ಶ್ರೀಮಂತ ತಂದೆಯ ಮಗಳು: ಬಾಲಿವುಡ್ ಸ್ಟಾರ್ ನಟರನ್ನು ಮೀರಿಸಿ ಐಷಾರಾಮಿ ಕಾರು ಖರೀದಿ!

ನಟಿ ಜಾನ್ವಿ ಕಪೂರ್ ಬಾಲಿವುಡ್ ಮಾತ್ರವಲ್ಲ ಈಗ ದಕ್ಷಿಣಕ್ಕೂ ಎಂಟ್ರಿ ಕೊಟ್ಟು ಸದ್ದು ಮಾಡುತ್ತಿದ್ದಾರೆ. ಇತ್ತೀಚಿನ ಚಿತ್ರಗಳಾದ 'ಮಿಸ್ಟರ್ ಅಂಡ್ ಮಿಸೆಸ್ ಮಹಿ' ಮತ್ತು 'ಉಲಾಜ್' ಮೂಲಕ ಯಶಸ್ಸನ್ನು ಕಂಡ ಅವರು ತೆಲುಗಿನಲ್ಲಿ 'ದೇವರ' ಚಿತ್ರದ ಮೂಲಕ ದಕ್ಷಿಣಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಸಾಲು ಸಿನಿಮಾಗಳೊಂದಿಗೆ ಫುಲ್ ಬ್ಯುಸಿಯಾಗಿರುವ ನಟಿ ಇತ್ತೀಚೆಗೆ ದುಬಾರಿ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ. ಅವರು ಹೊಸ ಲೆಕ್ಸಸ್ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಆಗಸ್ಟ್ 18 ರಂದು, ಪಾಪರಾಜಿಯೊಬ್ಬರು ಹಂಚಿಕೊಂಡ ವೀಡಿಯೊದಲ್ಲಿ ಹೊಸ ಲೆಕ್ಸಸ್ ಕಾಣಿಸಿಕೊಂಡಿದೆ.

ಜಾನ್ವಿ ಕಪೂರ್ ಅವರ ಹೊಸ ಕಾರು ಮುಂಬೈನ ಬೀದಿಗಳಲ್ಲಿ ಅಡ್ಡಾಡುತ್ತಾ ಹಲವು ಬಾರಿ ಕಾಣಿಸಿಕೊಂಡಿದೆ. ಹೊಸ ಲೆಕ್ಸಸ್ ಕಾರು ಆಕರ್ಷಕ ಸೋನಿಕ್ ಅಗೇಟ್ ಬಣ್ಣದಲ್ಲಿ ಖರೀದಿಸಲಾಗಿದೆ. ಅಲ್ಲದೆ, ಲೆಕ್ಸಸ್ ಎಲ್‌ಎಂ 350ಎಚ್ (Lexus LM 350h) ಹೈ ಎಂಡ್ ಸೌಲಭ್ಯಗಳನ್ನು ಹೊಂದಿರುವ ಮಾದರಿಯಾಗಿದೆ. ಕಾರಿನ ಕುರಿತು ಹೆಚ್ಚಿನ ವಿಶೇಷತೆಗಳನ್ನು ಇಲ್ಲಿ ನೋಡೋಣ.

actress-janvi-kapoor-bought-new-lexus-lm350h

ಲೆಕ್ಸಸ್ ಎಲ್‌ಎಂ 350ಎಚ್ ಸಂಪೂರ್ಣ ನಿರ್ಮಿತ (CBU) ವಾಹನವಾಗಿ ಭಾರತಕ್ಕೆ ಬರುತ್ತದೆ. ಇದು ಎರಡು ಸೀಟಿಂಗ್ ಆಯ್ಕೆಗಳಲ್ಲಿ ಲಭ್ಯವಿದ್ದು, 7-ಸೀಟರ್ VIP ರೂಪಾಂತರ ಬೆಲೆಯು ರೂ. 2 ಕೋಟಿಯಾಗಿದ್ದರೆ (ಎಕ್ಸ್ ಶೋರೂಂ), 4-ಸೀಟರ್ ಅಲ್ಟ್ರಾ ಲಕ್ಸುರಿ ರೂಪಾಂತರದ ಬೆಲೆಯು ರೂ. 2.50 ಕೋಟಿ (ಎಕ್ಸ್ ಶೋರೂಂ) ಯಾಗಿದೆ. ಈ ಎರಡರಲ್ಲಿ ಜಾನ್ವಿ ಕಪೂರ್ ಯಾವ ಮಾದರಿ ಖರೀದಿಸಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.

ಎರಡೂ ವೇರಿಯೆಂಟ್‌ಗಳು ಒಂದೇ 2.5-ಲೀಟರ್, ನಾಲ್ಕು-ಸಿಲಿಂಡರ್ ಪೆಟ್ರೋಲ್ ಪವರ್‌ಟ್ರೇನ್‌ನಿಂದ ಚಾಲಿತವಾಗಿದ್ದು, ಸ್ಟ್ರಾಂಗ್ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಜೋಡಿಸಲಾಗಿದೆ. 190 bhp ಪವರ್ ಮತ್ತು 240 Nm ಟಾರ್ಕ್ ಉತ್ಪಾದಿಸುತ್ತದೆ. ಲೀಟರ್‌ಗೆ 19.28 ಕಿ.ಮೀ ಮೈಲೇಜ್ ನೀಡುತ್ತದೆ. ಫುಲ್ ಟ್ಯಾಂಕ್‌ನಲ್ಲಿ ಈ ಕಾರು 1200 km ಗಿಂತಲೂ ಹೆಚ್ಚು ಚಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

actress-janvi-kapoor-bought-new-lexus-lm350h

ಕಾರಿನಲ್ಲಿ ರೆಫ್ರಿಜರೇಟರ್, ಸ್ಟೋರೇಜ್ ವಿಭಾಗಗಳು, ಹಿಟೆಡ್ ಆರ್ಮ್ ರೆಸ್ಟ್‌ಗಳು ಮತ್ತು ಬಾಡಿಯ ಉಷ್ಣತೆಯನ್ನು ಪತ್ತೆಹಚ್ಚುವ ಮತ್ತು HVAC ಅನ್ನು ನಿಯಂತ್ರಿಸುವ ಸುಧಾರಿತ ತಾಪಮಾನ ಮತ್ತು ಕೂಲಿಂಗ್ ಸಿಸ್ಟಂ ಸಹ ಒಳಾಂಗಣದ ಒಂದು ಭಾಗವಾಗಿದೆ. ಈ ಹೊಸ ಲೆಕ್ಸಸ್ LM ಮಿನಿವ್ಯಾನ್ ಆರಾಮದಾಯಕ ಪ್ರಯಾಣಕ್ಕೆ ಸೂಕ್ತವಾಗಿದೆ.

ಇನ್ನು ಸೂಕ್ಷ್ಮ ಪಿಸ್ಟನ್ ಸುಧಾರಿತ AVS ಸಸ್ಪೆಕ್ಷನ್ ಅನ್ನು ಹೊಂದಿದ್ದು, ಸುಗಮ ಸವಾರಿಯನ್ನು ನೀಡುವುದಲ್ಲದೆ ಕಾರಿನೊಳಗಿನ ಕಂಪನಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಪ್ರೀ-ಕೊಲಿಷನ್ ವಾರ್ನಿಂಗ್, ಪ್ರಿ-ಕೊಲಿಶನ್ ಬ್ರೇಕ್ ಅಸಿಸ್ಟ್ ಮತ್ತು ಪ್ರಿ-ಕೊಲಿಶನ್ ಬ್ರೇಕಿಂಗ್, ಡೈನಾಮಿಕ್ ರಾಡಾರ್ ಕ್ರೂಸ್ ಕಂಟ್ರೋಲ್, ಲೇನ್ ಡಿಪಾರ್ಚರ್ ಅಲರ್ಟ್ ಮತ್ತು ಅಸಹಜ ಡ್ರೈವರ್ ರೆಸ್ಪಾನ್ಸ್ ಸಿಸ್ಟಮ್‌ನಂತಹ ಸುರಕ್ಷಿತ ಫೀಚರ್ಸ್ ಕೂಡ ಇವೆ.

ಜಾನ್ವಿ ಕಪೂರ್ ಮುಂಬರಲಿರುವ ದೇವರಾ ಪಾರ್ಟ್ 1 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಈ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್ ಅವರೊಂದಿಗೆ ನಟಿಸಲಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ಭೈರಾ ಎಂಬ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಶುಕ್ರವಾರ ಚಿತ್ರದ ಫಸ್ಟ್ ಲುಕ್ ಅನ್ನು ಬಹಿರಂಗಪಡಿಸಲಾಯಿತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, August 20, 2024, 13:36 [IST]
English summary
Actress janvi kapoor bought new lexus lm350h
Read more on celebrity car india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+