ಮಮ್ತಾ ಪ್ರೀತಿ ಪಾತ್ರವಾಗಿರುವ ಆಡಿ ಎ6 ಐಷಾರಾಮಿ ಗಾಡಿ
ದಕ್ಷಿಣ ಭಾರತದ ಹೆಸರಾಂತ ನಟಿ ಮಮ್ತಾ ಮೋಹನ್‌ದಾಸ್ ಕನ್ನಡ ಚಿತ್ರರಂಗದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಿಲ್ಲ. ಮಲ್ಲು ಬೆಡಗಿಯಾಗಿರುವ ಮಮ್ತಾ ಏಕಮಾತ್ರ ಕನ್ನಡ ಚಿತ್ರದಲ್ಲಿ ಇದುವರೆಗೆ ನಟಿಸಿದ್ದಾರೆ.
2008ನೇ ಇಸವಿಯಲ್ಲಿ ಬಿಡುಗಡೆಯಾದ ಸುದೀಪ್ ಅಭಿನಯದ 'ಗೂಳಿ' ಚಿತ್ರದಲ್ಲಿ ಮಮ್ತಾ ಪ್ರಮುಖ ಪಾತ್ರ ವಹಿಸಿದ್ದರು. 29ರ ಹರೆಯದ ಮಮ್ತಾ ಇದೀಗ ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಆಡಿ ಎ6 ಕಾರಿಗೆ ಮಾರು ಹೋಗಿದ್ದಾರೆ.

ಆಡಿಯ ಐಷಾರಾಮಿ ಸೆಡಾನ್ ಕಾರುಗಳ ಪೈಕಿ ಒಂದಾಗಿರುವ ಆಡಿ ಎ6 ಬೆಂಗಳೂರು ಆನ್ ರೋಡ್ ದರ 53 ಲಕ್ಷ ರು.ಗಳಿಂದ ಆರಂಭವಾಗಿ 75 ಲಕ್ಷ ರು.ಗಳ ವರೆಗಿದೆ. ಅಂದ ಹಾಗೆ ಮಮ್ತಾ ಬಳಿ ಆಡಿ ಎ 2.0 ಟಿಡಿಐ ಕಾರಿದೆ.

ಒಟ್ಟು 12 ವೆರಿಯಂಟ್‌ಗಳಲ್ಲಿ ಆಡಿ ಎ6 ಲಭ್ಯವಿರುತ್ತದೆ.
ಡೀಸೆಲ್ ಮಾದರಿಗಳು
2.0 ಟಿಡಿಐ
2.0 ಟಿಡಿಐ ಸ್ಪೆಷಲ್ ಎಡಿಷನ್
2.0 ಟಿಡಿಐ ಪ್ರೀಮಿಯಂ ಪ್ಲಸ್
2.0 ಟಿಡಿಐ ಟೆಕ್ನಾಲಜಿ
3.0 ಟಿಡಿಐ ಕ್ವಾಟ್ರೊ
3.0 ಟಿಡಿಐ ಸ್ಪೆಷಲ್ ಎಡಿಷನ್
3.0 ಟಿಡಿಐ ಕ್ವಾಟ್ರೊ ಪ್ರೀಮಿಯಂ ಪ್ಲಸ್
3.0 ಟಿಡಿಐ ಕ್ವಾಟ್ರೊ ಟೆಕ್ನಾಲಜಿ

ಪೆಟ್ರೋಲ್ ಮಾದರಿಗಳು
2.8 ಎಫ್‌ಎಸ್‌ಐ
2.0 ಟಿಎಫ್‌ಎಸ್‌ಐ ಪ್ರೀಮಿಯಂ,
2.0 ಟಿಎಫ್‌ಎಸ್‌ಐ ಟೆಕ್ನಾಲಜಿ
2.0 ಟಿಎಫ್‌ಎಸ್‌ಐ ಪ್ರೀಮಿಯಂ ಪ್ಲಸ್

ನಾಲ್ಕನೇ ತಲೆಮಾರಿನ ಆಡಿ ಎ6 ಕಾರು ಫ್ರಂಟ್ ವೀಲ್ ಹಾಗೂ ಫೋರ್ ವೀಲ್ ಡ್ರೈವ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಇದರಲ್ಲಿ ಆಳವಡಿಸಿರುವ ಟರ್ಬೊ ಡೀಸೆಲ್ ಎಂಜಿನ್ ಹೆಚ್ಚು ಜನಪ್ರಿಯವಾಗಿದೆ. ಇದು ತನ್ನ ನಿರ್ವಹಣೆಗೆ ಅನುಸಾರವಾಗಿ ದೇಹ ಶೈಲಿಯನ್ನು ಪಡೆದುಕೊಂಡಿದೆ.

ಇದರಲ್ಲಿ ಚಾಲಕ, ಪ್ಯಾಸೆಂಜರ್ ಏರ್ ಬ್ಯಾಗ್, ಸೈಡ್ ರಿಯರ್ ಏರ್ ಬ್ಯಾಗ್, 4 ವೀಲ್ ಎಬಿಎಸ್, ಲೈಟ್ ಸೆನ್ಸಿಂಗ್ ಹೆಡ್ ಲೈಟ್, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಬ್ರೇಕ್ ಅಸಿಸ್ಟ್, ಆಟೋ ಕ್ಲೈಮೇಟ್ ಕಂಟ್ರೋಲ್ ಎಸಿ, ಡ್ಯುಯಲ್ ಜೋನ್ ಫ್ರಂಟ್ ಎಸಿ, ಫ್ರಂಟ್ ರಿಯರ್ 3 ಪಾಯಿಂಟ್ ಸೀಟ್ ಬೆಲ್ಟ್, ಕೀಲೆಸ್ ಎಂಟ್ರಿ, ಪವರ್ ಲಾಕ್, ಹೀಟಡ್ ಮಿರರ್, ಪವರ್ ಡ್ರೈವರ್ ಮಿರರ್ ಮತ್ತು ಸೇಫ್ಟಿ ಅನ್‌ಲಾಕ್‌ಗಳಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಆಡಿಯ ಎ6 3.0 ಟಿಡಿಐ ಕ್ವಾಟ್ರೊ ಕಾರು ಕೇವಲ 6.1 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಅದೇ ರೀತಿ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಪ್ರಸ್ತುತ ಚಿತ್ರರಂಗದಲ್ಲಿ ಮಂಕಾಗಿರುವ ಮಮ್ತಾ ಮೋಹನ್ ದಾಸ್, ಆಡಿ ಎ6 ಚಾಲನೆಯಲ್ಲಿ ಮಗ್ನರಾಗಿದ್ದು, ಭರ್ಜರಿ ರಿ ಎಂಟ್ರಿ ಕೊಡುವ ನಿರೀಕ್ಷೆಯಲ್ಲಿದ್ದಾರೆ.


Click it and Unblock the Notifications