ಶಿವಣ್ಣನ 'ಜನುಮದ ಜೋಡಿ' ಸಿನಿಮಾ ನಟಿ ಹೊಸ ಐಷಾರಾಮಿ ಕಾರು ಖರೀದಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
ಕೇರಳ ಮೂಲದ ನಟಿ ಶಿಲ್ಪಾ ಚಿಪ್ಪಿ (Chippy) ಅವರು ಡಾ.ಶಿವರಾಜ್‌ಕುಮಾರ್ ನಟನೆಯ 'ಜನುಮದ ಜೋಡಿ' ಸಿನಿಮಾದಲ್ಲಿ ನಟಿಸಿದ್ದರು. 500 ದಿನ ಓಡಿದ ಈ ಚಿತ್ರಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಇವರು ಮಲಯಾಳಂ, ಕನ್ನಡ ಸಿನಿಮಾಗಳಲ್ಲಿ ಶಿಲ್ಪಾ ಅತಿ ಹೆಚ್ಚು ನಟಸಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಸೂಪರ್ ಸ್ಟಾರ್ ಗಳ ಜೊತೆ ನಟನೆ ಮಾಡಿದ್ದಾರೆ. ಪ್ರಸಿದ್ಧ ನಿರ್ಮಾಪಕ ರಂಜಿತ್ ಅವರೊಂದಿಗಿನ ವಿವಾಹದ ನಂತರ, ನಟಿ ಚಲನಚಿತ್ರಗಳನ್ನು ತೊರೆದು ಧಾರಾವಾಹಿಗಳಲ್ಲಿ ನಟಿಸಲು ಪ್ರಾರಂಭಿಸಿದರು. ಅಲ್ಲದೇ ರಂಜಿತ್ ಮತ್ತು ಚಿಪ್ಪಿ ಕಳೆದ ಕೆಲವು ವರ್ಷಗಳಿಂದ ಧಾರಾವಾಹಿಗಳನ್ನು ನಿರ್ಮಿಸುತ್ತಿದ್ದಾರೆ.
ಸಣ್ಣ ವಿರಾಮದ ನಂತರ ಸ್ಟಾರ್ ಜೋಡಿಗಳ ರಜಪೂತ್ ರಂಜಿತ್ ಚಿಪ್ಪಿ ಮತ್ತೆ ಸಿನಿಮಾ ಮೇಕಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಇದೇ ವೇಳೆ ಇಬ್ಬರ ಜೀವನದಲ್ಲಿ ಮತ್ತೊಂದು ಸಂತಸ ಮೂಡಿದೆ. ಇತ್ತೀಚೆಗೆ ತಮ್ಮ 23ನೇ ವಿವಾಹ ವಾರ್ಷಿಕೋತ್ಸವವನ್ನು ಪೂರ್ಣಗೊಳಿಸಿದ ತಾರೆಗಳು ತಮ್ಮ ಪ್ರಯಾಣಕ್ಕಾಗಿ ಹೊಚ್ಚ ಹೊಸ ಐಷಾರಾಮಿ ಎಸ್‌ಯುವಿಯನ್ನು ಖರೀದಿಸಿದ್ದಾರೆ. ಈ ಸ್ಟಾರ್ ದಂಪತಿಗಳು ಲ್ಯಾಂಡ್ ರೋವರ್‌ನ ಪ್ರಮುಖ ಎಸ್‌ಯುವಿ ಡಿಫೆಂಡರ್ ಅನ್ನು ಖರೀದಿಸಿದ್ದಾರೆ.

ಲ್ಯಾಂಡ್ ರೋವರ್ ಡಿಫೆಂಡರ್ (Land Rover Defender) ಭಾರತದಲ್ಲಿ ವಾಹನಗಳಲ್ಲಿ ಪ್ರಸಿದ್ಧಯನ್ನು ಪಡೆದುಕೊಂಡ ವಾಹನವಾಗಿದೆ. ಐಷಾರಾಮಿ ಸ್ಫೋರ್ಟ್ಸ್ ಯುಟಿಲಿಟಿ ವಾಹನದ 110 HSE ರೂಪಾಂತರವನ್ನು ನಿರ್ಮಾಪಕ ರಂಜಿತ್ ಮತ್ತು ಅವರ ಪತ್ನಿ ಮತ್ತು ನಟಿ ಚಿಪ್ಪಿ ಒಟ್ಟಿಗೆ ತಂದಿದ್ದಾರೆ. ಹೊಸ ಕಾರು ಡೆಲಿವರಿ ತೆಗೆದುಕೊಳ್ಳುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ರಂಜಿತ್ ಮತ್ತು ಚಿಪ್ಪಿ ಅವರು ಡಿಫೆಂಡರ್ 110 HSE ಅನ್ನು ಕೇರಳದ ಲ್ಯಾಂಡ್ ರೋವರ್ ಡೀಲರ್‌ಶಿಪ್ ಆದ ಲ್ಯಾಂಡ್ ರೋವರ್ ಮುತ್ತೂಟ್ ಮೋಟೋಸ್‌ನಿಂದ ತೆಗೆದುಕೊಂಡಿದ್ದಾರೆ. ಈ ಟ್ಯಾಸ್ಮನ್ ಬ್ಲೂ ಬಣ್ಣದ ಆಯ್ಕೆಯಲ್ಲಿ ಡಿಫೆಂಡರ್‌ನ ಚಿತ್ರಗಳನ್ನು ಡೀಲರ್‌ಶಿಪ್ ಸೋಷಿಯಲ್ ಮೀಡಿಯಾ Instagram ಮೂಲಕ ಬಿಡುಗಡೆ ಮಾಡಿದೆ. ಲ್ಯಾಂಡ್ ರೋವರ್ ಕುಟುಂಬಕ್ಕೆ ರಂಜಿತ್ ಮತ್ತು ಚಿಪ್ಪಿ ಸ್ವಾಗತ ಎಂಬ ಶೀರ್ಷಕೆಯ ಮೂಲಕ ಪೋಸ್ಟ್ ಮಾಡಿದ್ದಾರೆ.

ಈ ಐಷಾರಾಮಿ ಎಸ್‌ಯುವಿ ಕೇರಳದಲ್ಲಿ ಸುಮಾರು 1 ಕೋಟಿ ರೂ. ಆಗಿದ್ದು, 3.0-ಲೀಟರ್ ಪೆಟ್ರೋಲ್ HSE ರೂಪಾಂತರವು ಕೊಚ್ಚಿಯಲ್ಲಿ ಸುಮಾರು 1.24 ಕೋಟಿ ರೂ. ಇದೆ. ಈ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯ ಮುಂಭಾಗದಲ್ಲಿ ಡಿಆರ್‌ಎಲ್ ಹೊಂದಿರುವ ಎಲ್‌ಇಡಿ ಹೆಡ್‌ಲೈಟ್ ಯುನಿಟ್ ಅಳವಡಿಸಲಾಗಿದೆ. ಟಾಪ್ ಎಂಡ್ ಮಾದರಿಯಲ್ಲಿ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್ ಲೈಟ್ ಯುನಿಟ್ ನೀಡಲಾಗುತ್ತದೆ.
ಈ ಬಾನೆಟ್‌ನ ಮಧ್ಯಭಾಗದಲ್ಲಿ ಕಪ್ಪು ಬಣ್ಣದ ದಪ್ಪವಾಗಿರುವ ಡಿಫೆಂಡರ್ ಬ್ಯಾಡ್ಜ್ ಅಳವಡಿಸಲಾಗಿದೆ. ಈ ಎಸ್‌ಯುವಿಯಲ್ಲಿ 20 ಇಂಚಿನ ಅಲಾಯ್ ವ್ಹೀಲ್ ನೀಡಲಾಗಿದೆ. ಲೋ ಎಂಡ್ ಮಾದರಿಯಲ್ಲಿ 19 ಇಂಚಿನ ವ್ಹೀಲ್'ಗಳನ್ನು ನೀಡಲಾಗುತ್ತದೆ. ಡಿಫೆಂಡರ್ ಎಸ್‌ಯುವಿಯ ಹೊರಭಾಗದಲ್ಲಿ ಒಟ್ಟು ಆರು ಕ್ಯಾಮೆರಾ ಹಾಗೂ ಸುತ್ತಲೂ ಸೆನ್ಸಾರ್'ಗಳಿವೆ. ಈ ಕ್ಯಾಮರಾ 360 ಡಿಗ್ರಿ ನೋಟವನ್ನು ಹೊಂದಿದ್ದು, ಆಫ್ ರೋಡಿಂಗ್'ನಲ್ಲಿ ನೆರವಿಗೆ ಬರುತ್ತದೆ.
ಈ ಡಿಫೆಂಡರ್ ಎಸ್‍ಯುವಿಯಲ್ಲಿ 3.0 ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ 4000 ಆರ್‌ಪಿಎಂನಲ್ಲಿ 298 ಬಿಹೆಚ್‌ಪಿ ಪವರ್ ಹಾಗೂ 1500 - 2500 ಆರ್‌ಪಿಎಂ ನಡುವೆ 650 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ ಎಂಟು ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್'ಮಿಷನ್ ಯುನಿಟ್ ಜೋಡಿಸಲಾಗಿದೆ. ಡಿಫೆಂಡರ್ 90 ಎಸ್‌ಯುವಿಯ ಡೀಸೆಲ್ ಆವೃತ್ತಿಯು6.7 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಇನ್ನು ಡಿಫೆಂಡರ್ 110 ಎಸ್‌ಯುವಿಯ ಡೀಸೆಲ್ ಆವೃತ್ತಿಯು 7 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಡೀಸೆಲ್ ಎಂಜಿನ್ ಹೊಂದಿರುವ 90 ಹಾಗೂ 110 ಎರಡೂ ಮಾದರಿಗಳ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 191 ಕಿ.ಮೀಗಳಿಗೆ ಎಲೆಕ್ಟ್ರಾನಿಕ್ ಆಗಿ ಸೀಮಿತಗೊಳಿಸಲಾಗಿದೆ. ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯು ಕಂಪನಿಯ ಇತ್ತೀಚಿನ ಟೆರೈನ್ ರೆಸ್ಪಾನ್ಸ್ 2 ಫೀಚರ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








