಕರ್ಷಣೀಯವಾಗಿದ್ದು, 21 - ಇಂಚಿನ ಅಲಾಯ್ ವೀಲ್ ಅನ್ನು ಪಡೆದುಕೊಂಡಿದೆ.

ಮರ್ಸಿಡಿಸ್ ಬೆಂಝ್ ಜಿಎಲ್‍ಎಸ್ ಹೈಟೆಕ್ ಸಿಲ್ವರ್, ಸೊಡಲೈಟ್ ಬ್ಲೂ, ಸೆಲೆನೈಟ್ ಗ್ರೇ ಸೇರಿದಂತೆ 5 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ಇನ್ನು ಈ ಲಕ್ಷುರಿ ಎಸ್‍ಯುವಿಯ ಒಳಭಾಗದಲ್ಲಿ ಹಲವು ಅತ್ಯಾಧುನಿಕ ಫೀಚರ್ಸ್ ಗಳನ್ನು ಪಡೆದುಕೊಂಡಿವೆ ಸೀಟುಗಳು ಹೆಚ್ಚು ಆರಾಮದಾಯಕವಾಗಿದ್ದು, ಹೊಸದಾದ ಸ್ಟೀರಿಂಗ್ ವೀಲ್ ಹಾಗೂ MBUX ಸಿಸ್ಟಮ್ (ಮಲ್ಟಿಮೀಡಿಯಾ ಡಿಜಿಟಲ್ ಕಾಕ್‌ಪಿಟ್) ಅನ್ನು ಹೊಂದಿದೆ.
ಮರ್ಸಿಡಿಸ್ ಬೆಂಜ್ ಜಿಎಲ್‍ಎಸ್ ಎಸ್‌ಯುವಿಯು ನವೀನವಾದ 360 - ಡಿಗ್ರಿ ಕ್ಯಾಮೆರಾ, ಅಡ್ಜಸ್ಟ್ಏಬಲ್ ಏರ್ ಸಸ್ಪೆನ್ಷನ್, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಒಳಗೊಂಡಿದೆ. ಜೊತೆಯಲ್ಲಿ ವೈರ್‌ಲೆಸ್ ಚಾರ್ಜಿಂಗ್, ಎರಡು 11.6 - ಇಂಚಿನ ಎಂಟರ್ಟೈನ್ಮೆಂಟ್ ಸ್ಕ್ರೀನ್, ಸನ್‌ಬ್ಲೈಂಡ್ಸ್ ಸೇರಿದಂತೆ ಹಲವು ಐಷಾರಾಮಿ ಫೀಚರ್ಸ್ ಪಡೆದಿದೆ.
ಮರ್ಸಿಡಿಸ್ ಬೆಂಜ್ ಜಿಎಲ್‍ಎಸ್ ಎಸ್‌ಯುವಿಯಲ್ಲಿ 2 ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಇದರಲ್ಲಿ ಮೊದಲಿಗೆ 3.0 - ಲೀಟರ್ ಇನ್-ಲೈನ್ 6 ಸಿಲಿಂಡರ್ ಡೀಸೆಲ್ ಎಂಜಿನ್ 362 bhp ಗರಿಷ್ಠ ಪವರ್ ಹಾಗೂ 750 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 3.0 - ಲೀಟರ್ ಇನ್-ಲೈನ್ 6 ಸಿಲಿಂಡರ್ ಪೆಟ್ರೋಲ್ ಎಂಜಿನ್, 375 bhp ಪವರ್, 500 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಇವೆರೆಡು ಎಂಜಿನ್ 48ವಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಪಡೆದಿದ್ದು, AWD (ಆಲ್ ವೀಲ್ ಡ್ರೈವ್) ಟೆಕ್ನಲಾಜಿಯನ್ನು ಒಳಗೊಂಡಿವೆ. ಈ ಎಂಜಿನ್ 8 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲೂ ಸಿಗುತ್ತವೆ. ಈ ಮರ್ಸಿಡಿಸ್ ಬೆಂಜ್ ಜಿಎಲ್‍ಎಸ್ ಮಾದರಿಯು ದೇಶೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯೂ ಎಕ್ಸ್7 (BMW X7), ಆಡಿ ಕ್ಯೂ8 (Audi Q8), ರೇಂಜ್ ರೋವರ್ ಸ್ಪೋರ್ಟ್ (Range Rover Sport) ಎಸ್‍ಯುವಿಗಳುಗೆ ಪೈಪೋಟಿ ನೀಡುತ್ತದೆ.


Click it and Unblock the Notifications








