ಮತ್ತೊಮ್ಮೆ ಯುವಕರ ಮನಸ್ಸು ಕದ್ದ ಸೀತಾ ಮಹಾಲಕ್ಷ್ಮಿ: ಈ ನಟಿಯ ಕಾರಿನ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
ಸಿನಿಮಾ ನಟರು ಮಾತ್ರವಲ್ಲದೇ ನಟಿಯರು ಕೂಡ ದುಬಾರಿ ಕಾರುಗಳ ಮೇಲೆ ಕ್ರೇಜ್ ಹೊಂದಿದ್ದಾರೆ. ಮರ್ಸಿಡಿಸ್ ಬೆಂಝ್ (Mercedes Benz) ಸೆಲೆಬ್ರಿಟಿಗಳ ಮೆಚ್ಚಿನ ಪ್ರೀಮಿಯಂ ಕಾರ್ ಬ್ರ್ಯಾಂಡ್ ಕಾರ್ ಆಗಿದೆ. ಶ್ರೀಮಂತರು ಮತ್ತು ಸೆಲೆಬ್ರಿಟಿಗಳು ಹೆಚ್ಚಾಗಿ ಮರ್ಸಿಡಿಸ್ ಬೆಂಝ್ ಕಾರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮರ್ಸಿಡಿಸ್‌ಗೆ ಭಾರತವು ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ S450 4ಮ್ಯಾಟಿಕ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನಲ್ಲಿ ಇತ್ತೀಚೆಗೆ ಖ್ಯಾತ ನಟಿಯೊಬ್ಬರು ಕಾಣಿಸಿಕೊಂಡ ವೀಡಿಯೋ ವೈರಲ್ ಆಗಿದೆ.
ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ S450 4ಮ್ಯಾಟಿಕ್ ಐಷಾರಾಮಿ ಸೆಡಾನ್ ಆಗಿದೆ. ಸೀತಾ ರಾಮಂ ಸಿನಿಮಾ ಮೂಲಕ ಜನಪ್ರಿಯರಾದ ಮೃಣಾಲ್ ಠಾಕೂರ್ (Mrunal Thakur) ಅವರು ಇತ್ತೀಚೆಗೆ ಈ ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ S450 4ಮ್ಯಾಟಿಕ್ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ದುಬಾರಿ ಕಾರಿನ ಬೆಲೆಯು ರೂ 1.86 ಕೋಟಿಯಾಗಿದೆ. ಇದು ಎಕ್ಸ್ ಶೋಂ ಪ್ರಕಾರವಾಗಿದ್ದು, ಆನ್-ರೋಡ್ ಬೆಲೆಯು ಹೆಚ್ಚಾಗುತ್ತದೆ.

ಮಹಾರಾಷ್ಟ್ರದವರಾದ ಮೃಣಾಲ್ ಠಾಕೂರ್ ತಮ್ಮ ವೃತ್ತಿಜೀವನವನ್ನು ಟಿವಿ ಕಾರ್ಯಕ್ರಮಗಳೊಂದಿಗೆ ಪ್ರಾರಂಭಿಸಿದ್ದರು. ನಟಿ ಮೃಣಾಲ್ ನಾನಿ ಅಭಿನಯದ 'ಹಾಯ್ ನನ್ನ' ಚಿತ್ರವೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಅವರು ಮುಖ್ಯವಾಗಿ ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದರೂ, ಮೃಣಾಲ್ ಕನ್ನಡಿಗರಿಗೂ ಚಿರಪರಿಚಿತರಾಗಿದ್ದಾರೆ. ಅವರು ಪ್ಯಾನ್ ಇಂಡಿಯನ್ ಸೂಪರ್ ಹಿಟ್ ಕಲ್ಕಿಯಲ್ಲಿ ಅತಿಥಿ ಪಾತ್ರವನ್ನು ಸಹ ಮಾಡಿದ್ದಾರೆ.
ನಟಿ ಸಾಮಾನ್ಯವಾಗಿ ಸಾರ್ವಜನಿಕವಾಗಿ ಹಾಟ್ ಆಗಿ ಕಾಣಿಸಿಕೊಳ್ಳುವ ಚಿತ್ರಗಳು ಮತ್ತು ವೀಡಿಯೊಗಳು ವೈರಲ್ ಆಗುತ್ತವೆ. ಇದೀಗ ಮೃಣಾಲ್ ಠಾಕೂರ್ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಎಸ್450 4ಮ್ಯಾಟಿಕ್ ಸವಾರಿ ಮಾಡುತ್ತಿರುವ ದೃಶ್ಯಾವಳಿ ವೈರಲ್ ಆಗುತ್ತಿದೆ. ಮುಂಬೈನ ಹೋಟೆಲ್‌ಗೆ ಆಗಮಿಸಿದ ಮೃಣಾಲ್ ಠಾಕೂರ್ ತೆಗೆದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗಲು ಮತ್ತೊಂದು ಕಾರಣವೆಂದರೆ ಮೃಣಾಲ್ ಠಾಕೂರ್ ಅವರ ಬ್ಯಾಗ್. ಇದರ ಬೆಲೆ ಸುಮಾರು 31,000 ರೂ. ಆಗಿದೆ.

ನಟಿ ಮೃಣಾಲ್ ಠಾಕೂರ್ ಅವರು ಹೊಂದಿರುವ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ S450 4ಮ್ಯಾಟಿಕ್ ಕಾರು 3.0-ಲೀಟರ್ ಪೆಟ್ರೋಲ್ ಎಂಜಿನ್ ನಿಂದ ಚಾಲಿತವಾಗುತ್ತದೆ. ಈ ಎಂಜಿನ್ 362 bhp ಪವರ್ ಮತ್ತು 500 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
ಈ ಮರ್ಸಿಡಿಸ್ ಬೆಂಝ್ ಕಾರು ಕೇವಲ 5 ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಕಾರಿನ ಟಾಪ್ ಸ್ಫೀಡ್ ಗಂಟೆಗೆ 250 ಕಿ.ಮೀ ಆಗಿದೆ. ಈ ಐಷಾರಾಮಿ ಕಾರು ನಪ್ಪಾ ಲೆದರ್‌ನೊಂದಿಗೆ ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ಮುಂಭಾಗ ಮತ್ತು ಹಿಂಭಾಗದ ವೈರ್‌ಲೆಸ್ ಸೆಲ್ ಫೋನ್ ಚಾರ್ಜರ್ ಅನ್ನು ಹೊಂದಿದೆ.

ಇದರೊಂದಿಗೆ 12.8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ಕಾರು 360 ಡಿಗ್ರಿ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್‌ನಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ S450 4ಮ್ಯಾಟಿಕ್ ಭಾರತೀಯ ಮಾರುಕಟ್ಟೆಯಲ್ಲಿ BMW 7 ಸೀರಿಸ್ 740i M ಸ್ಪೋರ್ಟ್ ಕಾರಿಗೆ ಪೈಪೋಟಿ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








