ರಾಯಲ್ ಎನ್‍ಫೀಲ್ಡ್ ಬೈಕ್ ಚಾಲನೆ ಮಾಡಿದ ನಟಿ ಸೋನಾಕ್ಷಿ ಸಿನ್ಹಾ
ಭಾರತದ ರಸ್ತೆಗಳಲ್ಲಿ ಪುರುಷರು ಬೈಕ್ ಚಾಲನೆ ಮಾಡುವುದನ್ನು ನೋಡಿಯೇ ಇರುತ್ತೇವೆ. ಇವರ ಜೊತೆಗೆ, ಇವರಿಗೆ ಸರಿಸಮನಾಗಿ ಮಹಿಳೆಯರು ಸಹ ಬೈಕ್ ಚಾಲನೆ ಮಾಡುವುದನ್ನು ಕಾಣಬಹುದು.

ಬರೀ ಬೈಕ್‍ಗಳನ್ನು ಮಾತ್ರವಲ್ಲ ಮಹಿಳೆಯರು ಲಾರಿ ಹಾಗೂ ಬಸ್ಸುಗಳನ್ನು ಸಹ ಚಾಲನೆ ಮಾಡುತ್ತಾರೆ. ಇದರ ಜೊತೆಗೆ ಸ್ಕೂಟರ್ ಹಾಗೂ ಕಾರುಗಳನ್ನು ಮಹಿಳೆಯರು ಚಾಲನೆ ಮಾಡುವುದು ಸಾಮಾನ್ಯ ಸಂಗತಿಯಾಗಿದೆ.

ಮಹಿಳೆಯರು ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ದೊಡ್ಡ ಸಂಗತಿಯಲ್ಲ. ಆದರೆ ಜನಪ್ರಿಯವಾಗಿರುವ ನಟಿಯೊಬ್ಬರು ಸಾರ್ವಜನಿಕ ರಸ್ತೆಯಲ್ಲಿ ಬೈಕ್ ಚಾಲನೆ ಮಾಡುವುದು ದೊಡ್ಡ ಸಂಗತಿ. ಅದರಲ್ಲೂ ರಾಯಲ್ ಎನ್‍ಫೀಲ್ಡ್ ಬೈಕ್ ಚಾಲನೆ ಮಾಡುವುದು ಇನ್ನೂ ದೊಡ್ಡ ಸಂಗತಿ.

ಯಾರಪ್ಪ ಸಾರ್ವಜನಿಕ ರಸ್ತೆಯಲ್ಲಿ ರಾಯಲ್ ಎನ್‍ಫೀಲ್ಡ್ ಬೈಕ್ ಚಲಾಯಿಸಿದ ನಟಿ ಅಂತೀರಾ. ಅವರೇ ದಬಾಂಗ್ ಚಿತ್ರದ ನಾಯಕಿ ಸೋನಾಕ್ಷಿ ಸಿನ್ಹಾ. ಅವರು ಬಾಲಿವುಡ್ ಚಿತ್ರರಂಗದ ಜನಪ್ರಿಯ ತಾರೆ. ಜೊತೆಗೆ ನಟ ಶತ್ರುಘ್ಹ ಸಿನ್ಹಾ ಅವರ ಪುತ್ರಿ.

ಸೋನಾಕ್ಷಿ ಸಿನ್ಹಾರವರು ಸಾರ್ವಜನಿಕ ರಸ್ತೆಯಲ್ಲಿ ಬೈಕ್ ಚಾಲನೆ ಮಾಡಿಕೊಂಡು ಹೋಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೋನಾಕ್ಷಿರವರು ಬೈಕ್ ಚಾಲನೆ ಮಾಡುತ್ತಿರುವುದನ್ನು ಹಲವಾರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಈ ಫೋಟೋಗಳನ್ನು ವಿರಾಲ್ ಭಯಾನಿರವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್‍ಲೋಡ್ ಮಾಡಿದ್ದಾರೆ.

ಇನ್ನೂ ಕೆಲವರು ಸೋನಾಕ್ಷಿ ಸಿನ್ಹಾರವರು ಹೋಗುವ ದಾರಿಯನ್ನು ಬಂದ್ ಮಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದೇ ವೇಳೆ ಸೋನಾಕ್ಷಿರವರ ಅಭಿಮಾನಿಗಳು ಹಾಗೂ ಸಾರ್ವಜನಿಕರೂ ಸಹ ತಮ್ಮ ಮೊಬೈಲ್‍ನಲ್ಲಿ ಸೆಲ್ಫಿ ತೆಗೆಯಲು ಮುಗಿಬಿದ್ದಿದ್ದಾರೆ.

ಸೋನಾಕ್ಷಿ ಸಿನ್ಹಾರವರು ಈ ರಾಯಲ್ ಎನ್‍ಫೀಲ್ಡ್ ಬೈಕಿನಲ್ಲಿ ಮತ್ತೊಬ್ಬ ಚಿತ್ರನಟಿ ಕರೀನಾ ಕಪೂರ್ ನಡೆಸಿಕೊಡುವ ವಾಟ್ ವುಮೆನ್ ವಾಂಟ್ ರೇಡಿಯೊ ಶೋದಲ್ಲಿ ಭಾಗಿಯಾಗಲು ಹೋಗುತ್ತಿದ್ದರು. ಸೋನಾಕ್ಷಿರವರು ಚಾಲನೆ ಮಾಡಿದ ಬೈಕ್ ರಾಯಲ್ ಎನ್‍ಫೀಲ್ಡ್ ಥಂಡರ್‍ಬರ್ಡ್ 350 ಎಕ್ಸ್ ಆಗಿದ್ದು, ಇದು ಅವರದೇ ಸ್ವಂತ ಬೈಕ್ ಆಗಿದೆ.

ರಾಯಲ್ ಎನ್‍ಫೀಲ್ಡ್ ಬೈಕ್‍ಗಳಿಗೆ ಭಾರತದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಥಂಡರ್‍ಬರ್ಡ್ 350 ಎಕ್ಸ್ ರಾಯಲ್ ಎನ್‍ಫೀಲ್ಡ್ ನ ಜನಪ್ರಿಯ ಬೈಕ್‍ಗಳಲ್ಲಿ ಒಂದಾಗಿದೆ. ಈ ಬೈಕ್ 346 ಸಿಸಿಯ ಸಿಂಗಲ್ ಸಿಲಿಂಡರ್, ಏರ್ ಕೂಲ್, ಟ್ವಿನ್ ಸ್ಪಾರ್ಕ್ ಎಂಜಿನ್ ಹೊಂದಿದೆ.

ಈ ಎಂಜಿನ್ 5250 ಆರ್‍ಪಿಎಂನಲ್ಲಿ 19.8 ಬಿಹೆಚ್‍ಪಿ ಪವರ್ ಹಾಗೂ 4,000 ಆರ್‍ಪಿಎಂನಲ್ಲಿ 28 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಥಂಡರ್‍ಬರ್ಡ್ 350 ಎಕ್ಸ್ ಯುವಜನರ ನೆಚ್ಚಿನ ಬೈಕ್ ಆಗಿದೆ. ಸೋನಾಕ್ಷಿ ಸಿನ್ಹಾರವರಿಗೂ ಸಹ ಇದು ನೆಚ್ಚಿನ ಬೈಕ್ ಆಗಿದೆ.
ಈ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.64 ಲಕ್ಷಗಳಾಗಿದೆ. ಈ ಬೈಕ್ ಅಲಾಯ್ ವ್ಹೀಲ್ ಹಾಗೂ ಟ್ಯೂಬ್‍ಲೆಸ್ ಟಯರ್‍ಗಳನ್ನು ಹೊಂದಿದೆ. ಈ ಬೈಕಿನಲ್ಲಿರುವ ಎಂಜಿನ್ ತನ್ನ ವಿನ್ಯಾಸ ಹಾಗೂ ಪರ್ಫಾಮೆನ್ಸ್ ನಿಂದಾಗಿ ಹೆಚ್ಚಿನ ಜನರನ್ನು ತನ್ನತ್ತ ಸೆಳೆಯುತ್ತಿದೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಸೋನಾಕ್ಷಿ ಸಿನ್ಹಾರವರು ಹೆಲ್ಮೆಟ್ ಧರಿಸಿ ಬೈಕ್ ಚಾಲನೆ ಮಾಡುತ್ತಿದ್ದಾರೆ. ಸೆಲೆಬ್ರಿಟಿ ಎಂಬ ಕಾರಣಕ್ಕೆ ನಿಯಮವನ್ನು ಉಲ್ಲಂಘಿಸಿಲ್ಲ. ಆದರೆ ಬಹು ಸಂಖ್ಯೆಯ ಜನರು ಈಗಲೂ ಬೈಕ್ ಚಾಲನೆ ವೇಳೆಯಲ್ಲಿ ಹೆಲ್ಮೆಟ್ ಧರಿಸುವುದಿಲ್ಲ.


Click it and Unblock the Notifications