28 ಲಕ್ಷದ ಬೈಕನ್ನು ಲೀಲಾಜಾಲವಾಗಿ ಓಡಿಸಿದ ಲೇಡಿ ಸೂಪರ್‌ಸ್ಟಾರ್‌: ಇಂತಹ ಗರ್ಲ್‌ಫ್ರೆಂಡ್‌ ಬೇಕೆಂದ ನೆಟ್ಟಿಗರು!

ಜೀವನದಲ್ಲಿ ಏರುಪೇರಾದಾಗ ಅದರಿಂದ ತಪ್ಪಿಸಿಕೊಳ್ಳಲು ಇಂದಿನ ಜನತೆ ಕಂಡುಕೊಂಡಿರುವ ಮದ್ದುಗಳಲ್ಲಿ ಬೈಕ್‌ ರೈಡಿಂಗ್‌ ಸಹ ಒಂದು. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಟಿಗಳ ವರೆಗೂ ಇದೇ ಮಾರ್ಗವನ್ನು ಅನುಸರಿಸುತ್ತಾರೆ. ಈ ಮೂಲಕ ಬೈಕ್‌ ರೈಡಿಂಗ್‌ ಒಂದು ರೀತಿಯಲ್ಲಿ ಟ್ರೆಂಡ್‌ ಆಗಿದೆ ಎಂದರೆ ತಪ್ಪಾಗಲಾರದು.

ಕಳೆದ ವರ್ಷವಷ್ಟೇ ಮಲಯಾಳಂ ಸಿನಿಮಾ ರಂಗದ ಪ್ರಸಿದ್ದ ನಟಿ ಮಂಜಿ ವಾರಿಯರ್‌ ಹೊಸ ದುಬಾರಿ ಬೈಕ್‌ ಒಂದನ್ನು ಖರೀದಿಸಿದ್ದರು. ಈ ಬೈಕ್‌ ಜೊತೆಗೆ ತಮಿಳು ಚಿತ್ರ ರಂಗದ ಪ್ರಸಿದ್ದ ನಟ ಅಜಿತ್‌ ಜೊತೆ ರೈಡ್ ಸಹ ಹೋಗಿದ್ದರು. ಇದೀಗ ಆ ಬೈಕ್‌ ಜೊತೆ ಮತ್ತೊಂದು ವಿಡಿಯೋವನ್ನು ಮಂಜು ವಾರಿಯರ್ ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ.

Actress Manju warrier Spotted With Her BMW R 1250 GS On Road

ಅಂದ ಹಾಗೆ ಲೇಡಿ ಸೂಪರ್‌ ಸ್ಟಾರ್‌ ಮಂಜು ವಾರಿಯರ್‌ ಬಳಿ ಇರುವ ಬೈಕ್‌, ದುಬಾರಿ BMW R1250 GS. ಈ ಬೈಕ್‌ನ ಬೆಲೆ ಸುಮಾರು ೨೮ ಲಕ್ಷ ರೂಪಾಯಿಗಳು. ನಟಿ ತಾನು ಲೀಲಾಜಾಲವಾಗಿ ಬೈಕ್ ಓಡಿಸಿಕೊಂಡು ಹೋಗುತ್ತಿರುವ ವಿಡಿಯೋವನ್ನು ಪೋಸ್ಟ್‌ ಮಾಡಿದ್ದು, ನಿಮಗೆ ಇನ್ನೂ ನಿಮ್ಮ ಭಯ ಕೇಳಿಸಲು ಸಾಧ್ಯವಾಗುತ್ತಿದೆಯಾದರೆ, ಗಿಯರ್‌ ಅನ್ನು ಶಿಫ್ಟ್ ಮಾಡಿ ಎಂಬ ತಲೆ ಬರಹವನ್ನು ಬರೆದುಕೊಂಡಿದ್ದಾರೆ.

ಮಂಜು ವಾರಿಯರ್ ಬಳಿ ಇರುವ BMW R1250 GS ಹಲವರ ನೆಚ್ಚಿನ ಅಡ್ವೆಂಚರ್‌ ಬೈಕ್‌ ಆಗಿದೆ. ತಮಿಳು ನಟ ಅಜಿತ್‌ ಇವರ ಗೆಳೆಯರಾಗಿದ್ದು, ಇವರ ಬಳಿಯೂ ಸಹ ಇದೇ ಬೈಕ್‌ ಇದೆ. BMW R1250 GS ಕುರಿತಾಗಿ ನೋಡುವುದಾದರೆ, ಅಡ್ವೆಂಚರ್‌ ಬೈಕ್‌ ಸೆಗ್ಮೆಂಟ್‌ನಲ್ಲಿರುವ ಪವರ್‌ಫುಲ್ ಬೈಕ್‌ಗಳ ಸಾಲಿನಲ್ಲಿ ಅಗ್ರ ಪಂಕ್ತಿಯಲ್ಲಿ ನಿಲ್ಲುವ ಬೈಕ್‌ ಇದಾಗಿದೆ. ಈ ಬೈಕ್‌ನಲ್ಲಿ 1254 cc ಏರ್‌ ಕೂಲ್ಡ್‌ ಎಂಜಿನ್‌ ಅನ್ನು ಅಳವಡಿಸಲಾಗಿದೆ.

BMW R1250 GS, 1254 cc ಏರ್‌ ಕೂಲ್ಡ್‌ ಎಂಜಿನ್ ಸಹಾಯದಿಂದ ಸುಮಾರು ೧೩೬ ಪಿಎಸ್‌ ಅನ್ನು ಉತ್ಪಾದಿಸುವ ಮೂಲಕ ರೈಡರ್‌ಗಳಿಗಳನ್ನು ಸದಾ ಥ್ರಿಲ್‌ ನಲ್ಲಿ ಇರುವಂತೆ ಮಾಡುತ್ತದೆ. ಈ ಬೈಕ್‌ನ ಬೆಲೆ ಈಗಾಗಲೇ ತಿಳಿಸಿದ್ದು, ಈ ಬೆಲೆಗೆ ಈ ಬೈಕ್‌ ಕೊಡುವ ಮೈಲೇಜ್‌ ೧೫ ಕಿಮೀ/ಲೀ. ಆದರೆ ಈ ಬೈಕ್‌ ಕೊಳ್ಳುವವರು ಯಾರೂ ಸಹ ಇದರ ಮೈಲೇಜ್‌ ಅನ್ನು ಗಮನಿಸುವುದಿಲ್ಲ ಎಂಬುದು ಮತ್ತೊಂದು ಹೈಲೈಟ್.

ಇನ್ನು ನಟಿ ಮಂಜು ವಾರಿಯರ್ ಮತ್ತು ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅವರು 2500 ಕಿಮೀ ಲಡಾಖ್ ಪ್ರವಾಸದಲ್ಲಿ ಜೊತೆಗೂಡಿದ್ದರು. ಈ ಪ್ರವಾಸ ಬಳಿಕ ಮಂಜು ವಾರಿಯರ್ ಕೂಡ ಬೈಕ್ ಏಕೆ ಖರೀದಿಸಬಾರದು ಎಂದು ಅಂದುಕೊಂಡರು. ಇದರ ಬಳಿಕ ಅವರು ದ್ವಿಚಕ್ರ ಬಾಹನ ಲೈಸನ್ಸ್ ಅನ್ನು ಪಡೆದುಕೊಂಡರು. ಲೈಸನ್ಸ್ ಪಡೆದ ನಂತರ, ನಟಿ ಸ್ವಂತ ಬೈಕ್ ಅನ್ನು ಖರೀದಿಸಲು ಬಯಸಿದರು.

Actress Manju warrier Spotted With Her BMW R 1250 GS On Road

ನಟಿ ಮಂಜು ವಾರಿಯರ್ ನ್ಯಾಶನಲ್ ಫಿಲ್ಮ್ ಅವಾರ್ಡ್, ಕೇರಳ ರಾಜ್ಯ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ. ಇನ್ನು ನಟಿ ಮಂಜು ವಾರಿಯರ್ ಹೊಸ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕ್ ಬಗ್ಗೆ ಹೇಳುವುದಾದರೆ, ಈ ಅಡ್ವೆಂಚರ್ ಪ್ರೀಮಿಯಂ ಬೈಕ್ ಸ್ಟ್ಯಾಂಡರ್ಡ್ ಮತ್ತು ಅಡ್ವೆಂಚರ್ ಎಂಬ ಎರಡು ರೂಪಾಂತರಗಳಲ್ಲ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, March 19, 2024, 10:40 [IST]
English summary
Actress manju warrier spotted with her bmw r1250 gs on road
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+