ಚೀನಾ ಕಾರಿಗೆ ಮನಸೋತ ನಟಿ... ನಾಲ್ಕನೇ ಎಸ್‌ಯುವಿ ಖರೀದಿ!
ಭಾರತದಲ್ಲಿ ಎಸ್‌ಯುವಿಗಳ ಅಬ್ಬರ ಜೋರಾಗಿದೆ, ಯಾವ ಮಟ್ಟಿಗೆ ಅಂದ್ರೆ ಸಾಮಾನ್ಯರು ಮಾತ್ರವಲ್ಲ ಸೆಲೆಬ್ರಿಟಿಗಳಿಂದ ಹಿಡಿದು ಉದ್ಯಮಿಗಳವರೆಗೆ ಎಸ್‌ಯುವಿಗಳಿಗೆ ಮನಸೋತಿದ್ದಾರೆ. ಅದರಲ್ಲೂ ಬಾಲಿವುಡ್, ಸ್ಯಾಂಡಲ್‌ವುಡ್ ಸ್ಟಾರ್ ನಟ-ನಟಿಯರು ಎಸ್‌ಯುಗಳನ್ನು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇತ್ತೀಚೆಗೆ ಖ್ಯಾತ ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಎಂಜಿ ಗ್ಲೋಸ್ಟರ್ ಅನ್ನು ಖರೀದಿಸಿದ್ದಾರೆ. ರಕುಲ್ ಪ್ರೀತ್ ಮೊದಲು ಸ್ಯಾಂಡಲ್‌ವುಡ್‌ನಿಂದ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟವರು. ಕನ್ನಡದಲ್ಲಿ ಗಿಲ್ಲಿ ಸಿನಿಮಾದಲ್ಲಿ ನಟಿಸಿ ನಂತರ ಬಾಲಿವುಡ್, ಕೋಲಿವುಡ್, ಟಾಲಿವುಡ್ ಎಂದು ಹಲವು ಭಾಷೆಗಳಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ.
ಬ್ರಿಟಿಷ್ ಮೂಲದ ಕಂಪನಿಯಾಗಿರುವ ಎಂಜಿ ಮೋಟಾರ್ಸ್ ಸದ್ಯ ಚೀನಾದ ಶಾಂಘೈ ಮೂಲದ, ಸರ್ಕಾರಿ ಸ್ವಾಮ್ಯದ ಕಾರು ತಯಾರಕ SAIC ಮೋಟಾರ್‌ನ ಒಡೆತನದಲ್ಲಿದೆ. ಭಾರತದಲ್ಲಿ JSW ಗ್ರೂಪ್ ಪಾಲಿದಾರಿಕೆಯಲ್ಲಿ ತನ್ನ ಉದ್ಯಮವನ್ನು ಮುನ್ನಡೆಸುತ್ತಿದೆ. ಇನ್ನು ಎಂಜಿ ಗ್ಲೋಸ್ಟರ್ ಎಸ್‌ಯುವಿ ಎಂಜಿ ಮೋಟಾರ್‌ನ ಭಾರತೀಯ ಪೋರ್ಟ್ ಫೋಲಿಯೊದಲ್ಲಿ ಪ್ರಮುಖ ಎಸ್‌ಯುವಿಯಾಗಿದೆ.

ಇತ್ತೀಚೆಗೆ ರಕುಲ್ ಪ್ರೀತ್ ಸಿಂಗ್ ಬಿಳಿ ಬಣ್ಣದ ಪ್ರೀಮಿಯಂ ಗ್ಲೋಸ್ಟರ್ ಎಸ್‌ಯುವಿಯನ್ನು ಬಳಸುತ್ತಿರುವುದು ಕಂಡುಬಂದಿದೆ. ಅವರು ಯಾವ ಟ್ರಿಮ್ ಅನ್ನು ಖರೀದಿಸಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಅದೇನೇ ಇದ್ದರೂ, ಭಾರತದಲ್ಲಿ ಚೀನಾ ಒಡೆತನದ ಬ್ರಿಟಿಷ್ ಕಾರು ತಯಾರಕರಿಂದ ಟಾಪ್ - ಆಫ್ - ಲೈನ್ ಎಸ್‌ಯುವಿಯ ವಿಶೇಷತೆಗಳನ್ನು ಇಲ್ಲಿ ನೋಡೋಣ.
MG ಗ್ಲೋಸ್ಟರ್ ವಿಶೇಷತೆಗಳು: ಎಂಜಿ ಗ್ಲೋಸ್ಟರ್ 6 ಮತ್ತು 7-ಸೀಟರ್ ಆಯ್ಕೆಗಳಲ್ಲಿ ಲಭ್ಯವಿದೆ. ಇದು 12.3-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಡ್ಯುಯಲ್ ಪ್ಯಾನ್ ಸನ್‌ರೂಫ್, ಆಟೋಮ್ಯಾಟಿಕ್ ಪಾರ್ಕಿಂಗ್ ಅಸಿಸ್ಟ್, ಆಂಬಿಯೆಂಟ್ ಲೈಟಿಂಗ್, ಸಾಫ್ಟ್ ಟಚ್ ಮೆಟೀರಿಯಲ್‌ಗಳೊಂದಿಗೆ ಪ್ರೀಮಿಯಂ ಡ್ಯಾಶ್ ಬೋರ್ಡ್, ಡ್ರೈವ್ ಮೋಡ್‌ಗಳನ್ನು ಒಳಗೊಂಡಿದೆ.

ಇವಿಷ್ಟೇ ಅಲ್ಲದೇ 12-ವೇ ಪವರ್ ಅಡ್ಜಸ್ಟ್ ಮಾಡಬಹುದಾದ ಸೀಟ್, 12 - ಸ್ಪೀಕರ್ ಪ್ರೀಮಿಯಂ ಆಡಿಯೊ ಸಿಸ್ಟಮ್, ಹೀಟಿಂಗ್ ಮತ್ತು ವೆಂಟಿಲೇಷನ್ ಹೊಂದಿರುವ ಸೀಟ್ ಮೆಮೊರಿ ಫಂಕ್ಷನ್, ಪಿಎಂ 2.5 ಫಿಲ್ಟರ್, ಆಟೋ-ಡಿಮ್ಮಿಂಗ್ ಐಆರ್‌ವಿಎಂ, 360 ಡಿಗ್ರಿ ಕ್ಯಾಮೆರಾ, ADAS ನೊಂದಿಗೆ 30+ ವೈಶಿಷ್ಟ್ಯಗಳು ಸೇರಿದಂತೆ ಕನೆಕ್ಟೆಡ್ ಕಾರ್ ಟೆಕ್ ಹೊಂದಿದೆ.
ಎಂಜಿನ್: ಇದು ಸಿಂಗಲ್ ಟರ್ಬೊ ಅಥವಾ ಡ್ಯುಯಲ್ ಟರ್ಬೊ ಹೊಂದಿರುವ 2.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಒಳಗೊಂಡಿದೆ. ಇವು ಕ್ರಮವಾಗಿ 163 ಬಿಹೆಚ್‌ಪಿ ಪವರ್ ಮತ್ತು 375 ಎನ್‌ಎಂ ಟಾರ್ಕ್ ಹಾಗೂ 218 ಬಿಹೆಚ್‌ಪಿ ಪವರ್ ಮತ್ತು 480 ಎನ್‌ಎಂ ಟಾರ್ಕ್ ಉತ್ಪಾದಿಸುತ್ತವೆ. ಈ ಎಂಜಿನ್‌ನಲ್ಲಿ 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಇದರ ಬೆಲೆಯು ರೂ.38.80 ಲಕ್ಷದಿಂದ ರೂ.43.87 ಲಕ್ಷ (ಎಕ್ಸ್ ಶೋರೂಂ) ಗಳಾಗಿದೆ.

ರಾಕುಲ್ ಪ್ರೀತ್ ಸಿಂಗ್ ಇತರ ಕಾರುಗಳು: ರಾಕುಲ್ ಈಗಾಗಲೇ ವಿಶ್ವದ ಕೆಲವು ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ. ಇವುಗಳಲ್ಲಿ ಮರ್ಸಿಡಿಸ್ ಬೆಂಝ್ ಜಿಎಲ್ಇ 350 ಡಿ, ಮರ್ಸಿಡಿಸ್ ಮೇಬ್ಯಾಕ್ ಎಸ್ 500, ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600, ಟೊಯೊಟಾ ಇನ್ನೋವಾ ಕ್ರಿಸ್ಟಾ ಇತ್ಯಾದಿಗಳು ಸೇರಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








