ನಟಿಯ ದುಬಾರಿ ಕಾರಿಗೆ ಟಾಟಾ ಪಿಕಪ್ ಟ್ರಕ್ ಡಿಕ್ಕಿ... ನಟಿ ಆಸ್ಪತ್ರೆಗೆ, ಟಾಟಾ ಚಾಲಕ ಠಾಣೆಗೆ!
ಫೋನ್‌ನಲ್ಲಿ ಮಾತನಾಡುತ್ತಾ ಬಂದು ಸಿಗ್ನಲ್‌ನಲ್ಲಿ ನಿಂತಿದ್ದ ನನ್ನ ಕಾರಿಗೆ ಟಾಟಾ ಪಿಕಪ್ ಟ್ರಕ್ ಚಾಲಕ ಡಿಕ್ಕಿ ಹೊಡೆದಿದ್ದಾನೆ ಎಂದು ಹಿಂದಿ ಕಿರುತೆರೆ ನಟಿ ರುಬಿನಾ ದಿಲಾಕ್ ಆರೋಪಿಸಿದ್ದಾರೆ. ಘಟನೆಯ ಕುರಿತ ಫೋಟೋಗಳನ್ನು ಅವರ ಪತಿ ನಟ ಅಭಿನವ್ ಶುಕ್ಲಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ಶನಿವಾರ ನಟಿ ರುಬಿನಾ ದಿಲಾಕ್ ತಮ್ಮ ಎಂಜಿ ಗ್ಲೋಸ್ಟರ್‌ನಲ್ಲಿ ಮುಂಬೈ ಟ್ರಾಫಿಕ್ ಸಿಗ್ನನಲ್ಲಿ ಸಿಲುಕಿದ್ದರು. ಟಾಟಾ ಮೋಟಾರ್ಸ್‌ನ ಪ್ರಮುಖ ವಾಣಿಜ್ಯ ವಾಹನವಾದ ಟಾಟಾ ಯೋಧ ಪಿಕಪ್ ಟ್ರಕ್‌ನಲ್ಲಿ ಹಿಂದೆ ನಿಂತಿದ್ದ ಚಾಲಕ ಫೋನ್‌ನಲ್ಲಿ ಮಾತನಾಡಿಕೊಂಡು ಬಂದು ಎಂಜಿ ಗ್ಲೋಸ್ಟರ್ ಹಿಂಬಾಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ನಟಿಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ.

ಅಪಘಾತದ ನಂತರ ರುಬಿನಾ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಬೆನ್ನು ಮತ್ತು ತಲೆಗೆ ಪೆಟ್ಟು ಬಿದ್ದು ಆಘಾತಕ್ಕೊಳಗಾಗಿರುವುದಾಗಿ ನಟಿ ಹೇಳಿಕೊಂಡಿದ್ದಾರೆ. ಆದರೆ, ವೈದ್ಯಕೀಯ ಪರೀಕ್ಷೆಗಳ ನಂತರ ಎಲ್ಲವೂ ಸರಿಯಾಗಿದೆ ಎಂದು ವರದಿಯಾಗಿದೆ. ಬೇಕಾಬಿಟ್ಟಿ ಚಾಲನೆ ಮಾಡಿದ ಪಕಪ್ ಟ್ರಕ್ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಸೆಲೆಬ್ರಿಟಿ ದಂಪತಿ ಹೇಳಿದ್ದಾರೆ.
ಎರಡೂ ವಾಹನಗಳಿಗೂ ಹಾನಿ: ನಟಿಯ ಪತಿ ಅಭಿನವ್ ಶುಕ್ಲಾ ಹಂಚಿಕೊಂಡಿರುವ ಅಪಘಾತದ ಚಿತ್ರಗಳಲ್ಲಿ ಎಂಜಿ ಗ್ಲೋಸ್ಟರ್‌ನ ಹಿಂಭಾಗ ಮತ್ತು ಟಾಟಾ ಯೋಧದ ಮುಂಭಾಗ ಹಾನಿಗೊಳಗಾಗಿರುವುದನ್ನು ನೋಡಬಹುದು. ಟಾಟಾ ಯೋಧದ ಬಂಪರ್ ಮತ್ತು MG ಗ್ಲೋಸ್ಟರ್‌ನ ಹಿಂಭಾಗದಲ್ಲಿ ಕೆಲವು ಗೀರುಗಳು ಬಿದ್ದಿರುವಂತೆ ಕಾಣುತ್ತಿದೆ. ಈ ಸಣ್ಣ ಅಪಘಾತಕ್ಕೆ ನಟಿಗೆ ಗಾಯಗಳಾಗಿವೆಯೇ ಎಂದು ನಿಮಗನಿಸಬಹುದು.

ಕೆಲವೊಮ್ಮೆ ಸಣ್ಣ ಅಪಘಾತಗಳಲ್ಲೂ ಜೀವ ಕಳೆದುಕೊಂಡ ಉದಾಹರಣೆಗಳಿವೆ. ಕಾರು ತಯಾರಕರು ಸೇಫ್ಟಿ ಫೀಚರ್‌ಗಳನ್ನು ನೀಡುವುದು ಸುಖಾಸುಮ್ಮನೆ ಅಲ್ಲಾ... ಬದಲಿಗೆ ಅವನ್ನು ನಿಯಮಿತವಾಗಿ ಬಳಸಲು. ಈ ಘಟನೆಯಲ್ಲಿ ನಟಿ ರುಬಿನಾ ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂದು ತೋರುತ್ತಿದೆ. ಅದಕ್ಕಾಗಿಯೇ ಟಾಟಾ ಯೋಧಾ ತನ್ನ ಗ್ಲೋಸ್ಟರ್‌ಗೆ ಡಿಕ್ಕಿ ಹೊಡೆದಾಗ ಅವರ ಬೆನ್ನು ಮತ್ತು ತಲೆಗೆ ಗಾಯವಾಗಿರಬಹುದು.
ಇತ್ತೀಚೆಗೆ ನಡೆದ ಕಾರು ಅಪಘಾತದಲ್ಲಿ ಸೈರಸ್ ಮಿಸ್ತ್ರಿ ಅವರ ಸಾವು ಹೊಸ ನಿಯಮಗಳಿಗೆ ಕಾರಣವಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಹಿಂದಿನ ಪ್ರಯಾಣಿಕರು ಕೂಡ ಸೀಟ್ ಬೆಲ್ಟ್ ಅನ್ನು ಕಡ್ಡಾಯವಾಗಿ ಧರಿಸುವ ನಿಯಮವನ್ನು ಜಾರಿಗೊಳಿಸಿದ್ದಾರೆ. ಆದರೆ ಬಹುತೇಕರು ಈ ನಿಯಮವನ್ನು ಪಾಲಿಸುತ್ತಿಲ್ಲ.
ಭಾರತದ ಮಹಾನಗರಗಳಲ್ಲಿ ಹೆಚ್ಚಿನ ಅಪಘಾತಗಳು: ರಸ್ತೆ ಅಪಘಾತಗಳ ಸಮಸ್ಯೆಯು ದೇಶದಾದ್ಯಂತವಿದೆ. ಪ್ರಮುಖ ಅಪಘಾತಗಳು ಪ್ರಾಥಮಿಕವಾಗಿ ದೊಡ್ಡ ಮೆಟ್ರೋಪಾಲಿಟನ್ ನಗರಗಳಲ್ಲಿ ಸಂಭವಿಸುತ್ತವೆ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ. ಇದಕ್ಕೆ ಮುಖ್ಯ ಕಾರಣ ನಿರ್ಲಕ್ಷ್ಯ ಡ್ರೈವಿಂಗ್, ಟ್ರಾಫಿಕ್ ನಿಯಮಗಳ ಉಲ್ಲಂಘನೆ, ಕುಡಿದು ಚಾಲನೆ ಹಾಗೂ ಅತಿ ವೇಗದ ಚಾಲನೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಭಾರತದಲ್ಲಿ ಅತಿ ಹೆಚ್ಚು ಅಪಘಾತಗಳಾಗುವ ನಗರವೆಂದರೆ ದೇಶ ರಾಜಧಾನಿ ನವದೆಹಲಿ, ಇದಾದ ನಂತರ ಕ್ರಮವಾಗಿ ಮುಂಬೈ, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ನಗರಗಳಿವೆ. ದೆಹಲಿಯು ಶೇ 20.3 ಅಪಘಾತ ದರವನ್ನು ಹೊಂದಿದೆ. ಕಡಿಮೆ ಅಪಘಾತ ಪೀಡಿತ ಮೆಟ್ರೋಪಾಲಿಟನ್ ನಗರವೆಂದರೆ ಬೆಂಗಳೂರು, ನಿರಂತರ ಸಂಚಾರ ದಟ್ಟಣೆಯಿಂದಾಗಿ ರಾಟಷ್ಟ್ರೀಯ ಮಟ್ಟದಲ್ಲಿ ಅಪಹಾಸ್ಯಕ್ಕೆ ಒಳಾಗುತ್ತಿರುತ್ತದೆ.


Click it and Unblock the Notifications