ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಕೆನ್ನೆಗೆ ಬಾರಿಸಿ ಫೇಮಸ್ ಆಗಿದ್ದ ನಟಿ ಅಶುರೆಡ್ಡಿಗೆ ದುಬಾರಿ ಗಿಫ್ಟ್

ಜೂನಿಯರ್ ಸಮಂತಾ ಎಂದೇ ಜನಪ್ರಿಯವಾಗಿರುವ ತೆಲುಗು ನಟಿ ಅಶು ರೆಡ್ಡಿ ಇದೀಗ ಭಾರೀ ಫೇಮಸ್ ಆಗಿದ್ದಾರೆ. ಅದರಲ್ಲೂ ಇತ್ತೀಚೆಗೆ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ಅವರೊಂದಿಗೆ ಸಂದರ್ಶನ ನಡೆಸಿದಾಗ ಆರ್‌ಜಿವಿ ಕೆನ್ನೆಗೆ ಬಾರಿಸಿ ಸಖತ್ ವೈರಲ್ ಆಗಿದ್ದರು. ಇದೀಗ ಈ ನಟಿ ತಮ್ಮ ಬರ್ತ್ ಡೇಗೆ ದುಬಾರಿ ಗಿಫ್ಟ್ ಪಡೆದುಕೊಳ್ಳುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಕೆನ್ನೆಗೆ ಬಾರಿಸಿ ಫೇಮಸ್ ಆಗಿದ್ದ ನಟಿ ಅಶುರೆಡ್ಡಿಗೆ ದುಬಾರಿ ಗಿಫ್ಟ್

ಸಾಮಾನ್ಯ ಟಿವಿ ಶೋಗಳು ಮಾಡಿಕೊಂಡಿದ್ದ ಅಶುರೆಡ್ಡಿ ನಟಿ ಸಮಂತಾರನ್ನೇ ಹೋಲುವುದರಿಂದ ಜೂನಿಯರ್ ಸಮಂತಾ ಎಂದು ಕರೆಸಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಫಾಲೋವರ್ಸ್ ಇದ್ದಾರೆ. ಈ ಚಲುವೆ ಕಳೆದ ಬಿಗ್ ಬಾಸ್ ಶೋನಲ್ಲೂ ಭಾಗವಹಿಸಿ ಟಿವಿ ವೀಕ್ಷಕರಿಗೂ ಹತ್ತಿರವಾಗಿದ್ದಾರೆ.

ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಕೆನ್ನೆಗೆ ಬಾರಿಸಿ ಫೇಮಸ್ ಆಗಿದ್ದ ನಟಿ ಅಶುರೆಡ್ಡಿಗೆ ದುಬಾರಿ ಗಿಫ್ಟ್

ಇನ್ನು ಮುಖ್ಯವಾಗಿ ರಾಮ್‌ ಗೋಪಾಲ್ ವರ್ಮಾ ಅವರಿಂದ ಫೇಮಸ್ ಆಗಿದ್ದರು. ವರ್ಮಾ ಅವರು ಆಗಾಗ್ಗೆ ಆಂಕರ್‌ಗಳನ್ನೇ ಸಂದರ್ಷನ ಮಾಡುತ್ತಾರೆ. ಹಾಗೆಯೇ ಅಶು ಅವರನ್ನು ಸಂದರ್ಷನ ಮಾಡಿದಾಗ ವರ್ಮಾ ಅವರ ಕುಚೇಷ್ಟೆಗೆ ಬೇಸತ್ತು ಕೆನ್ನೆಗೆ ಬಾರಿಸಿದ್ದರು. ಇದು ಸ್ಕ್ರಿಪ್ಟ್ ಆಗಿದ್ದರೂ ಅಶು ಅವರಿಗೆ ಸಖತ್ ಹೆಸರು ತಂದುಕೊಟ್ಟಿತ್ತು.

ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಕೆನ್ನೆಗೆ ಬಾರಿಸಿ ಫೇಮಸ್ ಆಗಿದ್ದ ನಟಿ ಅಶುರೆಡ್ಡಿಗೆ ದುಬಾರಿ ಗಿಫ್ಟ್

ಇನ್ನೂ ಸಿನಿಮಾಗಳ ವಿಷಯಕ್ಕೆ ಬಂದರೆ ಹಲವು ಚಿತ್ರಗಳಲ್ಲಿ ಸಪೋರ್ಟಿಂಗ್ ರೋಲ್ ಮಾಡಿದ್ದಾರೆ. ಹಾಗಾಗಿ ತೆಲುಗಿನಲ್ಲಿ ಅಶುರೆಡ್ಡಿ ಎಂದರೆ ತಿಳಿಯದವರಿಲ್ಲ, ಹಾಗೆಯೇ ಸದಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವುದರಿಂದ ಏನೆ ಖರೀದಿಸಿದರೂ ತಮ್ಮ ಇನ್‌ಸ್ಟಾದಲ್ಲಿ ಪೋಸ್ಟ್‌ ಮಾಡುತ್ತಾರೆ. ಹಾಗೇಯೇ ಇತ್ತೀಚೆಗೆ ಒಲಿದುಬಂದ ಗಿಫ್ಟ್ ಅನ್ನು ಕೂಡ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಈ ಚೆಲುವೆ ಸೆ. 15 ರಂದು ತಮ್ಮ ಬರ್ತ್‌ಡೇ ಆಚರಿಸಿಕೊಂಡಿದ್ದು ದುಬಾರಿ ಗಿಫ್ಟ್ ಒಲಿದುಬಂದಿದೆ. ಹುಟ್ಟುಹಬ್ಬದ ಸಂದರ್ಭವಾಗಿ ಅವರ ತಂದೆ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲವು ಫೋಟೋಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರಲ್ಲಿ 'ಆಶು ರೆಡ್ಡಿ' ತನ್ನ ತಂದೆಯೊಂದಿಗೆ ಕಾರು ಡೆಲಿವರಿ ಪಡೆಯುತ್ತಿರುವುದನ್ನು ಕಾಣಬಹುದು.

ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಕೆನ್ನೆಗೆ ಬಾರಿಸಿ ಫೇಮಸ್ ಆಗಿದ್ದ ನಟಿ ಅಶುರೆಡ್ಡಿಗೆ ದುಬಾರಿ ಗಿಫ್ಟ್

'ಅಶು ರೆಡ್ಡಿ' ಒಡೆತನದ ಈ ದುಬಾರಿ ಕಾರು ಜರ್ಮನ್ ಬ್ರಾಂಡ್ 'ಮರ್ಸಿಡಿಸ್ ಬೆಂಜ್' ಕಂಪನಿಯ ಜಿಎಲ್‌ಸಿ ಕೂಪೆ 'ಸಿ300ಡಿ' ಎಂದು ತಿಳಿದುಬಂದಿದೆ. ಇದರ ಬೆಲೆ ಸುಮಾರು ರೂ. 70 ಲಕ್ಷವೆಂದು ಅಂದಾಜಿಸಲಾಗಿದೆ. ಇಷ್ಟು ದುಬಾರಿ ಐಷಾರಾಮಿ ಕಾರನ್ನು ಪಡೆಯುತ್ತಿರುವುದು ಇದೇ ಮೊದಲು ಎಂದು ಅಶುರೆಡ್ಡಿ ಹೇಳಿಕೊಂಡಿದ್ದಾರೆ.

ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಕೆನ್ನೆಗೆ ಬಾರಿಸಿ ಫೇಮಸ್ ಆಗಿದ್ದ ನಟಿ ಅಶುರೆಡ್ಡಿಗೆ ದುಬಾರಿ ಗಿಫ್ಟ್

ತಮ್ಮ ತಂದೆಯೊಂದಿಗೆ ಮರ್ಸಿಡಿಸ್ ಬೆಂಝ್ ಕಾರಿನ ಮುಂದೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ 'ಸಾರಿ ಮಾಮ್.. ಶಾಕ್ ಆಗಬೇಡಿ.. ಇದು ನನ್ನ ತಂದೆಯ ಉಡುಗೊರೆ' ಎಂದು ಫೋಟೋಗಳಿಗೆ ಕ್ಯಾಪ್ಷನ್ ಹಾಕಿದ್ದಾರೆ. ಇದಕ್ಕೆ ಹಲವರು ಅಭಿಮಾನಿಗಳು ಹಾಗೂ ಸೆಲಬ್ರಿಟಿಗಳು ಕಮೆಂಟ್‌ಗಳನ್ನು ಮಾಡಿದ್ದಾರೆ.

ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಕೆನ್ನೆಗೆ ಬಾರಿಸಿ ಫೇಮಸ್ ಆಗಿದ್ದ ನಟಿ ಅಶುರೆಡ್ಡಿಗೆ ದುಬಾರಿ ಗಿಫ್ಟ್

ಇದಕ್ಕೆ ತೆಲುಗಿನ ಆಂಕರ್ ಶಿಲ್ಪಾಚಕ್ರವರ್ತಿ ಅಭಿನಂದನೆಗಳು ಬೇಬಿ ಎಂದು ಕಾಮೆಂಟ್ ಮಾಡಿದ್ದಾರೆ. ಅದೇ ಸಮಯದಲ್ಲಿ ಮತ್ತೊಬ್ಬ ತೆಲುಗಿನ ಆಂಕರ್ ಆಗಿರುವ ಅರಿಯಾನಾ ಗ್ಲೋರಿ ಕೂಡ 'ಅದೇ ಕೈಗಳಿಂದ ಒಂದು ರೌಂಡ್‌ ಕೊಟ್ಟರೆ ಕಾರನ್ನು ಓಡಿಸುತ್ತೇನೆ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಕೆನ್ನೆಗೆ ಬಾರಿಸಿ ಫೇಮಸ್ ಆಗಿದ್ದ ನಟಿ ಅಶುರೆಡ್ಡಿಗೆ ದುಬಾರಿ ಗಿಫ್ಟ್

Mercedes Benz C300D ವಿಷಯಕ್ಕೆ ಬರುವುದಾದರೆ, ಇದು ದೇಶೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಜರ್ಮನ್ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ಆದ್ದರಿಂದ ಇದು ಆಧುನಿಕ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಈ ಆಧುನಿಕ ಐಷಾರಾಮಿ ಕಾರು ಎಲ್ಇಡಿ ಹೆಡ್‌ಲೈಟ್, ಎಲ್ಇಡಿ ಟೈಲ್ ಲೈಟ್‌ಗಳು, ಎಲ್ಇಡಿ ಡಿಆರ್ಎಲ್ ಮತ್ತು ಎಲ್ಇಡಿ ಫಾಗ್ ಲೈಟ್ ಅನ್ನು ಒಳಗೊಂಡಿದೆ.

ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಕೆನ್ನೆಗೆ ಬಾರಿಸಿ ಫೇಮಸ್ ಆಗಿದ್ದ ನಟಿ ಅಶುರೆಡ್ಡಿಗೆ ದುಬಾರಿ ಗಿಫ್ಟ್

ವೈಶಿಷ್ಟ್ಯಗಳಿಗೆ ಬರುವುದಾದರೆ, ಇದು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 11.9 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿದೆ. ಇದು Android Auto ಮತ್ತು Apple CarPlay ನಂತಹವುಗಳನ್ನು ಸಹ ಬೆಂಬಲಿಸುತ್ತದೆ. ಇದಲ್ಲದೇ ಆಸನದ ಸೌಕರ್ಯವೂ ತುಂಬಾ ಉತ್ತಮವಾಗಿದ್ದು, ವಾಹನ ಬಳಕೆದಾರರಿಗೆ ಉತ್ತಮ ಚಾಲನಾ ಅನುಭವ ನೀಡುತ್ತದೆ.

ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಕೆನ್ನೆಗೆ ಬಾರಿಸಿ ಫೇಮಸ್ ಆಗಿದ್ದ ನಟಿ ಅಶುರೆಡ್ಡಿಗೆ ದುಬಾರಿ ಗಿಫ್ಟ್

ಎಂಜಿನ್ ವಿಷಯಕ್ಕೆ ಬಂದರೆ ಇದು 1993 cc 4 ಸಿಲಿಂಡರ್ ಇನ್‌ಲೈನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 4,200 rpm ನಲ್ಲಿ 261 bhp ಪವರ್ ಮತ್ತು 1,800 rpm ನಲ್ಲಿ 550 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 20.3 km/l ಮೈಲೇಜ್ ನೀಡುತ್ತದೆ.

ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಕೆನ್ನೆಗೆ ಬಾರಿಸಿ ಫೇಮಸ್ ಆಗಿದ್ದ ನಟಿ ಅಶುರೆಡ್ಡಿಗೆ ದುಬಾರಿ ಗಿಫ್ಟ್

ಈ ಕಾರು ಮರ್ಸಿಡಿಸ್‌ನ ಬಹುಬೇಡಿಕೆಯ ಮಾದರಿಯಾಗಿದೆ. ಉದ್ಯಮಿಗಳು, ಸೆಲೆಬ್ರಿಟಿಗಳು ಹೆಚ್ಚಾಗಿ ಹೊಂದಿದ್ದು, ಕಾರಿನ ಐಷಾರಾಮಿ ತನ ಕುರಿತು ಎರಡು ಮಾತಿಲ್ಲ. ಕಾರಿನೊಳಗಿನ ಕಂಫರ್ಟ್ ಹಾಗೂ ಚಾಲನಾ ಅನುಭವ ಉತ್ತಮ ಪ್ರಯಾಣ ಸೌಕರ್ಯವನ್ನು ನೀಡುವುದರಿಂದ ಹಲವರಿಗೆ ಫೇವರೆಟ್ ಕಾರಾಗಿ ಮಾರುಕಟ್ಟೆಯಲ್ಲಿ ಹೆಸರು ಮಾಡಿದೆ.

ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಕೆನ್ನೆಗೆ ಬಾರಿಸಿ ಫೇಮಸ್ ಆಗಿದ್ದ ನಟಿ ಅಶುರೆಡ್ಡಿಗೆ ದುಬಾರಿ ಗಿಫ್ಟ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ದೇಶಿಯ ಮಾರುಕಟ್ಟೆಯಲ್ಲಿರುವ ಅತ್ಯಂತ ದುಬಾರಿ ಐಷಾರಾಮಿ ಕಾರುಗಳಲ್ಲಿ 'ಮರ್ಸಿಡಿಸ್ ಬೆಂಝ್ ಸಿ300ಡಿ' ಕೂಡ ಒಂದು. ಆದರೆ ಸಾಮಾನ್ಯವಾಗಿ ಇಲ್ಲಿಯವರೆಗೆ ಟಾಪ್ ಸೆಲೆಬ್ರಿಟಿಗಳು ಇಂತಹ ದುಬಾರಿ ಕಾರುಗಳನ್ನು ಖರೀದಿಸಿದ್ದಾರೆ. ಆದರೆ ಈಗ ಬಿಗ್‌ಬಾಸ್ ಹಾಗೂ ಸಣ್ಣ ಟಿವಿ ಶೋಗಳ ಮೂಲಕ ಬೆಳೆದು ಇಂದು ದುಬಾರಿ ಕಾರಿನ್ನು ಗಿಫ್ಟ್ ಪಡೆದಿರುವುದು ಅಶುರೆಡ್ಡಿಗೆ ಎಂದಿಗೂ ಮರೆಯದ ಖುಷಿಯ ಸಂಗತಿಯಾಗಿದೆ.

Most Read Articles

Kannada
English summary
Actress and anchor Ashu Reddy received an expensive gift from her father
Story first published: Friday, September 16, 2022, 18:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X