ಉದ್ಯಮಿ ವಿಕಾಸ್ ಒಬೆರಾಯ್, ನಟಿ ಗಾಯತ್ರಿ ದಂಪತಿಯಿದ್ದ ಕಾರು ಅಪಘಾತ, ನೀವು ಬೆಚ್ಚಿಬೀಳ್ತಿರಾ.. ವಿಡಿಯೋ ನೋಡಿ

'ಸ್ವದೇಶ್' ಸಿನಿಮಾದಲ್ಲಿ ನಟ ಶಾರುಖ್ ಖಾನ್ ಜೊತೆ ನಟಿಸಿದ್ದ ನಟಿ ಗಾಯತ್ರಿ ಜೋಶಿ ಅವರ ಲಂಬೋರ್ಗಿನಿ ಕಾರು ಇಟಲಿಯಲ್ಲಿ ಅಪಘಾತಕ್ಕೀಡಾಗಿದೆ. ಘಟನೆ ನಡೆದ ವೇಳೆಯಲ್ಲಿ ಆಕೆಯ ಪತಿ, ಉದ್ಯಮಿ ವಿಕಾಸ್ ಒಬೆರಾಯ್ ಕೂಡ ಜೊತೆಯಲಿದ್ದರು. ಈ ಅಪಘಾತದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಗಾಯತ್ರಿ ಜೋಶಿ ಹಾಗೂ ವಿಕಾಸ್ ಒಬೆರಾಯ್ ಅವರಿಗೆ ಸಣ್ಣ- ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಸ್ವತಃ ಗಾಯತ್ರಿ ಅವರೇ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಇಟಲಿಯಲ್ಲಿ ನಡೆದ ಐಷಾರಾಮಿ ಕಾರ್ ಪರೇಡ್ - ಸಾರ್ಡಿನಿಯಾ ಸೂಪರ್ ಕಾರ್ ಟೂರ್ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಉದ್ಯಮಿ ವಿಕಾಸ್ ಒಬೆರಾಯ್, ನಟಿ ಗಾಯತ್ರಿ ದಂಪತಿಯಿದ್ದ ಕಾರು ಅಪಘಾತ, ನೀವು ಬೆಚ್ಚಿಬೀಳ್ತಿರಾ.. ವಿಡಿಯೋ ನೋಡಿ

ಸದ್ಯ, ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಗಮನಿಸಿದಾಗ, ಅದು ಬಹುತೇಕ ಇಟಲಿಯ ಹಳ್ಳಿಗಾಡಿನ ರಸ್ತೆಯಂತೆ ತೋರುತ್ತದೆ. ಮೊದಲೇ ಕಿರಿದಾಗಿದ್ದು, ಸಾರ್ಡಿನಿಯಾ ಸೂಪರ್ ಕಾರ್ ಟೂರ್ ಭಾಗವಾಗಿ ಒಂದೊಂದೆ ಸೂಪರ್‌ಕಾರ್‌ಗಳು ವೇಗವಾಗಿ ಹೋಗುತ್ತಿರುತ್ತವೆ. ಅದೇ ರಸ್ತೆಯಲ್ಲಿ ಕ್ಯಾಂಪರ್‌ವಾನ್ ನಿಧಾನವಾಗಿ ಚಲಿಸುತ್ತಿರುತ್ತದೆ. ಜೊತೆಗೆ ಎದುಗಡೆಯಿಂದ ಬೈಕ್ ಗಳು ಕೂಡ ಬರುತ್ತಿರುತ್ತವೆ.

ಹೀಗೆ, ರಸ್ತೆಯಲ್ಲಿ ಕ್ಯಾಂಪರ್‌ವಾನ್ ಅನ್ನು ಕೆಲವೊಂದು ಸೂಪರ್‌ಕಾರ್ ಹಿಂದಿಕ್ಕುತ್ತವೆ. ಅದೇ ರೀತಿಯಲ್ಲಿ ಗಾಯತ್ರಿ ಹಾಗೂ ವಿಕಾಸ್ ಇದ್ದ ಲಂಬೋರ್ಗಿನಿ ಕಾರು, ಇನೇನು, ಕ್ಯಾಂಪರ್‌ವಾನ್ ಹಿಂದಿಕ್ಕಬೇಕು ಎನ್ನುವ ಪ್ರಯತ್ನದಲ್ಲಿದ್ದಾಗ ಫೆರಾರಿ ಕಾರು ಬಂದು ವೇಗವಾಗಿ ಅಪ್ಪಳಿಸುತ್ತದೆ. ಆ ಬಳಿಕ, ಕ್ಯಾಂಪರ್‌ವಾನ್‌ಗೆ ಲಂಬೋರ್ಗಿನಿ ಡಿಕ್ಕಿಯಾಗುತ್ತದೆ. ಪರಿಣಾಮ ಕ್ಯಾಂಪರ್‌ವಾನ್‌ ಪಲ್ಟಿಯಾಗುತ್ತದೆ. ಅಷ್ಟರಲ್ಲಿ ಫೆರಾರಿ ಕಾರಿಗೆ ಬೆಂಕಿ ಹೊತ್ತಿಕೊಳ್ಳುತ್ತದೆ.

ಉದ್ಯಮಿ ವಿಕಾಸ್ ಒಬೆರಾಯ್, ನಟಿ ಗಾಯತ್ರಿ ದಂಪತಿಯಿದ್ದ ಕಾರು ಅಪಘಾತ, ನೀವು ಬೆಚ್ಚಿಬೀಳ್ತಿರಾ.. ವಿಡಿಯೋ ನೋಡಿ

ಘಟನೆಯಲ್ಲಿ ಫೆರಾರಿಯಲ್ಲಿ ಪ್ರಯಾಣಿಸುತ್ತಿದ್ದ ಸ್ವಿಟ್ಜರ್ಲೆಂಡ್‌ ಮೂಲದ ದಂಪತಿಗಳಾದ ಮೆಲಿಸ್ಸಾ ಕ್ರೌಟ್ಲಿ (63) ಮತ್ತು ಮಾರ್ಕಸ್ ಕ್ರೌಟ್ಲಿ (67) ಮೃತಪಟ್ಟಿದ್ದಾರೆ. ವರದಿ ಪ್ರಕಾರ, ಎಲ್ಲಾ ಮೂರು ವಾಹನಗಳನ್ನು ಅಲ್ಲಿನ ಸ್ಥಳೀಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಘಟನೆಯ ದೃಶ್ಯಗಳನ್ನು ಹಿಂದಿನ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿ ಚಿತ್ರೀಕರಿಸಿದ್ದಾರೆ. ಇನ್ನು, ಕ್ಯಾಂಪರ್‌ವಾನ್‌ನಲ್ಲಿದ್ದ ದಂಪತಿಗಳಿಗೂ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಲಾಗಿದೆ.

ನಟಿ ಗಾಯತ್ರಿ ಬಳಕೆ ಮಾಡುತ್ತಿದ್ದರೂ ಎನ್ನಲಾದ ಲಂಬೋರ್ಗಿನಿ ಹುರಾಕನ್ ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಮುಖ್ಯವಾಗಿ, 6 ಏರ್‌ಬ್ಯಾಗ್‌, ಸೀಟ್ ಬೆಲ್ಟ್ ವಾರ್ನಿಂಗ್, ಚೈಲ್ಡ್ ಲಾಕ್, ಓವರ್‌ಸ್ಪೀಡ್ ವಾರ್ನಿಂಗ್, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್, ಆಂಟಿ ಥೆಫ್ಟ್ ಎಂಜಿನ್ ಇಮೊಬಿಲೈಸರ್, ಫ್ಲಶಿಂಗ್ ಎಮರ್ಜೆನ್ಸಿ ಬ್ರೇಕ್ ಲೈಟ್, ಸೆಂಟ್ರಲ್ ಲಾಕಿಂಗ್, ಪಂಕ್ಚರ್ ರಿಪೇರಿ ಕಿಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ ಘಟನೆಯನ್ನು ಗಮನಿಸುವುದಾದರೆ ಸಾರ್ಡಿನಿಯಾ ಸೂಪರ್ ಕಾರ್ ಟೂರ್ ಆಯೋಜಕರು, ವಾಹನ ಸಂಚಾರವಿಲ್ಲದ ರಸ್ತೆಯಲ್ಲಿ ಇದನ್ನು ಏರ್ಪಡಿಸಬಹುದಿತ್ತು. ಆದರೆ, ಅದನ್ನು ಮಾಡಿಲ್ಲ. ಆ ರಸ್ತೆಯೂ ಮೊದಲೇ ಕಿರಿದಾಗಿತ್ತು. ವೇಗವಾಗಿ ಕಾರುಗಳು ಹೋದ ಹಿನ್ನೆಲೆ ಅಪಘಾತವಾಗಿದೆ. ಇನ್ನು, ನೀವು ಗಮನಿಸಬೇಕಾದ ವಿಚಾವೆಂದರೆ ಫೋರ್ಬ್ಸ್ ಪ್ರಕಾರ, ವಿಕಾಸ್ ಒಬೆರಾಯ್ ಅವರ ನಿವ್ವಳ ಆಸ್ತಿಯ ಮೌಲ್ಯವು ರೂ.31,627 ಕೋಟಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, October 4, 2023, 18:04 [IST]
English summary
Actress gayatri joshi husband vikas oberoi car accident video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+