ಪರಿಸರ ಪ್ರೇಮ ಮೆರೆದ ನಟಿ: ದುಬಾರಿಯಾದ್ರೂ 530 ಕಿ.ಮೀ ರೇಂಜ್ ನೀಡುವ SUV ಖರೀದಿ
ಸಿನಿಮಾ ಹಾಗೂ ಟಿವಿ ಶೋಗಳಲ್ಲಿ ಜನಪ್ರಿಯತೆ ಪಡೆದಿರುವ ನಟಿ ಮತ್ತು ನಿರೂಪಕಿ ಮಂದಿರಾ ಬೇಡಿ ಅವರು, ಸುರಕ್ಷತೆಗೆ ಪ್ರಪಂಚದಾದ್ಯಂತ ಹೆಸರು ಮಾಡಿರುವ ವೋಲ್ವೋ ಕಾರನ್ನು ಖರೀದಿಸಿದ್ದಾರೆ. ಅದರಲ್ಲೂ ಪರಿಸರ ಪ್ರೇಮ ಮೆರೆಯಲು C40 ರೀಚಾರ್ಜ್ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದಾರೆ. ನಟಿ ತನ್ನ ಮಕ್ಕಳೊಂದಿಗೆ ಇತ್ತೀಚೆಗೆ ಹೊಸ ಎಲೆಕ್ಟ್ರಿಕ್ ಕೂಪ್ ಎಸ್‌ಯುವಿಯನ್ನು ಡೆಲಿವರಿ ಪಡೆದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ವೋಲ್ವೋ C40 ರೀಚಾರ್ಜ್ ಬೆಲೆ ಬರೋಬ್ಬರಿ ರೂ. 62.95 ಲಕ್ಷ (ಎಕ್ಸ್ ಶೋ ರೂಂ).
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಮಂದಿರಾ ಬೇಡಿ ತನ್ನ ಮಕ್ಕಳೊಂದಿಗೆ ವೋಲ್ವೋ ಜೊತೆಗೆ ಪೋಸ್ ನೀಡಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. "ರಸ್ತೆಯಲ್ಲಿ ಸುರಕ್ಷಿತ ಕಾರು" ಎಂದು ಇದನ್ನು ಬಣ್ಣಿಸಿದ್ದಾರೆ. C40 ರೀಚಾರ್ಜ್ ಪೂರ್ಣ ADAS ಸೂಟ್, ಬಹು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ಈ ಕಾರಿನ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.

ಹೊಸ ವೋಲ್ವೋ C40 ರೀಚಾರ್ಜ್ ಎಲೆಕ್ಟ್ರಿಕ್ ಕಾರು 78kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಈ ಕಾರು ಡ್ಯುಯಲ್-ಎಲೆಕ್ಟ್ರಿಕ್ ಮೋಟಾರ್ ಸೆಟಪ್ ನೊಂದಿಗೆ 405 bhp ಪವರ್ ಮತ್ತು 660 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ವೋಲ್ವೋ ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 530 ಕಿಮೀ ವರೆಗಿನ ರೇಂಜ್ ಅನ್ನು ನೀಡುತ್ತದೆ.
ಇನ್ನು ಈ ಎಲೆಕ್ಟ್ರಿಕ್ ಕಾರು 150kW DC ಫಾಸ್ಟ್ ಚಾರ್ಜರ್ ಸಹಾಯದಿಂದ ಬ್ಯಾಟರಿ ಪ್ಯಾಕ್ ಅನ್ನು ಕೇವಲ 27 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು. ಈ ಹೊಸ C40 ರೀಚಾರ್ಜ್ ಎಲೆಕ್ಟ್ರಿಕ್ ಕಾರು 4.7 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಎಲೆಕ್ಟ್ರಿಕ್ ಕಾರಿನ ಟಾಪ್ ಸ್ಪೀಡ್ 180 ಕಿ.ಮೀ ಆಗಿದೆ.

ಈ ಹೊಸ ವೋಲ್ವೋ ಎಲೆಕ್ಟ್ರಿಕ್ ಕಾರಿನ ಫೀಚರ್ಸ್ ಬಗ್ಗೆ ಹೇಳುವುದಾದರೆ, ಈ ಕಾರಿನಲ್ಲಿ 12.3-ಇಂಚಿನ ಡ್ರೈವರ್ ಡಿಸ್‌ಪ್ಲೇ ಮತ್ತು 9-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಜೊತೆಗೆ ಆಂಡ್ರಾಯ್ಡ್ ಆಧಾರಿತ ಗೂಗಲ್ ಸಾಫ್ಟ್‌ವೇರ್ ಸೆಟಪ್ ಅನ್ನು ಒಳಗೊಂಡಿದೆ. ಇದರೊಂದಿಗೆ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಹಾರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್‌ಗೆ ಕನೆಕ್ಟಿ ಆಗಿದ್ದು, ಆಪಲ್ ಕಾರ್‌ಪ್ಲೇ ಅನ್ನು ಸಹ ಸಪೂರ್ಟ್ ಮಾಡುತ್ತದೆ.
ವೋಲ್ವೋ C40 ರೀಚಾರ್ಜ್ ಅನ್ನು ಎರಡು ಆಂತರಿಕ ಥೀಮ್‌ಗಳೊಂದಿಗೆ ನೀಡಲಾಗುತ್ತದೆ. ಈ ಎಲೆಕ್ಟ್ರಿಕ್ ಕಾರು ಸಿರ್ಸ್ಟಲ್ ವೈಟ್, ಓನಿಕ್ಸ್ ಬ್ಲಾಕ್, ಫ್ಯೂಷನ್ ರೆಡ್, ಕ್ಲೌಡ್ ಬ್ಲೂ, ಫ್ಜೋರ್ಡ್ ಬ್ಲೂ ಮತ್ತು ಸೇಜ್ ಗ್ರೀನ್ ಎಂಬ ಆರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಲಾಗಿದೆ.
ವೋಲ್ವೋ C40 ರೀಚಾರ್ಜ್ ಮುಂಭಾಗದ ಸೀಟುಗಳಿಗೆ ವಿಪ್ಲ್ಯಾಶ್ ರಕ್ಷಣೆ, ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್‌ನಂತಹ ADAS ಫೀಚರ್ಸ್ ಗಳನ್ನು ಒಳಗೊಂಡಂತೆ ಸುರಕ್ಷತಾ ತಂತ್ರಜ್ಞಾನದಿಂದ ತುಂಬಿದೆ.
ವೋಲ್ವೋ C40 ರೀಚಾರ್ಜ್ ಎಲೆಕ್ಟ್ರಿಕ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ EV6 ಎಲೆಕ್ಟ್ರಿಕ್ ಎಸ್‍ಯುವಿಗೆ ನೇರವಾಗಿ ಪೈಪೋಟಿ ನೀಡುತ್ತದೆ. ಈ ಹೊಸ ವೋಲ್ವೋ C40 ರೀಚಾರ್ಜ್ ಎಲೆಕ್ಟ್ರಿಕ್ ಕಾರು CMA ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಪ್ಲಾಟ್‌ಫಾರ್ಮ್ ಅನ್ನು ಸ್ವೀಡಿಷ್ ಕಾರು ತಯಾರಕರು ಮತ್ತು ಚೀನೀ ಮೂಲ ಸಂಸ್ಥೆ ಗೀಲಿ ಎಲೆಕ್ಟ್ರಿಕ್ ಅಭಿವೃದ್ಧಿಪಡಿಸಿದೆ.


Click it and Unblock the Notifications








